Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಸಿನಿ ಪ್ರೇಮಿಗಳ ದಿನ: ಮಲ್ಟಿಫ್ಲೆಕ್ಸ್‌ನಲ್ಲಿ ಕೇವಲ 99 ರೂಪಾಯಿಗೆ ಟಿಕೆಟ್ ಮಾರಾಟ..!
ನಿಸಿಮಾ ಪ್ರೇಮಿಗಳು ವಿಶ್ವದ ಮೂಲೆ ಮೂಲೆಯಲ್ಲೂ ಸಿಗುತ್ತಾರೆ. ಹಾಲಿವುಡ್ ಚಿತ್ರರಂಗ ಈಗ ಕೋಟಿ ಕೋಟಿಯ ಉದ್ಯಮವಾಗಿ ಬದಲಾಗಿವೆ. ಒಂದು ಸಿನಿಮಾ ಸಾವಿರಾರು ಕೋಟಿ ರೂಪಾಯಿ ದುಡಿಯುತ್ತೆ. ಅದರಂತೆ ಈಗ ಭಾರತೀಯ ಚಿತ್ರರಂಗ ಸಹ ಕೋಟಿ ಕೋಟಿ ಉದ್ಯಮವಾಗಿದೆ.
ಇಂತಹ ಸಿನಿಮಾ ಪ್ರೇಮಿಗಳಿಗಾಗಿಯೇ ಒಂದು ದಿನ ಮೀಸಲಾಗಿದೆ. ಅದೇ ಮೇ 31. ಈ ದಿನವನ್ನು ಸಿನಿ ಪ್ರೇಮಿಗಳ ದಿನವನ್ನಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಸಿನಿಮಾ ಮಂದಿಗೆ ಆ ದಿನ ವಿಶೇಷವಾಗಿರುವಂತೆ ಮಾಡಲಾಗುತ್ತದೆ. ಅಲ್ಲದೆ ಸಿನಿ ಪ್ರೇಮಿಗಳನ್ನು ಥಿಯೇಟರ್ ಕಡೆ ಸೆಳೆಯಲು ಹಲವು ರೀತಿಯ ಯತ್ನ ಮಾಡಲಾಗುತ್ತದೆ.

ಚಿತ್ರಮಂದಿರಗಳಿಗೆ ಸಿನಿಮಾ ಪ್ರೇಮಿಗಳು ಕಾಲಿಟ್ಟರೇನೆ ಆ ಸಿನಿಮಾದ ಅಳಿವು ಉಳಿವು ನಿರ್ಧಾರವಾಗುತ್ತದೆ. ಹೀಗಾಗಿ ಸಿನಿ ಪ್ರಿಯರನ್ನು ಹೆಚ್ಚು ಹೆಚ್ಚಾಗಿ ಥಿಯೇಟರ್‌ಗೆ ಸೆಳೆಯಲು ಇತ್ತೀಚಿಗೆ ಹಲವು ರೀತಿಯ ಸಾಹಸಕ್ಕೆ ಕೈಹಾಕಲಾಗುತ್ತದೆ. ಅತ್ಯಾಧುನಿಕ ಸೌಲಭ್ಯಗಳು, 3ಡಿ, 4ಡಿ ಸಿನಿಮಾಗಳು ಸಹ ಬಂದಿವೆ.
ಆದರೆ ಈಗ ಇದೇ ಮೇ 31ರಂದು ಎಲ್ಲಾ ಥಿಯೇಟರ್‌ನಲ್ಲೂ ಕೇವಲ 99 ರೂಪಾಯಿಗೆ ಸಿನಿಮಾ ಪ್ರದರ್ಶನವಾಗಲಿದೆ. ಸಿನಿಮಾ ಪ್ರೇಮಿಗಳ ದಿನದಂದು ಮೇ 31 ರಂದು ಭಾರತದಾದ್ಯಂತ ಚಿತ್ರಮಂದಿರಗಳು ಕೇವಲ ₹ 99ರ ಟಿಕೆಟ್‌ಗಳನ್ನು ನೀಡಲಿವೆ. ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ಈ ಯೋಜನೆ ರೂಪಿಸಿದ್ದು, PVR, INOX ಮತ್ತು Cinepolis ನಂತಹ ಪ್ರಮುಖ ಐಷಾರಾಮಿ ಥಿಯೇಟರ್‌ಗಳು ದೇಶದಾದ್ಯಂತ ಬರೋಬ್ಬರಿ 4,000 ಥಿಯೇಟರ್‌ಗಳಲ್ಲಿ ಕೇವಲ 99 ರೂಪಾಯಿಗೆ ಒಂದು ಟಿಕೆಟ್ ಮಾರಾಟ ಮಾಡಿಲಿವೆಯಂತೆ.
ಈ ವರ್ಷದ ಮೊದಲಾರ್ಧದಲ್ಲಿ ಹಾಲಿವುಡ್ ಸೇರಿದಂತೆ ಬಾಲಿವುಡ್ ಹಾಗೂ ಭಾರತದ ಯಾವುದೇ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಗಳಿಸಿಲ್ಲ. ಜೊತೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಥಿಯೇಟರ್‌ಗೆ ಬಂದ ಸಿನಿ ಪ್ರೇಮಿಗಳ ಸಂಖ್ಯೆ ಸಹ ಗಣನೀಯವಾಗಿ ಕಡಿಮೆಯಾಗಿದೆ. ಇದು ಮುಂಬರುವ ದಿನಗಳ ಮೇಲೆ ಪರಿಣಾಮ ಬೀರುವ ಆತಂಕವಿದ್ದು, ಸಿನಿ ಪ್ರೇಮಿಗಳನ್ನು ಮತ್ತೆ ಥಿಯೇಟರ್‌ನತ್ತ ಸೆಳೆಯುವ ಕಾರ್ಯ ಮತ್ತೆ ಆರಂಭಗೊಳ್ಳಬೇಕಿದೆ.
ಇನ್ನು ಮೇ 31 ರಂದು ರಿಯಾಯಿತಿ ದರದ ಟಿಕೆಟ್‌ನಲ್ಲಿ ಯಾವ ಥಿಯೇಟರ್‌ನಲ್ಲಿ ಬೇಕಾದರು ನಿಮ್ಮ ಫೇವರಿಟ್ ಸಿನಿಮಾ ನೋಡಬಹುದು. ಇದಕ್ಕೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಪ್ಲಾಟ್‌ಫಾರ್ಮ್‌ಗಳು ಸಹ ನೆರವು ನೀಡಲಿದೆ. BookMyShow, PayTM, Amazon Pay ಅಥವಾ ಸಿನಿಮಾ ಸರಣಿಯ ವೆಬ್‌ಸೈಟ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಟಿಕೆಟ್ ಬುಕ್ ಮಾಡಬಹುದು.
ಆದರೆ ಈ ಬುಕ್ಕಿಂಗ್ ವೇಳೆ ಜಿಎಸ್‌ಟಿ ಪ್ರತ್ಯೇಕವಾಗಿ ನೀಡಬೇಕಿದೆ. ಜೊತೆಗೆ ಐಮ್ಯಾಕ್ಸ್‌ನಲ್ಲಿ ಈ 99 ರೂಪಾಯಿ ಗೆ ಟಿಕೆಟ್ ಸಿಗುವುದಿಲ್ಲ. ಉಳಿದಂತೆ PVR, INOX ಮತ್ತು Cinepolis ನಲ್ಲಿ ಈ ಆಫರ್ ಲಭ್ಯವಿದೆ.
ಈ ಪಿವಿಆರ್, ಇನೋಕ್ಸ್, ಸಿನಿಪೋಲಿಸ್, ಐಮ್ಯಾಕ್ಸ್‌ನಂತಹ ದೊಡ್ಡ ದೊಡ್ಡ ಸಂಸ್ಥೆಗಳು ಈ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ನಿಯಂತ್ರಿಸುತ್ತದೆ. ಭಾರತದಲ್ಲಿ 500 ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳು ಮತ್ತು 2500 ಕ್ಕೂ ಹೆಚ್ಚಿನ ಸ್ಕ್ರೀನ್‌ಗಳು, 11 ಸಿನಿಮಾ ಪ್ರದರ್ಶಕ ಸಂಸ್ಥೆಗಳನ್ನು ಇದು ಪ್ರತಿನಿಧಿಸುತ್ತದೆ, MAI ಭಾರತದ ಮಲ್ಟಿಪ್ಲೆಕ್ಸ್ ಉದ್ಯಮದ ಸುಮಾರು ಶೇ.75 ರಷ್ಟು ಪಾಲು ಒಳಗೊಂಡಿದೆ.
ನೀವು ಸಹ ಮೇ 31ಕ್ಕೆ ಒಳ್ಳೆಯ ಸಿನಿಮಾ ನೋಡುವ ಪ್ಲಾನ್ ಮಾಡಿಕೊಂಡಿದ್ದರೆ ಹತ್ತಿರದ ಮಾಲ್‌ನಲ್ಲಿ ಅಥವಾ ಥಿಯೇಟರ್‌ಗೆ ಭೇಟಿ ನೀಡಬಹುದು. ಆದರೆ ಸಿಂಗಲ್ ಸ್ಕ್ರೀನ್ ಥಿಯೇಟರ್‌ನಲ್ಲಿ ಈ ಆಫರ್ ಲಭ್ಯವಿರುವುದು ಅನುಮಾನ. ಮಲ್ಟಿಫ್ಲೆಕ್ಸ್‌ಗಳಲ್ಲಿ ಈ ಒಂದು ದಿನಕ್ಕೆ 99 ರೂಪಾಯಿ ನೀಡಿ ಸಿನಿಮಾ ವೀಕ್ಷಿಸಬಹುದಾಗಿದೆ.



Click it and Unblock the Notifications