Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಶ್ವ ಮಾನವ ಹಕ್ಕುಗಳ ದಿನ 2024: ಯಾವೆಲ್ಲಾ ಹಕ್ಕನ್ನು ರಕ್ಷಿಸಲಾಗಿದೆ.? ಇದರ ಮಹತ್ವ ಗೊತ್ತಾ?
ಭೂಮಿ ಮೇಲಿನ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಹಕ್ಕುಗಳಿವೆ. ಮನುಷ್ಯನ ಹಕ್ಕಿನ ಬಗ್ಗೆ ಪ್ರತಿಪಾದಿಸುವ ದಿನ ಮಾನವ ಹಕ್ಕುಗಳ ದಿನ. ಇಂದು ವಿಶ್ವ ಮಾನವ ಹಕ್ಕುಗಳ ದಿನ. ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಘೋಷಿಸಲಾದ ಮಾನವ ಹಕ್ಕುಗಳನ್ನು 1948ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿತ್ತು. ಹೀಗಾಗಿ ಈ ದಿನದ ನೆನಪಿಗಾಗಿ ಮಾನವ ಹಕ್ಕುಗಳ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ.
ಪ್ರತಿಯೊಬ್ಬ ವ್ಯಕ್ತಿಯು ಅವರ ಜನಾಂಗ, ಲಿಂಗ, ಧರ್ಮ, ರಾಷ್ಟ್ರೀಯತೆ ಅಥವಾ ಯಾವುದೇ ಇತರ ಅಂಶಗಳ ಹೊರತಾಗಿಯೂ ಮೂಲಭೂತ ಸ್ವಾತಂತ್ರ್ಯಗಳು ಮತ್ತು ಹಕ್ಕುಗಳನ್ನು ಅನುಭವಿಸಲು ಆತ ಸಮಾನ ಹಕ್ಕುಗಳ ಹೊಂದಿರುತ್ತಾನೆ. ಇವು ಮಾನವನ ಜೀವನದ ಭಾಗವಾಗಿ ಆತನ ಕ್ಷೇಮಾಭಿವೃದ್ಧಿಯ ಬಯಸುವ ಮಾಪನಗಳಾಗಿವೆ.

ಮಾನವ ಹಕ್ಕುಗಳ ದಿನದ 2024ರ ವಿಷಯವು " ಪ್ರಸ್ತುತ ನಮ್ಮ ಹಕ್ಕುಗಳು, ನಮ್ಮ ಭವಿಷ್ಯ," ಎಂಬ ಘೋಷವಾಕ್ಯದಿಂದ ಕೂಡಿದೆ. ಮಾನವ ಹಕ್ಕುಗಳು ನಮ್ಮ ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಗುರುತಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ಮೂಲಕ 1950 ರಲ್ಲಿ ಮಾನವ ಹಕ್ಕುಗಳ ದಿನವನ್ನು ಅಧಿಕೃತವಾಗಿ ಆರಂಭಿಸಲಾಗಿತ್ತು. 2ನೇ ಮಹಾಯುದ್ಧದ ಬಳಿಕ ವಿಶ್ವದಾಧ್ಯಂತ ಉಂಟಾದ ಹಲವು ವಿದ್ಯಮಾನಗಳು ಮಾನವ ಹಕ್ಕಗಳ ರಕ್ಷಣೆಗೆ ಒತ್ತು ನೀಡಿದ್ದವು. ಸ್ಥಾಪನೆಯಾದಾಗಿನಿಂದ, ಮಾನವ ಹಕ್ಕುಗಳ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತದೆ ಮಾನವ ಹಕ್ಕುಗಳಿಗೆ ಸಂಬಂಧಿಸಿದ ನಿರಂತರ ಹೋರಾಟಗಳಾದ ತಾರತಮ್ಯ, ಅಸಮಾನತೆ ಮತ್ತು ದಬ್ಬಾಳಿಕೆಯ ಬಗ್ಗೆ ಜಾಗೃತಿ ಮೂಡಿಸಲು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.
ಮಾನವ ಹಕ್ಕುಗಳ ದಿನವನ್ನು ಜಾಗತಿಕವಾಗಿ ಅದರ ಪ್ರಾಮುಖ್ಯತೆಯನ್ನು ಒತ್ತಿಹೇಳಲು ವೆಬ್‌ನಾರ್‌ಗಳು, ಸೆಮಿನಾರ್‌ಗಳು ಮತ್ತು ನಾಯಕರಿಂದ ಭಾಷಣಗಳಂತಹ ವಿವಿಧ ಚಟುವಟಿಕೆಗಳ ಮೂಲಕ ಆಚರಿಸಲಾಗುತ್ತದೆ. ಭಾರತ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪ್ರತಿ ವರ್ಷ ಈ ಕಾರ್ಯಕ್ರಮಗಳ ನಡೆಸುತ್ತದೆ. ದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರಪತಿ ಈ ಮಾನವ ಹಕ್ಕುಗಳ ದಿನಗಳ ಕುರಿತಂತೆ ಭಾಷಣ ಮಾಡುತ್ತಾರೆ.
ಮಾನವ ಹಕ್ಕುಗಳು ಅಂದರೆ ಯಾವುದೆಲ್ಲಾ ಬರಲಿದೆ?
ಇನ್ನು ನಮ್ಮ ಹಕ್ಕುಗಳು ಅಂದರೆ ನಮಗೆ ಮೊದಲು ಯಾವುದೆಲ್ಲಾ ಬರಲಿದೆ ಎಂಬುದನ್ನು ತಿಳಿದಿರಬೇಕು. ಸಂವಿಧಾನದ ಅಡಿಯಲ್ಲಿ ನಮಗೆ ಯಾವ ಹಕ್ಕುಗಳ ನೀಡಲಾಗಿದೆ ಎಂಬುದನ್ನು ತಿಳಿದಿರುವುದು ಬಹಳ ಮುಖ್ಯ. ಜೀವಿಸುವುದು, ವಾಕ್ ಸ್ವಾತಂತ್ರ್ಯ, ಆಹಾರ, ಶಿಕ್ಷಣ, ಸಾಮಾಜಿಕ ಭದ್ರತೆ, ಸಂಘಟನೆ, ರಾಷ್ಟ್ರೀಯತೆ, ರಕ್ಷಣೆ, ಆರೋಗ್ಯ, ಧಾರ್ಮಿಕ ಸ್ವಾತಂತ್ರ್ಯದ ಜತೆಗೆ ದೌರ್ಜನ್ಯದ ವಿರುದ್ಧ ದನಿ ಎತ್ತುವ ಹಕ್ಕುಗಳು ಇದರ ವ್ಯಾಪ್ತಿಯಲ್ಲಿ ನಾವು ನೋಡಬಹುದು.
ಯಾವುದೇ ಧರ್ಮ, ಲಿಂಗ, ಜನಾಂಗ, ಬಣ್ಣ, ಭಾಷೆ, ರಾಜಕೀಯ ಅಥವಾ ಇತರೆ ಅಭಿಪ್ರಾಯಗಳು, ಸಮಾಜದಲ್ಲಿ ವ್ಯಕ್ತಿಯೊಬ್ಬನ ಸ್ಥಾನಮಾನ ಕೂಡ ಲೆಕ್ಕಿಸದೆ ಎಲ್ಲರೂ ಸಮಾನರು, ಹಾಗೆ ಅಸಮಾನತೆಯ ವಿರುದ್ಧದವಾದ ಎಲ್ಲರು ಅನುಭವಿಸುವಂತಹ ಹಕ್ಕುಗಳನ್ನು ಎಲ್ಲಾ ವರ್ಗದ ಜನರಿಗೆ ನೀಡುವುದು ಈ ಮಾನವ ಹಕ್ಕುಗಳ ಉದ್ದೇಶವಾಗಿದೆ.
ಭಾರತದಲ್ಲಿ ಮಾನವ ಹಕ್ಕು ಜಾರಿಯಾಗಿದ್ದು ಹೇಗೆ?
ಭಾರತವು 1948 ರಲ್ಲಿ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಗೆ ಸಹಿ ಹಾಕಿತು ಮತ್ತು ಅಂಗೀಕರಿಸಿತು. ಡಿಸೆಂಬರ್ 18, 1993 ರಂದು ಭಾರತವು ತನ್ನ ಸಂಸತ್ತಿನ ಮೂಲಕ ಮಾನವ ಹಕ್ಕುಗಳ ಸಂರಕ್ಷಣಾ ಕಾಯಿದೆಯನ್ನು ಜಾರಿ ಮಾಡಿತು. ಈ ಹಕ್ಕುಗಳನ್ನು ಭಾರತೀಯ ಸಂವಿಧಾನದ ಅಡಿಯಲ್ಲಿ ಪೋಷಿಸಲಾಗಿದೆ. ಭಾರತೀಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ರಚಿಸಿ ಮಾನವ ಹಕ್ಕುಗಳ ಎತ್ತಿಹಿಡಿಯುವ ಕಾರ್ಯ ಮಾಡಲಾಗುತ್ತಿದೆ. ದೇಶದ ಯಾವುದೇ ಮೂಲೆಯಲ್ಲಿ ನಿಮಗೆ ಈ ಹಕ್ಕುಗಳ ಪಾಲನೆಗೆ ಅಡ್ಡಿಯಾದರೆ ಹಾಗೂ ಹಕ್ಕುಗಳಿಂದ ನೀವು ವಂಚಿತರಾದರೆ ಮಾನವ ಹಕ್ಕು ಆಯೋಗ ನಿಮ್ಮ ನೆರವಿಗೆ ಬರಲಿದೆ.



Click it and Unblock the Notifications