Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಈ 8 ಚಾಕಲೇಟ್ ಗಳು ನಿಮ್ಮ ಹುಡುಗಿಗೆ ಖಂಡಿತ ಇಷ್ಟವಾಗುತ್ತೆ!
ಚಾಕಲೇಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರಿಗೂ ಕೂಡ ಚಾಕಲೇಟ್ ಅಂದ್ರೆ ತುಂಬಾನೇ ಇಷ್ಟ. ಅದ್ರಲ್ಲೂ ಹುಡುಗರು ತಮ್ಮ ಪ್ರೇಯಸ್ಸಿಗೆ ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಬೇಕು ಅನ್ನೋ ಸಂದರ್ಭದಲ್ಲಿ ಚಾಕಲೇಟ್ ಕೊಟ್ಟು ಅವರನ್ನು ಇಂಪ್ರೆಸ್ ಮಾಡ್ತಾರೆ.
ಇನ್ನೂ ವ್ಯಾಲೆಂಟೈನ್ಸ್ ಡೇ, ಬರ್ತ್ ಡೇ, ವಾರ್ಷಿಕೋತ್ಸವ ಎಲ್ಲಾ ವಿಶೇಷ ಸಂದರ್ಭದಲ್ಲೂ ಕೂಡ ಹುಡುಗರು ತಮ್ಮ ಹುಡುಗಿಯನ್ನು ಚಾಕಲೇಟ್ ಕೊಟ್ಟು ಖುಷಿ ಪಡಿಸ್ತಾರೆ. ಅಷ್ಟಕ್ಕು ಹುಡುಗಿಯರಿಗೆ ಯಾವ ಚಾಕಲೇಟ್ ಕೊಟ್ರೆ ತುಂಬಾನೇ ಇಷ್ಟ ಆಗುತ್ತೆ ಅನ್ನೋದನ್ನು ತಿಳಿಯೋಣ.

1. ಮಿಲ್ಕಿ ಬಾರ್
ಮಿಲ್ಕಿ ಬಾರ್ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗೋ ಚಾಕಲೇಟ್. ಇದ್ರರಲ್ಲಿ ಸಿಹಿಯ ಜೊತೆಗೆ ಹಾಲಿನ ಆ ರುಚಿ ಇದ್ದು, ಬಾಯಲ್ಲಿ ಇಟ್ಟ ತಕ್ಷಣ ಕರಗಿ ಹೋಗುತ್ತೆ. ನಿಮ್ಮ ಸಂಗಾತಿಗೆ ನೀವು ಮಿಲ್ಕಿ ಬಾರ್ ಕೊಟ್ಟರೆ ಅವರಿಗೆ ಖಂಡಿತ ಇಷ್ಟವಾಗುತ್ತೆ.
2. ಡೈರಿ ಮಿಲ್ಕ್
ಡೈರಿ ಮಿಲ್ಕ್ ವಿಶ್ವದ ಪ್ರಖ್ಯಾತ ಚಾಕಲೇಟ್ ಬ್ರ್ಯಾಂಡ್ ಗಳಲ್ಲಿ ಒಂದು. ಡೈರಿ ಮಿಲ್ಕ್ ಚಾಕಲೇಟ್ ಅನ್ನು ಕೂಡ ಹಾಲಿನಿಂದ ಮಾಡಲಾಗುತ್ತದೆ. ಅದ್ರಲ್ಲೂ ಹೆಚ್ಚಿನ ಹುಡುಗಿಯರಿಗೆ ಡೈರಿ ಮಿಲ್ಕ್ ಅಂದ್ರೆ ಪಂಚ ಪ್ರಾಣ. ಈ ಡೈರಿ ಮಿಲ್ಕ್ ಚಾಕಲೇಟ್ ಅನ್ನು ನೀವು ವಿಶೇಷ ರೀತಿಯಲ್ಲಿ ಗಿಫ್ಟ್ ಪ್ಯಾಕ್ ಮಾಡಿ ಕೊಡಬಹುದು.
3. ಫೆರೆರೋ ರೋಚೇರ್ (Ferrero Rocher)
ಫೆರೆರೋ ರೋಚೇರ್ ಚಾಕಲೇಟ್ ಇದರ ಪ್ಯಾಕಿಂಗ್ ಎಂತವರ ಗಮನವನ್ನಾದರೂ ಸೆಳೆದು ಬಿಡುತ್ತೆ. ಈ ಚಾಕಲೇಟ್ ಗೆ ಒಂದು ರೀತಿ ಗತ್ತು ಇದೆ. ಇದೊಂದು ರೀತಿ ಐಷಾರಾಮಿ ಚಾಕಲೇಟ್. ಇದರ ಟೇಸ್ಟ್ ಅನ್ನು ಪ್ರತಿಯೊಬ್ಬರು ಇಷ್ಟ ಪಡುತ್ತಾರೆ.
4. ಕೋಕೋನೆಟ್ ಚಾಕಲೇಟ್ (Coconut Chocolate)
ಈ ಚಾಕಲೇಟ್ ನಲ್ಲಿ ತೆಂಗಿನ ಕಾಯಿಯ ಜೊತೆಗೆ ಚಾಕಲೇಟ್ ಸೇರಿಕೊಂಡಿತ್ತು. ತಿನ್ನೋದಕ್ಕೆ ತುಂಬಾನೇ ರುಚಿಯಾಗಿ ಇರುತ್ತೆ. ಈ ಚಾಕಲೇಟ್ ತುಂಬಾನೇ ಮೃದುವಾಗಿದ್ದು, ಹದಾ ಸಿಹಿಯಿಂದ ಕೂಡಿದೆ. ಹೆಚ್ಚು ಸಿಹಿ ಇಷ್ಟ ಇಲ್ಲ ಅನ್ನುವವರು ಈ ಚಾಕಲೇಟ್ ಸೇವಿಸ್ಬಹುದು.
5. ಕಿಟ್ ಕ್ಯಾಟ್
ಕಿಟ್ ಕ್ಯಾಟ್ ಅತ್ಯಂತ ಪ್ರಖ್ಯಾತಿ ಪಡೆದಿರುವ ಚಾಕಲೇಟ್ ಬ್ರ್ಯಾಂಡ್. ಇದು ಚಾಕಲೇಟ್ ಹಾಗೂ ವೇಫರ್ಸ್ ನ ಮಿಶ್ರಣವಾಗಿದೆ. ಹದಾ ಸಿಹಿ ಇರೋದ್ರಿಂದ ಈ ಚಾಕಲೇಟ್ ಅನ್ನು ಅನೇಕ ಜನ ಇಷ್ಟ ಪಡುತ್ತಾರೆ.
6. ಸ್ನಿಕ್ಕರ್ಸ್ (Snickers)
ಸ್ನಿಕ್ಕರ್ಸ್ ಅಮೇರಿಕನ್ ಚಾಕಲೇಟ್ ಆಗಿದ್ದು, ಕ್ಯಾರಮೆಲ್ ಹಾಗೂ ಕಡಲೆ ಬೀಜದ ಮಿಶ್ರಣವಾಗಿದೆ. ಹಸಿವಾದಾಗ ಈ ಚಾಕಲೇಟ್ ತಿದ್ದರೆ ನಿಮ್ಮ ಹಸಿವು ಕೊಂಚ ಮಟ್ಟಿಗೆ ಕಡಿಮೆಯಾಗುತ್ತದೆ.
7. ಫೈವ್ ಸ್ಟಾರ್ (5 Star Chocolate)
ಫೈವ್ ಸ್ಟಾರ್ ಚಾಕಲೇಟ್ ವಿವಿಧ ಫ್ಲೆವರ್ ಗಳಲ್ಲಿ ಲಭ್ಯವಿದೆ. ಡೈರಿ ಮಿಲ್ಕ್ ಚಾಕಲೇಟ್ ತರನೇ ಫೈವ್ ಸ್ಟಾರ್ ಚಾಕಲೇಟ್ ಕೂಡ ಭಾರತದಲ್ಲಿ ಪ್ರಖ್ಯಾತಿಯನ್ನು ಪಡೆದಿದೆ.
8. ಗ್ಯಾಲಕ್ಸಿ ಚಾಕಲೇಟ್
ಗ್ಯಾಲಕ್ಸಿ ಚಾಕಲೇಟ್ ಕೂಡ ಭಾರತದಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಚಾಕಲೇಟ್ ಆಗಿದೆ. ಈ ಚಾಕಲೇಟ್ ಕ್ರೀಮ್ ಟೆಕ್ಚರ್ ಹೊಂದಿದೆ. ಬಾಯಲ್ಲಿಟ್ಟರೆ ಈ ಚಾಕಲೇಟ್ ಕರಗಿ ಹೋಗುತ್ತದೆ.



Click it and Unblock the Notifications



