Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ರಾಶಿಯಲ್ಲಿ ಜನಿಸಿದವರನ್ನು ನೇಮಿಸದಿರಲು ಕಂಪನಿ ನಿರ್ಧಾರ..! ಹೀಗ್ಯಾಕೆ ಮಾಡಿದ್ರು..?
ಭಾರತದಲ್ಲಿ ಮೂಢ ನಂಬಿಕೆ ಹೆಚ್ಚಾಗಿ ನಂಬುತ್ತಾರೆ ಎಂದು ಹೇಳಲಾಗುತ್ತೆ. ಆದ್ರೆ ನಿಮಗೆ ಗೊತ್ತಿರಲಿ ಭಾರತಕ್ಕಿಂತಲೂ ಹೆಚ್ಚಾಗಿ ಮೂಢ ನಂಬಿಕೆಯ ಆಚರಿಸುವ ಅದೆಷ್ಟು ದೇಶಗಳಿವೆ. ಭಾರತ ಮಾತ್ರವೇ ಮೂಢ ನಂಬಿಕೆಗಳು, ಕಂದಾಚಾರಗಳ ನಂಬುತ್ತಿದೆ ಎಂದುಕೊಂಡಿದ್ದೇವೆ. ಆದರೆ ವಿಶ್ವದಲ್ಲಿ ಮುಂದುವರೆದ ದೇಶಗಳ ಪಟ್ಟಿಗೆ ಸೇರಿರುವ ದೇಶಗಳು ಸಹ ಈ ಮೂಢ ನಂಬಿಕೆಗಳ ನಂಬುತ್ತವೆ.
ಅದ್ರಲ್ಲೂ ನಿಮಗೆ ಚೀನಾದಲ್ಲಿರುವ ನಿಯಮಗಳು, ಆಚರಣೆಗಳು ಬೇರೆ ಯಾವ ದೇಶದಲ್ಲಿಯೂ ನೋಡಲು ಸಿಗುವುದಿಲ್ಲ. ಭಾರತದಂತೆಯೇ ಅಲ್ಲಿಯೂ ಕೆಲವೊಂದು ನಂಬಿಕೆಗಳಿರುವುದು ನಿಮಗೆ ಅಚ್ಚರಿ ತರುತ್ತವೆ. ನೀವು ದಿನ ಭವಿಷ್ಯ, ಜಾತಕ, ಕುಂಡಲಿ ಕೆಲವೊಂದು ನಂಬಿಕೆಗಳ ಇಟ್ಟುಕೊಂಡಿರುತ್ತೀರಿ. ನಿತ್ಯವು ಭವಿಷ್ಯ ಓದುವುದು ಅದರಲ್ಲಿ ಹೇಳಿರುವುದು ನಂಬುವುದನ್ನು ಮಾಡುತ್ತಿರಿ.

ಕೆಲವೊಮ್ಮೆ ಅಲ್ಲಿರುವಂತೆ ನಿಮಗೆ ಸಂಭವಿಸುವುದು. ಇಲ್ಲವೆ ಭವಿಷ್ಯದಲ್ಲಿ ಹೇಳಿರುವಂತೆ ನಡೆಯುವುದು ಸಾಮಾನ್ಯವಾಗಿರುತ್ತೆ. ಭಾರತದಲ್ಲಿ 12 ರಾಶಿಗಳ ನಂಬಿಕೆಯಂತೆಯೇ ಚೀನಾದಲ್ಲಿಯೂ ಇದೇ ರೀತಿ ರಾಶಿ ನಕ್ಷತ್ರಗಳ ನಂಬುತ್ತಾರೆ. ಅಲ್ಲಿನ ಜನರು ಈ ಭವಿಷ್ಯ ನೋಡದೆ ಹೊರಗೆ ಕಾಲು ಸಹ ಇಡಲಾರರು. ಅಷ್ಟೊಂದು ನಂಬಿಕೆ ಅಲ್ಲಿದೆ.
ಎಷ್ಟರ ಮಟ್ಟಿಗೆ ಅಲ್ಲಿನ ಜನರು ಇದನ್ನು ನಂಬುತ್ತಾರೆ ಎಂದರೆ ಕಾರ್ಪೋರೇಟ್ ಕಂಪನಿಗಳಲ್ಲೂ ಈ ರಾಶಿ, ಪಂಚಾಂಗ ಇಂತಹ ನಿಯಮಗಳ ಕುರಿತು ಚಿಂತಿಸುತ್ತಾರೆ. ಈಗ ಒಂದು ಕಾರ್ಪೋರೇಟ್ ಕಂಪನಿ ನಿರ್ಧಿಷ್ಟ ರಾಶಿ ಜನರನ್ನು ನೇಮಿಸಿಕೊಳ್ಳದಿರಲು ನಿರ್ಧರಿಸಿದೆ. ಅಂದರೆ ನಿಮಗೆ ಈ ರಾಶಿ ಜನರು ಕೆಡುಕು ಮಾಡುತ್ತಾರೆ. ಅದೃಷ್ಟವಂತರಲ್ಲ ಎಂಬ ಮೂಢ ನಂಬಿಕೆಯೊಂದಿಗೆ ಕಂಪನಿ ಈ ರೀತಿ ಮಾಡುತ್ತಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಸ್ಯಾಂಕ್ಸಿಂಗ್ ಟ್ರಾನ್ಸ್‌ಪೋರ್ಟೇಶನ್ ಕಂಪನಿಯು ಕೆಲವು ರಾಶಿಯ ಜನರನ್ನು ತನ್ನ ಕಂಪನಿಗೆ ನೇಮಿಸಿಕೊಳ್ಳುವುದೇ ಇಲ್ಲ. ಅವರು ಒಂದೊಂದು ವರ್ಷಕ್ಕೆ ಒಂದೊಂದು ರಾಶಿಗಳು ಎಂದು ನಂಬುತ್ತಾರೆ. ಒಂದೊಂದು ವರ್ಷವನ್ನು ಅವರು ಈ ರೀತಿ ವರ್ಗೀಕರಿಸಿದ್ದಾರೆ. ನಾಯಿ, ಬೆಕ್ಕು, ಇಲಿ, ಹಂದಿ, ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಮೇಕೆ, ಕೋತಿ, ಹುಂಜ ಎಂದು ವರ್ಗೀಕರಿಸಿದ್ದಾರೆ.
ಆದರೆ ಯಾರು ನಾಯಿ ವರ್ಷದಲ್ಲಿ ಜನಿಸಿದ್ದಾರೋ ಅವರನ್ನು ಈ ಕಂಪನಿ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ದುರಾದೃಷ್ಟಕರ ಎಂದು ಭಾವಿಸಿದೆ. ಅಂದರೆ 1922, 1934, 1946, 1958, 1970, 1982, 1994, 2006, 2018ನೇ ಇಸವಿಯಲ್ಲಿ ಜನಿಸಿದವರನ್ನು ಈ ಕಂಪನಿ ನೇಮಿಸಿಕೊಳ್ಳುವುದೇ ಇಲ್ಲವಂತೆ. ಈ ವರ್ಷದಲ್ಲಿ ಜನಿಸಿದವರು ದುರಾದೃಷ್ಟ ತರಲಿದ್ದಾರೆ ಎಂಬುದು ಅವರ ನಂಬಿಕೆ. ಅದ್ರಲ್ಲೂ ಕಂಪನಿಯ ಮಾಲಿಕರು ಡ್ರ್ಯಾಗನ್ ವರ್ಷದಲ್ಲಿ ಜನಿಸಿದ್ದರೆ ಅಂತವರು ಇವರನ್ನು ನೇಮಿಸಬಾರದು ಎಂಬುದು ಚೀನಾ ಭವಿಷ್ಯದಲ್ಲಿರುವ ನಂಬಿಕೆಯಾಗಿದೆ.
3,000 ಮತ್ತು 4,000 ಯುವಾನ್ (ಅಂದಾಜು ₹ 35,140 ಮತ್ತು ₹ 46,853) ನಡುವಿನ ಮಾಸಿಕ ವೇತನವನ್ನು ನೀಡುವ ಕ್ಲರ್ಕ್ ಹುದ್ದೆಗಾಗಿ ಸ್ಯಾಂಕ್ಸಿಂಗ್ ಟ್ರಾನ್ಸ್‌ಪೋರ್ಟೇಶನ್‌ನ ಉದ್ಯೋಗ ಜಾಹೀರಾತು ನೀಡಲಾಗಿತ್ತು. ಆದರೆ ನಾಯಿ ಚಿಹ್ನೆಯಡಿಯಲ್ಲಿ ಜನಿಸಿದವರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂಬುದನ್ನು ಕಂಪನಿ ಉಲ್ಲೇಖಿಸಿfತು. ಇದರ ಜೊತೆಗೆ ಕಂಪನಿಯು ತನ್ನ ನೇಮಕಾತಿ ಪದ್ಧತಿಗಳನ್ನು ಮಾರ್ಗದರ್ಶನ ಮಾಡಲು ರಾಶಿಚಕ್ರ-ಸಂಬಂಧಿತ ಮೂಢನಂಬಿಕೆಗಳ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.
ಇನ್ನು ನೇಮಕಾತಿಯ ಸಂದರ್ಭದಲ್ಲಿ ಅಭ್ಯರ್ಥಿಗಳ ಹುಟ್ಟಿದ ದಿನಾಂಕ ನಿಖರವಾಗಿ ತಿಳಿಸಬೇಕು ಎಂದು ಅದಕ್ಕೆ ಪೂರಕವಾದ ದಾಖಲಾತಿ ನೀಡುವಂತೆಯೂ ಸೂಚಿಸಿತ್ತು. ಡ್ರ್ಯಾಗನ್ ವರ್ಷದಲ್ಲಿ ಹುಟ್ಟಿದವರಿಗೂ ನಾಯಿ ವರ್ಷದಲ್ಲಿ ಹುಟ್ಟಿದವರಿಗೂ ಹೊಂದಾಣಿಕೆಯಿಲ್ಲ ಎಂದು ಅವರು ನಂಬುತ್ತಾರೆ. ಡ್ರ್ಯಾಗನ್‌ನಲ್ಲಿ ನೀರಿನ ಅಂಶದಿಂದ ಹುಟ್ಟಿದವರಂತೆ. ಆದರೆ ನಾಯಿ ವರ್ಷವೂ ಬೆಂಕಿ ಅಂಶವನ್ನು ಒಳಗೊಂಡಿದೆ ಎಂಬುದು ಅವರ ನಂಬಿಕೆ.



Click it and Unblock the Notifications