Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಈ ರಾಶಿಯ ಮಕ್ಕಳು ಹೇಳಿದ ಮಾತನ್ನು ಕೇಳದ ಹಠಮಾರಿಗಳು!
ಎಲ್ಲಾ ಮಕ್ಕಳು ಒಂದೇ ರೀತಿ ಇರೋದಿಲ್ಲ. ಒಬ್ಬೊಬ್ಬರ ಸ್ವಭಾವ ಒಂದೊಂದು ರೀತಿ ಇರುತ್ತದೆ. ಕೆಲವು ಮಕ್ಕಳು ತುಂಬಾನೇ ಶಾಂತ ಸ್ವಭಾವದವರಾಗಿರುತ್ತಾರೆ. ಇನ್ನೂ ಕೆಲವರು ತುಂಬಾನೇ ಹಠಮಾರಿ ಸ್ವಭಾವದವರಾಗಿರುತ್ತಾರೆ. ಎಲ್ಲಿಯವರಗೆ ಅವರಿಗೆ ಹಠ ಇರುತ್ತದೆ ಎಂದರೆ ಅವರು ಕೇಳಿದ್ದು ಸಿಗುವವರೆಗೂ ಬಿಡೋದಿಲ್ಲ. ಮನೆಯಲ್ಲಿ ನಾನು ಹೇಳಿದ್ದೇ ಆಗಬೇಕು ಎನ್ನುವ ಹಠ ಸಾಧಿಸುತ್ತಾರೆ. ಪೋಷಕರಿಗೆ ಇಂತಹ ಮಕ್ಕಳನ್ನು ನಿಭಾಯಿಸೋದೇ ಕಷ್ಟ. ಹಾಗಾದ್ರೆ ಯಾವ ರಾಶಿಯ ಮಕ್ಕಳು ಹಠಮಾರಿಗಳಾಗಿರುತ್ತಾರೆ ಅನ್ನೋದನ್ನು ತಿಳಿಯೋಣ.
ವೃಷಭ ರಾಶಿ
ವೃಷಭ ರಾಶಿಯ ಮಕ್ಕಳು ತುಂಬಾನೇ ಹಠಮಾರಿಗಳು ಅವರನ್ನು ನಿಯಂತ್ರಿಸುವುದು ಕಷ್ಟ. ಅವರಿಗೆ ಏನಾದರೂ ವಸ್ತು ಬೇಕಾದರೆ ಅದನ್ನು ಪಡೆದುಕೊಳ್ಳುವುದರವರೆಗೂ ಇವರು ಬಿಡೋದಿಲ್ಲ. ಇಂತಹ ಮಕ್ಕಳನ್ನು ನಿಯಂತ್ರಿಸುವುದೇ ಕಷ್ಟ ಯಾಕಂದ್ರೆ ಇವರು ಯಾರ ಮಾತನ್ನು ಕೇಳೋದಿಲ್ಲ. ತಾವು ಮಾಡಿದ್ದೇ ಸರಿ ಎಂದುಕೊಳ್ಳುತ್ತಾರೆ.

ಸಿಂಹ ರಾಶಿ
ಸಿಂಹ ರಾಶಿಯ ಮಕ್ಕಳು ಪೋಷಕರು ಅಥವಾ ಬೇರೆ ಯಾರ ಮಾತನ್ನು ಕೇಳೋದಕ್ಕೆ ತಯಾರಿರೋದಿಲ್ಲ. ಈ ರಾಶಿಯವರು ಹುಟ್ಟು ಹಠಮಾರಿಗಳು. ಇವರನ್ನು ಸಾಕುವುದು ಕೊಂಚ ಕಷ್ಟವೇ ಸರಿ. ಸಿಂಹ ರಾಶಿಯವರು ಬೇರೆ ಯಾರ ಮಾತನ್ನು ಕೇಳದೆ ತಮಗೆ ತೋಚಿದ್ದನ್ನು ಮಾತ್ರ ಮಾಡುತ್ತಾರೆ. ಎಲ್ಲವೂ ಅವರಂದುಕೊಂಡ ಹಾಗೆ ನಡೆಯಬೇಕು ಅಂತ ಅಂದುಕೊಳ್ಳುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಕ್ಕಳು ಹಠ ಮಾಡೋದ್ರಲ್ಲಿ ಸಿಂಹ ರಾಶಿಯವರಿಗಿಂತಲೂ ಒಂದು ಕೈ ಮೇಲೆ. ಈ ರಾಶಿಯವರು ನಾವು ಮಾತ್ರ ಉತ್ತಮರು ಅಂತ ಅಂದುಕೊಳ್ಳುತ್ತಾರೆ. ಬೇರೆಯವರು ಇವರನ್ನು ಟೀಕಿಸಿದರೆ ಅಥವಾ ಇವರ ತಪ್ಪನ್ನು ತಿದ್ದೋಕೆ ಬಂದ್ರೆ ಅದನ್ನು ಕೇಳೋದಕ್ಕೆ ಇವರು ಸಿದ್ಧರಿರೋದಿಲ್ಲ. ಈ ರಾಶಿಯ ಮಕ್ಕಳನ್ನು ದಾರಿಗೆ ತರುವುದು ಪೋಷಕರಿಗೆ ಒಂದು ರೀತಿ ದೊಡ್ಡ ತಲೆನೋವಾಗುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಕ್ಕಳು ತಮ್ಮ ಹೆತ್ತವರ ಮಾತನ್ನು ಮಾತ್ರ ಕೇಳುತ್ತಾರೆ. ಆದರೆ ಅವರು ಹೇಳಿದ ಮಾತನ್ನು ಪಾಲಿಸೋದಿಲ್ಲ. ಇವರ ಮನಸ್ಸಿನಲ್ಲಿ ಸ್ಪಷ್ಟವಾದ ಆಲೋಚನೆಗಳು ಯಾವಾಗಲೂ ಇರುತ್ತದೆ. ಇವರು ತಮ್ಮ ಭಾವನೆಗಳನ್ನು ಬದಿಗಿಟ್ಟು ಪ್ರಾಯೋಗಿಕವಾಗಿರಲು ಪ್ರಯತ್ನಿಸುತ್ತಾರೆ. ಇವರ ಸುತ್ತಲಿನ ಜನರೊಂದಿಗೆ ಕುಶಲತೆಯೊಂದಿಗೆ ವ್ಯವಹರಿಸುತ್ತಾರೆ. ಒಂದು ವೇಳೆ ಪೋಷಕರೇನಾದರೂ ಒತ್ತಾಯ ಪೂರ್ವಕವಾಗಿ ಇವರ ಮೇಲೆ ಒಂದು ವಿಚಾರವನ್ನು ಹೇರೋದಕ್ಕೆ ಪ್ರಯತ್ನಿಸಿದರೆ ಇವರು ಹೆತ್ತವರೊಂದಿಗೆ ಮಾತಾಡೋದನ್ನೇ ನಿಲ್ಲಿಸಿ ಬಿಡುತ್ತಾರೆ.



Click it and Unblock the Notifications