Latest Updates
-
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ?
ಹೇಂಟೆ ಕಾವು ಕೊಡದಿದ್ದಾಗ ಹೂಂಜ ಕಾವು ಕೂತು ಮರಿ ಮಾಡಿದೆ!ಕಲಿಗಾಲ ಅನ್ನುವುದು ಇದಕ್ಕೆ ಅಲ್ವಾ?
ಹೇಂಟೆ ಮೊಟ್ಟೆ ಹಾಕಿ ಕಾವು ಕೂತು ಕೋಳಿ ಮರಿ ಮಾಡುವುದು ಪ್ರಕೃತಿ ಸಹಜ ನಿಯಮ, ಆದರೆ ಹೂಂಜ ಕಾವು ಕೂತು ಮರಿ ಮಾಡಿದ್ದನ್ನು ಕೇಳಿದ್ದೀರಾ? ಅಂಥ ಘಟನೆ ನಮ್ಮ ನೆರೆ ರಾಜ್ಯವಾದ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ಹೇಂಟೆ ಕಾವು ಕೂರಲು ನಿರಾಕರಿಸಿದಾಗ ಹೂಂಜ ಬಂದು ಮೊಟ್ಟೆ ಕಾವು ಕೂತು ಮರಿ ಮಾಡಿರುವ ವಿಚಿತ್ರ ಘಟನೆ ನಡೆದಿದೆ, ಎಂಥ ಕಾಲವಲ್ಲ!

ಹೇಂಟೆ ಮೊಟ್ಟೆಗಳನ್ನು ಹಾಕಿ ಕಾವು ಕೂರಲಿಲ್ಲ
ಕಾಸರಗೋಡಿನ ಪುದಿನೋರ್ ಕುಂಙಕೋರನ್ ಎಂಬವರು ಸಾಕಿದ ಕೋಳಿಗಳಲ್ಲಿ ಹೇಂಟೆಯೊಂದು ಮೊಟ್ಟೆಗಳನ್ನು ಹಾಕಿತು, ನಾಟಿ ಕೋಳಿಗಳು ಮೊಟ್ಟೆಗಳನ್ನು ಹಾಕಿದ ಮೇಲೆ ನಂತರ ಕಾವು ಕೂರುತ್ತದೆ, ಕೆಲವು ಕೋಲೀಗಳು 15-20 ಮೊಟ್ಟೆ ಹಾಕುತ್ತವೆ, ಇನ್ನು ಕೆಲವು ಕೋಲಿಗಳು ಅದಕ್ಕಿಂತ ಕಡಿಮೆ ಹಾಕಬಹುದು ಅಥವಾ ಅದಕ್ಕಿಂತ ಹೆಚ್ಚು ಕೂಡ ಹಾಕಬಹುದು. ಕೆಲವು ಹೇಂಟೆಗಳು ತುಂಬಾ ಮೊಟ್ಟೆ ಹಾಕುತ್ತವೆ ಆದರೆ ಮರಿ ಮಾಡಲ್ಲ, ಮರಿ ಮಾಡಲು ಕೂರಿಸಿದರೂ ಎದ್ದು ಹೋಗುತ್ತವೆ. ಆದರೆ ಹೆಚ್ಚಿನ ಕೋಳಿಗಳು ಮೊಟ್ಟೆಗಳನ್ನು ಹಾಕಲಾರಂಭಿಸಿದ ಮೇಲೆ ಕೆಲವೊಂದಿಷ್ಟು ದಿನವಾದ ಮೇಲೆ ಮೊಟ್ಟೆ ಹಾಕುವುದನ್ನು ನಿಲ್ಲಿಸುತ್ತದೆ, ಮೊಟ್ಟೆ ಹಾಕುತ್ತಿದ್ದ ಜಾಗದಲ್ಲಿ ಬಂದು ಕೂರುತ್ತದೆ, ಅಲ್ಲಿಂದ ಎದ್ದು ಆಹಾರ ಮೇಯಲು ಹೋಗುವುದಿಲ್ಲ. ಆವಾಗ ಮೊಟ್ಟೆ ಇಟ್ಟು ಕೊಟ್ಟರೆ ಕೋಳಿ ಕಾವು ಕೂತು 21-23 ದಿನದೊಳಗೆ ಕೋಳಿ ಬರಿಗಳು ಹೊರಬರುತ್ತವೆ.
ಆದರೆ ಕುಂಙಕೋರನ್ ಸಾಕಿದ ಹೇಂಟೆ ಮೊಟ್ಟೆ ಹಾಕಿದ ಬಳಿಕ ಕಾವು ಕೂರಲಿಲ್ಲ, ಆವಾಗ ಅವರ ಮನೆಯಲ್ಲಿದ್ದ ಹೂಂಜ ಬಂದು ಕಾವುಗೆ ಕೂತಂತೆ ಕೂರುತ್ತದೆ, 2-3 ದಿನವಾದರೂ ಹೂಂಜ ಎದ್ದು ಹೋಗುತ್ತಿಲ್ಲ ಎಂದಾಗ ಮನೆವರು ತಮಾಷೆಗೆ ನಾಲ್ಕು ಮೊಟ್ಟೆ ಇಟ್ಟು ಕೊಡುತ್ತಾರೆ, ಆದರೆ ಆ ಹೂಂಜ ಕಾವು ಕೂತು 3 ಮರಿ ಹೊರ ಬಂದಿದೆ, ಅಲ್ಲದೆ ಹೂಂಜ ಹೇಂಟೆ ಹೇಗೆ ತನ್ನ ಮರಿಗಳನ್ನು ಜೋಪಾನಬ ಮಾಡುತ್ತಿದೆಯೋ ಅದರಂತೆ ಜೋಪಾನ ಮಾಡುತ್ತಿದೆ, ಎಂಥ ವಿಚಿತ್ರವಲ್ಲ!
ಹೂಂಜ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡಿರುವುದು ಕೇಳಿರುವುದು ಇದೇ ಮೊದಲು ನಾವು ಕೇಳಿರುವುದು
ಮೊಟ್ಟೆಯಿಂದ ಬರುವ ವಿಧಾನಗಳು:
ನೈಸರ್ಗಿಕ ವಿಧಾನ
ಇದರಲ್ಲಿ ಹೇಂಟೆಗೆ ಮೊಟ್ಟೆಗಳನ್ನು ಇಟ್ಟು ಕೊಡಲಾಗುವುದು, ಅದಕ್ಕೆ ಕೋಳಿ 21 ದಿನಗಳವರೆಗೆ ಕಾವು ಕೊಟ್ಟು ಕೂರುತ್ತದೆ, ಕೋಳಿಯು ದಿನ ಪೂರ್ತಿ ಕಾವು ಕೂತಿರುತ್ತದೆ, ಸ್ವಲ್ಪ ಹೊತ್ತು ಆಹಾರಕ್ಕೆ ಹೋಗಿ ಬಂದು ಮತ್ತೆ ಕೂರುತ್ತದೆ, ಹೀಗೆ 21 ದಿನಗಳವರೆಗೆ ಕಾವು ಕೊಟ್ಟಾಗ ಮೊಟ್ಟೆ ಒಡೆದು ಮರಿ ಹೊರ ಬರುತ್ತದೆ.
ಇನ್‌ಕ್ಯೂಬೇಷನ್
ಕೃತಕವಾಗಿ ಮೊಟ್ಟೆಗೆ ಕಾವು ಕೊಡುವ ವಿಧಾನವಾಗಿದೆ, ಇದರಲ್ಲಿ ಸರಿಯಾದ ತಾಪಮಾನ ನೀಡಿ ಕಾವು ನೀಡಲಾಗುವುದು
ಈ ವಿಧಾನದಲ್ಲಿ ಮೊಟ್ಟೆಯನ್ನು ಪ್ರತಿದಿನ ತಿರುಗಿಸಲಾಗುವುದು, 18 ದಿನದ ತಿರುಗುಸುವುದಿಲ್ಲ, ಅಷ್ಟರಲ್ಲಿ ಮೊಟ್ಟೆಯೊಳಗಡೆ ಕೋಳಿ ಮರಿಯ ರೂಪ ಬಂದಿರುತ್ತದೆ. ಇದರಲ್ಲಿ ಕೋಳಿ ಮೊಟ್ಟೆಗೆ 21 ದಿನದವರೆಗೆ ಕಾವು ನೀಡಲಾಗುವುದು, ಬಾತು ಕೋಳಿ ಮೊಟ್ಟೆಗಳಿಗೆ 28 ದಿನಗಳವರೆಗೆ ಕಾವು ನೀಡಬೇಕಾಗುತ್ತದೆ.



Click it and Unblock the Notifications
