Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಸತ್ತವರಿಗಾಗಿ ಸ್ಮಶಾನದಲ್ಲಿ ಸಿನಿಮಾ ಪ್ರದರ್ಶನ: ಈ ವಿಚಿತ್ರ ಆಚರಣೆ ನಡೆದಿದ್ದೆಲ್ಲಿ ಗೊತ್ತಾ?
ವಿಶ್ವದ ಯಾವುದೇ ಮೂಲೆಯಲ್ಲಿ ನೀವು ಸತ್ತವರಿಗೆ ವಿಶೇಷ ಗೌರವ, ಪೂಜೆ, ಆಚರಣೆ ಇರುವುದನ್ನು ನಾವು ನೋಡಬಹುದು. ಹಿಂದೂ ಧರ್ಮದಲ್ಲಿ ಇದು ಮುಕ್ತಿಯ ಮಾರ್ಗ ಎಂದು ಪರಿಗಣಿಸಲಾಗಿದೆ. ಹೀಗಾಗಿ ಸಾವಿನ ಬಳಿಕ ಆತನ ದೇಹ ಪಂಚಭೂತದಲ್ಲಿ ಲೀನವಾಗಲಿದೆ ಎಂಬಲಾಗಿದೆ.
ಇನ್ನು ಪಾಶ್ಚಾತ್ಯ ಸಂಪ್ರದಾಯದಲ್ಲಿ ಸತ್ತವರ ಗೋರಿಗೆ ಪೂಜೆ ಮಾಡುವ ಸಂಪ್ರದಾಯವಿದೆ. ಇದಿಷ್ಟೆ ಅಲ್ಲ ಸತ್ತವರ ಕೊನೆ ಆಸೆಯನ್ನ ಅವರ ಸಾವಿನ ಬಳಿಕ ಇಡೇರಿಸುವ ರೂಢಿ, ಸಂಪ್ರದಾಯ ವಿಶ್ವದ ಎಲ್ಲಾ ಕಡೆಯಲ್ಲು ನೋಡಬಹುದು. ಹೌದು ಸತ್ತ ಬಳಿಕವೂ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಹಲವು ರೀತಿಯ ಸಂಪ್ರದಾಯ ಆಚರಣೆ ರೂಢಿಯಲ್ಲಿದೆ.

ಆದರೆ ಇಲ್ಲೊಂದು ಕಡೆ ಸ್ಮಶಾನದಲ್ಲಿ ವಿಚಿತ್ರ ಆಚರಣೆ ನಡೆಯುತ್ತಿರುವುದು ಭಾರೀ ವೈರಲ್ ಆಗುತ್ತಿದೆ. ಅದೇನೆಂದರೆ ಸತ್ತವರಿಗಾಗಿ ಈ ಸ್ಮಶಾನದಲ್ಲಿ ಸಿನಿಮಾ ಪ್ರದರ್ಶನ ಮಾಡಲಾಗುತ್ತದೆ. ಹೌದು ಇಲ್ಲಿ ಸತ್ತವರಿಗಾಗಿಯೇ ಪರದೆ ಹಾಕಿ ಸಿನಿಮಾ ಪ್ರದರ್ಶನ ಮಾಡಲಾಗುತ್ತದೆ. ಇದೊಂದು ವಿಚಿತ್ರ ಆಚರಣೆಯಾಗಿ ನಡೆದುಕೊಂಡು ಬಂದಿದೆ.
ಉತ್ತರ ಥೈಲ್ಯಾಂಡ್‌ನ ನಖೋನ್ ರಾಚಸಿಮಾ ಪ್ರಾಂತ್ಯದಲ್ಲಿರುವ ಸ್ಮಶಾನವು 2,800 ಸಮಾಧಿಗಳನ್ನು ಹೊಂದಿದ್ದು, ಸತ್ತವರಿಗಾಗಿ ಚಲನಚಿತ್ರ ಪ್ರದರ್ಶನಕ್ಕಾಗಿ, ಸಿಬ್ಬಂದಿ ಎಚ್ಚರಿಕೆಯಿಂದ ಖಾಲಿ ಆಸನಗಳ ರೆಡಿ ಮಾಡಿ ಅಲ್ಲಿ ಚಲನ ಚಿತ್ರ ಪ್ರದರ್ಶನ ನಡೆದಿದೆ. ಥೈಲ್ಯಾಂಡ್‌ನಲ್ಲಿ ನೆಲೆಸಿದ ಚೀನಾದ ವಲಸಿಗರ ಆತ್ಮಗಳನ್ನು ಗೌರವಿಸಲು ಚಲನಚಿತ್ರ ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಮತ್ತು ಅವರ ವಂಶಸ್ಥರನ್ನು ಪ್ರಾಥಮಿಕವಾಗಿ ಅಲ್ಲಿ ಸಮಾಧಿ ಮಾಡಲಾಗಿದೆ.
ದಿನರಾತ್ರಿ 7 ಗಂಟೆಯಿಂದ ಮಧ್ಯರಾತ್ರಿ ವರೆಗೆ ಈ ಸಿನಿಮಾಗಳ ಪ್ರದರ್ಶನ ನಡೆಯಲಿದೆಯಂತೆ. ಬರೀ ಸಿನಿಮಾ ಮಾತ್ರವಲ್ಲ ಸ್ಮಶಾನದಲ್ಲಿ ಆತ್ಮಗಳಿಗೆ ರುಚಿಕರ ಆಹಾರ, ಬಗೆ ಬಗೆಯ ಖಾದ್ಯವನ್ನೂ ಸಿದ್ದಪಡಿಸಲಾಗುತ್ತದೆ. ಜೊತೆಗೆ ಮಾದರಿ ಮನೆಗಳು, ವಾಹನಗಳು, ಆಟಿಕೆಗಳು ಸಹ ಅಲ್ಲಿ ಇಡಲಾಗುತ್ತದೆ. ಥೈಲ್ಯಾಂಡ್‌ನ ಅನೇಕ ಚೀನೀ ಸಮುದಾಯಗಳಲ್ಲಿ ಡ್ರ್ಯಾಗನ್ ಬೋಟ್ ಫೆಸ್ಟಿವಲ್‌ನ ಮೊದಲು ಅಥವಾ ನಂತರ ಅಥವಾ ಚಿಂಗ್ ಮಿಂಗ್ ಉತ್ಸವದ ನಂತರ ಅಗಲಿದವರಿಗಾಗಿ ಚಲನಚಿತ್ರಗಳನ್ನು ಪ್ರದರ್ಶಿಸುವುದು ವಾಡಿಕೆಯಂತೆ.
ಸ್ಮಶಾನದಲ್ಲಿರುವ ಸಾವಿರಾರು ಗೋರಿಗಳ ನಡುವೆ ಈ ಪ್ರದರ್ಶನ ನಡೆದಿದೆ. ಆತ್ಮಗಳ ಸಂತೃಪ್ತಿಗೊಳಿಸುವುದು ಇದರ ಮುಖ್ಯ ಉದ್ದೇವಾಗಿತ್ತಂತೆ. ಈ ರೀತಿಯ ವಿಚಿತ್ರ ಆಚರಣೆ ಕಂಡು ಜನರು ಅಚ್ಚರಿಗೊಳಗಾಗಿದ್ದಾರೆ. ಈ ರೀತಿ ಸ್ಮಶಾನದಲ್ಲಿ ಸಿನಿಮಾ ಪ್ರದರ್ಶನ ಮಾಡುವುದು ಯಾವ ರೀತಿಯ ಸಂಪ್ರದಾಯ ಎಂದು ಎಲ್ಲರು ಬಾಯಿ ಮೇಲೆ ಬೆರಳಿಡಬೇಕಾಗಿದೆ.
ಈ ರೀತಿಯ ಸಿನಿಮಾ ಪ್ರದರ್ಶನ ಸುಮಾರು ಒಂದು ವಾರಗಳ ಕಾಲ ನಡೆದಿತ್ತಂರೆ. ಪ್ರತಿ ದಿನ ಸಂಜೆ 7 ಗಂಟೆಗೆ ಸಿನಿಮಾ ಪ್ರದರ್ಶನ ಮಾಡಿದ ಬಳಿಕ ಸ್ಮಶಾನದಲ್ಲಿ ಯಾರಿಗೆ ಪ್ರವೇಶವಿರಲಿಲ್ಲವಂತೆ. ಜೊತೆಗೆ ಅಲ್ಲಿರುವ ಚೇರ್‌ಗಳ ಮೇಲೆ ಯಾರು ಸಹ ಕುಳಿತುಕೊಳ್ಳಬಾರದಿತ್ತಂತೆ. ಸಿನಿಮಾ ಪ್ರದರ್ಶನ ಮುಗಿದ ಬಳಿಕ ಕೃತಕವಾಗಿ ಮಾಡಲಾಗಿದ್ದ ಮನೆ, ವಾಹನಗಳಿಗೆ ಬೆಂಕಿ ಹಚ್ಚಿ ಸುಡಲಾಗಿತ್ತಂತೆ.
ಈ ವಿಚಿತ್ರ ಆಚರಣೆಯಿಂದಾಗಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿದೆ. ಅವರಿಗೂ ಒಂದು ಮನರಂಜನೆ ನೀಡಿದಂತಾಗುತ್ತದೆ. ಅಲ್ಲದೆ ಅವರನ್ನು ಸಂತೃಪ್ತಿಗೊಳಿಸಿದ ತೃಪ್ತಿ ಸಿಗಲಿದೆ ಎಂದು ಆಯೋಜಕರು ಹೇಳಿದ್ದಾರೆ. ಇಂತಹ ವಿಚಿತ್ರ ಇಲ್ಲಿ ಮಾತ್ರವಲ್ಲ ಚೀನಾದ ಹಲವು ಭಾಗದಲ್ಲಿ ಇದಕ್ಕಿಂತ ವಿಚಿತ್ರ ಆಚರಣೆಗಳಿವೆ.



Click it and Unblock the Notifications