Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಕ್ಷುದ್ರಗ್ರಹ ಭೂಮಿ ಅಪ್ಪಳಿಸದಂತೆ ತಡೆಯಲು 16 ಮಂದಿ ಯುವಕರ ನೇಮಕ..! ಚೀನಾ ಏನು ಮಾಡಲು ಹೊರಟಿದೆ..?
ಆಕಾಶದಲ್ಲಿ ಅದೆಷ್ಟು ಕ್ಷುದ್ರಗ್ರಹಗಳು, ಆಕಾಶಕಾಯಗಳು, ಗ್ರಹಗಳು, ಬ್ಲಾಕ್‌ಹೋಲ್‌ಗಳು ಹೀಗೆ ಹತ್ತು ಹಲವು ಅಚ್ಚರಿಗಳ ನೋಡಬಹುದು. ಹೀಗಾಗಿ ಖಗೋಳ ಶಾಸ್ತ್ರಜ್ಞರು ಕ್ಷಣ ಕ್ಷಣಕ್ಕೂ ಆಕಾಶಕಾಯಗಳ ಮೇಲೆ ಗಮನವಿಡುತ್ತಾರೆ. ಅದರಲ್ಲೂ ಇತ್ತೀಚಿಗೆ ಕ್ಷುದ್ರಗ್ರಹಗಳ ಸಂಚಾರದ ಮೇಲೆ ಗಮನ ಇಡಲಾಗಿದೆ. ಮುಂದಿನ ಹಲವು ವರ್ಷಗಳ ಕಾಲ ಭೂಮಿಯತ್ತ ಹತ್ತಾರು ಕ್ಷುದ್ರಗ್ರಹಗಳು ಸಾಗಿ ಬರುತ್ತವೆ.
ಅದರಲ್ಲೂ ಕೆಲವೊಂದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂಬ ಆತಂಕವೂ ಇದೆ. ಈ ನಡುವೆ ಚೀನಾ ಕ್ಷುದ್ರಗ್ರಹ ಅಧ್ಯಯನ ಕುರಿತು ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಭೂಮಿಗೆ ಅಪ್ಪಳಿಸಲಿರುವ ಕ್ಷುದ್ರಗ್ರಹವನ್ನು ತಡೆಯುವ ಉದ್ದೇಶದಿಂದ ಯುವಕರನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಕ್ಷುದ್ರಗ್ರಹದ ಮೇಲೆ ನಿಗಾ ಇಡಲು ಒಂದು ನಿರ್ಧಿಷ್ಟ ರಕ್ಷಣಾ ಪಡೆ ರಚಿಸಲು ಮುಂದಾಗಿದ್ದು ಈ ಪಡೆಗೆ ಯುವಕರನ್ನು ನೇಮಿಸಿಕೊಳ್ಳಲು ಮುಂದಾಗಿದೆ.

ಭೂಮಿಯತ್ತ ಸಾಗಿಬರುತ್ತಿರುವ ಕ್ಷುದ್ರಗ್ರಹಗಳ ಕುರಿತು ಅಧ್ಯಯನ ಮಾಡುವ ಉದ್ದೇಶದಿಂದಾಗಿ ಚೀನಾ ಈ ಹೆಜ್ಜೆ ಇಟ್ಟಿದೆ. ಕ್ಷುದ್ರಗ್ರಹಗಳನ್ನು ಪತ್ತೆಹಚ್ಚಲು, ವೀಕ್ಷಿಸಲು ಮತ್ತು ಬಹುಶಃ ಅವುಗಳನ್ನು ಭೂಮಿಯತ್ತ ಬಾರದಂತೆ ಬೇರೆ ಮಾರ್ಗಕ್ಕೆ ತಿರುಗಿಸಲು ಯುವ ಪದವೀಧರರನ್ನು ನೇಮಿಸಿಕೊಳ್ಳಲು ಮುಂದಾಗಿದೆ. ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕಾ ರಾಷ್ಟ್ರೀಯ ಆಡಳಿತ ಸಂಸ್ಥೆ ನೇಮಕಾತಿ ನಡೆಸುತ್ತಿದೆ.
ಯಾವಾಗ ಅಪ್ಪಳಿಸಲಿದೆ ಕ್ಷುದ್ರಗ್ರಹ
ಚೀನಾಗೆ ಬೆದರಿಕೆ ಒಡ್ಡಿರುವ ಈ ಕ್ಷುದ್ರಗ್ರಹವು 2032 ರಲ್ಲಿ ಭೂಮಿಗೆ ಅಪ್ಪಳಿಸುವ ಆತಂಕವಿದೆ. ಹೀಗಾಗಿ ಚೀನಾ ಈ ಕ್ಷುದ್ರಗ್ರಹದ ಚಲನೆಯನ್ನು ಮತ್ತಷ್ಟು ಅಧ್ಯಯನ ಮಾಡಲು ಅದರ ಸಂಭಾವ್ಯ ಅಪಾಯ ಕಡಿಮೆ ಮಾಡುವ ಉದ್ದೇಶದಿಂದ ಈ ರೀತಿ ನೇಮಕಾತಿಗೆ ಮುಂದಾಗಿದೆ. 2024 YR4 ಎಂದು ಹೆಸರಿಸಲಾದ ಈ ಕ್ಷುದ್ರಗ್ರಹವು ವೇಗವಾಗಿ ಭೂಮಿಯತ್ತ ಹೊರಟಿದೆ. ಆದರೆ ಅದು ಭೂಮಿಗೆ ಅಪ್ಪಳಿಸಲಿದ್ಯಾ? ಯಾವಾಗ? ಹಾಗೆ ಯಾವ ಸ್ಥಳದಲ್ಲಿ ಎಂಬುದು 2028ರ ವೇಳೆಗೆ ನಿಖರವಾಗಿ ಹೇಳಬಹುದು ಎಂದು ನಾಸಾ ಕೂಡ ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಹವಾಯಿ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನ ಸಂಸ್ಥೆಯು ಈ ಕ್ಷುದ್ರಗ್ರಹವನ್ನು ಗುರುತಿಸಿತು, ಹೀಗಾಗಿ 2024 YR4 ಎಂದು ನಾಮಕರಣ ಮಾಡಲಾಗಿದೆ. ಇದಾದ ಬಳಿಕ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಈ ಕ್ಷುದ್ರಗ್ರಹದ ಮೇಲೆ ನಿರಂತವಾಗಿ ಕಣ್ಣಿಟ್ಟಿದೆ. ಹಾಗೆ ಈ ಕ್ಷುದ್ರಗ್ರಹ ಸೇರಿ ಸಂಭಾವ್ಯ ಅಪಾಯ ತರಲಿರುವ ಇತರೆ ಕ್ಷುದ್ರಗ್ರಹಗಳ ಮೇಲೆಯೂ ಕಣ್ಣಿಡಲಾಗಿದೆ.
ಈ ಹಿನ್ನೆಲೆ ಚೀನಾ ಈಗ ಒಂದು ಹೆಜ್ಜೆ ಮುಂದೆ ಹೋಗಿ ಈ ಕ್ಷುದ್ರಗ್ರಹದ ಅಪಾಯ ಕಡಿಮೆ ಮಾಡುವುದು ಹಾಗೆ ಈ ಕ್ಷುದ್ರಗ್ರಹದ ದಾರಿ ಬದಲಿಸುವುದು, ಅದರ ಬೇಗ, ದಿಕ್ಕಿನ ಬಗ್ಗೆ ನಿಖರವಾಗಿ ಕಂಡುಕೊಳ್ಳುವ ಉದ್ದೇಶದಿಂದ ಚೀನಾ ರಕ್ಷಣಾ ಪಡೆ ರಚಿಸುತ್ತಿದೆ. ಈ ನೇಮಕಾತಿ ಕುರಿತಂತೆ ವೀಚಾಟ್ (WeCaht)ನಲ್ಲಿ ಹಂಚಿಕೊಂಡಿದೆ. ಇದಕ್ಕಾಗಿ 16 ಪ್ರತಿಭಾವಂತ ಯುವಕರ ನೇಮಿಸಿಕೊಳ್ಳಲಾಗುವುದಂತೆ. ಎಲ್ಲರು 35 ವರ್ಷದೊಳಗಿನವರು ಹಾಗೆ ದೃಢ ರಾಜಕೀಯ ನಿಲುವು ಹೊಂದಿರಬೇಕಂತೆ.
ಈ 16 ಯುವಕರ ಜೊತೆಗೆ ಒಂದು ದೊಡ್ಡ ತಂಡ ಈ ಕ್ಷುದ್ರಗ್ರಹದ ಮೇಲೆ ನಿಗಾ ಇಡಲಿದ್ಯಂತೆ. ಏಪ್ರಿಲ್‌ನಲ್ಲಿ ವೀಕ್ಷಣೆಯ ಅಂತ್ಯದ ವೇಳೆಗೆ ಹೆಚ್ಚಿನ ಡೇಟಾ ಲಭ್ಯವಾಗುವುದರಿಂದ 2028ರಲ್ಲಿ ಒಂದು ಹಂತದ ನಿರ್ಧಾರಕ್ಕೆ ಬರಬಹುದು ಎಂದು ಚೀನಾ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.



Click it and Unblock the Notifications