Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬನ್ನೇರ್‌ಘಟ್ಟ ಝೂನಲ್ಲಿ ಮಗುವನ್ನು ಹಿಡಿದಿರುವ ತಾಯಿಗೆ ತನ್ನ ಮಗುವನ್ನು ತಂದು ತೋರಿಸಿ ಮುದ್ದಿಸಿದ ಚಿಂಪಾಂಜಿ: ವೀಡಿಯೋ ವೈರಲ್
ತಾನು ಹೆತ್ತ ಮಗು ತಾಯಿಗೆ ಯಾವಾಗಲೂ ಗ್ರೇಟ್, ಅದು ಪ್ರಾಣಿಯಾಗಿರಲಿ, ಮನುಷ್ಯರಾಗಿರಲಿ. ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚಾಗಿ ತಮ್ಮ ಪ್ರಾಣಿಗಳನ್ನು ಜೋಪಾನ ಮಾಡುತ್ತವೆ ಎಂದರೆ ತಪ್ಪಾಗಲಾರದು, ಏಕೆಂದರೆ ಮನುಷ್ಯರಲ್ಲಿಎಲ್ಲಾ ತಾಯಂದಿರು ತಮ್ಮ ಮಕ್ಕಳನ್ನು ಜೋಪಾನ ಮಾಡಲ್ಲ, ಹೆತ್ತು ಬೀದಿಗೆ ಬಿಸಾಡಿ ಹೀಗುವವರನ್ನೂ ನೋಡುತ್ತೇವೆ, ಆದರೆ ಪ್ರಾಣಗಳು ಇದೆಯೆಲ್ಲಾ ಜೀವಕ್ಕೆ ಜೀವ ಕೊಟ್ಟು ತಮ್ಮ ಮರಿಗಳನ್ನು ನೋಡಿಕೊಳ್ಳುತ್ತೇವೆ, ಇಷ್ಟೊಂದು ಪೀಠಿಕೆ ಹಾಕಲು ಕಾರಣ ಆ ಚಿಂಪಾಂಜಿ ತಾಯಿ...

ಈ ವೀಡಿಯೋ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ತೆಗೆದಿದ್ದು ಎಂದು ಹೇಳಲಾಗುತ್ತಿದೆ, ಇಲ್ಲಿರುವ ಮೃಗಾಲಯದಲ್ಲಿರುವ ಚಿಂಪಾಂಜಿ ಇದಾಗಿದೆ. ಇಲ್ಲಿಗೆ ಪ್ರತಿನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರಾಣಿಗಳನ್ನು ವೀಕ್ಷಿಸಲು ತಾಯಿಯೊಬ್ಬರು ತನ್ನ ಪುಟ್ಟ ಮಗುವಿನೊಂದಿಗೆ ಬಂದಿದ್ದರು. ಅಲ್ಲಿಗೆ ಹೋದವರಿಗೆ ಗೊತ್ತಿರಬಹುದು ಝೂ ರೌಂಡ್ ಹಾಕಲು ಅವರದ್ದೇ ಗಾಡಿ ಇದೆ.
ಆ ಗಾಡಿಯಲ್ಲಿ ಆ ತಾಯಿ ಮಗುವನ್ನು ಹಿಡಿದು ವಿಂಡೋ ಪಕ್ಕ ಕೂತಿದ್ದಾರೆ. ಚಿಂಪಾಂಜಿ ಇರುವ ಸ್ಥಳದಲ್ಲಿ ಆ ಗಾಡಿ ನಿಲ್ಲಿಸಲಾಗಿರುತ್ತದೆ. ಚಿಂಪಾಂಜಿ ಆ ಗಾಡಿಯ ಸಮೀಪಕ್ಕೆ ಬಂದು ನೋಡಿದಾಗ ಅದರ ಕಣ್ಣಿಗೆ ಮುದ್ದಾದ ಮಗುವನ್ನು ಹಿಡಿದು ಕೂತಿರುವ ಮಹಿಳೆ ಕಾಣಿಸುತ್ತದೆ. ತಕ್ಷಣವೇ ಅದಕ್ಕೆ ಅದರ ಮಗು ನೆನಪಾಗಿದೆ.
ಕೂಡಲೇ ತನ್ನ ಗೂಡಿನ ಕಡೆಗೆ ಓಡುತ್ತದೆ, ಅಲ್ಲಿ ಅದರ ಮರಿ ಇರುತ್ತದೆ, ಅದನ್ನು ಕೈಯಲ್ಲಿ ಹಿಡಿದು ಓಡೋಡಿ ಬರುತ್ತದೆ, ನಂತರ ಆ ಮಗುವನ್ನು ಎತ್ತಿ ಆ ಮಹಿಳೆಗೆ ತೋರಿಸುತ್ತದೆ, ನಂತರ ತನ್ನ ಮರಿಗೆ ಪ್ರೀತಿಯಿಂದ ಮುತ್ತಿಕ್ಕುತ್ತದೆ, ಬಹುಶಃ ಆ ಚಿಂಪಾಂಜಿ ಆ ತಾಯಿಯನ್ನು ಅನುಕರಿಸಿರಬಹುದು, ಆ ತಾಯಿ ತನ್ನ ಮಗುವಿಗೆ ಮುತ್ತಿಕ್ಕಿದ್ದು ನೊಡಿ ತನ್ನ ಮಗುವಿಗೆ ಮುತ್ತಿಕ್ಕಿರಬಹುದು, ಏನೇ ಆಗಲಿ ಈ ವೀಡಿಯೋ ತುಂಬಾನೇ ಕ್ಯೂಟ್ ಆಗಿದೆ.
ತಾಯಿ ಪ್ರೀತಿ ಏನು ಎಂಬುವುದನ್ನು ತಿಳಿಸುವಂಥ ವೀಡಿಯೋ ಇದು, ಅಲ್ಲದೆ ಮನುಷ್ಯರಂತೆ ನಾವು ನಮ್ಮ ಮಕ್ಕಳನ್ನು ಮುದ್ದಿಸುತ್ತೇವೆ ಎಂದು ಆ ಚಿಂಪಾಂಜಿ ತನ್ನ ವರ್ತನೆ ಮೂಲಕ ತಿಳಿಸಿದೆ ಅಲ್ವಾ?
ಚಿಂಪಾಂಜಿ ಮನುಷ್ಯರ ಈ ಗುಣಗಳನ್ನು ತುಂಬಾ ಹೋಲುತ್ತದೆಯಂತೆ
ಆಟ ಆಡುತ್ತೆ
ಚಿಂಪಾಂಜಿ ನಮ್ಮಂತೆಯೇ ಚಿಕ್ಕದಿರುವಾಗ ತುಂಬಾ ಆಟ ಆಡುತ್ತೆ, ನಮ್ಮ ಮಕ್ಕಳು ತುಂಟಾಟ ಮಾಡುವ ರೀತಿಯಲ್ಲಿ ತುಂಟಾಟ ಮಾಡುತ್ತೆ, ವಯಸ್ಸಾಗುತ್ತಾ ನಮ್ಮಂತೆಯೇ ಆಟ ಆಡುವುದು ಕಡಿಮೆ ಮಾಡುತ್ತವೆ.
ನಗಾಡುತ್ತದೆ
ನಮ್ಮಂತೆ ಚಿಂಪಾಂಜಿ ಕೂಡ ಕೂಡ ನಗಾಡುತ್ತದೆ. ನಮ್ಮಂತೆ ಕಿರುನಗೆ ಬೀರುತ್ತದೆ, ಜೋರಾಗಿ ಕೂಡ ನಗುತ್ತದೆ, ಚಿಂಪಾಂಜಿ ನಮ್ಮಂತೆಯೇ ಭಾವನೆಗಳನ್ನು ಹೊರ ಹಾಕುತ್ತೆ.
ನಮ್ಮಂತೆ ಸ್ನೇಹಿತರನ್ನು ಮಾಡಿಕೊಳ್ಳುತ್ತದೆ
ಬಂಧುವಿಲ್ಲದೆ ಬದುಕಬಹುದು, ಆದರೆ ಸ್ನೇಹಿತರು ಇಲ್ಲದೆ ಬದುಕುವುದು ಕಷ್ಟ, ಅದೇ ರೀತಿ ಚಿಂಪಾಂಜಿ ಕೂಡ ಗೆಳೆತನ ಬೆಳೆಸುತ್ತದೆ.
ಆಹಾರ, ಪಾನೀಯ ಎಂಜಾಯ್ ಮಾಡುತ್ತದೆ
ನಮಗೆ ಒಳ್ಳೆಯ ಆಹಾರ, ಪಾನೀಯ ಸಿಕ್ಕರೆ ತುಂಬಾ ಖುಷಿ ಪಟ್ಟು ಸವಿಯುತ್ತೇವೆ. ಅದರಂತೆ ಚಿಂಪಾಂಜಿ ಕೂಡ ಭರ್ಜರಿ ಊಟವನ್ನು ತುಂಬಾ ಖುಷಿ ಪಟ್ಟು ಸವಿಯುತ್ತಾರೆ.
ಅವುಗಳಿಗೆ ಯೋಚನೆ ಮಾಡುವ ಸಾಮರ್ಥ್ಯವಿದೆ
ಅವುಗಳಿಗೆ ನಮ್ಮಂತೆ ಯೋಚನೆ ಮಾಡುವ ಸಾಮರ್ಥ್ಯ ಇದೆ. ಕೆಲವೊಂದು ತೀರ್ಮಾನಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುತ್ತದೆ. ಅವುಗಳು ತಪ್ಪು-ಸರಿ ಬಗ್ಗೆ ಕೂಡ ಆಲೋಚಿಸುತ್ತದೆ. ಹೀಗಾಗಿ ಇಂಥ ಹಲವಾರು ವಿಚಾರಗಳಲ್ಲಿ ಮನುಷ್ಯರನ್ನು ಹೋಲುತ್ತದೆ.



Click it and Unblock the Notifications
