Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಬ್ಬಾಬ್ಬ! ಕೋಳಿವೊಂದು ಇಷ್ಟು ದೂರ ಹಾರಬಲ್ಲದೇ? ನಮ್ಮ ಕಲ್ಪನೆಯನ್ನು ಸುಳ್ಳು ಮಾಡುವ ವೀಡಿಯೋ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾದ ಕೋಳಿಯ ವೀಡಿಯೋವೊಂದು ವೈರಲ್ ಆಗುತ್ತಿದೆ. ಕೋಳಿ ಪಕ್ಷಿಯಂತೆ ಹಾರಲು ಸಾಧ್ಯವೇ ಇಲ್ಲ ಎಂದು ನಾವು ಅಂದುಕೊಂಡಿದ್ದೇವೆ ಅಲ್ವಾ? ಆದರೆ ನಾವು ಅಂದುಕೊಂಡಿದ್ದನ್ನು ಸುಳ್ಳು ಮಾಡುತ್ತೆ ಈ ವೀಡಿಯೋ. ಇದೀಗ ಈ ಕೋಳಿಯೋ ತುಂಬಾನೇ ವೈರಲ್ ಆಗುತ್ತಿದ್ದು, ಎಲ್ಲರೂ ಅಚ್ಚರಿ ಪಡುವಂತೆ ಮಾಡಿದೆ ಈ ಕೋಳಿ.

14.6 ಮಿಲಿಯನ್‌ಗೂ ಅಧಿಕ ವ್ಯೂವ್ಸ್ ಬಂದಿದೆ
ಈ ವೀಡಿಯೋ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ, ತಾವು ಅಂದುಕೊಂಡಿದ್ದೇ ಒಂದು ಆದರೆ ಇಲ್ಲಿ ಆಗಿರುವುದೇ ಮತ್ತೊಂದು ಎಂದಾಗ ಸಹಜವಾಗಿಯೇ ಕುತೂಹಲ ಉಂಟಾಗುತ್ತದೆ, ಅಲ್ಲದೆ ಇದೆಲ್ಲಾ ಹೇಗೆ ಸಾಧ್ಯ ಎಂಬ ಗೊಂದಲ ಕೂಡ ಉಂಟಾಗುವುದು. ಈ ಕೋಳಿ ಕೂಡ ನಮ್ಮಲ್ಲಿ ಅಂಥದ್ದೊಂದು ಗೊಂದಲ ಉಂಟು ಮಾಡುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಈ ವೀಡಿಯೋ ತುಂಬಾನೇ ವೈರಲ್ ಆಗಿದೆ.
ಇದು ಎಡಿಟ್ ಮಾಡಿದ್ದಾ ಅಂತ ಕೇಳುತ್ತಿದ್ದಾರೆ ನೆಟ್ಟಿಗರು?
ಈಗ ಯಾವ ವೀಡಿಯೋ ನಂಬುವುದು, ಯಾವುದು ಬಿಡುವುದು ಎಂದು ಹೇಳಲು ಸಾಧ್ಯವಿಲ್ಲ ಅಷ್ಟರಮಟ್ಟಿಗಿದೆ ಎಡಿಟ್ ವೀಡಿಯೋಗಳು ನೀಡುವ ತೊಂದರೆ. ಎಡಿಟ್ ಮಾಡಿರುವ ವೀಡಿಯೋಗಳಲ್ಲಿ , AI ವೀಡಿಯೋಗಳಲ್ಲಿ ಅಸಾಧ್ಯವಾಗಿದ್ದನ್ನು ಸಾಧ್ಯ ಎಂಬಂತೆ ತೋರಿಸಲಾಗುವುದು. ಹಾಗಾಗಿಯೇ ತುಂಬಾ ಜನ ಕೋಳಿ ನಿಜವಾಗಲೂ ಅಷ್ಟು ಎತ್ತರಕ್ಕೆ, ಅಷ್ಟೊಂದು ದೂರಕ್ಕೆ ಹಾರಬಲ್ಲದೇ? ಇದು ಎಡಿಟ್ ಮಾಡಿರುವ ವೀಡಿಯೋನಾ ಎಂದು ಕೇಳುತ್ತಿದ್ದಾರೆ.
ಹಾರಿರುವುದು ಕೋಳಿಯಲ್ಲ ಪಾರಿವಾಳ ಅಂತಿರುವ ನೆಟ್ಟಿಗರು
ಒಬ್ಬ ವ್ಯಕ್ತಿ ಕೋಳಿಯನ್ನು ಮೆಲ್ಲನೆ ತಟ್ಟುತ್ತಾನೆ, ಕೋಳಿ ಹಾರಲಾರಂಭಿಸುತ್ತದೆ, ಕೋಳಿ ಬಹುಮಾಡಿ ಕಟ್ಟದತ್ತ ಹಾರಿ ಹೋಗುವುದನ್ನು ಕಾಣಬಹುದು, ಪಕ್ಷಿಯಂತೆ ತುಂಬಾ ಎತ್ತರಕ್ಕೆ ಹಾರಿ ಫ್ಲ್ಯಾಟ್‌ನ ಬಾಲ್ಕನಿಯಲ್ಲಿ ಹೋಗಿ ಕುಳಿತುಕೊಳ್ಳುವ ವೀಡಿಯೋ ಇದಾಗಿದೆ. ಆದರೆ ನೆಟ್ಟಿಗರು ಹಾರಿರುವುದು ಕೋಳಿಯಲ್ಲ ಪಾರಿವಾಖ ಇದು ಎಡಿಟ್ ಮಾಡಿರುವ ವೀಡಿಯೋ ಅಂತಿದ್ದಾರೆ.
ಆ ವೀಡಿಯೋ ನೋಡುವಾಗ ಅದು ಪಾರಿವಾಳ ಅಂತ ಅನಿಸುತ್ತದೆ
ಹೌದು ಕೋಳಿ ಬಣ್ಣ ನೋಡಿ, ಆದರೆ ಆ ಬಿಲ್ಡಿಂಗ್ ಮೇಲೆ ಕೂತಿರುವ ಕೋಳಿಯ ಬಣ್ಣ ನೋಡಿ ಅದು ಪಾರಿವಾಳದಂತೆ ಕಾಣುತ್ತಿದೆ. ಅಲ್ಲದೆ ಕೋಳಿಯು ಆ ರೀತಿ ಹಾರಲು ಅದೇನು ಕಾಡು ಕೋಳಿಯೇ? ಕಾಡು ಕೋಳಿಯಾದರೂ ಒಕೆ, ಆದರೆ ಇದು ನೋಡಿದರೆ ಪಕ್ಕಾ ನಾಟಿ ಕೋಳಿಕೂಡ ಅಲ್ಲ, ಅದು ಅಷ್ಟೊಂದು ಎತ್ತರಕ್ಕೆ ಹಾರಿದೆ ಎಂದರೆ ನಂಬುವುದು ಕಷ್ಟವೇ ಅಲ್ವಾ?
ಕಾಡು ಕೋಳಿಗಳು ಪಕ್ಷಿಯಂತೆ ಹಾರುತ್ತದೆ?
ಕಾಡುಕೋಳಿಗಳು ತುಂಬಾ ಚುರುಕು, ಇವುಗಳು ಕಾಡಿನಲ್ಲಿಯೇ ವಾಸಿಸುತ್ತದೆ ಅಲ್ಲದೆ ಅದು ತುಂಬಾ ಎತ್ತರಕ್ಕೆ, ತುಂಬಾ ದೂರದವರೆಗೆ ಹಾರುವ ಸಾಮರ್ಥ್ಯ ಹೊಂದಿದೆ, ಆದರೆ ನಾಟಿಕೋಳಿಗಳು ಅಷ್ಟೊಂದು ದೂರ ಹಾರಿರುವುದು ನೋಡಿಲ್ಲ, ಇನ್ನು ಫಾರಂ ಕೋಳಿಗಳು ಈ ರೀತಿ ಹಾರುವುದೇ ಇಲ್ಲ, ಇಲ್ಲಿ ಹಾರಿರುವುದು ಕೋಳಿಯೇ ಆಗಿದ್ದರೆ ನಿಜಕ್ಕೂ ಅಚ್ಚರಿಯ ವಿಷಯ ಹೌದು.



Click it and Unblock the Notifications
