Latest Updates
-
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ!
ಸ್ನೇಹಿತರು ಸ್ನೇಹಿತರಾಗೇ ಉಳಿಯಬೇಕೆಂದಿಲ್ಲ..! ಹಸೆಮಣೆ ಏರಿದ ಬಾಲ್ಯ ಸ್ನೇಹಿತರ ಜೋಡಿ ಇವು!
ಪ್ರತಿ ವರ್ಷ ಆಗಸ್ಟ್ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನಾಗಿ ಭಾರತದಲ್ಲಿ ಆಚರಿಸಲಾಗುತ್ತದೆ. ತಮ್ಮ ಸ್ನೇಹಿತರೊಂದಿಗೆ ಈ ದಿನ ಕಾಲ ಕಳೆಯಲು ಜನರು ಈ ದಿನವನ್ನ ಮೀಸಲಿಡುತ್ತಾರೆ. ಪ್ರತಿ ದಿನದ ಜೀವನದ ನಡುವೆ ಒಂದು ದಿನ ತಮ್ಮ ಸ್ನೇಹಿತರ ಜೊತೆ ಕಳೆಯುತ್ತಾರೆ. ಜೊತೆಗೆ ಪರಸ್ಪರ ಶುಭಾಶಯ ವಿನಿಮಯ, ಔಟಣ ಕೂಟದಲ್ಲಿ ಭಾಗಿಯಾಗುತ್ತಾರೆ.
ಸ್ನೇಹಿತರೆಂದರೆ ಈಗ ಕುಟುಂಬದ ಓರ್ವ ಸದಸ್ಯನೇ ಆಗಿರುತ್ತಾನೆ. ಮನೆಯವರ ಬಳಿ ಹೇಳದ ಅದೆಷ್ಟೋ ವಿಚಾರಗಳು ಸ್ನೇಹಿತರ ಬಳಿ ಹಂಚಿಕೊಳ್ಳುತ್ತಾರೆ. ಹೀಗಿರುವಾಗ ಕೆಲವರಿಗೆ ಚಿಕ್ಕ ವಯಸ್ಸಿನಿಂದಲೇ ಸ್ನೇಹಿತರಾಗಿ ಪರಿಚಯವಾದ ಮಂದಿ ಜೀವನದ ಉದ್ದಕ್ಕೂ ಜೊತೆಗಿರುತ್ತಾರೆ. ಅಂತವರು ಕೊನೆಯವರೆಗೂ ಜೊತೆಯಲ್ಲಿರುತ್ತಾರೆ. ಮತ್ತೆ ಕೆಲವರು ಮಧ್ಯದಲ್ಲಿ ಪರಿಚಯ ಆಗಿ ಕೊನೆಯವರೆಗೂ ಉಳಿಬಹುದು ಇಲ್ಲವೆ ಮರೆಯಾಗಲುಬಹುದು.

ಆದರೆ ನಮ್ಮ ಜೀವನದಲ್ಲಿ ನಿತ್ಯ ಕಾಣಸಿಗುವ, ಕೊನೆಯವರೆಗೂ ಉಳಿಯುವ ಸ್ನೇಹಿತರು ವಿಶೇಷ ಎನಿಸುತ್ತಾರೆ. ಹಾಗೆ ಅವರಿಗೆ ನಮ್ಮಲ್ಲಿ ಗೌರವ, ಪ್ರೀತಿ, ಕಾಳಜಿ ಇದ್ದೇ ಇರುತ್ತದೆ. ಹೀಗೆ ಒಬ್ಬ ಹುಡುಗಿ ಹಾಗೂ ಹುಡುಗ ಚಿಕ್ಕವರಿದ್ದಾಗ ಒಳ್ಳೆಯ ಸ್ನೇಹಿತರಾಗಿ ಬಳಿಕ ದೊಡ್ಡವರಾದಾಗ ಮದುವೆಯಾಗಿ ದಂಪತಿಯಾಗಿ ಸಹಬಾಳ್ವೆ ಮಾಡುವ ಉದಾಹರಣೆಗಳು ನಮ್ಮ ನಡುವೆ ಇದೆ.
ಹೀಗೆ ಬಾಲ್ಯ ಸ್ನೇಹಿತರು ಮದುವೆಯಾಗಿ ಜೀವನದ ಉದ್ದಕ್ಕೂ ಆ ಸ್ನೇಹ ಉಳಿಸಿಕೊಂಡಿರುವ ಉದಾಹರಣೆಗಳನ್ನು ನಾವು ನೋಡಬಹುದು. ಹಾಗಾದ್ರೆ ಬಾಲ್ಯದಲ್ಲಿ ಸ್ನೇಹಿತರಾದವರು ಆ ಸ್ನೇಹ ಪ್ರೀತಿಯಾಗಿ ಬಳಿಕ ಮದುವೆಯಾದ ಫೇಮಸ್ ಜೋಡಿಗಳು ಯಾರು ಎಂಬುದನ್ನು ನಾವಿಂದು ತಿಳಿಯೋಣ.
ದಿ ವಾಲ್ ರಾಹುಲ್ ದ್ರಾವಿಡ್ ದಂಪತಿ
ನೀವು ಕ್ರಿಕೆಟ್ ಪ್ರೇಮಿಗಳಾಗಿದ್ದರೆ ರಾಹುಲ್ ದ್ರಾವಿಡ್ ನಿಮಗೆ ಚಿರಪರಿಚಿತ. ದ್ರಾವಿಡ್ ತಂದೆ ನಾಗ್ಪುರದಲ್ಲಿದ್ದಾಗ ದ್ರಾವಿಡ್ ಪತ್ನಿ ವಿಜೇತಾ ಪೆಂಧಾರ್ಕರ್ ತಂದೆ ವಿಂಗ್ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಎರಡೂ ಕುಟುಂಬದವರಿಗೂ ಪರಿಚಯವಾಗಿತ್ತು, ಚಿಕ್ಕವರಿರುವಾಗಲೇ ದ್ರಾವಿಡ್ ಹಾಗೂ ವಿಜೇತಾ ಉತ್ತಮ ಸ್ನೇಹಿತರಾಗಿದ್ದರು. ಇದಾಗಿ ಪೆಂಡಾರ್ಕರ್ ಕುಟುಂಬವು 1968 ಮತ್ತು 1971 ರ ನಡುವೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಈ ವೇಳೆ ಇಬ್ಬರು ಉತ್ತಮ ಸ್ನೇಹಿತರಾಗಿ ಓಡಾಡಿಕೊಂಡಿದ್ದರು ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ದ್ರಾವಿಡ್‌ಗಿಂತ ಕೇವಲ 3 ವರ್ಷ ಚಿಕ್ಕವರಾಗಿದ್ದ ವಿಜೇತಾ ದ್ರಾವಿಡ್ ಪ್ರೀತಿಯಲ್ಲಿ ಬಿದ್ದಿದ್ದರು. ಬಳಿಕ 2002ರಲ್ಲಿ ನಿಶ್ವಿತಾರ್ಥ ಮಾಡಿಕೊಂಡ ಜೋಡಿ 2003ರಲ್ಲಿ ಮದುವೆಯಾಗಿದ್ದರು.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್
ಇತ್ತೀಚಿಗೆ ಮದುವೆ ಸಮಾರಂಭ ಮುಗಿದಿರುವ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ಉದ್ಯಮಿ ಪುತ್ರಿ ರಾಧಿಕಾ ಮರ್ಚೆಂಟ್ ಸಹ ಬಾಲ್ಯ ಸ್ನೇಹಿತರಾಗಿದ್ದವರು. ಇಬ್ಬರು ಪ್ರೀತಿಸುತ್ತಿರುವ ವಿಚಾರ ಮನೆಯವರಿಗೂ ತಿಳಿದಿರಲಿಲ್ಲವಂತೆ. ಅಷ್ಟೊಂದು ಬೆಸ್ಟ್ ಫ್ರೆಂಡ್ಸ್ ಆಗಿದ್ದ ಜೋಡಿ ಇದು. ಇಬ್ಬರು ಚಿಕ್ಕ ವಯಸ್ಸಿನಿಂದ ಸ್ನೇಹಿತರಾಗಿ ಒಟ್ಟಿಗೆ ಬೆಳೆದವರು. 2018ರಲ್ಲಿ ಮೊಟ್ಟ ಮೊದಲ ಬಾರಿಗೆ ರಾಧಿಕಾ ಮರ್ಚೆಂಟ್ ಒಂದು ಫೋಟೋ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಅನಂತ್ ಅಂಬಾನಿ ಇದ್ದರು ಈ ವೇಳೆ ಇಬ್ಬರು ಡೇಟಿಂಗ್ ಮಾಡುತ್ತಿರಬಹುದು ಎಂಬ ಗುಮಾನಿ ಹಬ್ಬಿತ್ತು.
ವರುಣ್ ಧವನ್
ಬಾಲಿವುಡ್ ನಟ ವರುಣ್ ಧವನ ತನ್ನ ಶಾಲಾ ಸ್ನೇಹಿತೆ ನತಾಶಾ ದಲಾಲ್ ಅವರೊಂದಿಗೆ ವಿವಾಹವಾಗಿರುವುದು ಗೊತ್ತೆ ಇದೆ. ಇವರಿಬ್ಬರು ಸಹ ಬಾಲ್ಯದಲ್ಲಿ ಒಟ್ಟಿಗೆ ಆಡಿ ಬೆಳೆದವರು. ಒಳ್ಳೆಯ ಸ್ನೇಹಿತರಾಗಿದ್ದವರು. ಆದ್ರೆ ಇತ್ತೀಚಿಗೆ ಅಲಿಬಾಗ್ ನಲ್ಲಿ ಇಬ್ಬರು ವಿವಾಹವಾದರು, ತಾವು ಇಷ್ಟಪಟ್ಟಂತೆ ವರುಣ್ ಧವನ್ ಬಾಲ್ಯ ಸ್ನೇಹಿತೆಯನ್ನೇ ವರಿಸಿದರು.
ಶಾರುಖ್ ಖಾನ್
ನಿಮಗೆ ಅಚ್ಚರಿ ಆಗಬಹುದು ನಟ ಶಾರುಖ್ ಖಾನ್ ತನ್ನ ಪತ್ನಿ ಗೌರಿ ಚಿಬ್ಬರ್ ಅವರನ್ನು ಬಾಲ್ಯದಲ್ಲಿ ಭೇಟಿಯಾಗಿದ್ದವರು. ಶಾಲೆಯ ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದ ಜೋಡಿ ಬಳಿಕ ಸ್ನೇಹಿತರಾಗಿದ್ದರು, ಶಾರುಖ್ ಆರಂಭಿಕ ಜೀವನದಲ್ಲಿ ಎದುರಿಸಿದ್ದ ಎಲ್ಲಾ ಕಠಿಣ ಸವಾಲಿನ ಹಿಂದೆ ಈಕೆ ಬೆನ್ನಿಗೆ ನಿಂತಿದ್ದರು. ಈ ಸ್ನೇಹ ಬಳಿಕ ಪ್ರೀತಿಯಾಗಿ 1991ರಲ್ಲಿ ಇಬ್ಬರು ಮದುವೆಯಾಗಿದ್ದರು.
ಹೃತಿಕ್ ರೋಷನ್
ಹೃತಿಕ್ ರೋಷನ್ ಮತ್ತು ಸುಸ್ಸಾನೆ ಖಾನ್ ಬಾಲ್ಯದ ಸ್ನೇಹಿತರಾಗಿದ್ದರು, ಆದರೆ ಹಲವು ವರ್ಷಗಳ ನಂತರ ಆಕೆ ವಿದೇಶದಲ್ಲಿ ತನ್ನ ಓದು ಮುಗಿಸಿ ಭಾರತಕ್ಕೆ ವಾಪಸಾದ ಬಳಿಕ ತನ್ನ ಪ್ರೀತಿಯನ್ನ ಆಕೆಯ ಬಳಿ ಹೇಳಿಕೊಂಡಿದ್ದರು.



Click it and Unblock the Notifications



