ಪಾಕ್‌ನಲ್ಲಿ ಬಾಲ್ಯ ವಿವಾಹ ಹೆಚ್ಚಲು ಹವಾಮಾನ ವೈಪರಿತ್ಯ ಕಾರಣ..! ಹೇಗೆ ಗೊತ್ತಾ?

ಬಾಲ್ಯ ವಿವಾಹ ಎಂಬುದು ಹಿಂದುಳಿದ ದೇಶಗಳಲ್ಲಿ ಇಂದಿಗೂ ದೊಡ್ಡ ಪಿಡುಗು, ಭಾರತದಲ್ಲಿ ಕೂಡ ಬಾಲ್ಯ ವಿವಾಹ ನಡೆಯುವ ಪ್ರಕರಣಗಳು ನಾವು ನೋಡಿದ್ದೇವೆ. ಪಾಕಿಸ್ತಾನದಲ್ಲಿಯೂ ಸಹ ಇದು ಸಾಮಾನ್ಯ ಎನ್ನುವಂತಾಗಿದೆ. ಆದರೆ ಪಾಕಿಸ್ತಾನದಲ್ಲಿ ಈ ಪ್ರಮಾಣ ಅತ್ಯಧಿಕ ಮಟ್ಟದಲ್ಲದೆ. ಅಲ್ಲಿ ಬಾಲಕಿಯರು ಶಾಲೆ ಪ್ರವೇಶಿಸುವ ಮೊದಲೇ ವಿವಾಹ ಮಾಡುವ ಸಂಪ್ರದಾಯವೂ ಇದೆ.

ಆದರೆ ಈಗ ಪಾಕಿಸ್ತಾನದಲ್ಲಿ ಬಾಲ್ಯ ವಿವಾಹಕ್ಕೆ ಮಳೆಗಾಲ ಕಾರಣವಾಗಿದೆ ಎಂಬ ವರದಿಯೊಂದು ಹೊರಬಿದ್ದಿದ್ದು ಕುತೂಹಲಕ್ಕೆ ಕಾರಣವಾಗಿದೆ. 2022 ರಲ್ಲಿ ಕಂಡು ಕೇಳರಿಯದ ಪ್ರವಾಹ ಉಂಟಾದ ಕಾರಣದಿಂದಾಗಿ ಈ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ಹೆಚ್ಚಾಯಿತು ಎಂಬುದು ಆರ್‌ಟಿಐ ಕಾರ್ಯಕರ್ತರೊಬ್ಬರು ಹಾಕಿದ್ದ ಅರ್ಜಿಯಿಂದ ತಿಳಿದುಬಂದಿದೆ.

Climate Change Is The Reason For The Increase Child Marriage In Pakistan

ಜುಲೈ ಮತ್ತು ಸೆಪ್ಟೆಂಬರ್ ನಡುವಿನ ಬೇಸಿಗೆ ಮಾನ್ಸೂನ್ ಲಕ್ಷಾಂತರ ರೈತರ ಜೀವನೋಪಾಯಕ್ಕೆ ಮತ್ತು ಆಹಾರ ಭದ್ರತೆಗೆ ಪ್ರಮುಖವಾಗಿದೆ, ಆದರೆ ವಿಜ್ಞಾನಿಗಳು ಹವಾಮಾನ ಬದಲಾವಣೆಯು ಅವರ ಜೀವನವನ್ನೇ ಬುಡಮೇಲು ಮಾಡಿಬಿಡುತ್ತದೆ. ಭೂಕುಸಿತಗಳು, ಪ್ರವಾಹಗಳು ಮತ್ತು ದೀರ್ಘಾವಧಿಯ ಬೆಳೆ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ.

ಸಿಂಧ್‌ನ ಕೃಷಿ ವಲಯದ ಅನೇಕ ಹಳ್ಳಿಗಳು 2022 ರ ಪ್ರವಾಹದಿಂದ ಚೇತರಿಸಿಕೊಂಡಿಲ್ಲ, ಇದು ದೇಶದ ಮೂರನೇ ಒಂದು ಭಾಗವನ್ನು ಪ್ರವಾಸಹದಲ್ಲಿ ಮುಳುಗಿಸಿತ್ತು ಇಂದಿಗೂ ಆ ಪ್ರದೇಶದಲ್ಲಿ ಕೃಷಿ ಲಾಭದತ್ತ ಮುಖ ಮಾಡಿಲ್ಲ. ಪ್ರವಾಹದ ವೇಳೆ ಸ್ಥಳಾಂತರ ಮಾಡಲಾದ ನೂರಾರು ಕುಟುಂಬಗಳು ಮತ್ತೆ ಅಲ್ಲಿಗೆ ಬಂದು ಕೃಷಿ ಆರಂಭಿಸಿಯೇ ಇಲ್ಲ.

ಮಳೆಗೂ ಬಾಲ್ಯ ವಿವಾಹಕ್ಕೂ ಏನು ಸಂಬಂಧ?

ಪಾಕಿಸ್ತಾನದ ಈ ಪ್ರದೇಶವು ಕೃಷಿಗೆ ಪೂಕರ ವಾತಾವರಣ ಹೊಂದಿದೆ. ಅಲ್ಲಿ ಜನರ ಜೀವನ ಅವಲಿಂಬಿಸಿರುವುದೇ ಕೃಷಿಯ ಮೇಲೆ. ಅವರ ಒಂದು ಹೊತ್ತಿನ ಊಟವೂ ಕೃಷಿಯಿಂದ ಬೆಳೆಯಲಾದ ಫಸಲಿನ ಮೂಲಕ ಗಿಟ್ಟಿಸಿಕೊಳ್ಳುತ್ತಾರೆ. ಅಲ್ಲಿ ಬೇರೆ ಯಾವುದೇ ಕೆಲಸವಿಲ್ಲ. ಕುಟುಂಬ ನಿರ್ವಹಣೆ ಕಷ್ಟವಾದಾಗ ಹೆಣ್ಣು ಮಕ್ಕಳನ್ನು ಮದುವೆ ಮಾಡುವಂತೆ ಇಲ್ಲಿ ಬಾಲ್ಯ ವಿವಾಹ ಹೆಚ್ಚಾಗಿದೆ.

2022 ರ ಪ್ರವಾಹದ ನಂತರ, ದಾದು ಜಿಲ್ಲೆಯ ಹಳ್ಳಿಗಳಲ್ಲಿ ಬಾಲ್ಯವಿವಾಹವು ಹೆಚ್ಚಿದೆ. ಹಣಕ್ಕಾಗಿಯೂ ಚಿಕ್ಕ ಚಿಕ್ಕ ಹುಡುಗಿಯರನ್ನು ಮದುವೆ ಮಾಡಿ ಕಳುಹಿಸಲಾಗುತ್ತಿದೆ. ಈ ಹಳ್ಳಿಯ ಬರೋಬ್ಬರಿ ಮೇ ಮತ್ತು ಜೂನ್‌ ನಡುವೆ 45 ಬಾಲ್ಯ ವಿವಾಹ ವರದಿಯಾಗಿದೆ. ದಿನಕ್ಕೆ ಕೇವಲ ಒಂದು ಡಾಲರ್ ದುಡಿಯುವ ಮಂದಿ ಇಲ್ಲಿ ವಧುವನ್ನು ಮದುವೆ ಮಾಡಿ ಕೊಡಲು 200,000 ಪಾಕಿಸ್ತಾನ್ ರೂಪಾಯಿ ಪಡೆಯುತ್ತಾರೆ. ಇದು ಮದುವೆಗಿಂತಲೂ ಮಾರಾಟ ಎನ್ನಬಹುದು.

ಡಿಸೆಂಬರ್‌ನಲ್ಲಿ ಪ್ರಕಟವಾದ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಬಾಲ್ಯವಿವಾಹಗಳು ಸಾಮಾನ್ಯವಾಗಿದೆ, ಇದು ವಿಶ್ವದಲ್ಲಿ ಆರನೇ ಅತಿ ಹೆಚ್ಚು ಬಾಲಕಿಯರು 18 ವರ್ಷಕ್ಕಿಂತ ಮೊದಲು ವಿವಾಹವಾಗುತ್ತಾರೆ. ಆದರೆ 2022ರ ಬಳಿಕ ಈ ಬಾಲ್ಯ ವಿವಾಹದ ಪ್ರಮಾಣ ಬರೋಬ್ಬರಿ ಶೇ.18ರಷ್ಟು ಹೆಚ್ಚಳವಾಗಿದೆ ಎಂಬ ಆತಂಕಕಾರಿ ವರದಿ ಹೊರಬಿದ್ದಿದೆ. ಅಂದರೆ ಬಹುತೇಕ ಎಲ್ಲಾ ಮನೆಯಲ್ಲೂ ಒಂದು ಬಾಲ್ಯ ವಿವಾಹದ ಮಾತುಕತೆ ನಡೆಯುತ್ತದೆ ಎಂಬುದು ಇಲ್ಲಿ ಆತಂಕ ಹುಟ್ಟಿಸಿದೆ.

ಆದರೆ ಈ ಬಾಲ್ಯ ವಿವಾಹ ತಡೆಗೆಂದೇ ಪಾಕಿಸ್ತಾನದಲ್ಲಿ ನೂರಾರು ಎನ್‌ಜಿಓಗಳು ಕೆಲಸ ಮಾಡುತ್ತಿವೆ. ಇಷ್ಟಾದರು ಪಾಕ್‌ನಲ್ಲಿ ಬಾಲ್ಯ ವಿವಾಹದ ಪ್ರಮಾಣ ಕಳೆದ 2 ವರ್ಷದಿಂದ ಏರುಗತಿಯಲ್ಲಿದೆ ಎಂದು ವರದಿಯಾಗಿದೆ. ಈ ಪ್ರವಾಹದ ಚೇತರಿಕೆ ಕಾಣದ ಪ್ರದೇಶದಲ್ಲಿ ಈ ಪ್ರಮಾಣ ಮತ್ತಷ್ಟು ಏರಿಕೆಯಾಗಿರುವುದು ಸರ್ಕಾರಿ ಅಂಕಿ ಅಂಶಗಳೇ ಸಾಬೀತು ಮಾಡುತ್ತಿವೆ.

English summary

Climate Change Is The Reason For The Increase Child Marriage In Pakistan

Many villages in Sindh's agricultural sector have not recovered from the 2022 floods, which submerged a third of the country in tourism, and have not yet turned to agricultural profits in the region.
Story first published: Friday, August 16, 2024, 19:00 [IST]
X
Desktop Bottom Promotion