Latest Updates
-
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ!
ಶನಿ ದೇವರಿಗೆ ಪ್ರದಕ್ಷಿಣೆ ಹಾಕುತ್ತಿದೆ ಬೆಕ್ಕು..! ನೀವು ನೋಡಿದ್ರೆ ಅಚ್ಚರಿ ಪಡುತ್ತೀರಾ..!
ಜಗತ್ತಲ್ಲಿ ನಡೆಯುವ ಕೆಲವೊಂದು ವಿಚಿತ್ರ ಘಟನೆಗಳು ನಾವು ನಂಬಲು ಅಸಾಧ್ಯವಾಗಿರುತ್ತವೆ. ಇನ್ನೊಮ್ಮೆ ಇವು ಪ್ರಶ್ನೆಗಳು ಹುಟ್ಟುಹಾಕುತ್ತವೆ. ಕೆಲವೊಮ್ಮೆ ನಂಬಿಕೆಗಳ ಮೇಲಿನ ನಮ್ಮ ಮನೋಭಾವವನ್ನೇ ಬದಲಾಯಿಸಿ ಬಿಡುತ್ತವೆ. ಇದೇ ರೀತಿಯ ಘಟನೆಯೊಂದು ಇಲ್ಲಿ ನಡೆದಿದೆ.
ಭಕ್ತಿಯ ಜೊತೆ ಮೂಢ ನಂಬಿಕೆಯನ್ನು ಬದಿಗಿರಿಸುವುದು ಕಷ್ಟದ ಕೆಲಸ ಏಕೆಂದರೆ ಕೆಲವೊಂದು ಬಾರಿ ಭಕ್ತಿಯ ಪರಮಾವಸ್ಥೆ ಸಹ ಮೂಢನಂಬಿಕೆ ಎನಿಸಬಹುದು. ಇಲ್ಲವೆ ಅದು ಮೂಢನಂಬಿಕೆಗೆ ದಾರಿಯಾಗಬಹುದು. ಇಲ್ಲೊಂದು ಘಟನೆಯಲ್ಲಿ ಇದೆಲ್ಲವನ್ನೂ ಮೀರಿಸುವ ಒಂದಿ ನಿದರ್ಶನ ನಡೆದಿದೆ.

ಅದೇನೆಂದರೆ ಬೆಕ್ಕೊಂದು ಶನಿ ದೇವರ ಗುಡಿಯಲ್ಲಿ ಪ್ರದಕ್ಷಿಣೆ ಹಾಕುತ್ತಿದೆ. ಹೌದು ಬೆಕ್ಕುಗಳು ಸಾಮಾನ್ಯವಾಗಿ ಮನೆ ಬಿಟ್ಟು ಹೋಗುವುದಿಲ್ಲ. ಆದರೆ ಇಲ್ಲೊಂದು ಬೆಕ್ಕು ಶನಿ ದೇವರ ದೇವಸ್ಥಾನಕ್ಕೆ ಬಂದು ಅಲ್ಲಿರುವ ದೇವರು ಪ್ರದಕ್ಷಿಣೆ ಹಾಕುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಹಿಂದೆಯು ಸಹ ಪ್ರಾಣಿ ಪಕ್ಷಿಗಳು ದೇವರಿಗೆ ನಮಿಸುವ, ದೇವರ ಪೂಜಾ ವಿಧಾನದ ಸಮಯದಲ್ಲಿ ಭಾಗಿಯಾಗುವ ಘಟನೆಗಳ ನಾವು ನೋಡಿದ್ದೇವೆ. ಅದೇ ರೀತಿ ಬೆಕ್ಕು ಸಹ ಶನಿ ದೇವರಿಗೆ ಮೂರು ಸುತ್ತು ಬರುತ್ತಿರುವ ವಿಡಿಯೋ ಇದಾಗಿದೆ. ಮಹಾರಾಷ್ಟ್ರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಇನ್ನು ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಬೆಕ್ಕು ತನ್ನಷ್ಟಕ್ಕೆ ತಾನು ದೇವರಿಗೆ ಪ್ರದಕ್ಷಿಣೆ ಹಾಕುತ್ತಿರುವುದನ್ನು ನೋಡಬಹುದು. ಅಲ್ಲಿ ಯಾರು ಸಹ ಅದಕ್ಕೆ ಸಹಾಯ ಮಾಡುತ್ತಿಲ್ಲ, ಅಲ್ಲದೆ ಸುತ್ತು ಹೊಡೆಯಲು ಯಾರು ಹೇಳಿಕೊಡುತ್ತಿಲ್ಲ. ಆ ಬೆಕ್ಕು ತಾನಾಗಿಯೇ ಪ್ರದಕ್ಷಿಣೆ ಹಾಕುತ್ತಿದೆ. ಇದು ನೆಟ್ಟಿಗರಲ್ಲಿ ಅಚ್ಚರಿಗೆ ಕಾರಣವಾಗಿದೆ.
ಈ ವೈರಲ್ ವೀಡಿಯೋದಲ್ಲಿ ಬೆಕ್ಕನ್ನು ಬಿಟ್ಟು ಬೇರೆ ಯಾರೂ ಕಾಣಿಸುತ್ತಿಲ್ಲ. ಇಂದಿನವರೆಗೂ ಎಷ್ಟೋ ಜನರ ಬಾಯಲ್ಲಿ, ಪುಸ್ತಕಗಳಲ್ಲಿ, ಪುರಾಣಗಳಲ್ಲಿ ದೇವರನ್ನು ಹೇಗೆ ಪೂಜಿಸುತ್ತೇವೆ? ಇದರ ಅನೇಕ ಕಥೆಗಳನ್ನು ಕೇಳಿದ್ದೇವೆ ಮತ್ತು ಓದಿದ್ದೇವೆ. ಆದರೆ, ಈ ವೈರಲ್ ವಿಡಿಯೋದಲ್ಲಿ ಬೆಕ್ಕಿನ ದೇವರ ಭಕ್ತಿಯನ್ನು ನೋಡಿದರೆ ಒಂದು ಕ್ಷಣ ಮೂಕವಿಸ್ಮಿತರಾಗುತ್ತಾರೆ.
ಹಲವರ ಪ್ರಕಾರ ಈ ಬೆಕ್ಕು ಹಿಂದಿನ ಜನ್ಮದಲ್ಲಿ ಶನಿ ಆರಾಧಕನಾಗಿರಬಹುದು. ಇಲ್ಲವೆ ಈ ದೇವಾಲಯಕ್ಕೆ ಬಂದು ಶನಿ ದೇವರ ಪೂಜೆ ಮಾಡುತ್ತಿದ್ದ ಎಂದು ಕಾಣಿಸುತ್ತದೆ ಹೀಗಾಗಿ ಬೆಕ್ಕಿನ ಜನ್ಮದಲ್ಲಿರುವ ಭಕ್ತ ಪ್ರದಕ್ಷಿಣೆ ಹಾಕುತ್ತಿದ್ದಾನೆ ಎಂದು ವಾದಿಸುತ್ತಿದ್ದಾರೆ. ಅಲ್ಲದೆ ವಿಡಿಯೋ ಮಾಡುತ್ತಿರುವ ವ್ಯಕ್ತಿ ಈ ಬೆಕ್ಕು ಎಲ್ಲಾ ದೇವಾಲಯಗಳಲ್ಲೂ ಕಾಣಿಸುತ್ತಿದೆ. ಇಲ್ಲಿ ಪಕ್ಕದ ಹನುಮಂತ, ಮಹಾದೇವ ದೇವಾಲಯದಲ್ಲೂ ಈ ಬೆಕ್ಕು ಪ್ರದಕ್ಷಿಣೆ ಹಾಕುತ್ತಿತ್ತು ಎಂದು ಹೇಳುತ್ತಿರುವುದು ಕೇಳಿಸುತ್ತಿದೆ.
ಈ ವಿಚಿತ್ರ ಘಟನೆ ಕಂಡ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಹಾಗಾದ್ರೆ ಆ ಬೆಕ್ಕು ದೇವಾಲಯಗಳಿಗೆ ಏಕೆ ಹೋಗುತ್ತಿದೆ. ಎಲ್ಲಾ ಕಡೆಗಳಲ್ಲಿ ದೇವರಿಗೆ ಏಕೆ ಪ್ರದಕ್ಷಿಣೆ ಹಾಕುತ್ತಿದೆ ಎಂಬ ಪ್ರಶ್ನೆಗಳು ಎಲ್ಲರ ಬಾಯಲ್ಲಿ ಹರಿದಾಡುತ್ತಿದೆ. ಸದ್ಯ ಈ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣಗಲ್ಲೂ ವೈರಲ್ ಆಗಿದೆ.
ಕಳೆದ ಜನವರಿಯಲ್ಲಿ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯಾದ ಬಳಿಕ ಆ ದೇವಾಲಯಕ್ಕೆ ಕೋತಿಗಳು ಎಂಟ್ರಿ ಕೊಟ್ಟಿದ್ದ ಸುದ್ದಿಯಾಗಿತ್ತು. ಸಾಕ್ಷಾತ್ ಹನುಮಂತನೇ ಮಂದಿರಕ್ಕೆ ಆಗಮಿಸಿದ್ದಾನೆ ಎಂದು ದೇವಾಲಯದ ಟ್ರಸ್ಟ್ ಸಂತಸ ಹಂಚಿಕೊಂಡಿದ್ದ ಪ್ರಸಂಗ ನಡೆದಿತ್ತು. ಇದಾದ ಬಳಿಕ ಅದೇ ಗರ್ಭಗುಡಿಯೊಳಗೆ ಗರುಡ ಪಕ್ಷಿಯೊಂದು ಬಂದು ಇಡೀ ದಿನ ತಂಗಿದ್ದ ಘಟನೆಯೂ ನಡೆದು ಎಲ್ಲರ ಗಮನ ತನ್ನತ್ತ ಸೆಳೆದಿತ್ತು. ಇದಿಷ್ಟೇ ಅಲ್ಲ ದೇಶದ ಹಲವು ಭಾಗದಲ್ಲಿ ಪ್ರಾಣಿಗಳು ಹಾಗೂ ದೇವಾಲಯದ ಕುರಿತಾದ ಹಲವು ಘಟನೆಗಳು ನಡೆದಿರುವ ಉದಾಹರಣೆ ನಮ್ಮ ಮುಂದಿವೆ.



Click it and Unblock the Notifications