Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
80 ರೂಪಾಯಿ ಸಾಲ ಮಾಡಿ ಕಟ್ಟಿದ ಸಂಸ್ಥೆ ಇಂದು ₹1,600 ಕೋಟಿ ವ್ಯವಹಾರ..! ಯಾರು ಈ ಸಾಧಕಿ?
ಮಹಿಳೆಯರು ಎಲ್ಲಾ ರಂಗದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಆದರೆ ಇದೇ ರೀತಿಯ ಪರಿಸ್ಥಿತಿ ಕಳೆದ 30-40 ವರ್ಷದ ಹಿಂದೆ ಇತ್ತೇ ಎಂದು ಪ್ರಶ್ನಿಸಿದರೆ ಉತ್ತರ ಬದಲಾಗಬಹುದು. ಏಕೆಂದರೆ ಹಿಂದೆ ಪುರುಷ ಪ್ರಧಾನ ಸಮಾಜ ಅಷ್ಟೊಂದು ಗಾಢವಾಗಿ ಪರಿಣಾಮ ಬೀರಿತ್ತು. ಅಲ್ಲಿ ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತ ಎಂಬ ವಾದವಿತ್ತು.
ಆದರೆ ಅದೇ ಕಾಲದಲ್ಲಿ ಮಹಿಳೆಯೊಬ್ಬರು ಉದ್ಯಮ ಕಟ್ಟಿ ಸಾವಿರ ಕೋಟಿ ಉದ್ಯಮ ಆಗಿಸಿದ ಕಥೆ ಇದು. ಬಡ ಹೆಣ್ಣುಮಗಳೊಬ್ಬಳು ಒಬ್ಬಂಟಿಯಾಗಿ ಉದ್ಯಮ ಜಗತ್ತಿಗೆ ಕಾಲಿಟ್ಟ ಕಾಲವದು. ಹಾಗಾದರೆ ಯಾರು ಆ ಮಹಿಳೆ ಆಕೆ ಕಟ್ಟಿದ ಉದ್ಯಮವೇನು ಎಂಬುದನ್ನು ನೋಡಿ.

ನೀವು ಊಟದ ಜೊತೆ ಹಪ್ಪಳ ಸವಿಯುವ ಅಭ್ಯಾಸ ಇಟ್ಟುಕೊಂಡಿರಬಹುದು. ಏಕೆಂದರೆ ಊಟದ ಜೊತೆ ಹಪ್ಪಳ ಬಹಳ ರುಚಿ ತರಿಸುತ್ತದೆ. ಆದರೆ ಇದೇ ಹಪ್ಪಳ ಈ ಮಹಿಳೆಯ ಕೈ ಹಿಡಿದಿತ್ತು. ಹಪ್ಪಳ ಉದ್ಯಮ ಕಟ್ಟಿ ದೊಡ್ಡ ಯಶಸ್ಸು ಕಂಡಿದ್ದು, ಲಿಜ್ಜತ್ ಪಾಪಡ್ ಎಂಬ ಕಂಪನಿ ಹುಟ್ಟಿದ್ದು. ಜಸ್ವಂತಿಬೆನ್ ಪೋಪಟ್ ತನ್ನ ಕೇವಲ 80 ರೂಪಾಯಿಯಿಂದ ಆರಂಭಿಸಿದ ಉದ್ಯಮ ಇಂದು ಸಾವಿರಾರು ಕೋಟಿ ವ್ಯವಹಾರ ಮಾಡುತ್ತಿದೆ ದೇಶ ಮಾತ್ರವಲ್ಲ ವಿದೇಶದಲ್ಲಿಯೂ ಈ ಹಪ್ಪಳ ನಿತ್ಯದ ಪೇಪರ್‌ನಂತೆ ಖರೀದಿಯಾಗುತ್ತದೆ.
ಯಾರು ಈ ಜಸ್ವಂತಿಬೆನ್ ಪೋಪಟ್? ಈ ಕಂಪನಿ ಹುಟ್ಟಿದ್ದು ಹೇಗೆ?
ಆರಂಭದಲ್ಲಿ ಈ ಕಂಪನಿಯನ್ನು 7 ಮಂದಿ ಮಹಿಳೆಯರು ಸೇರಿ ಕಟ್ಟಿದರು. ಜಸ್ವಂತಿಬೆನ್ ಪೋಪಟ್, ಪಾರ್ವತಿಬೆನ್ ಥೋಡಾನಿ, ಉಜಂಬೆನ್ ಕುಂಡಾಲಿಯಾ, ಬಾನುಬೆನ್ ತನ್ನಾ, ಲಗುಬೆನ್ ಗೋಕಾನಿ, ಜಯಬೆನ್ ವಿಠಲಾನಿ ಮತ್ತು ದಿವಾಲಿಬೆನ್ ಲುಕ್ಕಾ. ಛಗನ್‌ಲಾಲ್ ಪರೇಖ್ ಎಂಬ ಸಹೃದಯ ಸಮಾಜ ಸೇವಕರಿಂದ 80 ರೂಪಾಯಿಗಳ ಸಾಧಾರಣ ಸಾಲ ಪಡೆದು ಈ ಉದ್ಯಮ ಆರಂಭಿಸಿದರು. ದಿನಕ್ಕೆ ನಾಲ್ಕು ಹಪ್ಪಳದ ಪಾಕೆಟ್ ಮಾರಾಟ ಮಾಡುವುದರಿಂದ ಆರಂಭಗೊಂಡ ವ್ಯಾಪಾರ ಮೊದಲ ವರ್ಷ 6 ಸಾವಿರ ರೂಪಾಯಿ ಗಳಿಸುವಷ್ಟು ಬೆಳೆಯಿತು.
1962 ರ ಹೊತ್ತಿಗೆ ಅವರ ವರ್ಷದ ವ್ಯಾಪಾರವು 2 ಲಕ್ಷ ರೂಪಾಯಿಗೆ ಏರಿಕೆ ಕಂಡಿತು. 'ಲಿಜ್ಜತ್ ಪಾಪಡ್' ಮಹಿಳಾ ಸಹಕಾರಿ ಸಂಘದಡಿ ಕಾರ್ಯ ನಿರ್ವಹಿಸಲು ಆರಂಭಿಸಿತು. ತಮ್ಮಂತೆ ಆಗಲು ಬಯಸುವ ಮಹಿಳೆಯರನ್ನು ಒಟ್ಟು ಸೇರಿಸಿ ದೊಡ್ಡ ಉದ್ಯಮ ಕಟ್ಟಿದರು, ಸ್ವ ಸಹಾಯ ಶೈಲಿಯ ಉದ್ಯಮವಾಗಿ ಬೆಳೆಯಿತು.
ಬರುಬರುತ್ತಾ ಈ ಹಪ್ಪಳಕ್ಕೆ ಬೇಡಿಕೆ ಹೆಚ್ಚಾಯಿತು. ಬೆರಳೆಣಿಗೆ ಮಹಿಳೆಯರಿದ್ದ ಸಂಸ್ಥೆ 45 ಸಾವಿರ ಮಹಿಳೆಯರ ದೊಡ್ಡ ಸಮೂಹವಾಗಿ ಮಾರ್ಪಟ್ಟಿತ್ತು. ಜೊತೆಗೆ ಭಾರತದಲ್ಲಿ ಸುಮಾರು 83 ಶಾಖೆಗಳು ತೆರೆದುಕೊಂಡವು. ಪ್ರತಿ ಜಿಲ್ಲೆಯಲ್ಲಿ ಲಿಜ್ಜತ್ ಪಾಪಡ್ ಶಾಖೆ ಆರಂಭವಾಯಿತು. ಅಲ್ಲಿ ನೂರಾರು ಮಹಿಳೆಯರು ಆರ್ಥಿಕ ಸ್ವಾವಲಂಭಿಯಾಗಲು ಹೊಸ ಮಾರ್ಗ ಕಂಡುಕೊಂಡರು.
ಸಿಂಗಾಪುರಕ್ಕೂ ರಫ್ತು
ಲಿಜ್ಜತ್ ಪಾಪಡ್ ಬೇಡಿಕೆ ಭಾರತದಲ್ಲಿ ಗಗನಕ್ಕೇರಿತು. ಜೊತೆಗೆ ವಿದೇಶದಲ್ಲು ಭಾರೀ ಸದ್ದು ಮಾಡಿತು. ಮೊದಲು ಸಿಂಗಾಪುರದಿಂದ ರಫ್ತಿಗಾಗಿ ಬೇಡಿಕೆ ಹೆಚ್ಚಿತು. ಈಗ ಈ ಹಪ್ಪಳ ವಿಶ್ವದ ಹಲವು ದೇಶಗಳಿಗೆ ರಫ್ತಾಗುತ್ತಿದೆ.
ಜಸ್ವಂತಿಬೆನ್ ಪೋಪಟ್‌ಗೆ ಪದ್ಮಶ್ರೀ
ಈ ಸಂಸ್ಥೆ ಹುಟ್ಟುಹಾಕಲು ಪ್ರಮುಖ ಕಾರಣೀಕತೃರಾದ ಜಸ್ವಂತಿಬೆನ್ ಪೋಪಟ್ ಅವರ ಈ ಯಶಸ್ವಿ ಉದ್ಯಮ ಹಾಗೂ ಮಹಿಳಾ ಸಬಲೀಕರಣದ ಮಾರ್ಗವನ್ನು ಗುರುತಿಸಿದ ಭಾರತದ ಸರ್ಕಾರ 2021ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಈಗ ಇದೇ ಲಿಜ್ಜತ್ ಪಾಪಡ್ ಸಂಸ್ಥೆ ಬರೋಬ್ಬರಿ 1600 ಕೋಟಿ ರೂಪಾಯಿಯ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಸಾವಿರಾರು ಮಹಿಳೆಯರು ಸ್ವಾವಲಂಭಿ ಬದುಕು ಸಾಗಿಸಲು ದೊಡ್ಡ ಆಶ್ರಯವಾಗಿದೆ.



Click it and Unblock the Notifications
