Latest Updates
-
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ?
ಈ ಚಾಕೊಲೇಟ್ ಪ್ರೀತಿಯ ಕಿಡಿ ಹಚ್ಚುತ್ತೆ.. ರೋಮ್ಯಾನ್ಸ್ ಹೆಚ್ಚಿಸುತ್ತೆ! ಯಾವುದಿದು?
ಪ್ರೀತಿಯಲ್ಲಿ ಮತ್ತೆ ಬೆಂಕಿ ಹಚ್ಚೋ ಚಾಕೊಲೇಟ್ ಮ್ಯಾಜಿಕ್. ಪಾರ್ಟ್ನರ್ ಜೊತೆ ರೊಮ್ಯಾನ್ಸ್ ಹೆಚ್ಚಿಸೋ ಟ್ರಿಕ್. ಹೌದು, ಪ್ರೀತಿ ಎನ್ನುವುದು ಒಂದು ಸಿಹಿಯಾದ ಭಾವನೆ. ಆದರೆ, ದೈನಂದಿನ ಜೀವನದ ಓಟದಲ್ಲಿ ಈ ಸಿಹಿತನವು ಕೆಲವೊಮ್ಮೆ ಮಸುಕಾಗುತ್ತದೆ. ಪ್ರೀತಿ-ಪ್ರೀತಿಯ ನಡುವಿನ ಉತ್ಸಾಹ, ರೋಮ್ಯಾನ್ಸ್ ಹಾಳಾಗಿ, ಎಲ್ಲವೂ ರೂಟೀನ್ ಆಗಿಬಿಡುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರೀತಿ ಮತ್ತೆ ಹೊತ್ತಿಸಲು ಒಂದು ಸಣ್ಣ ಸ್ಪರ್ಶ, ಸಿಹಿ ಭಾವನೆ ಸಾಕಾಗುತ್ತದೆ. ಆ ಸ್ಪರ್ಶವನ್ನು ನೀಡಬಲ್ಲದು ಚಾಕೊಲೇಟ್ (Chocolate). ಈ ಕುರಿತ ವಿಶೇಷ ವರದಿ ಇಲ್ಲಿದೆ.
ಹೌದು, ಪ್ರತಿ ವರ್ಷ ಸೆಪ್ಟೆಂಬರ್ 13 ರಂದು ಚಾಕೊಲೇಟ್ ಡೇ 2025 (Chocolate Day 2025) ಆಚರಿಸಲಾಗುತ್ತದೆ. ಸಂದರ್ಭದಲ್ಲಿ ಪ್ರಪಂಚದಾದ್ಯಂತ ಜೋಡಿಗಳು ಕೇವಲ ಚಾಕೊಲೇಟ್ ವಿನಿಮಯ ಮಾಡಿಕೊಳ್ಳಲ್ಲ. ಜೊತೆಗೆ ಚಾಕೊಲೇಟ್ ಪ್ರೀತಿಯ ಕಿಡಿಯನ್ನು ಮತ್ತೆ ಜೀವಂತಗೊಳಿಸುತ್ತದೆ ಎಂಬ ಭಾವನೆಗಳ ಸಂಕೇತವಾಗಿ ಕಾಣುತ್ತಿದ್ದಾರೆ. ಆದರೆ, ಪ್ರಶ್ನೆ ಏನು ಅಂದ್ರೆ.. ಒಂದು ಚಾಕೊಲೇಟ್ ತುಂಡು ನಿಜವಾಗಿಯೂ ರೋಮ್ಯಾನ್ಸ್ ಹೊತ್ತಿಸಬಹುದೇ? ನಿಜವಾಗಿಯೂ ಪ್ರಣಯವನ್ನು ಮರಳಿ ತರಬಹುದೇ? ಇದರ ಉತ್ತರವು ಇತಿಹಾಸ, ವಿಜ್ಞಾನ ಮತ್ತು ಭಾವನೆಗಳ ಒಂದು ವಿಶಿಷ್ಟ ಮಿಶ್ರಣದಲ್ಲಿದೆ.

ಪ್ರೀತಿಯ ಪುರಾತನ ಪಾನೀಯ
ಇತಿಹಾಸದ ಪ್ರಕಾರ, ಆಜ್ಟೆಕ್ ಜನಾಂಗವು ಕಾಕೋ ಬೀಜವನ್ನು ದೇವರ ವರ ಎಂದು ಭಾವಿಸುತ್ತಿದ್ದರು. ಅವರಿಗೆ ಇದು ಪ್ರೇಮ, ಉತ್ಸಾಹ ಮತ್ತು ಸಂತಾನೋತ್ಪತ್ತಿಯ ಪ್ರತೀಕವಾಗಿತ್ತು. ಈ ನಂಬಿಕೆ ಇಂದಿಗೂ ಜೀವಂತವಾಗಿದೆ. ವಿಶೇಷ ಪದಾರ್ಥಗಳಾದ ಮೆಣಸಿನಕಾಯಿ, ಕೇಸರಿ, ಜಿನ್ಸೆಂಗ್ ಮುಂತಾದವುಗಳಿಂದ ತಯಾರಿಸಲ್ಪಡುವ ಅಫ್ರೋಡಿಸಿಯಾಕ್ ಚಾಕೊಲೇಟ್ಗಳು ಪ್ರೀತಿಯ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ಹೇಳಲಾಗುತ್ತದೆ. ಪ್ರೀತಿ ಸಿಹಿಯಾಗಿರುತ್ತದೆ. ಆದರೆ, ಚಾಕೊಲೇಟ್ನಂತೆ ಅದರ ಮಾಂತ್ರಿಕತೆಯನ್ನು ಜೀವಂತವಾಗಿಡಲು ನಿಧಾನವಾಗಿ ಸವಿಯಬೇಕು.
ಪ್ರೀತಿಯ ರಸಾಯನ
ವಿಜ್ಞಾನದ ಪ್ರಕಾರ, ಚಾಕೊಲೇಟ್ನಲ್ಲಿ ಫಿನೈಲೆಥೈಲಮೈನ್ (love drug) ಮತ್ತು ಸೆರೋಟೊನಿನ್ ಇರುತ್ತವೆ. ಇದನ್ನು 'ಪ್ರೀತಿಯ ಔಷಧ' ಎಂದೂ ಕರೆಯಲಾಗುತ್ತದೆ. ಇವು ಮೆದುಳಿನ ಸಂತೋಷ ಕೇಂದ್ರವನ್ನು ಚುರುಕುಗೊಳಿಸಿ, ನೆಮ್ಮದಿ ಮತ್ತು ಸಂತೋಷವನ್ನು ಹೆಚ್ಚಿಸುತ್ತವೆ. ಅಫ್ರೋಡಿಸಿಯಾಕ್ ಚಾಕೊಲೇಟ್ಗಳಲ್ಲಿ (aphrodisiac chocolates) ರಕ್ತ ಪ್ರಸರಣ, ಶಕ್ತಿ ಮತ್ತು ಮನೋಭಾವವನ್ನು ಉತ್ತೇಜಿಸುವ ನೈಸರ್ಗಿಕ ಪದಾರ್ಥಗಳು ಕೂಡ ಸೇರಿರುವುದರಿಂದ, ಅವು ಪ್ರೀತಿಯ ರೋಮಾಂಚನವನ್ನು ಹೆಚ್ಚಿಸಬಲ್ಲವು.
ಒತ್ತಡ ಮರೆಸುವ ಆಯುಧ
ಚಾಕೊಲೇಟ್ ಹಂಚಿಕೊಳ್ಳುವುದು ಕೇವಲ ತಿನ್ನುವುದಲ್ಲ. ಅದು ಒಂದು ಸಂವೇದನಾತ್ಮಕ ಅನುಭವ. ಅದು ನಿಧಾನವಾಗಿ ಬಾಯಿಯಲ್ಲಿ ಕರಗುವುದು, ಅದರ ಸಿಹಿ ರುಚಿ ಮತ್ತು ಪರಸ್ಪರ ತಿನ್ನಿಸುವ ಕ್ರಿಯೆ. ಒಬ್ಬರಿಗೊಬ್ಬರು ಚಾಕೊಲೇಟ್ ತಿನ್ನಿಸುವುದು, ಅದರ ಸಿಹಿತನವನ್ನು ಸವಿಯುವುದು. ಈ ಕ್ರಿಯೆಯೇ ಪ್ರೀತಿಯನ್ನು ಮತ್ತಷ್ಟು ಹತ್ತಿರ ತರುತ್ತದೆ. ಒತ್ತಡ ಅಥವಾ ದೂರವನ್ನು ಮರೆಸುವ ಸಣ್ಣ ಮಾರ್ಗವೂ ಹೌದು. ಕಾಮೋತ್ತೇಜಕ ಚಾಕೊಲೇಟ್ಗಳು ಈ ಅನುಭವವನ್ನು ಮತ್ತಷ್ಟು ಆಳವಾಗಿಸುತ್ತವೆ. ಪ್ರೀತಿಯನ್ನು ಮತ್ತೆ ರೋಮಾಂಚಕ ಮತ್ತು ಉತ್ಸಾಹಭರಿತವನ್ನಾಗಿ ಮಾಡುತ್ತದೆ.
ಚಾಕೊಲೇಟ್ಗಳೇ ಏಕೆ ವಿಶೇಷ?
ಹೂವುಗಳು ಒಣಗುತ್ತವೆ. ಆಭರಣ ದುಬಾರಿ. ಆದರೆ, ಚಾಕೊಲೇಟ್ ಎಲ್ಲರಿಗೂ ಹತ್ತಿರದ, ಸುಲಭವಾಗಿ ಲಭ್ಯವಾದ ಮತ್ತು ವೈಯಕ್ತಿಕ ಗಿಫ್ಸ್. ವಿಶೇಷವಾಗಿ ಅಫ್ರೋಡಿಸಿಯಾಕ್ ಚಾಕೊಲೇಟ್ಗಳು ರುಚಿಯ ಜೊತೆಗೆ ಉತ್ಸಾಹ ಮತ್ತು ಹತ್ತಿರಿಕೆಯನ್ನು ಕೂಡ ನೀಡುತ್ತವೆ. ಪ್ರೀತಿ ದೊಡ್ಡ ಉಡುಗೊರೆಗಳನ್ನು ಬಯಸುವುದಿಲ್ಲ. ಬದಲಾಗಿ, ಪರಸ್ಪರ ಪ್ರೀತಿಯ ಕಿಡಿಯನ್ನು ಮತ್ತೆ ಹೊತ್ತಿಸುವುದು ಒಂದು ಸಿಹಿಯಾದ ಕ್ಷಣವನ್ನು ಹಂಚಿಕೊಳ್ಳುವಷ್ಟು ಸರಳವಾಗಿರಬಹುದು ಎಂದು ಇದು ನೆನಪಿಸುತ್ತದೆ.
ಪ್ರೀತಿ ಕಿಚ್ಚು ಹಚ್ಚಲು ಚಾಕೊಲೇಟ್ ತುಂಡು ಸಾಕು
ಚಾಕೊಲೇಟ್ ಡೇ ಕೇವಲ ಡೆಸರ್ಟ್ ಹಬ್ಬವಲ್ಲ. ಇದು ಪ್ರೀತಿಯ ಹಬ್ಬ. ಅಫ್ರೋಡಿಸಿಯಾಕ್ ಚಾಕೊಲೇಟ್ಗಳ (ಕಾಮೋತ್ತೇಜಕ ಚಾಕೊಲೇಟ್) ಪ್ರಚಾರವು ನಮ್ಮ ಸಂಬಂಧಗಳಲ್ಲಿ ರೊಮ್ಯಾನ್ಸ್ ಕೇವಲ ದೊಡ್ಡ ಉಡುಗೊರೆಗಳಲ್ಲಿ ಅಲ್ಲ. ಸಣ್ಣ ಸಣ್ಣ ಕ್ಷಣಗಳಲ್ಲಿ ಬದುಕುತ್ತದೆ ಎಂಬುದನ್ನು ನೆನಪಿಸುತ್ತದೆ. ಕೆಲವೊಮ್ಮೆ ಪ್ರೀತಿಯ ಕಿಚ್ಚು ಹೊತ್ತಿಸಲು ಒಂದು ಸಿಹಿ ಚಾಕೊಲೇಟ್ ತುಂಡೇ ಸಾಕು.



Click it and Unblock the Notifications

