Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಚೀನಾದ ಅತ್ಯಂತ ಎತ್ತರದ ಜಲಪಾತವೇ ನಕಲಿ..! ಇದು ಚೀನಾದ ಸೃಷ್ಟಿ
ಚೀನಾ ದೇಶ ಉಳಿದೆಲ್ಲಾ ದೇಶಗಳಿಗಿಂತಲೂ ಯಾವಾಗಲೂ ಒಂದು ಹೆಜ್ಜೆ ಮುಂದೆ ಹೋಗಿಯೇ ಯೋಚಿಸುತ್ತದೆ. ಚೀನಾದಲ್ಲಿ ಯಾವ ವಸ್ತು ಇಲ್ಲ ಎನ್ನುವ ಹಾಗೆಯೇ ಇಲ್ಲ. ಅಲ್ಲಿ ಎಲ್ಲಾ ವಸ್ತು ಥಟ್ ಅಂತ ರೆಡಿಯಾಗುತ್ತವೆ. ಅದರಲ್ಲೂ ಟೆಕ್ನಾಲಜಿಗೆ ಎಂಬಂಧಿಸಿದ ಎಲ್ಲಾ ವಸ್ತುಗಳು ಅಲ್ಲಿ ಸಿಕ್ಕೆ ಸಿಗುತ್ತವೆ. ಜೊತೆಗೆ ಟೆಕ್ನಾಲಜಿಗೆ ಅದೊಂದು ತವರೂರು.
ಅಲ್ಲಿ ಎಫಿಲ್ ಟವರ್ ಯಿಂದ ಹಿಡಿದು ಎಲ್ಲಾ ವಸ್ತು ನಕಲಿಯಾಗಿ ಸಿಗುತ್ತವೆ. ಆದ್ರೆ ಚೀನಾದ ಅತೀ ಎತ್ತರದ ಜಲಪಾತವನ್ನೇ ಚೀನಾ ನಕಲು ಮಾಡಿದೆ ಅಂದರೆ ನಂಬುತ್ತೀರಾ? ಹೌದು ಚೀನಾದ ಅತೀ ಎತ್ತರದ ಜಲಪಾತ ಇರುವುದು ಚೀನಾದ ಹೆನಾನ್ ನಗರದಲ್ಲಿದ್ದು, ಆದರೆ ಆ ಜಲಪಾತ ನಕಲಿ ಅಂದರೆ ಎಂತವರಿಗೂ ಅಚ್ಚರಿಯಾಗುತ್ತೆ.

ಬೇಸಿಗೆಯಲ್ಲಿ ಚೀನಾದಲ್ಲಿ ನದಿಗಳು ಬತ್ತಿಹೋದಾಗಲೂ, ದೇಶದ ಅತಿ ಎತ್ತರದ ತಡೆರಹಿತ ಜಲಪಾತ - ಹೆನಾನ್ ಪ್ರಾಂತ್ಯದ ಯುಂಟೈ ಪರ್ವತ ಜಲಪಾತ ಧುಮ್ಮಿಕ್ಕುತ್ತಲೇ ಇರುತ್ತದೆ. ಇದು ಅಲ್ಲಿಗೆ ಬರುವ ಪ್ರವಾಸಿಗರಿಗೂ ಅಚ್ಚರಿ ಮೂಡಿಸುತ್ತದೆ. ಆದರೆ ಈಗ ಈ ಸೌಂದರ್ಯದ ಹಿನ್ನಲೆ ಬಹಿರಂಗವಾಗಿದ್ದು, ಬೇಸಿಗೆಯಲ್ಲಿ ಈ ಜಲಪಾತದಿಂದ ನೀರು ಹರಿಯುವುದು ನಕಲಿ ಎಂಬುದು ತಿಳಿದುಬಂದಿದೆ.
ಈ ಜಲಪಾತದ ತಲೆಯಲ್ಲಿ ದೊಡ್ಡದಾದ ಪೈಪ್ ಹಾಕಲಾಗಿದ್ದು, ಬೇಸಿಗೆಯಲ್ಲಿ ಈ ಪೈಪ್ ಮೂಲಕ ನೀರು ಹರಿಯುತ್ತದೆ. ಇದು ನಿಮಗೆ ಅಚ್ಚರಿ ಎನಿಸಿದರು ಸತ್ಯ ಸಂಗತಿ. ಪ್ರವಾಸಿಗರ ಸೆಳೆಯಲು ಚೀನಾ ಈ ರೀತಿಯ ಪ್ಲಾನ್ ಮಾಡಿದೆ. ಬೇಸಿಗೆಯಲ್ಲಿ ನೀರು ಉಕ್ಕಿ ಹರಿಯುವಂತೆ ಮಾಡಲು ಪೈಪ್ ಮೂಲಕ ನೀರು ಹರಿಸುತ್ತದೆ. ಈ ನೀರು ಜಲಪಾತದಂತೆ ಬೀಳಲು ದಾರಿ ಮಾಡಲಾಗಿದೆ. ಆದರೆ ಈ ನೀರು ಬೀಳುವುದು ನಕಲಿ ಎಂದು ಕಾಣಿಸುವುದೇ ಇಲ್ಲ.
ಯುಂಟೈ ಜಲಪಾತದ ಮೂಲಕ್ಕೆ ನಾನು ಪೈಪ್ ಅನ್ನು ನೋಡಲು ಮಾತ್ರ ಹೇಗೆ ಎಲ್ಲಾ ಕಷ್ಟಗಳನ್ನು ಎದುರಿಸಿದೆ" ಎಂದು ಟಿಕ್‌ಟಾಕ್ ವಿಡಿಯೋದಲ್ಲಿ ಒಬ್ಬರು ವಿವರಿಸಿದ್ದಾರೆ. ಆ ವಿಡಿಯೋದಲ್ಲಿ ಪೈಪ್ ಮೂಲಕ ನೀರು ಹರಿಯುತ್ತಿರುವುದು ಕಂಡು ಬರುತ್ತದೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 15 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ.
ಈ ಜಲಪಾತ ಸುಮಾರು 1030 ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ. ಇದು ಚೀನಾದ ಅತ್ಯಂತ ಎತ್ತರದ ಜಲಪಾತ ಎನಿಸಿದೆ. ನಮ್ಮ ರಾಜ್ಯದ ಜೋಗ ಜಪಲಾತ ಬರೋಬ್ಬರಿ 830 ಅಡಿಯಿಂದ ಧುಮ್ಮಿಕ್ಕುತ್ತದೆ. ಅಂದರೆ ನೀವು ಊಹಿಸಿಕೊಳ್ಳಿ ಆ ಯುಂಟೈ ಜಲಪಾತ ಇನ್ನೆಷ್ಟು ಎತ್ತರದಿಂದ ಧುಮುಕುತ್ತದೆ ಎಂದು. ಆದರೆ ಜೋಗ ಜಲಪಾತವು ಬೇಸಿಗೆಯಲ್ಲಿ ಒಣಗಿರುತ್ತೆ. ಈ ವೇಳೆ ಪ್ರವಾಸಿಗರು ಸಹ ಅಲ್ಲಿಗೆ ಬರುವುದಿಲ್ಲ. ಆದರೆ ಯುಂಟೈನ ಈ ಜಲಪಾತ ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುವಂತೆ ಮಾಡಲಾಗಿದೆ.
ಈ ವಿಡಿಯೋ ವೈರಲ್ ಆದ ಬಳಿಕ ಜನರು ಅಚ್ಚರಿ ಪಡುವ ಬದಲಾಗಿ ಹಲವು ಪ್ರಶ್ನೆ ಮುಂದಿಟ್ಟಿದ್ದಾರೆ. ಇಷ್ಟೊಂದು ಖರ್ಚು ಮಾಡಿ ನಕಲಿ ಜಲಪಾತ ಸೃಷ್ಟಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಕುರಿತು ಅಧಿಕಾರಿಗಳಿಂದ ಈ ವಿಡಿಯೋದ ಸತ್ಯಾಸತ್ಯತೆ ಕುರಿತು ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಯುಂಟೈ ಜಿಯೋ ಪಾರ್ಕ್ ನಂತರ ಜಲಪಾತದ ಪರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಜನರು ಈ ರೀತಿ ನೀರಿನ ಬಗ್ಗೆ ತಿಳಿದುಕೊಳ್ಳುವುದು ಅರ್ಥಹೀನ ಎಂದು ತಿಳಿಸಿದೆ.
ಜೊತೆಗೆ ಈ ರೀತಿ ನಕಲಿ ನೀರು ಸೃಷ್ಟಿಸಿದ್ದನ್ನು ಸಮರ್ಥಿಸಿಕೊಂಡು ಪೋಸ್ಟ್ ಸಹ ಮಾಡಿದೆ. ಆದರೆ ಜನರಿಗೆ ಮಾತ್ರ ಇದೊಂದು ಅಚ್ಚರಿಯಾಗಿ ಗೋಚರಿಸಿದೆ. ಹಲವರು ಜಲಪಾತವನ್ನೇ ನಕಲು ಮಾಡುವ ಶಕ್ತಿ ಚೀನಾಗೆ ಬಿಟ್ಟರೆ ಬೇರೆ ಯಾವ ದೇಶಕ್ಕೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಚೀನಾ ನೀರನ್ನೂ ಸಹ ಬಿಡದೆ ನಕಲಿ ಮಾಡುತ್ತಿದೆ ಅಂದರೆ ಮುಂದೊಂದು ದಿನ ನಕಲಿ ಭೂಮಿಯನ್ನೇ ಸೃಷ್ಟಿ ಮಾಡಬಹುದು ಎಂದು ಮತ್ತೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.



Click it and Unblock the Notifications