Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಅರಣ್ಯದೊಳಗೆ ದೈತ್ಯ ಪ್ರಾಣಿ ಪತ್ತೆ..! ಬಿಗ್ ಫೂಟ್ ಬಗ್ಗೆ ಕೇಳಿದ್ದೀರಾ?
ಪ್ರಕೃತಿಯಲ್ಲಿ ಎಷ್ಟೊಂದು ವಿಸ್ಮಯಗಳು ನಮ್ಮ ನಡುವೆ ಇವೆ ಎಂಬುದನ್ನ ನಾವು ಆಲೋಚಿಸಲು ಸಹ ಸಾಧ್ಯವಿಲ್ಲ. ಚಿತ್ರ ವಿಚಿತ್ರ ಪ್ರಾಣಿಗಳು ನಮ್ಮ ನಡುವೆ ಇದ್ದರೂ ಕೂಡ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಉನ್ನು ಕೆಲವೊಂದು ವಿಚಿತ್ರ ಪ್ರಾಣಿಗಳು ಆಗಾಗ ಪತ್ತೆಯಾಗಿ ಎಲ್ಲರ ಅಚ್ಚರಿಗೆ ಕಾರಣವಾಗುತ್ತದೆ. ಅದರಲ್ಲೂ ಏಲಿಯನ್‌ಗಳೂ, ವಿಚಿತ್ರ ಕುರುಹುಗಳು, ಹೆಜ್ಜೆಗಳು ಪತ್ತೆಯಾಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸುವುದು ನಾವು ನೋಡಿದ್ದೇವೆ.
ಹಾಗೆ ನೀವು ಬಿಗ್ ಫೂಟ್‌ಗಳ ಬಗ್ಗೆ ಕೇಳಿರಬಹುದು. ಭೂಮಿ ಮೇಲೆ ಬದುಕಿರುವ ಅತ್ಯಂತ ದೊಡ್ಡ ಮಾನವರು ಎಂದು ಹೇಳಲಾಗುತ್ತದೆ. ನಮಗಿಂತ 2 ಪಟ್ಟು ದೊಡ್ಡ ದೇಹದ ಪ್ರಾಣಿ ಇದು. ಬಿಗ್ ಫೂಟ್ ಎಂದೇ ಕರೆಯಲಾಗುವ ಇವು ನೋಡಲು ಒರಂಗುಟಾನ್ ಜಾತಿಗೆ ಸೇರಿರುವ ಪ್ರಾಣಿಯಂತೆ ದೈತ್ಯಾಕಾತದಲ್ಲಿ ಕಂಡುಬರುತ್ತವೆ.

ಆಗಾಗ ಇವುಗಳ ಪಾದಗಳ ಫೋಟೋಗಳು ಪತ್ತೆಯಾಗುತ್ತಿದ್ದ ಕಾರಣ ಇದಕ್ಕೆ ಬಿಗ್ ಫೂಟ್ ಎಂಬ ಹೆಸರು ಬಂದಿದೆ. ಅರಣ್ಯ ಪ್ರದೇಶಗಳಲ್ಲಿ ಇವುಗಳ ಹೆಜ್ಜೆಗಳು ಪತ್ತೆಯಾಗುವ ಕಾರಣ ಈ ಪ್ರಾಣಿಗಳನ್ನು ಪತ್ತೆ ಮಾಡಲು ಮುಂದಾದರು ಎಲ್ಲಿಯೂ ಕಾಣಿಸಿರಲಿಲ್ಲ. ಆದರೆ ಆಗಾಗ ಅಲ್ಲಲ್ಲಿ ವಿಡಿಯೋಗಳು ದೊರೆತವು. ಆದ್ರೆ ಇವು ಯಾವ ಪ್ರಾಣಿ ಎಂಬುದು ಮಾತ್ರ ಗೌಪ್ಯವಾಗಿಯೇ ಉಳಿಯಿತು.
ಆದರೆ ಈಗೊಂದು ಹೊಸ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಅರಣ್ಯದಲ್ಲಿ ಬಿಗ್ ಫೂಟ್ ಪತ್ತೆಯಾಗಿದೆ ಎಂದು ಹೇಳಲಾದ ವಿಡಿಯೋ ಇದಾಗಿದ್ದು ಇದೇ ಮೊದಲ ಬಾರಿಗೆ ದೈತ್ಯಾಕಾರದ ಪ್ರಾಣಿ ಇಷ್ಟೊಂದು ಸ್ಪಷ್ಟವಾಗಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಕ್ಲಹೋಮಾದ ಲಾಟನ್ ಬಳಿಯ ವಿಚಿತಾ ಪರ್ವತಗಳಲ್ಲಿ ನೆಲೆಗೊಂಡಿರುವ ಸಮಾನಾಂತರ ಅರಣ್ಯದಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ ಎಂದು ತಿಳಿದುಬಂದಿದೆ.
ಈ ವಿಡಿಯೋವನ್ನು ಖ್ಯಾತ ನ್ಯೂಯಾರ್ಕ್ ಟೈಮ್ಸ್ ವಾಹಿನಿ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದೆ. ಬಿಗ್ ಫೂಟ್‌ನ ಅತ್ಯಂತ ಸ್ಪಷ್ಟವಾಗ ಚಿತ್ರಣ ಎಂದು ಈ ವಿಡಿಯೋವನ್ನು ಕರೆಯಲಾಗಿದೆ. ವಿಡಿಯೋದಲ್ಲಿ ಮರದ ಕೆಳಗೆ ದೈತ್ಯ ಪ್ರಾಣಿಯೊಂದು ಕುಳಿತಿದೆ. ಅದರ ಮುಖ ಕೂಡ ಕಾಣುತ್ತಿದೆ. ಬಳಿಕ ಅದಕ್ಕೆ ಮನುಷ್ಯರು ಇರುವುದು ತಿಳಿದು ಮೇಲೆ ಏಳುತ್ತದೆ. ಈ ವೇಳೆ ಭಯದಿಂದ ವಿಡಿಯೋ ಮಾಡುತ್ತಿದ್ದವರು ಅಲ್ಲಿಂದ ಓಡಿದ್ದಾರೆ.
ಬಿಗ್‌ಫೂಟ್ ಎಂದರೇನು?
ಬಿಗ್‌ಫೂಟ್ ಅನ್ನು ಸಾಸ್ಕ್ವಾಚ್ ಎಂದೂ ಕರೆಯುತ್ತಾರೆ, ಇದು ಅಸ್ತಿತ್ವದಲ್ಲಿರುವ ಒಂದು ಪೌರಾಣಿಕ ಪ್ರಾಣಿ ಎಂದು ಕರೆಯಲಾಗಿದೆ. ಭಾರತದಲ್ಲಿರುವ ಹಿಮಾಲಯದ ತಪ್ಪಲಿನಲ್ಲೂ ಈ ರೀತಿಯ ಪ್ರಾಣಿ ಇದೆ ಎಂಬ ವಾದವೂ ಇದೆ. ಕೆಲವರು ಅದರ ಹೆಜ್ಜೆ ಗುರುತುಗಳು ಹಿಮಾಲಯದ ಬಳಿಯಲ್ಲಿ ಪತ್ತೆಯಾಗಿದೆ ಎಂದು ಹಲವರು ಹೇಳಿದ್ದರು. ಇದನ್ನು ಯತಿ ಅಂತಲೂ ನಮ್ಮಲ್ಲಿ ಕರೆಯಲಾಗಿದೆ. ಆದರೆ ಬಿಗ್ ಫೂಟ್ ಹಾಗೂ ಈ ಪ್ರಾಣಿ ಎರಡೂ ಬೇರೆ ಬೇರೆ ಎಂದು ಸಹ ಹೇಳಲಾಗುತ್ತಿದೆ.
ಇದು ಮಾನವರಂತೆ ಕಂಡರೂ ದೇಹದ ಮೇಲೆ ಕೂದಲುಗಳಿರುತ್ತದೆ. ಉತ್ತರ ಅಮೆರಿಕ, ಪೆಸಿಫಿಕ್ ನಾರ್ತ್ ವೆಸ್ಟ್ ಕಾಡುಗಳಲ್ಲಿ ಇವು ಇಂದಿಗೂ ಜೀವಿಸಿವೆ ಎಂಬ ವಾದವಿದೆ. ಇದೇ ಬಿಗ್ ಫೂಟ್ ಎಂಬ ಹೆಸರಿನಲ್ಲಿ ಬಾಲಿವುಡ್‌ನ ಸಿನಿಮಾ ಕೂಡ ತೆರೆಗೆ ಬಂದಿತ್ತು, ಆದರೆ ಈವರೆಗೆ ಯಾವದೇ ಸ್ಪಷ್ಟವಾದ ವಿಡಿಯೋಗಳು ದಾಖಲಾಗಿರಲಿಲ್ಲ. ಅಲ್ಲಲ್ಲಿ ಹೆಜ್ಜೆ ಗುರುತುಗಳು ಪತ್ತೆಯಾದ ಕುರಿತಂತೆ ವರದಿಗಳು ಆಗುತ್ತಿದ್ದವು.
ಈಗ ಟಿಕ್‌ಟಾಕ್‌ನಲ್ಲಿ ಈ ವಿಡಿಯೋ ನೋಡಿದ ಮಂದಿ ನಿಜಕ್ಕೂ ಶಾಕ್‌ಗೆ ಒಳಗಾಗಿದ್ದಾರೆ. ಕೆಲವರು ಇದು ಸುಳ್ಳು ಎಂದು ವಾದಿಸಿದ್ದಾರೆ. ಆದರೆ ಖುದ್ದು ಈ ವಿಡಿಯೋ ಸೆರೆ ಹಿಡಿದ ವ್ಯಕ್ತಿ ನಾನು ಈ ಪದಗಳ ಬರೆಯುವಾಗಲೂ ನಡುಗುತ್ತಿದ್ದೇನೆ ಎಂದು ವಿಡಿಯೋ ಹಂಚಿಕೊಂಡಿದ್ದಾರೆ.



Click it and Unblock the Notifications
