Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ದೇವಸ್ಥಾನದಲ್ಲಿ ಚೈನೀಸ್ ನೂಡಲ್ಸ್ ಪ್ರಸಾದ..! ಹಿಂದಿದೆ ಭಾವನಾತ್ಮಕ ಕಥೆ
ಭಾರತದಲ್ಲಿ ಲಕ್ಷ ಲಕ್ಷ ದೇವಾಲಯಗಳಿವೆ. ಈ ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ವಿಶೇಷ ಸಂಪ್ರದಾಯ ಆಚರಣೆಗಳಿವೆ. ಪ್ರತಿ ದೇವಾಲಯಕ್ಕೂ ಐತಿಹಾಸಿಕ ಕೊಡುಗೆಗಳಿವೆ. ಕೆಲವು ದೇವಾಲಯ ಸಾವಿರಾರು ವರ್ಷಗಳ ನಿರ್ಮಿಸಲ್ಪಟ್ಟ ಅತ್ಯಂತ ಹಳೆಯ ದೇವಾಲಯಗಳಾಗಿವೆ.
ಈ ದೇವಾಲಯಗಳ ವಿಶೇಷತೆಗಳಲ್ಲಿ ಅಲ್ಲಿನ ವಾಸ್ತುಶಿಲ್ಪ, ಆ ದೇವಾಲಯದ ರಚನೆ, ಸೇರಿ ಪೂಜಾ ವಿಧಾನಗಳಿಂದ ಗಮನ ಸೆಳೆಯುತ್ತವೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಕಾಣಸಿಗದ ದೇವಾಲಯಗಳು ಭಾರತದ ನೆಲದಲ್ಲಿವೆ. ಅದರಲ್ಲೂ ಹಳೆಯ ದೇವಾಲಯಗಳು ಎಂದೆಂಗಿಗೂ ಭಾರತದ ಗರಿಮೆ ಹೆಚ್ಚಿಸುವ ಕಾರ್ಯ ಮಾಡುತ್ತಿವೆ.

ಇತ್ತ ದೇವಾಲಯಗಳಲ್ಲಿ ಒಂದೊಂದು ರೀತಿಯ ಪ್ರಸಾದ ನೀಡುವುದು ನಾವು ನೋಡಬಹುದು. ಒಂದೊಂದು ಕಡೆ ಒಂದೊಂದು ರೀತಿ ಪ್ರಸಾದ ಹಂಚಿಕೆ ಮಾಡುವುದು ಸಾಮಾನ್ಯ. ನೀವು ಪ್ರಸಾದವಾಗಿ ಲಡ್ಡು, ಪುಳಿಯೋಗರೆ, ಸಿಹಿ ನೀಡುವುದು ನೋಡಿರುತ್ತೀರಿ. ಅಷ್ಟೇ ಅಲ್ಲ ಕೆಲವು ಕಡೆ ವಿಚಿತ್ರ ಪ್ರಸಾದ ಹಂಚಿಕೆಯೂ ಇದೆ.
ಆದ್ರೆ ಇಲ್ಲೊಂದು ದೇವಾಲಯದಲ್ಲಿ ಚೈನೀಸ್ ಫುಡ್ ಆಗಿರುವ ನೂಡಲ್ಸ್ ಪ್ರಸಾದವಾಗಿ ನೀಡಲಾಗುತ್ತದೆ. ಹೌದು ಕೇಳಿದರೆ ನಿಮಗೂ ಅಚ್ಚರಿ ಎನಿಸಬಹುದು. ಈ ದೇವಾಲಯದಲ್ಲಿ ಪ್ರಸಾಧವಾಗಿ ಚೈನೀಸ್ ಫುಡ್ ನೂಡಲ್ಸ್ ನೀಡಲಾಗುತ್ತದೆ. ಕೋಲ್ಕತ್ತಾದ ಈ ಕಾಳಿ ಮಾತಾ ದೇವಾಲಯದಲ್ಲಿ ಇದೇ ಸಂಪ್ರದಾಯ ನಡೆದುಕೊಂಡು ಬಂದಿದೆ.
ಕೋಲ್ಕತ್ತಾದಲ್ಲಿನ ಒಂದು ಸಣ್ಣ ಟ್ಯಾಂಗ್ರಾ ಪ್ರದೇಶದಲ್ಲಿ, ಚೀನೀ ಪರಂಪರೆಯ ಆಹಾರ ನೂಡಲ್ಸ್ ಅನ್ನು ಪ್ರಸಾದವಾಗಿ ಭಕ್ತರಿಗೆ ಹಂಚಲಾಗುತ್ತದೆ. ಈ ಪ್ರದೇಶವು ಚೀನಿ ಹಾಗೂ ಭಾರತದ ಎರಡು ಸಂಸ್ಕೃತಿಗಳು ಒಟ್ಟಿಗೆ ಬೆರೆಯುವ ಸ್ಥಳವಾಗಿದೆ.
ಈ ವಿಶೇಷ ದೇವಾಲಯದಲ್ಲಿ ನೀವು ಕಾಳಿ ದೇವಿ ಮತ್ತು ಭಗವಾನ್ ಶಿವನ ಪ್ರತಿಮೆಗಳನ್ನು ಕಾಣಬಹುದು ಮತ್ತು ಈ ಸ್ಥಳದಲ್ಲಿ ನಿತ್ಯ ಪೂಜೆಯಿಂದ ಹಿಡಿದು ವಿಶೇಷ ಆಚರಣೆಗಳು ಭಕ್ತರನ್ನು ಸೆಳೆಯುತ್ತವೆ. ಆಸಕ್ತಿದಾಯಕ ಸಂಗತಿಯೆಂದರೆ ದೇವಿಗೆ ನೀಡಲಾಗುವ ವಿವಿಧ ರೀತಿಯ ಆಹಾರ. ಹೂವುಗಳು, ನೂಡಲ್ಸ್ ಮತ್ತು ಇತರ ಚೀನೀ ಭಕ್ಷ್ಯಗಳಂತಹ ಸಾಮಾನ್ಯ ಕೊಡುಗೆಗಳ ಜೊತೆಗೆ ಪವಿತ್ರ ಅರ್ಪಣೆಗಳನ್ನು ಸಹ ನೀಡಲಾಗುತ್ತದೆ.
ಬಹಳ ಹಿಂದೆ ದೊಡ್ಡ ಮರದ ಬಳಿ ಎರಡು ಕಲ್ಲುಗಳಿದ್ದವು ಎನ್ನುತ್ತಾರೆ ಸ್ಥಳೀಯರು. ಜನರು ಕುಂಕುಮವನ್ನು ಹಚ್ಚಿ ಪ್ರತಿದಿನ ಪ್ರಾರ್ಥಿಸುತ್ತಿದ್ದರು. ಆದರೆ ಈ ಪ್ರದೇಶದಲ್ಲಿ ವಾಸವಿದ್ದ ಚೀನಿ ಕುಟುಂಬವೊಂದರಲ್ಲಿ ಸಣ್ಣ ಬಾಲಕ ಅನಾರೋಗ್ಯಕ್ಕೆ ಒಳಗಾಗಿದ್ದನಂತೆ. ಆತ ಗುಣಮುಖರಾಗಲಿ ಎಂದು ಪೋಷಕರು ಈ ಕಾಳಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದರಂತೆ. ಇದಾಗಿ ಕೆಲವೇ ದಿನದಲ್ಲಿ ಆತ ಅನಾರೋಗ್ಯದಿಂದ ಗುಣಮುಖನಾಗಿದ್ದ.
ಒಂದು ಪವಾಡವನ್ನು ಅನುಭವಿಸಿದ ನಂತರ, ಹುಡುಗನ ಕುಟುಂಬವು ಆ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಿತು. ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಚೀನೀ ಸಮುದಾಯದ ಮಂದಿ ಹಣ ಒಟ್ಟು ಮಾಡಿ ದೊಡ್ಡ ದೇವಾಲಯ ನಿರ್ಮಿಸಿದರು. ಹೀಗಾಗಿ ಈ ಸ್ಥಳ ಎರಡು ಸಂಸ್ಕೃತಿಗಳ ಬೆಸೆಯುವ ಸ್ಥಳವಾಗಿದೆ. ಹೀಗಾಗಿಯೇ ಈ ದೇವಾಲಯದಲ್ಲಿ ಇಂದಿಗೂ ಚೈನೀಸ್ ಫುಡ್ ನೂಡಲ್ಸ್ ಅನ್ನೇ ಪ್ರಸಾದವಾಗಿ ಹಂಚಲಾಗುತ್ತದೆ.
ವಿಶೇಷವಾಗಿ ದೀಪಾವಳಿ ಹಾಗೂ ಹಿಂದೂ ಹಬ್ಬಗಳ ಸಮಯದಲ್ಲಿ ಈ ದೇವಾಲಯ ಭಕ್ತರಿಂದ ತುಂಬಿಕೊಳ್ಳುತ್ತದೆ. ಈ ದೀಪಾವಳಿಯಲ್ಲಿ ಅವರು ಎಣ್ಣೆ ಹಚ್ಚಿರುವ ಸುಗಂದ ಭರಿತ ಕಾಗದವನ್ನು ಬೆಂಕಿಯಲ್ಲಿ ಸುಡುತ್ತಾರೆ.
ಇಲ್ಲಿನ ವಿಗ್ರಹದ ಮುಂದೆ ಜನರು ನಮಸ್ಕರಿಸುವ ರೀತಿ, ನೀವು ಭಾರತದ ಬೇರೆಡೆ ನೋಡುತ್ತಿರುವುದಕ್ಕೆ ಹೋಲಿಸಿದರೆ ವಿಶಿಷ್ಟವಾಗಿದೆ. ಸಾಮಾನ್ಯ ನಮನದ ಶೈಲಿಯ ಬದಲಾಗಿ, ಅವರು ದೇವಿಗೆ ಗೌರವವನ್ನು ತೋರಿಸುವ ತಮ್ಮದೇ ಆದ ವಿಧಾನವನ್ನು ಹೊಂದಿದ್ದಾರೆ.



Click it and Unblock the Notifications