Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ಹೊಸ ವರ್ಷದಂದು ವಿಚಿತ್ರ ಸಂಪ್ರದಾಯ ಆಚರಿಸುವ ದೇಶಗಳಿವು! ನಿಮಗೂ ಅಚ್ಚರಿ ಎನಿಸಬಹುದು.!
ಹೊಸ ವರ್ಷ ಆರಂಭಗೊಂಡಿದೆ. ವಿಶ್ವದೆಲ್ಲೆಡೆ ಅದ್ದೂರಿ ಆಚರಣೆಗಳ ಮೂಲಕ ಹೊಸ ವರ್ಷ ಬರಮಾಡಿಕೊಳ್ಳಲಾಗಿದೆ. ವಿಶ್ವದ ಬಹುತೇಕ ಎಲ್ಲಾ ಕಡೆಗಳಲ್ಲೂ ಜನವರಿ 1ಕ್ಕೆ ಹೊಸ ವರ್ಷವನ್ನು ಆಚರಿಸುತ್ತಾರೆ. ಹಾಗೆ ಕೆಲವೊಂದು ದೇಶಗಳು ಜನವರಿ 1ನ್ನು ಹೊಸ ವರ್ಷವಾಗಿ ಆಚರಿಸುವುದಿಲ್ಲ. ಹಿಂದೂಗಳ ಪಾಲಿಗೆ ಯುಗಾದಿ ಹೊಸ ವರ್ಷವನ್ನಾಗಿ ಆಚರಿಸುವ ಸಂಪ್ರದಾಯ ಕೂಡ ಇದೆ.
ಹಾಗೆ ಹೊಸ ವರ್ಷದ ಆಚರಣೆಯ ಜೊತೆಗೆ ಕೆಲವೊಂದು ಮೂಢನಂಬಿಕೆಗಳು ಸಹ ಶತಮಾನದಿಂದಲೂ ಆಚರಿಸಲ್ಪಡುತ್ತಿದೆ. ತಲೆಮಾರುಗಳಿಂದಲೂ ಕೆಲವೊಂದು ಮೂಢನಂಬಿಕೆಗಳನ್ನು ಜನರು ಆಚರಿಸಿಕೊಂಡು ಬರುತ್ತಿದ್ದಾರೆ. ಹಾಗೆ ಇದು ಹೊಸ ವರ್ಷದ ಆಚರಣೆಯ ಜೊತೆಗೆ ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ.

ಹಾಗಾದ್ರೆ ನಾವಿಂದು ವಿಶ್ವದ ಕೆಲವು ರಾಷ್ಟ್ರದಲ್ಲಿ ಹೊಸ ವರ್ಷದ ದಿನ ಜನರು ಆಚರಿಸುವ ಕೆಲವು ವಿಚಿತ್ರ ಮೂಢನಂಬಿಕೆಗಳ ಕುರಿತು ನಾವಿಂದು ತಿಳಿದುಕೊಳ್ಳೋಣ. ಕೆಲವೊಂದು ಆಚರಣೆಗಳು ನಿಮಗೂ ಅಚ್ಚರಿ ಎನಿಸಬಹುದು. ಹಾಗಾದ್ರೆ ಅಂತಹ ವಿಚಿತ್ರ ಆಚರಣೆಗಳ ಕುರಿತು ನಾವಿಂದು ತಿಳಿದುಕೊಳ್ಳೋಣ.
12 ದ್ರಾಕ್ಷಿ ತಿನ್ನುವ ಸಂಪ್ರದಾಯ
ಹೊಸ ವರ್ಷಾಚರಣೆಯ ದಿನದಂದು ಸ್ಪೈನ್‌ನಲ್ಲಿ ಈ ವಿಚಿತ್ರ ಆಚರಣೆ ನಡೆದುಕೊಂಡು ಬರುತ್ತದೆ. ಸರಿಯಾಗಿ 12 ಗಂಟೆಗೆ ಜನರು ಟೇಬಲ್ ಕೆಳಗೆ ಕುಳಿತು 12 ದ್ರಾಕ್ಷಿಗಳನ್ನು ಸವಿಯುತ್ತಾರೆ. 'ಲಾಸ್ ಡೋಸ್ ಉವಾಸ್ ಡೆ ಲಾ ಸೂರ್ಟೆ' ಎಂದು ಕರೆಯಲ್ಪಡುವ ಈ ಸಂಪ್ರದಾಯವು ಮುಂಬರುವ ವರ್ಷದ ಪ್ರತಿ ತಿಂಗಳು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಇದನ್ನು ಶತಮಾನಗಳಿಂದ ಆಚರಿಸಿಕೊಂಡು ಬರಲಾಗಿದೆ. ಹಾಗೆ ಹೊಸ ವರ್ಷದಲ್ಲಿ ಇದು ಖಾಯಂ ಎನ್ನುವಂತೆ ಜನರು ಕೂಡ ಆಚರಿಸುತ್ತಾರೆ.
ಮೊದಲ ಹೆಜ್ಜೆ ನಡಿಗೆ
ಹೊಸ ವರ್ಷದಂದು ಮನೆಯೊಳಗೆ ಯಾರು ಮೊದಲ ಹೆಜ್ಜೆ ಇಡಬೇಕು ಎಂಬ ಆಚರಣೆ ಸ್ಕಾಟ್ಲೆಂಡ್‌ನಲ್ಲಿದೆ. ಅಲ್ಲಿ ಸರಿಯಾಗಿ 12 ಗಂಟೆಗೆ ಮನೆಯನ್ನು ಸುಂದರವಾಗಿ ಡೆಕೋರೇಟ್ ಮಾಡಲಾಗುತ್ತದೆ. ಹಾಗೆ ಯಾರು ಈ ವರ್ಷ ಮನೆಗೆ ಅದೃಷ್ಟ ತರುತ್ತಾರೋ ಅವರು ಮನೆಯೊಳಗೆ ಮೊದಲ ಹೆಜ್ಜೆ ಇಡಬೇಕು ಎಂಬ ಸಂಪ್ರದಾಯ ಅವರದ್ದು. ಹಾಗೆ ಆ ದಿನ ಮನೆಯಲ್ಲಿ ಕೇಕ್, ಬ್ರೆಡ್, ವೈನ್, ವಿಸ್ಕಿ ಸವಿಯುತ್ತಾರೆ. ಇದರಿಂದ ಮನೆಯಲ್ಲಿ ಸಂಪತ್ತಿನ ಕೊರತೆ ಬರುವುದಿಲ್ಲ ಎಂಬುದು ಅವರ ನಂಬಿಕೆಯಾಗಿದೆ.
ಬಾಗಿಲಿಗೆ ಈರುಳ್ಳಿ ನೇತು ಹಾಕುವುದು
ಹಿಂದೂ ಸಂಪ್ರದಾಯದಲ್ಲಿ ನಿಂಬೆ ಹಣ್ಣನ್ನು ಬಾಗಿಲಿಗೆ ನೇತುಹಾಕುವಂತೆ ಗ್ರೀಸ್‌ನಲ್ಲಿ ಈರುಳ್ಳಿಯನ್ನು ಬಾಗಿಲಿಗೆ ನೇತು ಹಾಕುತ್ತಾರೆ. ಈರುಳ್ಳಿಗಳು ಎಷ್ಟೇ ಕಠಿಣ ಪರಿಸ್ಥಿತಿಯಲ್ಲೂ ಮೊಳಕೆ ಬರುತ್ತವೆ. ಇದು ಕಷ್ಟವನ್ನು ಎದುರಿಸುವ ಸಂಕೇತವಂತೆ. ಹೀಗಾಗಿ ಈರುಳ್ಳಿಯನ್ನು ವರ್ಷದ ಮೊದಲ ದಿನ ಬಾಗಿಲಿಗೆ ನೇತು ಹಾಕುತ್ತಾರೆ.
ಅದೃಷ್ಟ ಗುಡಿಸಬೇಡಿ
ಹೊಸ ವರ್ಷದ ಹಿಂದಿನ ದಿನ ಮನೆಯನ್ನು ಸ್ವಚ್ಛ ಮಾಡಿ ಗುಡಿಸಿ ತೊಳೆದು ಹೊಳೆಯುವಂತೆ ಮಾಡುತ್ತಾರೆ. ಮನೆಯಲ್ಲಿ ಯಾವುದೇ ಕಸಗಳು ಇರದಂತೆ ಎಲ್ಲವನ್ನು ಮನೆಯಿಂದ ಹೊರಹಾಕುತ್ತಾರೆ. ಆದ್ರೆ ಚೀನಾದಲ್ಲಿ ಹೊಸ ವರ್ಷ ಆಚರಿಸಿಕೊಂಡ ಸುಮಾರು 4ರಿಂದ 5 ದಿನಗಳ ಕಾಲ ಮನೆಯನ್ನು ಗುಡಿಸುವುದು, ತೊಳೆಯವುದು ಮಾಡುವುದಿಲ್ಲ. ಹೀಗೆ ಮಾಡಿದರೆ ಮನೆಯಿಂದ ಅದೃಷ್ಡ ಹೊರಹೋಗುತ್ತದೆ ಎಂದು ಅವರು ನಂಬುತ್ತಾರೆ.
108 ಬಾರಿ ಗಂಟೆ ಬಾರಿಸುವುದು
ಜಪಾನ್‌ನಲ್ಲಿ ಬೌದ್ಧ ದೇವಾಲಯಗಳು ಮಧ್ಯರಾತ್ರಿಯಲ್ಲಿ ಬೃಹತ್ ಗಂಟೆಯನ್ನು 108 ಬಾರಿ ಬಾರಿಸುವ ಸಂಪ್ರದಾಯವಿದೆ. ಈ ಸಂಪ್ರದಾಯವನ್ನು ಅವರು ಜೋಯಾ ನೋ ಕೇನ್ ಎಂದು ಕರೆಯುತ್ತಾರೆ. ಈ ಗಂಟೆಯ ಶಬ್ದದಿಂದ ಹೊರಹೊಮ್ಮುವ ಕಂಪನವು ವ್ಯಕ್ತಿಯ ದುಃಖ, ಕಷ್ಟಗಳನ್ನು ನಿವಾರಿಸಲಿದೆ ಎಂಬುದು ಅವರ ನಂಬಿಕೆಯಾಗಿದೆ.



Click it and Unblock the Notifications