Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವರ್ಷದ ಮೊದಲ ಚಂದ್ರಗ್ರಹಣ 12 ರಾಶಿಗಳ ಮೇಲೆ ಬೀರಿರುವ ಪ್ರಭಾವ ಹೇಗಿದೆ?
ಸೂರ್ಯಗ್ರಹಣ ಸಂಭವಿಸಿದ 15ನೇ ದಿನಕ್ಕೆ ವೈಶಾಖ ಪೂರ್ಣಿಮೆಯಮದು ಚಂದ್ರಗ್ರಹಣ ಸಂಭವಿಸಲಿದೆ. ಜ್ಯೋತಿಷ್ಯದ ಪ್ರಕಾರ ಗ್ರಹಣವು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. 2023 ವರ್ಷದ ಮೊದಲ ಚಂದ್ರಗ್ರಹಣ ಕೂಡ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು ನಿಮ್ಮ ರಾಶಿಗೆ ಹೇಗಿರಲಿದೆ ಎಂದು ನೋಡೊಣ ಬನ್ನಿ:
ಮೇಷ ರಾಶಿ
2023ರ ಚಂದ್ರಗ್ರಹಣ ಭವಿಷ್ಯ ನೋಡುವುದಾದರೆ ವರ್ಷದ ಮೊದಲ ಚಂದ್ರಗ್ರಹಣವು ಮೇಷ ರಾಶಿಯವರಿಗೆ ಅಷ್ಟೊಂದು ಶುಭಕರವಾಗಿರುವುದಿಲ್ಲ. ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗಬಹುದು. ನಿಮ್ಮ ಕಾರ್ಯಗಳಲ್ಲಿ ಅಡೆತಡೆ ಉಂಟಾಗುವುದರಿಂದ ತುಂಬಾ ನಿರಾಸೆ ಉಂಟಾಗುವುದು. ಕೆಲಸದ ಅಭದ್ರತೆಯಿಂದ ಭವಿಷ್ಯಸ ಚಿಂತೆ ಕಾಡಬಹುದು, ನೀವು ಯಾವುದೇ ಹೊಸ ನಿರ್ಧಾರ ಮಾಡುವುದಾದರೂ ತುಂಬಾ ಎಚ್ಚರಿಕೆಯಿಂದ ತೆಗೆದುಕೊಳ್ಳುವುದು ಒಳ್ಳೆಯದು.

ವೃಷಭ ರಾಶಿ
ವರ್ಷದ ಮೊದಲ ಚಂದ್ರಗ್ರಹಣದ ಬಳಿಕ ವೃಷಭ ರಾಶಿಯವರು ತಮ್ಮ ವೈವಾಹಿಕ ಜೀವನದ ಬಗ್ಗೆ ಸ್ವಲ್ಪ ಜಾಗ್ರತೆವಹಿಸಬೇಕು. ಇಲ್ಲದಿದ್ದರೆ ನಿಮ್ಮ ಸಂಬಂಧದ ಮೇಲೆ ಪ್ರಭಾವ ಬೀರುವುದು. ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆಯಿದ್ದರೆ ಅದನ್ನು ದೊಡ್ಡದು ಮಾಡದೆ ಹೊಂದಿಕೊಂಡು ಹೋಗಲು ಯತ್ನಿಸಿದರೆ ಯಾವುದೇ ತೊಂದರೆಯಿರಲ್ಲ. ಆದರೆ ಭವಿಷ್ಯದ ಪ್ಲ್ಯಾನ್ ಮಾಡಬೇಕಾದರೆ ತುಂಬಾ ಜಾಗ್ರತೆಯಿಂದ ಮಾಡಬೇಕಾಗಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ಚಂದ್ರಗ್ರಹಣವು ಶುಭ ಫಲಿತಾಂಶಗಳನ್ನು ನೀಡಲಿದೆ. ನೀವು ಏನಾದರೂ ಆಂತರಿಕ ಸಮಸ್ಯೆ ಹೊಂದಿದ್ದರೆ ಮಿಥುನ ರಾಶಿಯವರು ಎದುರಿಸುತ್ತಿರುವ ಭಾವನಾತ್ಮಕ ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿಯುತ್ತವೆ. ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆ ಇದ್ದರೆ ಕೂತು ಬಗೆಹರಿಸಲು ಪ್ರಯತ್ನಿಸುವುದು ಒಳ್ಳೆಯದು, ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆ ಬಗೆಹರಿಯಲಿದೆ.
ಕರ್ಕ ರಾಶಿ
ಈ ಚಂದ್ರಗ್ರಹಣದ ಬಳಿಕ ಕರ್ಕ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಬೇಕು. ಏಕೆಂದರೆ ಈ ಗ್ರಹಣ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುವುದು. ನೀವು ಆಹಾರಕ್ರಮ, ವ್ಯಾಯಾಮದ ಕಡೆ ಗಮನಹರಿಸುವುದು ಒಳ್ಳೆಯದು. ಹಣಕಾಸಿನ ಬಗ್ಗೆ ಕೂಡ ಗಮನಹರಿಸುವುದು ಒಳ್ಳೆಯದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ಚಂದ್ರಗ್ರಹಣ ತುಂಬಾನೇ ಶುಭ ಫಲಿತಾಂಶ ನೀಡುವುದು. ನೀವು ಒಳ್ಳೆಯ ಪ್ರಯೋಜನಗಳನ್ನು ಪಡೆಯಲಿದ್ದೀರಿ, ನಿಮ್ಮ ಕೆಲಸದಲ್ಲಿ ಪ್ರಗತಿ ಕಾಣಲಿದೆ, ಆದರೆ ಯಾವುದೇ ಹೊಸ ಕಾರ್ಯಕ್ಕೆ ಕೈ ಹಾಕಲು ಹೋಗಬೇಡಿ.
ಕನ್ಯಾ ರಾಶಿ
ಕನ್ಯಾ ರಾಶಿಯವರು ತಮ್ಮ ಕೆಲಸ ಕಾರ್ಯಗಳಲ್ಲಿ ದುರಂಕಾರ ತೋರದಿದ್ದರೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಾವುದೇ ತೊಂದರೆ ಉಂಟಾಗುವುದು. ಅಹಂಕಾರದ ವರ್ತನೆ ಹಲವಾರು ಸಮಸ್ಯೆಗಳನ್ನು ತರಬಹುದು. ಕೆಲಸದದ ಒತ್ತಡ ಅಧಿಕವಿರಲಿದೆ, ಆದರೂ ನಿಮ್ಮ ಆರೋಗ್ಯದ ಕಡೆ ಗಮನ ನೀಡುವುದು ಒಳ್ಳೆಯದು.
ತುಲಾ ರಾಶಿ
ತುಲಾ ರಾಶಿಯವವರು ಈ ಚಂದ್ರಗ್ರಹಣ ಬಳಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ನಿರ್ಲಕ್ಷ್ಯದಿಂದ ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು, ಜಾಗ್ರತೆ!.ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು. ಪರಸ್ಪರ ಮಾತನಾಡುವ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ. ಮೂರನೇಯವರು ಹಸ್ತಕ್ಷೇಪ ಮಾಡಲು ಬಿಡಬೇಡಿ, ನಿಮ್ಮ ಸಮಸ್ಯೆಗಳನ್ನು ನೀವೇ ಬಗೆಹರಿಸಲು ಪ್ರಯತ್ನಿಸುವುದು ಒಳ್ಳೆಯದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ವರ್ಷದ ಮೊದಲ ಚಂದ್ರಗ್ರಹಣ ಶುಭ ಪ್ರಭಾವ ಬೀರಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಅವಾಹಿತರಿಗೆ ಸಂಗಾತಿ ದೊರೆಯಲಿದೆ. ಈಗ ನಿಮ್ಮ ಮನಸ್ಸನ್ನು ಕಾಡುತ್ತಿರುವ ಚಿಂತೆಗೆ ಪರಿಹಾರ ದೊರೆಯಲಿದೆ, ಈ ಚಂದ್ರಗ್ರಹಣದ ಬಳಿಕ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ.
ಧನು ರಾಶಿ
ಧನು ರಾಶಿಯವರು ಭವಿಷ್ಯದ ಬಗ್ಗೆ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಒಳ್ಳೆಯದು. ನಿಮ್ಮ ತಪ್ಪು ನಿರ್ಧಾರ ಭವಿಷ್ಯದಲ್ಲಿ ನಷ್ಟವನ್ನು ಉಂಟು ಮಾಡಬಹುದು, ಆದ್ದರಿಂದ ಯಾವುದೇ ಸಲಹೆ ಪಡೆಯುವ ಮುನ್ನ ಪರಿಣಿತರ ಸಲಹೆ ಪಡೆದ ಬಳಿಕವಷ್ಟೇ ಮುಂದುವರೆಯುವುದು ಒಳ್ಳೆಯದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ಚಂದ್ರಗ್ರಹಣದ ಬಳಿಕ ಒಳ್ಳೆಯ ಅವಕಾಶಗಳು ದೊರೆಯಲಿದೆ, ನೀವು ಈ ಹಿಂದೆ ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಇರಲ್ಲ, ಆದರೆ ಅನಗತ್ಯ ವಿವಾದಗಳಲ್ಲಿ ಭಾಗಿಯಾಗುವುದನ್ನು ತಪ್ಪಿಸಿ.
ಕುಂಭ ರಾಶಿ
ಈ ವರ್ಷದ ಮೊದಲ ಚಂದ್ರಗ್ರಹಣವು ಕುಂಭ ರಾಶಿಯವರಿಗೆ ಅನುಕೂಲಕರವಾದ ಫಲಿತಾಂಶ ನೀಡಲಿದೆ. ಕುಂಭ ರಾಶಿಯವರಿಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ, ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಹೊಸ ಅವಕಾಶಗಳು ದೊರೆಯಲಿದೆ. ವ್ಯಾಪಾರಸ್ಥರು ಭವಿಷ್ಯದಲ್ಲಿ ಉತ್ತಮ ಪ್ರಯೋಜನ ಪಡೆಯುತ್ತಾರೆ.
ಮೀನ ರಾಶಿ
ವರ್ಷದ ಮೊದಲ ಚಂದ್ರಗ್ರಹಣವು ಮೀನ ರಾಶಿಯವರಿಗೆ ಶುಭಕರವಾಗಿದೆ. ಕೌಟುಂಬಿಕ ಜೀವನದಲ್ಲಿ ಚಂತೋಷ ಇರಲಿದೆ. ನಿಮ್ಮ ವೃತ್ತಿಯಲ್ಲಿ ನೀವು ಪ್ರಗತಿಯನ್ನು ಪಡೆಯುತ್ತೀರಿ, ಪಾಲುದಾರಿಕೆಯಲ್ಲಿ ಸ್ಥಾಪಿಸಿದ ವ್ಯವಹಾರದಲ್ಲಿ ಲಾಭವನ್ನು ಗಳಿಸುತ್ತೀರಿ.



Click it and Unblock the Notifications