Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಆಯುಧ ಪೂಜೆಗೆ ಉದ್ಯೋಗಿಗಳಿಗೆ 28 ಕಾರು, 29 ಬೈಕ್ ಉಡುಗೊರೆ ನೀಡಿದೆ ಚೆನ್ನೈನ ಈ ಕಂಪನಿ
ಆಯುಧ ಪೂಜೆ, ದೀಪಾವಳಿಗೆ ಆಫೀಸ್‌ಗಳಲ್ಲಿ ಸ್ವೀಟ್ ಕೊಡ್ತಾರೆ, ಇನ್ನು ಕೆಲವು ಆಫೀಸ್‌ನಲ್ಲಿ ಗಿಫ್ಟ್ ಕಾರ್ಡ್ ನೀಡ್ತಾರೆ, ಆದರೆ ಈ ಆಯುಧ ಪೂಜೆಗೆ ಚೆನ್ನೈನ ಶ್ರೀಧರ್ ಕಣ್ಣನ್ ಎಂಬ ಉದ್ಯಮಿ ತನ್ನ ಕಂಪನಿಯಲ್ಲಿ ದುಡಿಯುತ್ತಿರುವರೆಗೆ 28 ಕಾರು, 29 ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕಂಪನಿಗೆ ದುಡಿದ ಉದ್ಯೋಗಿಗಳಿಗೆ ದುಬಾರಿ ಕೊಡುಗೆಯನ್ನು ನೀಡುವ ಮೂಲಕ ಉದ್ಯೋಗಿಗಳ ಮನಗೆದ್ದಿದ್ದಾರೆ
ಎಲ್ಲಾ ಕಂಪನಿಗಳಲ್ಲಿ ದುಡಿಯುವ ಕೆಲಸಕ್ಕೆ ಸಂಬಳ ಸಿಗುತ್ತದೆ, ಆದರೆ ನಮ್ಮ ಕೆಲಸ ಗುರುತಿಸಿ ರಿವಾರ್ಡ್ ಅಂತ ನೀಡಿದಾಗ ಅದು ಉದ್ಯೋಗಿಗಳಿಗೆ ತುಂಬಾನೇ ಖುಷಿ ನೀಡುವುದು, ಅಲ್ಲದೆ ಆ ಕಂಪನಿಯ ಜೊತೆಗೆ ಭಾವನಾತ್ಮಕ ಸಂಬಂಧವನ್ನು ಬೆಸೆಯುತ್ತದೆ.

ದೀರ್ಘ ಕಾಲ ಕಂಪನಿಯಲ್ಲಿ ದುಡಿದ ಉದ್ಯೋಗಿಗಳಿಗೆ ಕಾರು, ಬೈಕ್ ಉಡುಗೊರೆ
ಕೆಲವರು ಆ ಕಂಪನಿಯಲ್ಲಿ 10 ವರ್ಷ ದುಡಿದಿದ್ದಾರೆ, ಇನ್ನು ಕೆಲವರು 5 ವರ್ಷ, 6 ವರ್ಷ ಅಂತ ದುಡಿದಿದ್ದಾರೆ ಅಂಥವರನ್ನು ಗುರುತಿಸಿ ಅವರ ಕುಟುಂಬವನ್ನೂ ಕರೆಸಿ ಕಾರು ಗಿಫ್ಟ್ ನೀಡಲಾಗಿದೆ. ಕಂಪನಿಯ ಪ್ರಗತಿಗೆ ಕೊಡುಗೆ ನೀಡಿದ ಉದ್ಯೋಗಿಗಳಿಗೆ ಬೈಕ್, ಕಾರು ಅಂತ ನೀಡಿದ್ದಾರೆ. ಕಣ್ಣನ್ ಈ ಬಗ್ಗೆ ಮಾತನಡುತ್ತಾ ' ಕಂಪನಿಯ ಯಶಸ್ವಿಗೆ ಶ್ರಮವಹಿಸಿದ ಅವರ ಕೆಲಸ ಮೆಚ್ಚಿಕೊಂಡು ಈ ಉಡುಗೊರೆ ನೀಡಲಾಗಿದೆ, ಉದ್ಯೋಗಿಗಳೇ ನಮ್ಮ ಕಂಪನಿಯ ದೊಡ್ಡ ಆಸ್ತಿ ಎಂದು ನಂಬಿದ್ದೇವೆ ಎಂದು ಹೇಳಿದ್ದಾರೆ.
ಹಲವು ಕೆಟಗರಿಯಲ್ಲಿ ಗುರುತಿಸಿ ಉಡುಗೊರೆ ನೀಡಲಾಗಿದೆ:
10 ವರ್ಷ ಕಂಪನಿಯಲ್ಲಿ ದುಡಿದವರಿಗೆ, 6 ವರ್ಷ ದುಡಿದವರಿಗೆ, ಪ್ರೊಜೆಕ್ಟ್ ಯಶಸ್ವಿಗೆ ಕಾರಣವಾದವರಿಗೆ, ಮದುವೆಗೆ ಇನ್ಸೆಂಟಿವ್ ಹೀಗೆ ಹಲವು ಉಡುಗೊರೆ ನೀಡಲಾಗಿದೆ. ಕಂಪನಿಯ ಯಶಸ್ವಿಗೆ ಕಾರಣವಾದವರ ಶ್ರಮ ಗುರುತಿಸುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಕಂಪನಿಯ ಎಂಡಿ ಹೇಳಿದ್ದಾರೆ.
ಉದ್ಯೋಗಿಗಳಿಗೂ ಇಂಥದ್ದೊಂದು ಉಡುಗೊರೆ ಸಿಗಲಿದೆ ಎಂದು ಗೊತ್ತಿರಲಿಲ್ಲ, ಈ ಉಡುಗೊರೆ ಅವರ ಬಹುದೊಡ್ಡ ಕನಸು ಈಡೇರಿಸಿದೆ.
ಬೆಂಝ್, ಮಾರುತಿ ಸುಜುಕಿ, ಹುಂಡೈ ಹೀಗೆ ದುಬಾರಿ ಕಾರುಗಳನ್ನು ನೀಡಲಾಗಿದೆ
ಹಲವರಿಗೆ ಕಾರು, ಬೈಕ್ ಖರೀದಿ ಕನಸಾಗಿರುತ್ತದೆ. ನಾವು ಉದ್ಯೋಗಿಗಳನ್ನು ಹುರಿದುಂಬಿಸಲು ಈ ಉಡುಗೊರೆ ನೀಡುತ್ತಿದ್ದೇವೆ, 2022ರಲ್ಲಿ ಇಬ್ಬರು ಸೀನಿಯರ್ ಸ್ಟಾಫ್‌ಗೆ ಕಾರು ಉಡುಗೊರೆ ನೀಡಿದ್ದೇವೆ, ಆದರೆ ಈ ವರ್ಷ 28 ಕಾರುಗಳನ್ನು ನೀಡಿದ್ದೇವೆ, ನಾವು ಬೆಂಝ್, ಸುಜುಕಿ, ಹುಂಡೈ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದೇವೆ ಎಂದು ಹೇಳಿದ್ದಾರೆ.
ಮದುವೆಯಾಗುವವರಿಗೆ ಉಡುಗೊರೆಯಾಗಿ 1 ಲಕ್ಷ ಕೊಡುತ್ತಿದೆ
ಈ ಕಂಪನಿಯ ಉದ್ಯೋಗಿಗೆ ಮದುವೆ ಗೊತ್ತಾದಾಗ 50, 000 ರುಪಾಯಿ ನೀಡುತ್ತಿದ್ದರು ಆದರೆ ಅದನ್ನು ಒಂದು ಲಕ್ಷಕ್ಕೆ ಏರಿಸಲಾಗಿದೆ.
ಉದ್ಯೋಗಿಗಳನ್ನು ಚೆನ್ನಾಗಿ ನೋಡಿಕೊಂಡರೆ ನಾವು ಮತ್ತಷ್ಟು ಬೆಳೆಯತ್ತೇವೆ ಎಂಬುವುದನ್ನು ಕಂಪನಿ ಬಲವಾಗಿ ನಂಬುತ್ತದೆ, ಉದ್ಯೋಗಿಗಳಿಗೆ ತಮ್ಮ ಕೆಲಸದಲ್ಲಿ ತೃಪ್ತಿ ಇರಲಿದೆ, ಅವರು ತಮ್ಮ ಸ್ವಂತ ಕಂಪನಿಯೆಂದು ಭಾವಿಸಿ ಕೆಲಸ ಮಾಡುತ್ತಾರೆ, ಕಂಪನಿಯ ಯಶಸ್ವಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಾರೆ, ಇದರಿಂದ ಕಂಪನಿ ಹೆಚ್ಚಿನ ಲಾಭ ಪಡೆಯಲಿದೆ.
ಉದ್ಯೋಗಿಗಳು 14 ಗಂಟೆ ಕೆಲಸ ಮಾಡಬೇಕು ಎಂದು ಹೇಳುವ ಉದ್ಯಮಿಗಳ ನಡುವೆ ಈ ಉದ್ಯಮಿ ಉದ್ಯೋಗಿಗಳನ್ನು ನಮ್ಮ ಆಸ್ತಿಯೆಂದು ಪರಿಗಣಿಸಿದ್ದಾರೆ. ಎಷ್ಟೋ ಕಡೆ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ, ಆದರೆ ಈ ಕಂಪನಿ ಬರಿ ಸಂಬವಲ್ಲ, ಅದರ ಜೊತೆಗೆ ಇಷ್ಟು ದುಬಾರಿ ಉಡುಗೊರೆ ನೀಡುತ್ತಿದೆ, ಇದು ನಿಜಕ್ಕೂ ಚಿಕ್ಕ ವಿಷಯವಲ್ಲ ಅಲ್ವಾ?



Click it and Unblock the Notifications
