Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ಚೈತ್ರ ನವರಾತ್ರಿ 2023: ಯಾವ ದಿನ ಯಾವ ಬಣ್ಣ, ಇದರ ಮಹತ್ವವೇನು?
ಪ್ರತಿವರ್ಷ ಎರಡು ಬಾರಿ ನವರಾತ್ರಿಯನ್ನು ಆಚರಿಸಲಾಗುವುದು. ಈಗ ಬಂದಿರುವುದು ಚೈತ್ರ ನವರಾತ್ರಿ. ಅದಾಗಿ ಕೆಲವು ತಿಂಗಳುಗಳಲ್ಲಿ ಶಾರದೀಯ ನವರಾತ್ರಿ ಆಚರಿಸಲಾಗುವುದು. ಇದು ಸಾಮಾನ್ಯವಾಗಿಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಬರುವುದು.
ಈ ವರ್ಷ ಚೈತ್ರ ನವರಾತ್ರಿಯನ್ನು ಮಾರ್ಚ್ 22ರಿಂದ ಮಾರ್ಚ್ 30ರವರೆಗೆ ಆಚರಿಸಲಾಗುವುದು. ಈ ವರ್ಷ ಶಾರದೀಯ ನವರಾತ್ರಿಯನ್ನು ಅಕ್ಟೋಬರ್ 15ರಿಂದ ಅಕ್ಟೋಬರ್ 24ರವರೆಗೆ ಆಚರಿಸಲಾಗುವುದು.

ನವರಾತ್ರಿಯ 9ನೇ ದಿನ ರಾಮನವಮಿ ಆಚರಿಸಲಾಗುವುದು. ಚೈತ್ರ ನವರಾತ್ರಿ 9 ದಿನ ದೇವಿಯ 9 ಅವತಾರಗಳನ್ನು ಪೂಜಿಸಲಾಗುವುದು. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ದುರ್ಗೆಯ 9 ಅವತಾರಗಳಾಗಿವೆ. ಒಂದೊಂದು ದಿನ ಒಂದೊಂದು ದೇವಿಯನ್ನು ಪೂಜಿಸಲಾಗುವುದು.
ನವರಾತ್ರಿ ನವದುರ್ಗೆಯರನ್ನು ಒಂದೊಂದು ಬಣ್ಣದ ಮೂಲಕ ಆರಾಧಿಸುತ್ತೇವೆ. ಈ ವರ್ಷ ಚೈತ್ರ ನವರಾತ್ರಿಯಂದು ಯಾವ ದಿನ ಯಾವ ಬಣ್ಣ ಶ್ರೇಷ್ಠ ಎಂದು ನೋಡೋಣ ಬನ್ನಿ:
ನವರಾತ್ರಿಯ ಮೊದಲ ದಿನ: ಕಡು ನೀಲಿ
ಮೊದಲ ಶೈಲ ಪುತ್ರಿಯ ಆರಾಧನೆ ಮಾಡುವಾಗ ನೀಲಿ ಬಣ್ಣದ ಉಡುಪು ಧರಿಸಿದರೆ ನಿಮಗೆ ಮತ್ತಷ್ಟು ಶುಭ ಫಲ ದೊರೆಯಲಿದೆ.
ನೀಲಿಬಣ್ಣ ಐಶ್ವರ್ಯ, ಸಂಪತ್ತಿನ ಸಂಕೇತವಾಗಿದೆ. ಈ ಬಣ್ಣವನ್ನು ನವರಾತ್ರಿಗೆ ಧರಿಸುವುದರಿಂದ ಸಂಪತ್ತು, ಐಶ್ವರ್ಯ ಹೆಚ್ಚಾಗಲಿದೆ.
ಚೈತ್ರ ನವರಾತ್ರಿ 2ನೇ ದಿನ: ಹಳದಿ ಬಣ್ಣ
ಈ ದಿನ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುವುದು. ಹಳದಿ ಶುಭದ ಸಂಕೇತ. ಈ ದಿನ ಹಳದಿ ಬಣ್ಣದ ಉಡುಪು ಧರಿಸಿ ಪೂಜೆಯನ್ನು ಮಾಡಿ.
ಹಳದಿ ಶುಭ ಹಾಗೂ ಜ್ಞಾನದ ಸಂಕೇತವಾಗಿದೆ.
ನವರಾತ್ರಿ 3ನೇ ದಿನ: ಹಸಿರು
ನವರಾತ್ರಿ 3ನೇ ದಿನ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುವುದು. ಈ ದಿನ ನೀವು ದೇವಿಯ ಆರಾಧನೆಗೆ ಹಸಿರು ಬಣ್ಣದ ಉಡುಪು ಧರಿಸಿ.
ಹಸಿರು ಹೊಸ ಆರಂಭ, ಫಲವತ್ತತೆಯ ಸಂಕೇತ.
ನವರಾತ್ರಿ 4ನೇ ದಿನ: ಬೂದು ಬಣ್ಣ
ನವರಾತ್ರಿ 4ನೇ ದಿನ ಕೂಷ್ಮಾಂಡಾ ದೇವಿಯನ್ನು ಆರಾಧಿಸಲಾಗುವುದು. ಈ ದೇವಿಯನ್ನು ಆರಾಧನೆ ಮಾಡುವಾಗ ನೀವು ಕಿತ್ತಳೆ ಬಣ್ಣದ ಉಡುಪು ಧರಿಸಿ.
ಬೂದು ಬಣ್ಣ ಧರಿಸುವುದರಿಂದ ಜೀವನದಲ್ಲಿರುವ ನೆಗೆಟಿವ್ ಅಂಶಗಳು ದೂರಾಗಲಿದೆ.
ನವರಾತ್ರಿ 5ನೇ ದಿನ: ಕಿತ್ತಳೆ
ನವರಾತ್ರಿ 5ನೇ ದಿನ ಸ್ಕಂದಮಾತಾ ದೇವಿಯನ್ನು ಆರಾಧಿಸಲಾಗುವುದು. ಈ ದಿನ ಮಾತೆ ಸ್ಕಂದಮಾತೆಯನ್ನು ಪೂಜಿಸುವಾಗ ನೀವು ಬಿಳಿ ಬಣ್ಂದ ಉಡುಪು ಧರಿಸಿ.
ಕಿತ್ತಳೆ ಅಂದರೆ ಬೆಂಕಿಯ ಬಣ್ಣ ಇದು ಶಕ್ತಿಯ ಸಂಕೇತ
ನವರಾತ್ರಿ 6ನೇ ದಿನ: ಬಿಳಿ
ನವರಾತ್ರಿ 6ನೇ ದಿನದಂದು ಕಾತ್ಯಾಯನಿ ದೇವಿಯನ್ನು ಆರಾಧಿಸಲಾಗುವುದು. ದೇವಿ ಕಾತ್ಯಾಯನಿ ಪೂಜೆಯಂದು ನೀವು ಬಿಳಿ ಬಣ್ಣದ ಉಡುಪು ಧರಿಸಿ ಪೂಜೆಯನ್ನು ಮಾಡಿ.
ಬಿಳಿ ಬಣ್ಣವು ಶಾಂತಿ, ಶುದ್ಧತೆಯ ಸಂಕೇತವಾಗಿದೆ.
ನವರಾತ್ರಿ 7ನೇ ದಿನ: ಕೆಂಪು
ನವರಾತ್ರಿ 7ನೇ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುವುದು. ಈ ದಿನ ಕೆಂಪು ವಸ್ತ್ರದ ಬಟ್ಟೆ ಧರಿಸಿ ದೇವಿಯನ್ನು ಆರಾಧಿಸಿ.
ಕೆಂಪು ಬಕ್ತಿ, ಸಾಧನೆಯ ಸಂಕೇತವಾಗಿದೆ.
ನವರಾತ್ರಿ 8ನೇ ದಿನ: ಆಕಾಶ ನೀಲಿ
ನವರಾತ್ರಿ 8ನೇ ದಿನ ಮಹಾಗೌರಿಯನ್ನು ಆರಾಧಿಸಲಾಗುವುದು. ಈ ದಿನ ನೀವು ಆಕಾಶ ನೀಲಿ ಬಣ್ಣದ ಬಟ್ಟೆ ಧರಿಸಿ ಮಹಾಗೌರಿಯನ್ನು ಆರಾಧಿಸಿ.
ನವರಾತ್ರಿಯಂದು ಆಕಾಶ ನೀಲಿ ಬಣ್ಣ ಧರಿಸುವುದರಿಂದ ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ.
ನವರಾತ್ರಿ 9ನೇ ದಿನ : ಗುಲಾಬಿ ಬಣ್ಣ
ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸಲಾಗುವುದು. ಈ ದಿನ ಗುಲಾಬಿ ಬಣ್ಣದ ಬಟ್ಟೆ ಧರಿಸಿದರೆ ಮತ್ತಷ್ಟು ಶುಭವಾಗಿರುತ್ತದೆ.
ಗುಲಾಬಿ ಬಣ್ಣ ಸೌರ್ಹಾದತೆ, ಪ್ರೀತು ಸಂಕೇತ.
ಮಾರ್ಚ್ 22: ಕಡು ನೀಲಿ
ಮಾರ್ಚ್ 23: ಹಳದಿ
ಮಾರ್ಚ್ 24: ಹಸಿರು
ಮಾರ್ಚ್ 25: ಬೂದು ಬಣ್ಣ
ಮಾರ್ಚ್ 26: ಕಿತ್ತಳೆ ಬಣ್ಣ
ಮಾರ್ಚ್ 27: ಬಿಳಿ
ಮಾರ್ಚ್ 28: ಕೆಂಪು
ಮಾರ್ಚ್ 29: ಆಕಾಶ ನೀಲಿ
ಮಾರ್ಚ್ 30: ಗುಲಾಬಿ ಬಣ್ಣ



Click it and Unblock the Notifications

