Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮನೆಯೊಳಗೆ ಬಂದು ಆರಾಮವಾಗಿ ಟಿವಿ ನೋಡುತ್ತಿರುವ ನಾಗರಹಾವು..!
ಧಾರಾವಾಹಿಗಳೆಂದರೆ ಮನೆಯಲ್ಲಿ ಮಹಿಳೆಯರು ಕಣ್ಣು ಮಿಟುಕಿಸದೆ ನೋಡುತ್ತಿರುತ್ತಾರೆ. ಅದ್ರಲ್ಲೂ ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳು ಪ್ರಸಾರ ಆಗುತ್ತಲೇ ಇರುತ್ತವೆ. ಹತ್ತಾರು ಚಾನಲ್‌ಗಳೂ ನೂರಾರು ಧಾರಾವಾಹಿಗಳು ಇಂದು ಮನೆ ಮಾತಾಗಿವೆ. ಎಲ್ಲರ ಮನೆಯಲ್ಲೂ ಈ ಧಾರಾವಾಹಿಗಳ ಕುರಿತು ಒಂದಲ್ಲಾ ಒಂದು ಚರ್ಚೆ, ಮಾತು ನಡೆಯುತ್ತಲೇ ಇರುತ್ತದೆ. ಏಕೆಂದರೆ ಈ ಧಾರಾವಾಹಿಗಳು ಮಹಿಳೆಯರ ಜೀವನದಲ್ಲಿ ಅಷ್ಟೊಂದು ಆಳವಾಗಿ ಬೇರೂರಿವೆ.
ಧಾರಾವಾಹಿಗಳ ಇಷ್ಟೊಂದು ಚರ್ಚೆಯ ನಡುವೆ ಇಲ್ಲೊಂದು ವಿಡಿಯೋದಲ್ಲಿ ಹಾವೊಂದು ಟಿವಿ ನೋಡುತ್ತಿರುವ ವಿಚಿತ್ರ ಘಟನೆ ವೈರಲ್ ಆಗುತ್ತಿದೆ. ಅಚಾನಕ್ ಆಗಿ ಮನೆಯೊಳಗೆ ನುಗ್ಗಿದ ನಾಗರಹಾವು ಒಂದಿಂಚು ಕದಲದೆ ಟಿವಿ ನೋಡುತ್ತಿರುವುದು ವಿಡಿಯೋದಲ್ಲಿ ನೋಡಬಹುದು.

ಈ ರೀತಿಯ ವಿಚಿತ್ರ ಘಟನೆಯ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಜಗಲಿಯಲ್ಲಿ ಮನೆಯ ಸದಸ್ಯರು ಇರುವಂತೆಯೇ ನಾಗರಹಾವು ಒಳಬಂದಿದೆ. ಬಳಿಕ ಹೆಡೆ ಬಿಚ್ಚಿ ಟಿವಿ ನೋಡುತ್ತಿದೆ. ಮನೆಯವರು ಪ್ರಕಾರ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯದಿಂದ ಆ ಹಾವು ಅಲ್ಲಿಯೇ ಕುಳಿತು ಟಿವಿ ನೀಡುತ್ತಿದೆಯಂತೆ.
ಈ ವಿಡಿಯೋವನ್ನ ಸ್ನೇಕ್ ಶಿವು ಎಂಬುವರು ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೀ ಪಿಚ್ಚರ್‌ನಲ್ಲಿ ಸಿನಿಮಾ ನೋಡುತ್ತಿರುವುದು ಕಾಣಬಹುದು. ಹಲವು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋವನ್ನ 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ಎಲ್ಲರು ಅಚ್ಚರಿಯ ಜೊತೆಗೆ ತಮಾಷೆಯ ಕಮೆಂಟ್‌ಗಳ ಮಾಡುತ್ತಿದ್ದಾರೆ.
ಕೆಲವರು ಈ ಹಾವು ಹಿಂದಿನ ಜನ್ಮದಲ್ಲಿ ಮಹಿಳೆಯಾಗಿ ಹುಟ್ಟಿತ್ತು ಎನಿಸುತ್ತಿದೆ. ಧಾರಾವಾಹಿ ನೋಡುತ್ತಲೇ ಪ್ರಾಣ ಬಿಟ್ಟಿರಬೇಕು. ಜೀವ ಹೋಗಿ ಮರುಜನ್ಮ ಪಡೆದರು ಧಾರಾವಾಹಿ ಹುಚ್ಚು ಕಡಿಮೆಯಾಗಿಲ್ಲ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಜೊತೆಗೆ ಈ ಹಾವು ನಾಗಿಣಿ ಧಾರಾವಾಹಿಯಲ್ಲಿ ನಟಿಸಲು ಚಾನ್ಸ್ ಕೇಳಿಕೊಂಡಿ ಬಂದಿರಬಹುದು. ಯಾರಾದರು ಅದಕ್ಕೆ ಸರಿಯಾದ ಅಡ್ರೆಸ್ ಕೊಟ್ಟು ಕಳುಹಿಸಿ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಸದ್ಯ ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಹಾವು ಗಳು ಕಾಣಿಸಿಕೊಳ್ಳಲು ಆರಂಭಿಸಿವೆ. ಹಾವುಗಳು ಸಾಮಾನ್ಯವಾಗಿ ಬೆಚ್ಚಗಿನ -ಪ್ರದೇಶ ಹುಡುಕಿಕೊಂಡು ಅಲ್ಲಿಯೇ ನೆಲೆಸಲು ಮುಂದಾಗುತ್ತವೆ. ಮಳೆಗಾಲದಲ್ಲಿ ಅವು ಹೆಚ್ಚಾಗಿ ಈ ರೀತಿ ಮನೆಯೊಳಗೆ ಬಂದುಬಿಡುತ್ತವೆ. ಹೀಗಾಗಿ ಮಳೆಗಾಲದಲ್ಲಿ ಹಾವುಗಳ ಕುರಿತು ತುಸು ಹೆಚ್ಚಿನ ಜಾಗೃತಿ ವಹಿಸುವುದು ಉತ್ತಮ. ಮನೆಯ ಬಳಿ ಆದಷ್ಟು ಸ್ವಚ್ಛವಾಗಿಡುವುದು, ಶೂ, ಹೆಲ್ಮಟ್, ಬೈಕ್ ಓಡಿಸುವಾಗ ಅಥವಾ ಮುಟ್ಟುವಾಗ ಜಾಗೃತೆ ವಹಿಸಬೇಕು. ಏಕೆಂದರೆ ಅವು ಹೆಚ್ಚಾಗಿ ಇಂತಹ ಪ್ರದೇಶದಲ್ಲಿ ಸೇರಿಕೊಳ್ಳುತ್ತವೆ.
ಇದಕ್ಕೂ ಮೊದಲು ಥೈಲ್ಯಾಂಡ್‌ನಲ್ಲಿ ಯುವಕನೊಬ್ಬನ ಚಡ್ಡಿಯೊಳಗೆ ನಾಗರಹಾವೊಂದು ಸೇರಿಕೊಂಡ ಘಟನೆ ನಡೆದಿತ್ತು. ಆತ ಮಲಗಿದ್ದಾಗ ಆತನ ಚಡ್ಡಿಯೊಳಗೆ ಅವಿತು ಕುಳಿತಿತ್ತು. ಆದರೆ ಆತನ ಅದೃಷ್ಟ ಚೆನ್ನಾಗಿದ್ದ ಕಾರಣ ಯಾವುದೇ ಪ್ರಾಣಾಪಾಯವಿಲ್ಲದೆ ಹಾವನ್ನು ಆತನ ಚಡ್ಡಿಯಿಂದ ಹೊರಗೆ ಎಳೆದು ಆತನ ಜೀವ ಉಳಿಸಲಾಗಿತ್ತು. ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದಲ್ಲದೆ ಸ್ಕೂಟಿಯೊಂದರ ಸೀಟ್ ಕೆಳಗೆ ಪೆಟ್ರೋಲ್ ಟ್ಯಾಂಕ್ ಸುತ್ತಲೂ ಹಾವೊಂದು ಗಿರಕಿ ಹೊಡೆದು ಮಲಗಿದ್ದ ವಿಡಿಯೋ ಸಹ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಲೀಕರು ಹಾವನ್ನು ಗುರುತಿಸಿದ ಬಳಿಕ ಉರಗ ರಕ್ಷಕರು ಅದನ್ನು ಹಿಡಿದು ಸುರಕ್ಷಿತ ಜಾಗದಲ್ಲಿ ಬಿಡುಗಡೆ ಮಾಡಿದ್ದಾರೆ. ಸದ್ಯ ಮಳೆಗಾಲದಲ್ಲಿ ಈ ವಿಡಿಯೋಗಳು ಜನರ ಭೀತಿ ಹೆಚ್ಚಾಗುವಂತೆ ಮಾಡುತ್ತಿವೆ. ಯಾವುದಕ್ಕೂ ಈ ಹಾವುಗಳ ಕುರಿತಾಗಿ ತುಸು ಹೆಚ್ಚು ಜಾಗೃತೆ ವಹಿಸುವುದು ಉತ್ತಮ.



Click it and Unblock the Notifications
