Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
CIBIL: ಸಿಬಿಲ್ ಸ್ಕೋರ್ ಇಲ್ಲದಿದ್ರೆ ಮದುವೆಯೂ ಕಷ್ಟ..! ಮುರಿದು ಬಿತ್ತು ಮದುವೆ..!
ನೀವು ದೈನಂದಿನ ಬ್ಯಾಕಿಂಗ್ ವ್ಯವಹಾರಗಳಲ್ಲಿ ಭಾಗಿಯಾಗುವವರಾಗಿದ್ದರೆ ನಿಮಗೆ ಸಿಬಿಲ್ ಸ್ಕೋರ್ ಕುರಿತು ಚೆನ್ನಾಗಿ ಅರಿವಿರುತ್ತೆ. ಈಗ ಬ್ಯಾಂಕ್‌ಗಳು ನಿಮಗೆ ಸಾಲ ನೀಡುವ ಮುನ್ನ ನಿಮ್ಮ ಆಸ್ತಿ ಎಷ್ಟಿದೆ? ನಿಮ್ಮ ವರಮಾನ ಏನು ಎಂಬುದನ್ನು ನೋಡುವ ಮುನ್ನ ನಿಮ್ಮ ಸಿಬಿಲ್ ಸ್ಕೋರ್ ನೋಡುತ್ತವೆ. ನಿಮ್ಮ ವರಮಾನ ಕೋಟಿ ದಾಟಿದ್ದರೂ ಕೂಡ ಸಿಬಿಲ್ ಸ್ಕೋರ್ ಚೆನ್ನಾಗಿರದಿದ್ದರೆ ಸಾಲ ಸಿಗುವುದು ಕಷ್ಟವಾಗುತ್ತೆ.
ಹೀಗಾಗಿ ಈಗ ಪ್ರತಿಯೊಬ್ಬರು ಸಿಬಿಲ್ ಸ್ಕೋರ್ ಚೆನ್ನಾಗಿರುವಂತೆ ನೋಡಿಕೊಳ್ಳುತ್ತಾರೆ. ಸರಿಯಾದ ಸಮಯಕ್ಕೆ ಸಾಲ ಮರುಪಾವತಿ, ಇಎಂಐ ಪಾವತಿ, ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟ್ ಮಾಡುವ ಮೂಲಕ ತಮ್ಮ ಸಿಬಿಲ್ ಸ್ಕೋರ್ ಅತ್ಯುತ್ತಮ ಆಗಿರುವಂತೆ ನೋಡಿಕೊಳ್ತಾರೆ. ಏಕಂದ್ರೆ ಭವಿಷ್ಯದಲ್ಲಿ ನಿಮ್ಮ ಲೋನ್ ರಿಜೆಕ್ಟ್ ಆಗೋಕೆ ಈ ಸಿಬಿಲ್ ಕಾರಣವಾಗಬಹುದು. ಆದ್ರೆ ಸಿಬಿಲ್ ಸ್ಕೋರ್ ಈಗ ಮದುವೆ ಮುರಿದು ಬೀಳೋಕು ಕಾರಣ ಆಗ್ತಿದೆ.

ನಿಮಗಿದು ಅಚ್ಚರಿ ಎನಿಸಿದರು ಈ ಘಟನೆ ನಡೆದಿರುವುದು ಅಷ್ಟೇ ಸತ್ಯ. ವರನ ಸಿಬಿಲ್ ಸ್ಕೋರ್ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಮದುವೆಯೇ ಮುರಿದು ಬಿದ್ದಿದೆ. ಮದುವೆಗೆ ಹುಡುಗನ ಹುಡುಕುವಾಗ ಮನೆ, ಆಸ್ತಿ, ಲಕ್ಷ ವೇತನ ಬರುವ ಸಂಬಳ ನೋಡುತ್ತಿದ್ರು. ಈಗ ಆತನ ಸಿಬಿಲ್ ಸ್ಕೋರ್ ಕೂಡ ಮದುವೆಗೆ ಮುಖ್ಯ ಆಗಿದೆ. ಮಹಾರಾಷ್ಟ್ರದಲ್ಲಿ ಈಗೊಂದು ಮದುವೆ ಸಿಬಿಲ್ ಸ್ಕೋರ್‌ನಿಂದಾಗಿಯೇ ಮುರಿದುಬಿದ್ದಿದೆ.
ಮಹಾರಾಷ್ಟ್ರದ ಮುರ್ತಿಜಾಪುರದಲ್ಲಿ ಎರಡೂ ಕುಟುಂಬಗಳು ಒಪ್ಪಿಗೆಯ ಬಳಿಕ ಮದುವೆ ಸಮಾರಂಭ ನಡೆಯುತ್ತಿತ್ತು. ಸಿದ್ಧತೆಗಳು ಭರದಿಂದ ನಡೆಯುತ್ತಿದ್ವವು, ಆದ್ರೆ ವಧುವಿನ ಚಿಕ್ಕಪ್ಪ ವರನ ಸಿಬಿಲ್ ಸ್ಕೋರ್ ನೋಡಬೇಕೆಂದು ಬಯಕೆ ಮುಂದಿಟ್ಟಿದ್ದರು. ಹೀಗಾಗಿ ಆತನ ಸಿಬಿಲ್ ಸ್ಕೋರ್ ಚೆಕ್ ಮಾಡಿದಾಗ ವಧುವಿನ ಚಿಕ್ಕಪ್ಪ ಶಾಕ್‌ಗೆ ಒಳಾಗಿದ್ದಾರೆ.
ವರ ಅನೇಕ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದ. ಹಾಗೆ ಆತನ ಸಿಬಿಲ್ ಸ್ಕೋರ್ ಪಾಥಾಳಕ್ಕೆ ಕುಸಿದಿತ್ತು. ಇದು ಆತ ಸರಿಯಾದ ಸಮಯಕ್ಕೆ ಹಣ ಪಾವತಿಸಿದೆ ಇದ್ದುದ್ದರ ಪರಿಣಾಮವಾಗಿತ್ತು. ಹೀಗಾಗಿ ಆತನ ಸಿಬಿಲ್ ವಧುವಿನ ಮನೆಯರಿಗೆ ಆಘಾತ ತಂದಿಟ್ಟಿತು. ಈ ಘಟನೆ ಈ ಮದುವೆಯನ್ನೇ ಕೊನೆಯಾಗಿಸಲು ಕಾರಣವಾಗಿತ್ತು. ಇಷ್ಟೊಂದು ಸಾಲ, ಇಎಂಐಗಳಿಂದ ಆತ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂದು ವಧುವಿನ ಕುಟುಂಬಸ್ಥರು ನಿರ್ಧರಿಸಿ ಮದುವೆ ಬೇಡ ಎಂದು ತಿರಸ್ಕರಿಸಿದರು.
ಸಿಬಿಲ್ ಸ್ಕೋರ್ ಅಂದ್ರೇನು?
CIBIL ಸ್ಕೋರ್ 300 ರಿಂದ 900ರ ವರೆಗಿನ ಸಂಖ್ಯೆಯಾಗಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಂತ್ರಿತ ಕ್ರಿಡಿಟ್ ಮಾಹಿತಿ ಕಂಪನಿಯಾಗಿರುವ ಟ್ರಾನ್ಸ್ ಯೂನಿಯನ್ ಸಿಬಿಲ್ ನೀಡುತ್ತದೆ. ನೀವು ಬ್ಯಾಂಕ್‌ಗೆ ನೀಡಿರುವ ಆಧಾರ್, ಪಾನ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮೂಲಕ ಸಿಬಿಲ್ ಪಡೆಯಬಹುದು. ನೀವು ಸಾಲ ಮರುಪಾವತಿ ಮಾಡಿರುವುದು, ಲೋನ್ ಮಾಹಿತಿ, ಕ್ರೆಡಿಟ್ ಕಾರ್ಡ್ ಬಳಕೆ, ನಿಮ್ಮ ಸಂಪೂರ್ಣ ಬ್ಯಾಂಕಿಂಗ್ ಇತಿಹಾಸ ಇದರಲ್ಲಿರುತ್ತೆ. ನಿಮ್ಮ ಲೋನ್ ಹಾಗೂ ಕ್ರೆಡಿಟ್ ಕಾರ್ಡ್ ಅರ್ಜಿಯ ಮೌಲ್ಯ ಮಾಪನ ಮಾಡಲು ಬ್ಯಾಂಕ್‌ಗಳು ಈ ಸಿಬಿಲ್ ಬಳಸುತ್ತವೆ.
ನಿಮ್ಮ ಸಿಬಿಲ್ 750ಕ್ಕಿಂತ ಹೆಚ್ಚಿದ್ದರೆ ಅತ್ಯುತ್ತಮ ಸ್ಕೋರ್ ಎಂದು ಪರಿಗಣಿಸಲಾಗಿದೆ. ಕೆಲವೊಮ್ಮೆ ಸಿಬಿಲ್ ಸ್ಕೋರ್ ಕಡಿಮೆ ಇದ್ದರೆ ನೀವು ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ಲೋನ್ ಮರುಪಾವತಿ, ಬಿಲ್ ಮರುಪಾವತಿ ಮಾಡಬೇಕಾಗುತ್ತದೆ.



Click it and Unblock the Notifications
