Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಪ್ರತಿ ಗಂಡಸು ತನ್ನವಳಲ್ಲಿ ಈ 5 ಗುಣ ಬಯಸುತ್ತಾನೆ: ಚಾಣಕ್ಯನ ಮಾತುಗಳು ನೂರಕ್ಕೆ ನೂರು ಸತ್ಯ
ಎಲ್ಲಾ ಗಂಡಸರು ಒಂದೇ ಗುಣದವರಲ್ಲ, ಎಲ್ಲಾ ಹೆಂಗಸರೂ ಒಂದೇ ಗುಣದವರಲ್ಲ ಆದರೆ ನನ್ನ ಪುರುಷ ಆಗಿರುವವನು ಹೀಗಿರಬೇಕು ಎಂಬ ಒಂದಿಷ್ಟು ಕಲ್ಪನೆ ಹೆಣ್ಣಿಗಿದ್ದರೆ, ನನ್ನ ಪತ್ನಿಯಾಗುವವಳು ಹೀಗಿರಬೇಕು ಎಂಬ ಕಲ್ಪನೆ ಪುರುಷರಲ್ಲಿಯೂ ಇರುತ್ತದೆ. ಆದರೆ ಪ್ರತಿಯೊಬ್ಬ ಪುರುಷನೂ ಈ 5 ಗುಣಗಳು ತನ್ನ ಪತ್ನಿಯಾಗುವವಳಲ್ಲಿ ನಿರೀಕ್ಷೆ ಮಾಡುತ್ತಾನೆ ಅಂತಾರೆ ಚಾಣಕ್ಯ, ಆ ಗುಣಗಳೆಂದರೆ:

ಕಷ್ಟ ಸುಖದಲ್ಲಿ ಭಾಗಿಯಾಗಿರಬೇಕು
ಕಷ್ಟದಲ್ಲಿ ನನಗೆ ಮನೋಸ್ಥೈರ್ಯ ತುಂಬುವ ಹೆಣ್ಣು ನನಗೆ ಬಾಳ ಸಂಗಾತಿಯಾಗಿ ಬರಬೇಕೆಂದು ಪ್ರತಿಯೊಬ್ಬ ಗಂಡಸು ಬಯಸುತ್ತಾನೆ. ಮನುಷ್ಯನಾದ ಮೇಲೆ ಕಷ್ಟಗಳು, ಸವಾಲುಗಳು ಬರುತ್ತದೆ. ತನ್ನ ಪತಿ ಕಷ್ಟದಲ್ಲಿ ಇದ್ದರೂ ಅವನ ದೂರ ಮಾಡದೆ ಬದುಕಿನಲ್ಲಿ ಅವನು ಮತ್ತೆ ಗೆಲ್ಲುವಂತೆ ಧೈರ್ಯ ತುಂಬಬೇಕು, ಇದು ಪತ್ನಿಯಾದವಳ ಧರ್ಮ ಅಂತಾರೆ ಚಾಣಕ್ಯ.
ಕಷ್ಟದಲ್ಲಿ ತನ್ನ ಜೊತೆ ನನ್ನ ಹೆಂಡತಿ ನಿಲ್ಲಬೇಕು ಎಂದು ಪ್ರತಿಯೊಬ್ಬ ಗಂಡಸು ಬಂತಾನೆ. ಅವನಿಗೆ ಕಷ್ಟ ಬಂದಾಗ ಅವನನ್ನು ದೂರಿ ದೂರ ಮಾಡುವ ಹೆಣ್ಣನ್ನು ಮತ್ತೆ ಅವನೆಂದೂ ಪ್ರೀತಿಸಲಾರ.
ಯಾವುದೇ ಕಾರಣಕ್ಕೆ ನಾನು ತಲೆ ತಗ್ಗುವಂತೆ ಅವಳು ಮಾಡಬಾರದು
ಇದನ್ನು ಪ್ರತಿಯೊಬ್ಬ ಪುರುಷನೂ ಬಯಸುತ್ತಾನೆ. ತಾನು ಅವಳ ಮೇಲಿಟ್ಟಿರುವ ನಂಬಿಕೆಗೆ ಆಕೆ ಎಂದಿಗೂ ಮೋಸ ಮಾಡಬಾರದು ಎಂದು ಬಯಸುತ್ತಾನೆ, ತನ್ನ ಪತ್ನಿಯ ನಡತೆ ನನ್ನನ್ನು ತಲೆ ತಗ್ಗಿಸುವಂತೆ ಮಾಡಬಾರದು. ಅವಳು ಅವನ ಗೌರವ, ಸ್ಥಾನಮಾನ ಹೆಚ್ಚುವಂತೆ ನಡೆದುಕೊಳ್ಳಬೇಕೆಂದು ಬಯಸುತ್ತಾನೆ.
ತಾನು ಕೋಪಗೊಂಡಾಗ ನನ್ನನು ಸಮಧಾನ ಪಡಿಸಬೇಕು, ತನ್ನ ಬೇಕು-ಬೇಡಗಳನ್ನು ಅರ್ಥ ಮಾಡಿಕೊಳ್ಳುವವಳು ಬೇಕೆಂದು ಬಯಸುತ್ತಾನೆ.
ಸ್ವತಂತ್ರ ಮನೋಭಾವದವಳಾಗಿರಬೇಕು
ಎಲ್ಲಾ ವಿಷಯಕ್ಕೆ ತನ್ನನ್ನೇ ಅವಲಂಬಿಸಬಾರದು, ಮನೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಚಾಣಾಕ್ಷತನ ಅವಳಲ್ಲಿ ಇರಬೇಕೆಂದು ಬಯಸುತ್ತಾನೆ. ಎಮೋಷನಲಿ ಸ್ಟ್ರಾಂಗ್ ಇರುವ ಹೆಣ್ಣನ್ನು ಪುರುಷ ತುಂಬಾನೇ ಇಷ್ಟ ಪಡುತ್ತಾನೆ. ಚಿಕ್ಕ ಪುಟ್ಟ ವಿಷಯಕ್ಕೆ ಅಳುವ, ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸಾಮರ್ಥ್ಯವಿಲ್ಲದ ಹೆಣ್ಣು ಅವನಿಗೆ ಇಷ್ಟವಾಗಲ್ಲ.
ಎಲ್ಲರಿಗೆ ಗೌರವ ನೀಡಬೇಕು
ನನಗೆ, ನನ್ನ ತಂದೆ-ತಾಯಿಗೆ ಗೌರವ ನೀಡಬೇಕು, ಎಲ್ಲರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು ಎಂದು ಪ್ರತಿಯೊಬ್ಬ ಗಂಡಸು ಬಯಸುತ್ತಾನೆ. ಅವನ ಚಿಕ್ಕ ಸಾಧನೆಯನ್ನು ಕೂಡ ಸಂಭ್ರಮಿಸುವ ಗುಣದವಳು ಸಿಕ್ಕರೆ ಅವನು ಅದೃಷ್ಟವಂತನೇ ರಿ, ಅವನ ಬದುಕು ತುಂಬಾ ಚೆನ್ನಾಗಿರುತ್ತದೆ.
ಅವಳಲ್ಲಿ ಕರುಣೆ ಇರಬೇಕು, ಮಮತೆ ಇರಬೇಕು, ಆರೈಕೆಯ ಗೂಣವಿರಬೇಕು, ತನ್ನ ಪೋಷಕರನ್ನು ನೋಡಿದಂತೆ ನನ್ನ ಪೋಷಕರನ್ನು ಅವಳು ನೋಡಿಕೊಳ್ಳಬೇಕು ಎಂದು ಪ್ರತಿಯೊಬ್ಬ ಪುರುಷನೂ ಬಯಸುತ್ತಾನೆ.
ಚಾಣಕ್ಯ ಹೇಳಿದ ಈ ಎಲ್ಲಾ ಮಾತುಗಳು ನಿಜ, ಇಂಥ ಗುಣದ ಪತ್ನಿಯನ್ನು ಪಡೆದವ ತುಂಬಾ ಸುಂದರವಾದ ಬದುಕು ನಡೆಸುತ್ತಾನೆ ಎಂಬುವುದರಲ್ಲಿ ಯಾವುದೇ ಸಂಶಯ ಬೇಡ.



Click it and Unblock the Notifications











