Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ನಯನತಾರಾ-ಧನುಷ್ ನಡುವೆ ಕಿತ್ತಾಟವೇನು? 3 ಸೆಕೆಂಡ್ ವಿಡಿಯೋಗೆ ₹10 ಕೋಟಿ ಲೀಗಲ್ ನೋಟಿಸ್!!
ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಹಾಗೂ ಲೇಡಿ ಸೂಪರ್ ಸ್ಟಾರ್ ನಯನತಾರಾ ನಡುವೆ ಈಗ ಜಿದ್ದಾಜಿದ್ದಿನ ಮಾತಿನ ಸಮರ ಏರ್ಪಟ್ಟಿದೆ. ಕಳೆದ ಎರಡು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರದ್ದೇ ಸುದ್ದಿಯಾಗುತ್ತಿದೆ. ಈ ಜಗಳ ಆರಂಭವಾಗಿದ್ದು ಎಲ್ಲಿಂದ? ಒಬ್ಬರ ಮೇಲೆ ಮತ್ತೊಬ್ಬರು ಇಷ್ಟೊಂದು ಕಿಡಿಕಾರುತ್ತಿರಲು ಕಾರಣವೇನು? ಒಟ್ಟಿಗೆ ನಟಿಸಿದ್ದ ಕಲಾವಿದರಲ್ಲಿ ಒಡಕು ಮೂಡಲು ಕಾರಣವಾದ ಆ ಘಟನೆ ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ನಯನತಾರಾ ಬಹುಭಾಷಾ ನಟಿಯಾಗಿದ್ದಾರೆ. ನಟ ಉಪೇಂದ್ರ ಅವರ ಸೂಪರ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ನಟಿಸಿ ಅವರು ಸೈಎನಿಸಿಕೊಂಡಿದ್ದರು. ತಮಿಳಿನಲ್ಲಿ ಹತ್ತಾರು ಸಿನಿಮಾ ಮಾಡಿರುವ ಅವರು ಅಟ್ಲಿ ನಿರ್ದೇಶದನಲ್ಲಿ ಸೇರಿ ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದರು, ಹೀಗಾಗಿ ಲೇಡಿ ಸೂಪರ್ ಸ್ಟಾರ್ ಎಂಬ ಬಿರುವುದು ಕೂಡ ಪಡೆದಿದ್ದಾರೆ.

ಆದ್ರೆ ಅವರ ಇಡೀ ಸಿನಿ ಜರ್ನಿಯ ಕುರಿತು ನೆಟ್‌ಫ್ಲಿಕ್ಸ್ ಸಂಸ್ಥೆ ಒಂದು ಡಾಕ್ಯೂಮೆಂಟರಿ ರೆಡಿ ಮಾಡಿದೆ. 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ಎಂಬ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆದಿದೆ. ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಈ ಸಾಕ್ಷ್ಯಚಿತ್ರ ಬಿಡುಗಡೆಯಾಗುವುದರಲ್ಲಿದೆ. ಆದ್ರೆ ಇಲ್ಲಿಂದಲೇ ಧನುಷ್ ಹಾಗೂ ನಯನತಾರಾ ನಡುವೆ ವೈಮನಸ್ಸಿಗೆ ಕಾರಣವಾಗಿದೆ.
ಈ 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ಸಾಕ್ಷ್ಯಚಿತ್ರದಲ್ಲಿ ಧನುಷ್ ನಟಿಸಿ, ನಿರ್ಮಾಣ ಮಾಡಿದ್ದ ಸಿನಿಮಾದ ಒಂದು ತುಣುಕು ಇದೆ ಎಂಬುದು ದೊಡ್ಡ ಅಲೆ ಎಬ್ಬಿಸಿದೆ. ನಾನುನ್ ರೌಡಿ ದಾನ್ ಎಂಬ ಧನುಷ್ ನಟಿಸಿ, ನಿರ್ಮಾಣ ಮಾಡಿದ್ದ ಸಿನಿಮಾದಲ್ಲಿ ನಯನತಾರಾ ಕೂಡ ನಟಿಸಿದ್ದರು. ಆದ್ರೀಗ ಈ ಸಿನಿಮಾದಲ್ಲಿನ 3 ಸೆಕೆಂಡ್ ದೃಶ್ಯವನ್ನು 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ಸಾಕ್ಷ್ಯಚಿತ್ರದಲ್ಲಿ ಬಳಸಿರುವುದು ಇಬ್ಬರ ನಡುವಿನ ಮಾತಿನ ಸಮರಕ್ಕೆ ಕಾರಣವಾಗಿದೆ.
10 ಕೋಟಿ ಲೀಗಲ್ ನೋಟಿಸ್..!
'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ಸಾಕ್ಷ್ಯಚಿತ್ರದಲ್ಲಿ ತನ್ನ ಸಿನಿಮಾದ 3 ಸೆಕೆಂಡ್ ದೃಶ್ಯ ಬಳಸಿದ್ದಕ್ಕೆ ಧನುಷ್ 10 ಕೋಟಿ ರೂಪಾಯಿಯ ಲೀಗಲ್ ನೋಟಿಸ್ ನೀಡಿದ್ದಾರೆ. ಈ ವಿಚಾರ ನಯನತಾರಾ ಅವರನ್ನು ಸಿಟ್ಟಿಗೇಳುವಂತೆ ಮಾಡಿದೆ. ಈ ಕುರಿತು ಬಹಿರಂಗವಾಗಿ ಪತ್ರ ಬರೆದಿರುವ ನಟಿ ನಯನತಾರಾ ಅಸಮಾಧಾನ ಹೊರಹಾಕಿದ್ದಾರೆ.
'ನನ್ನ ನೆಟ್‌ಫ್ಲಿಕ್ಸ್ ಡಾಕ್ಯುಮೆಂಟರಿ ಬಿಡುಗಡೆಗೆ ನಾನಷ್ಟೇ ಅಲ್ಲ, ನನ್ನ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ನಾನೂಮ್ ರೌಡಿ ದಾ ಸಿನಿಮಾದ ಹಾಡು, ವಿಡಿಯೋ ತುಣುಕು ಬಳಸಿಕೊಳ್ಳಲು ಎರಡು ವರ್ಷದಿಂದಲೂ ಅನುಮತಿ ಕೇಳಿದ್ದೆವು. ಆದರೆ ನಿಮ್ಮಿಂದ ಯಾವ ಪ್ರತಿಕ್ರಿಯೆಯೂ ಬಂದಿರಲಿಲ್ಲ. ಈಗ ಸಿನಿಮಾದ ಒಂದು ಹಾಡಿನ ದೃಶ್ಯ ಬಳಸಲು ನಿರಾಕರಿಸಿದ್ದೀರಾ, ಇದು ನಮಗೆ ನೋವು ತಂದಿದೆ. ಬಳಿಕ ನಾವು ಸಿನಿಮಾದ ಶೂಟಿಂಗ್ ದೃಶ್ಯವನ್ನು ಬಳಸಿಕೊಂಡಿದ್ದೇವೆ. 3 ಸೆಕೆಂಡ್ ದೃಶ್ಯಕ್ಕೆ 10 ಕೋಟಿ ರೂಪಾಯಿ ನೋಟಿಸ್ ನೀಡಿದ್ದೀರಾ, ಇದು ನಿಮ್ಮ ಗುಣವನ್ನು ತೋರಿಸುತ್ತಿದೆ. ನೀವು ಜನರ ಮುಂದೆ ಇರೋ ಅರ್ಧದಷ್ಟು ರಿಯಲ್ ಆಗಿ ಇಲ್ವೇ ಇಲ್ಲ. ನಿಜಕ್ಕೂ ನಿಮ್ಮ ಈ ನಡೆ ತುಂಬಾನೆ ಬೇಸರ ತರಿಸಿದೆ' ಎಂದು ಪತ್ರದಲ್ಲಿ ನಟಿ ಬರೆದಿದ್ದಾರೆ.



Click it and Unblock the Notifications
