Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕೋಳಿಗೆ 24 ಗಂಟೆಯೂ ಪೊಲೀಸ್ ಭದ್ರತೆ, ಪಂಜಾಬ್‌ನಲ್ಲಿನ ಈ ಕೋಳಿ ವಿಐಪಿ ಆದ ಕತೆಯಿದು
ಕೋಳಿಗೆ ಪೊಲೀಸ್ ಪ್ರೊಟೆಕ್ಷನ್, ಇಂಥದ್ದೊಂದು ಘಟನೆ ನಡೆದಿರುವುದು ಬೇರೆಲ್ಲೂ ಅಲ್ಲ,, ನಮ್ಮ ದೇಶದ ಪಂಜಾಬಿನ ಬಾಥಿಂದ ಎಂಬ ಗ್ರಾಮದಲ್ಲಿ. ಅದರಲ್ಲೂ ಈ ಕೋಳಿಗೆ ಫುಲ್ ವಿಐಪಿ ಭದ್ರತೆ, ಶಿಫ್ಟ್‌ನಲ್ಲಿ ಈ ಕೋಳಿಯನ್ನು ರಕ್ಷಣೆ ಮಾಡುತ್ತಿದ್ದಾರೆ ಪೊಲೀಸರು, ತುಂಬಾ ವಿಚಿತ್ರ ಅನಿಸುತ್ತಿದೆಯಲ್ಲಾ? ಅಷ್ಟಕ್ಕೂ ಈ ಘಟನೆಯೇನು ಎಂದು ನೋಡೋಣ ಬನ್ನಿ:

ಕೋಳಿ ಅಂಕ
ಕೋಳಿ ಅಂಕ ನಡೆಯುವುದನ್ನು ನೋಡಿರುತ್ತೀರಿ, ನೋಡಿಲ್ಲ ಎಂದರೂ ಕೇಳಿರುತ್ತೀರಿ. ಕೋಳಿಗಳ ಆ ಭಯಾನಕ ಕಾಳಗ ನೋಡಲು ನೂರಾರು ಸಂಖ್ಯೆಯಲ್ಲಿ ಜನ ಸೇರಿರುತ್ತಾರೆ. ಹುಂಜದ ಕಾಲಿಗೆ ಹರಿತಾದ ಚಿಕ್ಕ ಕತ್ತಿ (ನೈಫ್) ಕಟ್ಟಿರುತ್ತಾರೆ, ಹುಂಜಗಳು ಕಿತ್ತಾಡುತ್ತವೆ, ಕತ್ತಿ ತಾಗಿ ಹುಂಜಗಳಿಗೆ ಗಾಯಗಳಾಗುವುದು, ರಕ್ತ ಸುರ್ಕ್ಕೊಂಡು ಕಿತ್ತಾಡುತ್ತವೆ, ಅದನ್ನು ನೋಡಿ ಜನ ಖುಷಿ ಪಡುತ್ತಾರೆ, ಆದರೆ ಪ್ರಾಣಿಗಳಿಗೆ ಹಾಗೆ ಹಿಂಸೆ ನೀಡುವುದು ಸರಿಯಲ್ಲ ಎಂದು ಈ ಆಟವನ್ನು ಬ್ಯಾನ್ ಮಾಡಲಾಗಿದೆ. ಆದರೂ ಇದನ್ನು ಕದ್ದುಮುಚ್ಚಿ ಮಾಡಲಾಗುವುದು. ಪಂಜಾಬ್‌ನಲ್ಲಿ ಈ ಕೋಳಿ ಅಂಕ ತುಂಬಾನೇ ಜನಪ್ರಿಯವಾಗಿದೆ. ಇಲ್ಲಿಯ ಬಾಥಿಂದ ಎಂಬ ಗ್ರಾಮದಲ್ಲಿ ಕೋಳಿ ಅಂಕವನ್ನು ಆಯೋಜಿಸಲಾಗಿತ್ತು. ಈ ವಿಷಯ ಪೊಲೀಸರ ಕಿವಿಗೆ ತಲುಪಿದೆ.
ಪೊಲೀಸರು ಬಂದಾಗ ಕಾಲ್ಕಿತ್ತ ಜನ
ಪೊಲೀಸರು ದಾಳಿ ಮಾಡುತ್ತಿದ್ದಂತೆ ಅಲ್ಲಿ ನೆರೆದಿದ್ದ ಜನರು ಕಾಲ್ಕಿತ್ತಿದ್ದಾರೆ. ಇದನ್ನು ಆಯೋಜನೆ ಮಾಡಿದವರನ್ನು ಅರೆಸ್ಟ್ ಮಾಡಲಾಯಿತು. ಆವಾಗ ಅಲ್ಲಿ ಗಾಯಕೊಮಡ ಒಂದು ಕೋಳಿಯನ್ನೂ ವಶಪಡಿಸಲಾಯಿತು ಜೊತೆಗೆ ಅಲ್ಲಿದ್ದ 12 ಟ್ರೋಫಿಗಳನ್ನು ವಶಪಡಿಸಲಾಯಿತು.
ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು
ಈ ಪ್ರಕರಣದಲ್ಲಿ ಕೋಳಿಗೆ ಭದ್ರತೆ ನೀಡುವ ಜವಾಬ್ದಾರಿ ಪೊಲೀಸರ ಮೇಲಿದೆ. ಹಾಗಾಗಿ ಪೊಲೀಸರು ಕೋಳಿಗೆ ಭದ್ರತೆ ನೀಡಲಾಗುತ್ತಿದೆ. ಕೋಳಿಗೆ ಕಾಳು, ಆಹಾರ, ನೀರು ಎಲ್ಲವನ್ನೂ ನೀಡಿ ಸಾಕುತ್ತಿದ್ದಾರೆ. ಕೋಳಿ ಅಂಕದ ಕೋಳಿಗಳಿಗೆ ಭಾರೀ ಡಿಮ್ಯಾಂಡ್ ಇದನ್ನು ಕದ್ದುಕ್ಕೊಂಡು ಹೋಗುತ್ತಾರೆ ಎಂದು ಕಾವಲು ನೀಡುತ್ತಿದ್ದಾರೆ.
ಅಂತೂ ಇಂತೂ ಸಕತ್ ಡಿಮ್ಯಾಂಡ್ ಬಂತು ಈ ಕೋಳಿಗೆ
ಪೊಲೀಸರೇ ಭದ್ರತೆ ನೀಡುತ್ತಿರುವ ಕೋಳಿ ಎಂದರೆ ಸುಮ್ಮನೆಯೇ? ಇದೀಗ ಈ ಕೋಳಿಯದ್ದೇ ಎಲ್ಲಡೆ ಸದ್ದು... ಕೆಲವೊಮ್ಮೆ ಯಾವುದೋ ಒಂದು ಸನ್ನಿವೇಶ ಒಬ್ಬರನ್ನು ವಿಐಪಿ ಮಾಡುತ್ತದೆ ಎನ್ನುವುದಕ್ಕೆ ಉದಾಹರಣೆಯೇ ಈ ಕೋಳಿ, ಈ ವಿಚಿತ್ರ ಕತೆ ಕೇಳಿ ನಿಮಗೆ ಏನು ಅನಿಸಿತು? ಕಮೆಂಟ್ ಮಾಡಿ.



Click it and Unblock the Notifications
