Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಹುಡುಗಿಗೆ ₹12 ಲಕ್ಷದ ಚಿನ್ನದ ಬಿಸ್ಕೇಟ್ ಗಿಫ್ಟ್ ಕೊಟ್ಟ 4 ವರ್ಷದ ಹುಡುಗ..! ಇದು ನರ್ಸರಿ ಲವ್‌ಸ್ಟೋರಿ..!
ಮಕ್ಕಳು ತುಂಟಾಟ ಮಾಡೋದು ಸಾಮಾನ್ಯ. ಅವರು ಮುಗ್ಧತೆಯ ಪ್ರತಿರೂಪ. ಚಿಕ್ಕಮಕ್ಕಳು ತಪ್ಪು ಮಾಡಿದರೂ ಅಂತಹದ್ದೇನು ದೊಡ್ಡ ಪ್ರಮಾದ ಸಂಭವಿಸಲ್ಲ. ಏಕೆಂದ್ರ ಅವರು ಪರಿಶುದ್ಧ ಮನಸ್ಸುಳ್ಳವರು, ಅವರು ಏನೇ ಮಾಡಿದ್ರು ಅಲ್ಲೊಂದು ಮುಗ್ಧತೆ ಇದ್ದೇ ಇರುತ್ತೆ. ಆದ್ರೆ ಇಲ್ಲೊಬ್ಬ 4 ವರ್ಷದ ಹುಡುಗ ಮಾಡಿರುವ ಕೆಲಸ ಕೇಳಿದ್ರೆ ನೀವು ನಿಜಕ್ಕೂ ಅಚ್ಚರಿ ಜೊತೆಗೆ ಶಾಕ್ ಕೂಡ ಆಗ್ತಿರಾ..
4 ವರ್ಷದ ನರ್ಸರಿಗೆ ಹೋಗುವ ಹುಡುಗನೊಬ್ಬ ಶಾಲೆಯ ತನ್ನ ಸಹಪಾಠಿಗೆ ಬರೋಬ್ಬರಿ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕೇಟ್ ನೀಡಿರುವ ಘಟನೆ ನಡೆದಿದೆ. ಅಚ್ಚರಿ ಎಂದರೆ ಆತ ತನ್ನ ಶಾಲೆಯ ಹುಡುಗಿಯನ್ನು ಮದುವೆಯಾಗುವುದಾಗಿ ಆಕೆಗೆ ಎಂಜೇಗ್‌ಮೆಂಟ್ ಗಿಫ್ಟ್ ಆಗಿ ಚಿನ್ನದ ಬಿಸ್ಕೇಟ್ ನೀಡಿರುವ ಅಚ್ಚರಿಯ ಘಟನೆ ವರದಿಯಾಗಿದೆ.

ಮಕ್ಕಳು ಶುದ್ಧತೆ ಮತ್ತು ಮುಗ್ಧತೆಯ ಪ್ರತಿರೂಪ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಚೀನಾದಲ್ಲಿ ನಡೆದ ಇಂತಹ ಘಟನೆಯೊಂದರಲ್ಲಿ, ಚಿಕ್ಕ ಹುಡುಗನೊಬ್ಬ ತನ್ನ ನರ್ಸರಿ ಶಾಲೆಯ ತರಗತಿಯ ಹುಡುಗಿಯೊಬ್ಬಳಿಗೆ US $ 15,000 (ಅಂದಾಜು ₹ 12 ಲಕ್ಷ) ಮೌಲ್ಯದ ಚಿನ್ನದ ತುಂಡುಗಳನ್ನು ''ನಿಶ್ಚಿತಾರ್ಥ'' ಉಡುಗೊರೆಯಾಗಿ ನೀಡಿದ್ದಾನೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಡಿಸೆಂಬರ್ 22 ರಂದು, ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಗುವಾಂಗ್‌ಆನ್‌ನಲ್ಲಿ, ಪುಟ್ಟ ಹುಡುಗಿ ತನ್ನ ಮನೆಯಲ್ಲಿ ತನ್ನ ಹೆತ್ತವರ ಮುಂದೆ ಚಿನ್ನದ ಬಿಸ್ಕೇಟ್ ತಂದಿಟ್ಟಾಗ ಇಡೀ ಘಟನೆ ಬೆಳಕಿಗೆ ಬಂದಿದೆ. ಈ ಗಿಫ್ಟ್ ಕಂಡ ಹುಡುಗಿ ಮನೆಯವರು ಫುಲ್ ದಂಗಾಗಿದ್ದಾರೆ. ಆದರೆ ಹುಡುಗಿ ಮನೆಯವರು ಇಷ್ಟೊಂದು ದುಬಾರಿ ಗಿಫ್ಟ್ ಕೊಡಲು ಹುಡುಗನಿಗೆ ಹಣ ಎಲ್ಲಿಂದ ಬಂತು ಎಂಬ ಅನುಮಾನ ಮೂಡಿದೆ. ನರ್ಸರಿಯಲ್ಲಿ ಓದುತ್ತಿರುವ ಹುಡುಗ ಇಷ್ಟು ದುಬಾರಿ ಗಿಫ್ಟ್ ಕೊಡಲು ಸಾಧ್ಯವೇ? ಇದೇ ಪ್ರಶ್ನೆ ಹುಡುಗಿ ಮನೆಯವರಿಗೂ ಮೂಡಿದೆ. ಆದರೆ ಹುಡುಗನ ಮನೆಯಲ್ಲಿ ನಡೆದಿದ್ದೇ ಬೇರೆ ಕಥೆ.
ಹುಡುಗನಿಗೆ ಚಿನ್ನ ಸಿಕ್ಕಿದ್ದೇಗೆ?
ಹುಡುಗನ ಮನೆಯಲ್ಲಿ ಅವರ ತಂದೆ ತಾಯಿ ಚಿನ್ನದ ಬಿಸ್ಕೇಟ್ ತಂದಿಟ್ಟಿದ್ದರಂತೆ. ಒಂದು ದಿನ ಆತ ಈ ಚಿನ್ನವನ್ನು ಕಂಡು ಇದು ಯಾಕಾಗಿ ತಂದಿದ್ದೀರಿ? ಯಾರಿಗೆ? ಇದು ಏನು ಎಂಬೆಲ್ಲಾ ಪ್ರಶ್ನೆ ಮಾಡಿದ್ದಾನೆ. ಈ ಪುಟ್ಟ ಬಾಲಕನ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಪೋಷಕರು ಇದು ನಿನ್ನ ಮದುವೆಯಾಗುವ ಹುಡುಗಿಗೆ ಕೊಡಲು ತಂದಿದ್ದೇವೆ ಎಂದಿದ್ದಾರೆ.
ಇಷ್ಟೇ..ಆ ಹುಡುಗನ ತಲೆಯಲ್ಲಿ ಇದು ನನ್ನ ಮದುವೆಯಾಗುವ ಹುಡುಗಿಗೆ ನೀಡಬೇಕು ಎಂಬುದಷ್ಟೇ ತಿಳಿದಿತ್ತು. ಆತ ತನ್ನ ಶಾಲೆಯಲ್ಲಿದ್ದ ಹುಡುಗಿಗೆ ಕೊಡಲೆಂದು ಮನೆಯಿಂದ ತಂದಿದ್ದಾನೆ. ಬಳಿಕ ಹುಡುಗಿಯ ಕರೆದು ನಿಶ್ಚಿತಾರ್ಥದ ಕೊಡುಗೆಯಾಗಿ ನಿನ್ನ ಆಕೆಯ ಕೈಗಿಟ್ಟಿದ್ದಾನೆ. ಆ ಹುಡುಗಿ ಹಿಂದು ಮುಂದು ನೋಡದೆ ಮನೆಗೆ ತೆಗೆದುಕೊಂಡು ಹೋಗಿದ್ದಾಳೆ.
ಈ ಘಟನೆ ನಡೆದ ಬಳಿಕ ಎರಡೂ ಕಡೆ ಮನೆಯವರು ಶಾಲೆಗೆ ಬಂದಿದ್ದಾರೆ. ಇಡೀ ಪ್ರಸಂಗ ಎಲ್ಲೆಡೆ ಹರಿದಾಡಿದೆ. ಈಗ ಆನ್‌ಲೈನ್‌ನಲ್ಲಿ ಇವರಿಬ್ಬರ ಕಹಾನಿ ಸಿಕ್ಕಾಪಟ್ಟೆ ಹಲ್‌ಚಲ್ ಎಬ್ಬಿಸಿದೆ. ಇದು ಮಕ್ಕಳ ಮುಗ್ಧತೆಗೆ ಸಾಕ್ಷಿಯಾಗಿದೆ. ಹೀಗಾಗಿ ಮಕ್ಕಳ ಎದುರು ಏನಾದರೂ ಮಾತನಾಡುವ ಮುನ್ನ ಸವಿರ ಬಾರಿ ಯೋಚಿಸಬೇಕು.
ಈ ಘಟನೆ ಮಾತ್ರವಲ್ಲ ಕಳೆದ ವರ್ಷ ಮೇ ತಿಂಗಳಲ್ಲಿ ಚೀನಾದ ಬಾಲಕನೊಬ್ಬ ತನ್ನ ಶಿಶುವಿಹಾರದಲ್ಲಿ ಬಾಲಕಿಗೆ ಕೊಡಲು ತನ್ನ ತಾಯಿಗೆ ಸೇರಿದ ಚಿನ್ನದ ಬಳೆಯನ್ನು ತೆಗೆದುಕೊಂಡು ಹೋಗಿದ್ದ. ಆದರೆ ಶಿಕ್ಷಕಿಯ ಕೈಗೆ ಸಿಕ್ಕಿಬಿದ್ದಿದ್ದ, ಬಳಿಕ ಆತನ ಪೋಷಕರನ್ನು ಕರೆಸಿದ್ದರು. ಆತನ ಬಳಿ ಹೀಗೇಕೆ ಮಾಡಿದೆ ಎಂದು ಕೇಳಿದಾಗ ಆತ ನನ್ನ ಸ್ನೇಹಿತೆಗೆ ಉಡುಗೊರೆ ನೀಡಲೆಂದು ತಂದಿದ್ದೆ ಎಂದಿದ್ದ.



Click it and Unblock the Notifications