Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಚಂದ್ರ ಗ್ರಹಣ 2023 : ಸೂತಕ ಸಮಯ ಹಾಗೂ ಎಲ್ಲೆಲ್ಲಿ ಗೋಚರವಾಗುತ್ತೆ?
ಈ ವರ್ಷ ಅಂದ್ರೆ 2023 ರಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸುತ್ತವೆ. ಈ ವರ್ಷದ ಮೊದಲ ಸೂರ್ಯ ಗ್ರಹಣ ವೈಶಾಖ ಪೂರ್ಣಿಮೆಯಂದು ಅಂದರೆ ಬುದ್ಧ ಪೂರ್ಣಿಮೆಯಂದು ಸಂಭವಿಸುತ್ತದೆ. ವೈಜ್ಞಾನಿಕವಾಗಿ ಹೇಳೋದಾದರೆ ಭೂಮಿಯು ಚಂದ್ರ ಮತ್ತು ಸೂರ್ಯನ ನಡುವೆ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ.
ಪುರಾಣಗಳ ಪ್ರಕಾರ, ರಾಹು ಚಂದ್ರನನ್ನು ಬಾಧಿಸಿದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಅಷ್ಟಕ್ಕು ಚಂದ್ರ ಗ್ರಹಣದ ಎಲ್ಲೆಲ್ಲಿ ಗೋಚರವಾಗುತ್ತೆ? ಸೂತಕ ಸಮಯ ಯಾವಾಗ? ಇದು ಎಷ್ಟು ಹೊತ್ತು ಇರುತ್ತದೆ ಅನ್ನೋದನ್ನು ತಿಳಿಯೋಣ.

ಪೆನಂಬ್ರಾಲ್ ಚಂದ್ರಗ್ರಹಣದ ಪ್ರಾಮುಖ್ಯತೆ?
ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಅದನ್ನು ಪೆನಂಬ್ರಾಲ್ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ಗ್ರಹಣದ ಮೊದಲು, ಚಂದ್ರನು ಭೂಮಿಯ ನೆರಳನ್ನು ಪ್ರವೇಶಿಸುತ್ತಾನೆ. ಅದನ್ನು ಚಂದ್ರ ಮಾಲಿನ್ಯಾ ಎಂದು ಕರೆಯಲಾಗುತ್ತದೆ ಇದಾದ ಬಳಿಕ ಚಂದ್ರನು ಭೂಮಿಯ ನಿಜವಾದ ನೆರಳನ್ನು ಪ್ರವೇಶಿಸುತ್ತಾನೆ. ಈ ಪರಿಸ್ಥಿತಿಯಲ್ಲಿ, ಪೆನಂಬ್ರಾ ಸಮಯದಲ್ಲಿ ಚಂದ್ರನ ಬೆಳಕಿನಲ್ಲಿ ಸ್ವಲ್ಪ ಮಂದತೆ ಉಂಟಾಗುತ್ತದೆ. ಹಾಗೂ ಚಂದ್ರನ ಬಣ್ಣವು ಮಂದವಾಗುತ್ತದೆ. ಈ ನೆರಳು ಚಂದ್ರನಿಂದ ಗ್ರಹಣಗೊಳ್ಳುತ್ತದೆ.
ಚಂದ್ರ ಗ್ರಹಣದ ಸಮಯ ಮತ್ತು ಸೂತಕ ಕಾಲ :
ಸೂತಕ ಕಾಲವು ಗ್ರಹಣ ಆರಂಭವಾಗೋದಕ್ಕಿಂತಲೂ ಮೊದಲೇ ಆರಂಭವಾಗುತ್ತದೆ. ಚಂದ್ರಗ್ರಹಣದ ಮೊದಲು ಸೂತಕದ ಅವಧಿಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ವರ್ಷದ ಮೊದಲ ಚಂದ್ರಗ್ರಹಣವು ಶುಕ್ರವಾರ, ಮೇ 5 ರಂದು ರಾತ್ರಿ 08.45 ಕ್ಕೆ ಪ್ರಾರಂಭವಾಗುತ್ತದೆ. ಮತ್ತು ಮಧ್ಯರಾತ್ರಿ 1.00 ಕ್ಕೆ ಕೊನೆಗೊಳ್ಳುತ್ತದೆ.
ಈ ನೆರಳು ಚಂದ್ರಗ್ರಹಣವಾಗಿರುತ್ತದೆ.
ಈ ದಿನವು ವೈಶಾಖ ಮಾಸದ ಹುಣ್ಣಿಮೆಯ ದಿನವಾಗಿದೆ. ಇದನ್ನು ಬುದ್ಧ ಪೂರ್ಣಿಮಾ ಎಂದೂ ಕರೆಯುತ್ತಾರೆ. ಚಂದ್ರಗ್ರಹಣದ ಸೂತಕ ಅವಧಿಯು 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಆದರೆ ವರ್ಷದ ಮೊದಲ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ ಅದರ ಸೂತಕ ಅವಧಿಯು ಇಲ್ಲಿ ಮಾನ್ಯವಾಗುವುದಿಲ್ಲ.
ಪೆನಂಬ್ರಾದ ಒಟ್ಟು ಅವಧಿ - 4 ಗಂಟೆ 15 ನಿಮಿಷ 34 ಸೆಕೆಂಡುಗಳು
ಪೆನಂಬ್ರಾಲ್ ಚಂದ್ರ ಗ್ರಹಣದ ಅವಧಿ - 0.95
ಚಂದ್ರಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ?
ಮೇ 5 ರಂದು ರಂದು ಸಂಭವಿಸುತ್ತಿರುವ ಚಂದ್ರ ಗ್ರಹಣವು ಛಾಯಾ ಚಂದ್ರಗ್ರಹಣ, ಅಂದರೆ ಚಂದ್ರನ ಮೇಲೆ ಭೂಮಿಯ ನೆರಳು ಒಂದೇ ಕಡೆ ಇರುವುದರಿಂದ ಈ ಗ್ರಹಣ ಎಲ್ಲೆಡೆ ಕಾಣಲು ಸಾಧ್ಯವಿಲ್ಲ. ವರ್ಷದ ಮೊದಲ ಚಂದ್ರಗ್ರಹಣ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಅಂಟಾರ್ಟಿಕಾ, ಪೆಸಿಫಿಕ್ ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರದ ಮೇಲೆ ಪರಿಣಾಮ ಬೀರಲಿದೆ.
ಒಟ್ಟಿನಲ್ಲಿ ಈ ವರ್ಷದ ಮೊದಲ ಚಂದ್ರ ಗ್ರಹಣ ಭಾರತದಲ್ಲಿ ಕಾಣಿಸದೇ ಇರೋದ್ರಿಂದ ಇದರ ಪರಿಣಾಮ ಅಷ್ಟಾಗಿ ಭಾರತದ ಮೇಲಾಗೋದಿಲ್ಲ ಅಂತಾನೇ ಹೇಳಬಹುದು.



Click it and Unblock the Notifications

