Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕ್ರಿಸ್‌ಮಸ್ ಆಚರಿಸಿದ್ರೆ ಜೈಲು ಫಿಕ್ಸ್; ಈ 5 ದೇಶದಲ್ಲಿದೆ ಕಠಿಣ ಕಾನೂನು!
ಡಿಸೆಂಬರ್ ತಿಂಗಳು ಕ್ರೈಸ್ತ ಧರ್ಮದವರಿಗೆ ಬಹಳ ಪ್ರಮುಖ ತಿಂಗಳು. ಕ್ರಿಸ್‌ಮಸ್ ಆಚರಣೆಯ ಹಿನ್ನೆಲೆ ಡಿಸೆಂಬರ್‌ನಲ್ಲಿ ಸಂಭ್ರಮಾಚರಣೆ ನೋಡಬಹುದು. ವಿಶ್ವದ ಬಹುತೇಕ ಭಾಗದಲ್ಲಿ ಕ್ರಿಸ್‌ಮಸ್ ಆಚರಿಸುತ್ತಾರೆ. ಈ ಹಬ್ಬದಲ್ಲಿ ಉಡುಗೊರೆಗಳು, ಸಿಹಿ ಹಂಚಿ ಸಂಭ್ರಮಿಸುವುದು ನೋಡಬಹುದು. ಡಿಸೆಂಬರ್ 25ರಂದು ಬಹುತೇಕ ಭಾಗದಲ್ಲಿ ಹಬ್ಬದ ಆಚರಣೆ ನೋಡಬಹುದು.
ಆದ್ರೆ ಮತ್ತೊಂದಿಷ್ಟು ದೇಶಗಳಲ್ಲಿ ಈ ಕ್ರಿಸ್‌ಮಸ್ ಹಬ್ಬವನ್ನು ಆಚರಿಸುವಂತಿಲ್ಲ. ಹೌದು ಕ್ರೈಸ್ತರ ಈ ಪವಿತ್ರ ಹಬ್ಬವನ್ನು ಕೆಲವೊಂದು ದೇಶದಲ್ಲಿ ಆಚರಿಸುವಂತಿಲ್ಲ. ಹಾಗೆ ಕೆಲ ದೇಶದಲ್ಲಿ ಇದಕ್ಕೆ ಕಠಿಣ ನಿಯಮಗಳನ್ನು ಸಹ ಜಾರಿ ಮಾಡಿರುವುದು ನೋಡಬಹುದು. ಅದ್ರಲ್ಲೂ ಈ 5 ದೇಶಗಳಲ್ಲಿ ಕ್ರಿಸ್‌ಮಸ್ ಆಚರಣೆಗೆ ಕಡಿವಾಣವಿದೆ. ಹಾಗಾದ್ರೆ ಆ ದೇಶಗಳು ಯಾವುದು ಅನ್ನೋದನ್ನು ತಿಳಿದುಕೊಳ್ಳೋಣ.

ಉತ್ತರ ಕೊರಿಯಾ
ಉತ್ತರ ಕೊರಿಯಾದಲ್ಲಿ ನಿರಂಕುಶ ಪ್ರಭುತ್ವದ ಸಿದ್ಧಾಂತವು ಕ್ರಿಸ್‌ಮಸ್‌ನಂತಹ ಧಾರ್ಮಿಕ ರಜಾದಿನಗಳಿಗೆ ಯಾವುದೇ ಅವಕಾಶವನ್ನು ನೀಡುವುದಿಲ್ಲ. ಕಿಮ್ ರಾಜವಂಶಕ್ಕೆ ಈ ಧರ್ಮಾಧಾರಿತ ಆಚರಣೆಗಳು ಬೆದರಿಕೆ ಒಡ್ಡುತ್ತವೆ ಎಂದು ನಂಬಲಾಗಿದೆ. ಹೀಗಾಗಿ ಎಲ್ಲಾ ರೀತಿಯ ಧಾರ್ಮಿಕ ಆಚರಣೆಗಳನ್ನು ಅಲ್ಲಿ ನಿಗ್ರಹಿಸಲಾಗುತ್ತದೆ. ವ್ಯಕ್ತಿ ಪೂಜೆಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ಅಲ್ಲಿ ಕ್ರಿಸ್‌ಮಸ್ ಆಚರಣೆ ಮಾಡಿದರೆ ಜೈಲು ಶಿಕ್ಷೆ ಸೇರಿದಂತೆ ಹಲವು ರೀತಿಯ ನಿಯಮಗಳ ಜಾರಿ ಮಾಡಲಾಗಿದೆ.
ಸೌದಿ ಅರೇಬಿಯಾ
ಇಸ್ಲಾಂ ಧರ್ಮದ ಪ್ರಮುಖ ಸ್ಥಳವಾಗಿರುವ ಸೌದಿ ಅರೇಬಿಯಾ ಕ್ರಿಸ್ ಮಸ್ ಆಚರಣೆಯನ್ನು ನಿಗ್ರಹಿಸುವ ಕಾನೂನುಗಳ ತಂದಿದೆ. ಇಸ್ಲಾಮಿಕ್ ಸಿದ್ದಾಂತಕ್ಕೆ ವಿರುದ್ಧವಾದ ಆಚರಣೆಗಳು ಸಾರ್ವಜನಿಕವಾಗಿ ಅಲ್ಲಿ ನಿಷೇಧಿಸಲ್ಪಟ್ಟಿವೆ. ಅಲ್ಲಿ ಸಾರ್ವಜನಿಕವಾಗಿ ಕ್ರಿಸ್‌ಮಸ್ ಅಲಂಕಾರಗಳ ಮಾಡುವಂತಿಲ್ಲ. ಬಹಿರಂವಾಗಿ ಕ್ರಿಸ್‌ಮಸ್ ಆಚರಿಸುವಂತಿಲ್ಲ. ಆದ್ರೆ ನಿಮ್ಮ ಮನೆಯ ಒಳಗೆ ಹಾಗೆ ಸೀಮಿತ ಅವಧಿಯಲ್ಲಿ ಆಚರಣೆಗೆ ಅವಕಾಶಗಳಿವೆ. ಹಾಗೆ ಸಾರ್ವಜನಿಕವಾಗಿ ಮಾಲ್‌ಗಳು ಕೆಲ ಖಾಸಗಿ ಆಸ್ತಿಗಳಲ್ಲಿ ಸೀಮಿತಿ ಅಲಂಕಾರಗಳ ಮಾಡಲು ಅವಕಾಶಗಳಿವೆ.
ಬ್ರೂನಿ
ಸೌತ್ ಈಸ್ಟ್ ಏಷ್ಯಾದ ಚಿಕ್ಕ ದೇಶವಾದ ಬ್ರೂನಿಯಲ್ಲಿ ಕ್ರಿಸ್‌ಮಸ್ ಆಚರಣೆ ಇಲ್ಲ. ಕಾನೂನಿನ ಚೌಕಟ್ಟಿನಲ್ಲಿ ಈ ಆಚರಣೆಯನ್ನು ತರಲಾಗಿದೆ. ಕ್ರಿಸ್‌ಮಸ್ ಸಾರ್ವಜನಿಕ ಆಚರಣೆಯನ್ನು ತೀವ್ರವಾಗಿ ನಿಯಂತ್ರಿಸುತ್ತದೆ. ಮುಸ್ಲಿಮೇತರರು ಖಾಸಗಿಯಾಗಿ ಆಚರಿಸಲು ಅನುಮತಿಸಲಾಗಿದ್ದರೂ, ಮತ್ತೊಂದು ಧರ್ಮವನ್ನು ಪ್ರಚಾರ ಮಾಡುವಂತೆ ಕಂಡುಬರುವ ಯಾವುದೇ ಸಾರ್ವಜನಿಕ ಪ್ರದರ್ಶನವನ್ನು ಕಾನೂನು ನಿಷೇಧಿಸುತ್ತದೆ. ಹಾಗೆ ಸಾರ್ವಜನಿಕವಾಗಿ ಅಲಂಕಾರ ಮಾಡುವುದು, ಆಚರಣೆೆ ಮುಂದಾಗುವುದು ದಂಡಕ್ಕೆ ಕಾರಣವಾಗುತ್ತದೆ. ಹಾಗೆ ಇಸ್ಲಾಂ ಧರ್ಮ ರಕ್ಷಣೆಯ ಹೆಸರಲ್ಲಿ ಸಾರ್ವಜನಿಕವಾಗಿ ಕ್ರಿಸ್‌ಮಸ್ ಆಚರಣೆ ಹಾಗೂ ಜಾಹೀರಾತು ಮಾಡುವುದನ್ನು ನಿಷೇಧಿಸಲಾಗುತ್ತದೆ.
ಸೊಮಾಲಿಯಾ
ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಸೊಮಾಲಿಯಾದಲ್ಲಿ ಸರ್ಕಾರವು ಕ್ರಿಸ್‌ಮಸ್ ಅನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ನಿಷೇಧವು ಇಸ್ಲಾಮಿಕ್ ಸಂಪ್ರದಾಯಗಳನ್ನು ಎತ್ತಿಹಿಡಿಯುವುದು ಮತ್ತು ಬೇರೆ ಧರ್ಮದ ಪ್ರಚಾರ ತಡೆಯುವ ಉದ್ದೇಶದಿಂದ ಧಾರ್ಮಿಕ ಆಚರಣೆಯನ್ನು ನಿಷೇಧಿಸಿದೆ. ವಿದೇಶಿ ಧಾರ್ಮಿಕ ಆಚರಣೆಯನ್ನು ರಾಷ್ಟ್ರೀಯ ಮತ್ತು ಧಾರ್ಮಿಕ ಗುರುತಿಗೆ ಸವಾಲಾಗಿ ನೋಡಲಾಗುತ್ತದೆ.
ತಜಿಕಿಸ್ತಾನ್
ಇಸ್ಲಾಂ ಧಾರ್ಮಿಕ ಆಚರಣೆಯ ದೇಶವಾಗಿರುವ ತಜಿಕಿಸ್ತಾನ್ ವಿದೇಶಿ ಸಂಸ್ಕೃತಿ ಹಾಗೂ ಆಚರಣೆಯ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಬಹಿರಂಗ ಕ್ರಿಸ್‌ಮಸ್ ಆಚರಣೆಗಳನ್ನು ಪ್ರೋತ್ಸಾಹಿಸುವುದಿಲ್ಲ. ಸಾರ್ವಜನಿಕ ಅಲಂಕಾರ, ಆಚರಣೆಗೆ ತಡೆಯೊಡ್ಡಲಿದೆ. ಆದರೆ ಖಾಸಗಿಯಾಗಿ ಆಚರಣೆಗೆ ಯಾವುದೇ ಅಡ್ಡಿಗಳಿಲ್ಲ. ಹಾಗೆ ಸಾರ್ವಜನಿಕ ಸ್ಥಳದಲ್ಲಿ ಕ್ರಿಸ್‌ಮಸ್ ಸಂಬಂಧಿತ ವಿಚಾರಗಳು, ಅಲಂಕಾರಗಳು, ಧರ್ಮ ಪ್ರಚಾರ ಮಾಡುವುದನ್ನು ತಡೆಯುತ್ತದೆ. ಹಬ್ಬದ ಹೆಸರಿನಲ್ಲಿ ಪಾರ್ಟಿ ಆಯೋಜನೆ, ಗುಂಪು ಸೇರುವುದನ್ನು ಸಹ ವಿದೇಶಿ ನೆಲದ ಆಚರಣೆ ಎಂಬುದಾಗಿ ಪರಿಗಣಿಸಲಾಗುತ್ತದೆ.



Click it and Unblock the Notifications