Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
7 ದಿನ ನಿರಂತರ ಭರತನಾಟ್ಯ ಮಾಡಿ ದಾಖಲೆ ಬರೆದ ಕರಾವಳಿ ಪ್ರತಿಭೆ!
ನೃತ್ಯ ಮಾಡುವ ಮೂಲಕ ವಿಶ್ವ ದಾಖಲೆ ಮಾಡುವುದು ಕೇಳಿದ್ದೀರಾ? ಹೌದು ಮಂಗಳೂರಿನ ವಿದ್ಯಾರ್ಥಿನಿಯೊಬ್ಬರು ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ನೃತ್ಯ ಮಾಡಲು ಮೂಲಕ ವಿಶ್ವ ದಾಖಲೆ ಬರೆದಿದ್ದಾಳೆ. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ರೆಮೋನಾ ಎವೆರೆಟ್ ಪೆರೇರಾ ಅವರು ಎಂಟು ದಿನಗಳ ಕಾಲ ನಿರಂತರವಾಗಿ ಭಾರತೀಯ ಶಾಸ್ತ್ರೀಯ ಭರತನಾಟ್ಯ ಪ್ರದರ್ಶಿಸಿದ್ದಕ್ಕಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ಅಚ್ಚೊತ್ತಿದ್ದಾರೆ.
ಜುಲೈ 21 ರಂದು ಬೆಳಗ್ಗೆ 10:30ರಿಂದ ಸಂತ ಅಲೋಶಿಯಸ್ ಕಾಲೇಜಿನ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಭರತನಾಟ್ಯ ಪ್ರದರ್ಶನ ಆರಂಭಿಸಿದ್ದರು. ಈಗ ರೆಮೋನಾ ಅವರು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದಾರೆ. ಅವರ ದಾಖಲೆ ಕಂಡು ಜನರು ಕೂಡ ನಿಬ್ಬೆರಗಾಗಿದ್ದಾರೆ. ಪ್ರತಿ ಗಂಟೆಯ ಕೊನೆಯಲ್ಲಿ ಕೇವಲ ಐದು ನಿಮಿಷಗಳ ವಿರಾಮಗಳನ್ನು ತೆಗೆದುಕೊಂಡು ಅವರು ಬರೋಬ್ಬರಿ 170 ಗಂಟೆಗಳ ಕಾಲ ನೃತ್ಯ ಮಾಡಿದ್ದಾರೆ.

ಜುಲೈ 21 ರಂದು ಗಣೇಶನ ಪ್ರಾರ್ಥನೆಯೊಂದಿಗೆ ನೃತ್ಯ ಪ್ರಾರಂಭಿಸಿ, ಜುಲೈ 28 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸಂಸ್ಥೆಯ ಸಭಾಂಗಣದಲ್ಲಿ ದುರ್ಗಾ ದೇವಿಗೆ ಬ್ಯಾಲೆ ಮತ್ತು ಅಂತಿಮ ಪ್ರಾರ್ಥನೆ ಮಾಡುವ ಮೂಲಕ ಗೋಲ್ಟನ್ ಬುಕ್‌ನಲ್ಲಿ ತಮ್ಮ ಹೆಸರು ಬರೆದರು. ಈ ನಿರಂತರ ನೃತ್ಯಕ್ಕೆ ಅವರ ದೇಹವು ಕೂಡ ಸಹಕರಿಸಿದೆ. 3 ಗಂಟೆಗಳಲ್ಲಿ ಕೇವಲ 15 ನಿಮಿಷ ಮಾತ್ರವೇ ವಿಶ್ರಾಂತಿ ಪಡೆಯುತ್ತಿದ್ದ ಅವರು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ರೆಮೋನಾ ಅವರು ಗುರು ಶ್ರೀವಿದ್ಯಾ ಮುರುಳೀಧರ್ ಆಕೆಯ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಕಾಲೇಜು ಹುಡುಗಿ ತನ್ನ ಅದ್ಭುತ ಸಾಧನೆಯಿಂದ ತುಳುನಾಡು ಮತ್ತು ರಾಷ್ಟ್ರಕ್ಕೆ ಗೌರವವನ್ನು ತಂದಿದ್ದಾರೆ ಎಂದು ಹೇಳಿದ್ದಾರೆ.
ಸೇಂಟ್ ಅಲೋಶಿಯಸ್ ಕಾಲೇಜಿಗೆ ಸೇರಿದಾಗಿನಿಂದ ಭರತನಾಟ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸುವುದು ರೆಮೋನಾ ಅವರ ಕನಸಾಗಿತ್ತು ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಸಹ ಹೇಳಿದ್ದಾರೆ. ಸದ್ಯ ಈ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಸನ್ಮಾನ ಕೂಡ ಮಾಡಲಾಯಿತು.
ಭರತನಾಟ್ಯದ ವಿವಿಧ ಪ್ರಕಾರಗಳಾದ ಅಲರಿಪ್ಪು ಜತಿಸ್ವರ, ಪದವರ್ಣ, ವರ್ಣ, ತಿಲ್ಲಾನಗಳೊಂದಿಗೆ ಲಘು ಶಾಸ್ತ್ರೀಯ, ದೇವರನಾಮಗಳಿಗೆ ಭರತನಾಟ್ಯ ಪ್ರದರ್ಶನ ಮಾಡಿದ್ದಾರೆ. ಹಾಗೆ ಅವರು ನಿರಂತರ ನೃತ್ಯದ ನಡುವೆ ಲಘುವಾಗಿ ಆಹಾರ ಸೇವಿಸಿದ್ದಾರೆ. ಅದ್ರಲ್ಲೂ ಹಣ್ಣಿನ ಜ್ಯೂಸ್, ನೀರನ್ನು ಮಾತ್ರ ಸೇವಿಸಿದ್ದಾರೆ ಎಂದು ತಿಳಿದುಬಂದಿದೆ. ಅವರ ನೃತ್ಯದ ಸಮಯದಲ್ಲಿ ಸ್ನೇಹಿತರು, ಕುಟುಂಬಸ್ಥರು ಸ್ಥಳದಲ್ಲಿದ್ದು ಹುರಿದುಂಬಿಸಿದ್ದಾರೆ. ಹಾಗೆ 170 ಗಂಟೆಗಳ ನಿರಂತರ ನೃತ್ಯದ ಬಳಿಕ ವೈದ್ಯಕೀಯ ತಪಾಸಣೆಗೆ ಒಳಗಾದರು.
ಇದಕ್ಕೂ ಮೊದಲು ಮಹಾರಾಷ್ಟ್ರದ ಸೃಷ್ಟಿ ಸುಧೀರ್ ಜಗತಾಪ್ ಎಂಬ 16 ವರ್ಷದ ಬಾಲಕಿ ನಿರಂತರ 127 ಗಂಟೆಗಳ ಕಾಲ ಕಥಕ್ ನೃತ್ಯ ಪ್ರದರ್ಶನ ಮಾಡಿ ಸುದೀರ್ಘ ನೃತ್ಯ ಮಾಡಿದವರ ಪಟ್ಟಿಯಲ್ಲಿ ಹಾಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ದಾಖಲಿಸಿದ್ದರು. ಇದೀಗ ರೆಮೋನಾ ಈ ದಾಖಲೆಯನ್ನು ಮುರಿದು 170 ಗಂಟೆಗಳ ಕಾಲ ಭರತನಾಟ್ಯ ನೃತ್ಯ ಪ್ರದರ್ಶನ ಮಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ಅವರಿಗೆ ಈ ದಾಖಲೆ ಮಾಡಿರುವ ಪ್ರಮಾಣ ಪತ್ರ ಕೂಡ ಹಸ್ತಾಂತರಿಸಲಾಗಿದೆ.
ಭರತನಾಟ್ಯ ವಿದ್ಯಾರ್ಥಿಗಳಿಂದ ಗೌರವ
ಭರತನಾಟ್ಯ ವಿದ್ಯಾರ್ಥಿಗಳಿಂದ ಅದ್ಭುತ ಗೌರವವಾಗಿ ರೆಮೋನಾ ಅವರನ್ನು ಆಕರ್ಷಕ ನೃತ್ಯ ಮೆರವಣಿಗೆಯೊಂದಿಗೆ ಪ್ರಮಾಣಪತ್ರವನ್ನು ಸ್ವೀಕರಿಸಲು ವೇದಿಕೆಗೆ ಕರೆತರಲಾಗಿತ್ತು. ನಂತರ ಅವರ ಪ್ರಯಾಣವನ್ನು ವಿವರಿಸುವ ವಿಶೇಷ ದೃಶ್ಯ ಕಾವ್ಯ ಪ್ರದರ್ಶನ ಮಾಡಲಾಯಿತು. ಈ ಕ್ಷಣಗಳಿಗೆ ಸಾಕ್ಷಿಯಾದ ಎಲ್ಲರಿಗೂ ನೃತ್ಯಗಾರ್ತಿ ರೆಮೊನಾ ಧನ್ಯವಾದ ಅರ್ಪಿಸಿದರು.



Click it and Unblock the Notifications