ವೈರಲ್ ವೀಡಿಯೋ: ಲಿಫ್ಟೇ ಆಗ್ಬೇಕು ಈ ಬೆಕ್ಕಿಗೆ, ಯಾವ ಫ್ಲೋರ್‌ಗೆ ಹೋಗ್ಬೇಕು ಎಂಬ ಸಿಗ್ನಲ್‌ ಕೂಡ ನೀಡುತ್ತೆ!

ಈ ಬೆಕ್ಕು ಸಾಮಾನ್ಯ ಬೆಕ್ಕಲ್ಲ, ವೈರಲ್ ಬೆಕ್ಕು, ಇದರ ವೀಡಿಯೋವನ್ನು 100.2K ವ್ಯೂವ್ಸ್ ಬಂದಿದೆ, ಇದರ ವಿಡಿಯೋ ಟ್ವಿಟರ್‌ನಲ್ಲಿ ತುಂಬಾನೇ ವೈರಲ್‌ ಆಗಿದೆ. ಈ ಬೆಕ್ಕಿಗೆ ಸ್ಟೆಪ್‌ ಅಂದರೆ ಭಾರೀ ಅಲರ್ಜಿ, ಒಂದು ಸ್ಟೆಪ್‌ ಕೂಡ ಹತ್ತಲ್ಲ, ಅದು ಬಿಲ್ಡಿಂಗ್‌ನಲ್ಲಿ ಯಾವ ಫ್ಲೋರ್‌ಗೂ ಹೋಗಬೇಕೆಂದರೂ ಲಿಫ್ಟೇ ಆಗ್ಬೇಕು. ಈ ಬೆಕ್ಕು ತನ್ನ ಭಾಷೆಯಲ್ಲಿ ಏನು ಹೇಳುತ್ತದೆ ಎಂಬುವುದನ್ನು ಆ ಪ್ಲ್ಯಾಟ್‌ನಲ್ಲಿರುವ ಪ್ರತಿಯೊಬ್ಬರಿಗೂ ಅರ್ಥವಾಗುತ್ತೆ, ಅಷ್ಟರಮಟ್ಟಿಗೆ ಈ ಬೆಕ್ಕು ಅಲ್ಲಿನವರ ಮನ ಗೆದ್ದಿದೆ.

Cat Using Only Lift

ಅದನ್ನು ಸಾಕುತ್ತಿರುವ ಮನೀಶ್ ಹರಿಪ್ರಸಾದ್‌ ಎಂಬುವವರು ಬೆಕ್ಕಿನ ವೀಡಿಯೋ ಟ್ವಿಟರ್‌ನಲ್ಲಿ ಹಾಕಿ ' ನಮ್ಮ ಜಿಂಜರ್ ಇದು, ಅವನು ನಮ್ಮ ಮನೆಗೆ ಬರುವಾಗ ವಯಸ್ಸಾಗಿತ್ತು, ಸರಿಯಾಗಿ ಕಣ್ಣು ಕೂಡ ಕಾಣ್ತಾ ಇರಲಿಲ್ಲ, ಆದರೆ ಇಡೀ ಬಿಲ್ಡಿಂಗ್‌ನವರ ಪ್ರೀತಿಯನ್ನು ಪಡೆದಿದ್ದಾನೆ, ನಮ್ಮ ಮನೆಯಲ್ಲಿ ಅಷ್ಟೇ ಎಲ್ಲ, ಎಲ್ಲರ ಮನೆಯ ಅಚ್ಚುಮೆಚ್ಚಿನ ಬೆಕ್ಕು ಆಗಿದ್ದಾನೆ.

ಅವನಿಗೆ ಸ್ಟೆಪ್ಸ್‌ ಅಂದರೆ ಅಲರ್ಜಿ ಅದರಲ್ಲಿ ಹೋಗುವುದೇ ಇಲ್ಲ, ಯಾವುದಾದರೂ ಫ್ಲೋರ್‌ಗೆ ಹೋಗಬೇಕೆಂದು ಎಂದು ಅನಿಸಿದರೆ ಲಿಫ್ಟ್‌ ಬಳಿ ಮಿಯಾಂವ್‌ ಅಂತ ಯಾರನ್ನು ಕಾಣುತ್ತಾ ಅವರ ಕಾಲು ಬಳಿ ಸುತ್ತುತ್ತದೆ. ಲಿಫ್ಟ್‌ ಒಳಗಡೆ ಬಂದ ಮೇಲೆ ಮಿಯಾಂವ್ ಅಂತ ಕೂಗಿದರೆ ಅದು ಮೂರನೇ ಫ್ಲೋರ್ ಎಂದು ಹೇಳುತ್ತದೆ ಎಂದರ್ಥ, ಇಲ್ಲ ಸುಮ್ಮನಿದೆ ಎಂದರೆ ಯಾವ ಫ್ಲೋರ್ ಆದರೂ ಒಕೆ ಒಂದು ಹೋಗಿ ಒಂದು ರೌಂಡ್ ಹಾಕಿ ಬರುತ್ತೇನೆ ಎಂಬ ಧೋರಣೆ ಅದರದ್ದು.

ಈ ಬೆಕ್ಕು ಬರೀ ಆ ಬಿಲ್ಡಿಂಗ್‌ನವರ ಮಾತ್ರವಲ್ಲ ಸೋಷಿಯಲ್‌ ಮೀಡಿಯಾದವರ ಮನ ಕೂಡ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ನಿಮ್ಮ ಮನೆಯಲ್ಲೂ ಬೆಕ್ಕು ಇದ್ದರೆ ಅದರ ಬಗ್ಗೆ ಹೇಳಲು ಒಂದಿಷ್ಟು ಕತೆಗಳಿರುತ್ತೆ ಅಲ್ವಾ, ನಿಮ್ಮ ಬೆಕ್ಕಿನ ಸುಂದರ ಕತೆಯನ್ನು ಕಮೆಂಟ್‌ ಮೂಲಕ ನಮಗೆ ತಿಳಿಸಿ.

English summary

Cat Using Only Lift Video Goes Viral

Cat Using Only Lift, this sweet video goes on viral read on....
X
Desktop Bottom Promotion