Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ನೆಲಕ್ಕೆ ಜಾರಿ ಬಿದ್ದಿತ್ತಾ ಮೋಡ..! ಈ ವಿಡಿಯೋದ ಅಸಲಿಯತ್ತೇನು?
ಮೋಡಗಳನ್ನು ಮುಟ್ಟುವಂತಹ ಆಸೆ ಹಲವರಿಗೆ ಇರುತ್ತೆ, ಎಲ್ಲಾದರು ಎತ್ತರದ ಪ್ರದೇಶಕ್ಕೆ ತೆರಳಿದಾಗ ಕೈ ಗೆಟುಕುವ ದೂರದಲ್ಲಿಯೇ ಮೋಡಗಳು ಚಲಿಸುತ್ತಿರುತ್ತವೆ. ಅದರಲ್ಲೂ ಬೆಟ್ಟಗಳನ್ನು ಏರಿದಾಗ ಮೋಡಗಳು ಕಾಲ ಕೆಳಗೆ ಇರುವುದು ನೋಡಬಹುದು. ನಂದಿ ಬೆಟ್ಟದಂತಹ ಪ್ರದೇಶದಲ್ಲಿ ಈ ರೀತಿ ಮೋಡಗಳು ನೆಲಕ್ಕೆ ತಾಕುವಂತೆ ಇರುವುದು ನೋಡಬಹುದು.
ಹಾಗೆ ಈ ಪ್ರಕೃತಿಯಲ್ಲಿ ಎಷ್ಟೆಲ್ಲಾ ವಿಚಿತ್ರಗಳು ನಡೆಯುತ್ತವೆ ಅನ್ನೋದನ್ನ ಊಹಿಸಲು ಕೂಡ ಸಾಧ್ಯವಾಗುವುದಿಲ್ಲ. ಇಲ್ಲೊಂದು ಕಡೆ ಇಂತಹ ಅಚ್ಚರಿಯ ಘಟನೆಯೊಂದು ನಡೆದಿದೆ. ಅದರಲ್ಲೂ ಆಕಾಶದಲ್ಲಿ ತೇಲಾಬೇಕಿದ್ದ ಮೋಡವೊಂದು ಭೂಮಿಗೆ ಬಂದು ಬಿದ್ದಿದೆ. ನಿಮಗಿದು ಅಚ್ಚರಿ ಎನಿಸಬಹುದು. ಒಂದು ದೊಡ್ಡ ಮೋಡದ ಗುಂಪು ಜಾರಿಕೊಂಡು ಬಂದು ನೆಲಕ್ಕೆ ಬಿದ್ದಿದೆ.

ಮೋಡಗಳು ಸಾಮಾನ್ಯವಾಗಿ ಭಾರವಾದಾಗ ಕೆಳಗೆ ಕುಸಿಯುತ್ತವೆ. ಆದ್ರೆ ಕೆಳಗೆ ಹೆಚ್ಚಿನ ತಾಪಮಾನ ಇರುವುದರಿಂದಾಗಿ ಕರಗಿ ಮಳೆಯಾಗಿ ಸುರಿಯುತ್ತವೆ. ಇನ್ನೂ ಹೆಚ್ಚೆಂದರೆ ಮೋಡದ ಕ್ರಿಸ್ಟಲ್ ಕರಗುವಷ್ಟು ತಾಪಮಾನ ಇರಿದ್ದರೆ ಆಲಿಕಲ್ಲು ಮಳೆಯಾಗುತ್ತದೆ. ಇದೆಲ್ಲವೂ ವಿಜ್ಞಾನದ ಆಜ್ಞೆಯಂತೆ ನಡೆಯುತ್ತಲೇ ಇರುತ್ತದೆ, ಇದರಲ್ಲೇನು ವಿಶೇಷತೆ ಇರುವುದಿಲ್ಲ.
ಆದ್ರೆ ಈ ರೀತಿ ಮೋಡವೇ ನೆಲದ ಮೇಲೆ ಬೀಳುತ್ತಿರುವುದು ಇದೇ ಮೊದಲು ಎನ್ನಬಹುದು. ಏಕೆಂದರೆ ಮೋಡಗಳು ತಾಪಮಾನ ಹೆಚ್ಚಾದಾಗ ಕರಗಿ ನೀರಾಗಲೇ ಬೇಕು, ಆದ್ರೆ ಈ ಘಟನೆಯಲ್ಲಿ ಏನು ನಡೆದಿದೆ ಎಂಬುದು ಅಚ್ಚರಿಗೆ ಕಾರಣವಾಗಿದೆ. ಗಣಿ ಕಾರ್ಮಿಕರು ಕೆಲಸ ಮಾಡುವಾಗ ಮೋಡವೊಂದು ಜಾರಿ ನೆಲಕ್ಕೆ ಬೀಳುತ್ತಿದೆ ಕೆಲವರು ಅದರತ್ತ ಓಡುತ್ತಿದ್ದಾರೆ, ಮತ್ತೆ ಕೆಲವರು ಈ ಅಚ್ಚರಿಯ ಬೆಳವಣಿಗೆಯನ್ನು ವಿಡಿಯೋ ಮಾಡಿದ್ದಾರೆ.
ಇಂಡೋನೇಷ್ಯಾದ ಬೋರ್ನಿಯೋ ದ್ವೀಪದ ಕಾಲಿಮಂಟನ್‌ನಲ್ಲಿರುವ ಮುರಾ ತುಹುಪ್ ಎಂಬ ಪ್ರದೇಶದಲ್ಲಿ ಈ ರೀತಿಯ ಘಟನೆ ನಡೆದಿದೆ, ಆದ್ರೆ ನಿಜವಾಗಿಯೂ ಮೋಡವೇ ನೆಲಕ್ಕೆ ಮೇಲೆ ಬಿದ್ದಿತ್ತಾ ಎಂಬ ಸತ್ಯ ಕೂಡ ಬಯಲಾಗಿದೆ.
ನೆಲಕ್ಕೆ ಬಿದ್ದಿದ್ದು ಮೋಡಾ ಅಲ್ಲವೇ ಅಲ್ಲ..!
ಆಕಾಶದಿಂದ ಹಾರಿ ಬಂದು ನೆಲಕ್ಕೆ ಬೀಳುತ್ತಿರುವುದನ್ನು ಕಂಡ ಅಲ್ಲಿದ್ದವರು ಇದು ಮೋಡವೆಂದು ತಿಳಿದು ಅದರತ್ತ ಓಡಿದ್ದಾರೆ. ಆದ್ರೆ ಅಲ್ಲಿದ್ದ ವಸ್ತು ಕಂಡು ಬೇಸರ ಹೊರಹಾಕಿದ್ದಾರೆ. ಏಕೆಂದರೆ ಆಕಾಶದಿಂದ ಈ ರೀತಿ ಮೋಡಗಳು ಬೀಳಲು ಸಾಧ್ಯವೇ ಇಲ್ಲ. ಅಲ್ಲಿ ಬಿದ್ದಿದ್ದು ಮೋಡವು ಅಲ್ಲ, ಬದಲಿಗೆ ಅದೊಂದು ನೊರೆ ರೂಪದಲ್ಲಿದ್ದ ರಾಸಾಯನಿಕವಾಗಿತ್ತು.
ಸುತ್ತ ಮುತ್ತಲಿನಲ್ಲಿ ನಡೆಯುತ್ತಿರುವ ಗಣಿ ಸೇರಿದಂತೆ ಕಾರ್ಖಾನೆಯ ರಾಸಾಯನಿಕದಿಂದಾಗಿ ಈ ಅಡಾರೊ ಎನರ್ಜಿ ರಚನೆಯಾಗಿ ಮೋಡದ ರಚನೆಯಾಗಿ ಗಾಳಿಯಲ್ಲಿ ಮೇಲೆ ಹಾರಿದೆ. ಬಳಿಕ ತಂಪಾದ ವಾತಾವರಣವಿದ್ದ ಕಾರಣ ಭಾರವಾಗಿ ನೆಲದ ಮೇಲೆ ಬಿದ್ದಿದೆ ಎಂದು ತಿಳಿದುಬಂದಿದೆ, ಇದೊಂದು ಮಲಿನಕಾರಕ ವಸ್ತುಗಳ ಸಂಯೋಜನೆಯಿಂದಾಗಿ ರಚನೆಯಾಗಿದ್ದ ರಾಸಾಯನಿಕ ನೊರೆ ಎಂದು ವರದಿಯಾಗಿದೆ.
ಮೋಡಗಳು ಯಾವುದೇ ಕಾರಣಕ್ಕೂ ನೆಲಕ್ಕೆ ಬೀಳಲು ಸಾಧ್ಯವಿಲ್ಲ. ಹಾಗೆ ನಮ್ಮ ಹತ್ತಿರದಲ್ಲಿ ಮೋಡಗಳು ಇದ್ದಾಗ ಅದನ್ನು ನಾವು ಕೈಯಿಂದ ಮುಟ್ಟಲು ಸಾಧ್ಯವಾಗುವುದಿಲ್ಲ ಇಲ್ಲವೆ ಅದನ್ನು ಮುಟ್ಟಿದ ಸ್ಪರ್ಷದ ಅನುಭವವಾಗುವುದಿಲ್ಲ. ಆದ್ರೆ ಇಲ್ಲಿ ಈ ನೊರೆಯನ್ನು ಮುಟ್ಟಿದಾಗ ಅವರ ಕೈಯಲ್ಲಿ ನೊರೆ ಅಂಟಿಕೊಂಡಿತ್ತು ಎಂದು ವರದಿಯಾಗಿದೆ. ಇದರಿಂದ ಅದು ಮೋಡ ಅಲ್ಲ ಎಂಬುದು ಸಾಬೀತಾಗುತ್ತದೆ.
ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಸಾವಿರಾರು ಮಂದಿ ಇದು ಮೋಡ ಬೀಳುತ್ತಿರುವುದು ಎಂದು ವಾದಿಸಿದ್ದಾರೆ. ಇದೊಂದು ಪ್ರಕರತಿಯ ವಿಸ್ಮಯ, ಲಕ್ಷದಲ್ಲಿ ಒಂದು ಪ್ರಕರಣ ಎಂದೆಲ್ಲಾ ಹಾಡಿ ಹೊಗಳಿದ್ದಾರೆ. ಆದರೆ ಮೋಡಗಳು ನೆಲಕ್ಕೆ ಬೀಳಲು ಸಾಧ್ಯವಿಲ್ಲ. ಮೋಡಗಳು ಮಂಜು ಗಡ್ಡೆಯ ರೂಪತಾಳಿದಾಗ ಭೂಮಿ ಮೇಲ್ಮೈ ತಂಪಾಗಿದ್ದಾಗ ಮಾತ್ರ ಆಲಿಕಲ್ಲಿನ ರೂಪದಲ್ಲಿ ಬೀಳುತ್ತದೆ.



Click it and Unblock the Notifications