Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಮಾಲೀಕನ ₹11 ಲಕ್ಷ ನಷ್ಟಕ್ಕೆ ಕಾರಣವಾಯ್ತು ಬೆಕ್ಕಿನ ಒಂದೇ ಒಂದು ಕೆಲಸ..!
ಸಾಕು ಪ್ರಾಣಿಗಳಲ್ಲಿ ಬೆಕ್ಕುಗಳು ಮನೆಯೊಳಗೆ ಸಾಕುವ ಪ್ರಾಣಿಗಳು, ಮನೆಯಲ್ಲಿ ಬೆಕ್ಕು ಇದ್ದರೆ ಹಲ್ಲಿ, ಇಲಿ, ಹಾವು ಬರುವುದಿಲ್ಲ ಎಂದು ಎಲ್ಲರು ಸಾಕುತ್ತಾರೆ. ಆದರೆ ಅವು ಕದ್ದು ಮುಚ್ಚಿ ಆಹಾರ ತಿನ್ನುವುದು, ಹಾಲು ಕುಡಿಯುವುದು ಮಾಡಿ ಸಿಕ್ಕಬೀಳುತ್ತವೆ.
ಬೆಕ್ಕುಗಳ ಸಾಕುವವರು ಎಷ್ಟು ಜಾಗೃತೆ ವಹಿಸುತ್ತಾರೆ ಅಂದ್ರೆ ಅವು ಮನೆಯಲ್ಲಿದ್ದರೆ ಅದರ ಮೇಲೆ ಒಂದು ಕಣ್ಣಿಡಬೇಕಾಗುತ್ತೆ. ಯಾವಾಗ ಏನು ಬೀಳಿಸುತ್ತವೆ, ಏನು ತಿನ್ನುತ್ತವೆ ಎಂಬುದೇ ತಿಳಿಯೋದಿಲ್ಲ. ಆದರೂ ಬೆಕ್ಕುಗಳೆಂದರೆ ಮಕ್ಕಳಿಂದ ಹಿಡಿದು ಹಿರಿಯರಿಗೂ ಅಚ್ಚುಮೆಚ್ಚು. ಇತ್ತೀಚಿಗೆ ವಿದೇಶಿ ಬೆಕ್ಕುಗಳು, ಹೊರ ರೀತಿ ಜಾತಿಯ ಬೆಕ್ಕುಗಳ ಸಾಕುವ ಟ್ರೆಂಡ್ ಹುಟ್ಟಿಕೊಂಡಿದೆ.

ಅದರಲ್ಲು ಬೆಕ್ಕುಗಳಿಗೆ ಸಾವಿರದಿಂದ ಹಿಡಿದು ಲಕ್ಷ ಲಕ್ಷ ರೂಪಾಯಿ ನೀಡಿ ಬೆಕ್ಕುಗಳ ಖರೀದಿಸಿ ತಮದು ಸಾಕುತ್ತಾರೆ. ಅವುಗಳ ಸಾಕಲು ಮತ್ತಷ್ಟು ಖರ್ಚು ಮಾಡುತ್ತಾರೆ. ಈಗ ಅವುಗಳಿಗೆಂದೆ ಆಹಾರಗಳು, ಮೆಡಿಸಿನ್‌ಗಳು ಸಹ ಸಿಗುತ್ತವೆ. ಆದ್ರೆ ಇಲ್ಲೊಂದು ಬೆಕ್ಕು ಮನೆಯಲ್ಲಿ ಯಡವಟ್ಟು ಮಾಡಿ ಮಾಲೀಕರಿಗೆ ತಲೆ ನೋಡುವ ತಂದಿದೆ.
ಹೌದು ಮನೆಯಲ್ಲಿ ಯಾರು ಇಲ್ಲದ ವೇಳೆ ಬೆಕ್ಕೊಂದು ಮಾಡಿದ ಯಡವಟ್ಟಿಗೆ ಮಾಲೀಕನಿಗೆ ಬರೋಬ್ಬರಿ 11 ಲಕ್ಷ ರೂಪಾಯಿ ನಷ್ಟವಾಗಿದೆ. ಹೌದು ಬೆಕ್ಕು ಮಾಡಿದ್ದ ಒಂದೇ ಒಂದು ಕೆಲಸಕ್ಕೆ ಮಾಲೀಕ 11 ಲಕ್ಷ ರೂಪಾಯಿ ನಷ್ಟ ಅನುಭವಿಸಿದ ಕಥೆ ಇದು.
ಫ್ಲಾಟ್‌ನಲ್ಲಿ ಯಾರು ಇಲ್ಲದಾಗ ಬೆಕ್ಕೊಂದು ಆಕಸ್ಮಿಕವಾಗಿ ಸ್ಟೌವ್ ಆನ್ ಮಾಡಿದ ಪರಿಣಾಮ ಇಡಿ ಮನೆ ಸುಟ್ಟುಹೋಗಿದೆ. ನೈಋತ್ಯ ಚೀನಾದಲ್ಲಿ ಬೆಕ್ಕೊಂದು ಆಕಸ್ಮಿಕವಾಗಿ ಬೆಂಕಿ ಹೊತ್ತಿಸಿದ ಕಾರಣ ಬರೋಬ್ಬರಿ ಅಂದಾಜು 11 ಲಕ್ಷ ರೂ. ಮೌಲ್ಯದ ನಷ್ಟವಾಗಿದೆ. ಏಪ್ರಿಲ್ 4 ರಂದು ಸಿಚುವಾನ್ ಮನೆಯ ಮಾಲೀಕ ದಂಡನ್ ಮಹ್ಜಾಂಗ್ ಮನೆಯಲ್ಲಿ ಇಲ್ಲದಾಗ ಜಿಂಗೌಡಿಯಾವೊ ಎಂಬ ಬೆಕ್ಕು ಮನೆಯಲ್ಲಿ ಒಂದೇ ಇತ್ತು. ಈ ವೇಳೆ ಆಕಸ್ಮಿಕವಾಗಿ ಇಂಡಕ್ಷನ್ ಕುಕ್ಕರ್ ಅನ್ನು ಆನ್ ಮಾಡಿತ್ತು.
ಆದರೆ ಆತನ ಮನೆಗೆ ಬೆಂಕಿ ಬಿದ್ದ ಘಟನೆಯು ಆತನಿಗೆ ಅಗ್ನಿ ಶಾಮಕ ದಳದಿಂದ ಬಂದ ಕರೆಯ ಬಳಿಕ ತಿಳಿದುಬಂದಿದೆ. ಆದರೆ ಆರಂಭದಲ್ಲಿ ಅಗ್ನಿ ಅನಾಹುತಕ್ಕೆ ಕಾರಣ ಏನೆಂಬುದು ತಿಳಿದುಬಂದಿರಲಿಲ್ಲ. ಆತನಿಗೆ ಅಗ್ನಿಶಾಮಕ ದಳ ಕರೆ ಮಾಡಿ ಮನೆಗೆ ಬೆಂಕಿ ಬಿದ್ದ ವಿಚಾರ ತಿಳಿಸಿದ್ದಾರೆ. ಆದರೆ ಬೆಂಕಿ ಆರಿಸುವಾಗ ಆತನ ಮನೆ ಬಹುತೇಕ ಸುಟ್ಟುಹೋಗಿದೆ.
ಹೀಗಾಗಿ ಮನೆಯಲ್ಲಿದ್ದ ಗೃಹೊಪಯೋಗಿ ವಸ್ತುಗಳು, ಪೀಠೋಪಕರಣಗಳು, ಸುಟ್ಟು ಹೋಗಿವೆ. ಅಚ್ಚರಿ ಎಂಬಂತೆ ಬೆಕ್ಕು ಈ ಅಗ್ನಿ ಅವಘಡದಿಂದ ಪಾರಾಗಿದೆ.
ಮೊದಲ ಮಹಡಿಯಲ್ಲಿ ಅಡಗಿ ಕುಳಿತಿತ್ತು ಬೆಕ್ಕು
ಮನೆಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಬೆಕ್ಕು ಮೊದಲ ಮಹಡಿಗೆ ಓಡಿದೆ. ಅಲ್ಲಿದ್ದ ಸುರಕ್ಷಿತ ಜಾಗ ಹುಡುಕಿ ಅಲ್ಲಿಯೇ ಕುಳಿತಿದೆ. ಅಗ್ನಿ ಶಾಮಕ ಸಿಬ್ಬಂದಿ ಮನೆಯ ಸಂಪೂರ್ಣ ಹುಡುಕುತ್ತಿದ್ದಾಗ ಬೆಕ್ಕು ಮೊದಲ ಮಹಡಿಯಲ್ಲಿರುವುದು ಕಂಡುಬಂದಿದೆ. ಮನೆಯಲ್ಲಿ ಯಾರು ಇಲ್ಲದಿದ್ದರೂ ಬೆಂಕಿ ತಗುಲಿದ್ದು ಹೇಗೆ ಎಂಬುದನ್ನು ಪತ್ತೆ ಮಾಡಲು ಹೊರಟಾಗ ಇದಕ್ಕೆ ಬೆಕ್ಕು ಕಾರಣವಾಗಿರುವುದು ದೃಢಪಟ್ಟಿದೆ.
ಹೀಗಾಗಿ ಸಾಕು ಪ್ರಾಣಿಗಳು ಅಡುಗೆ ಮನೆಗೆ ಬಿಡುವ ಮುನ್ನ ಎಚ್ಚರಿಕೆ ವಹಿಸುವುದು ಉತ್ತಮ ಎಂದು ಸಲಹೆ ನೀಡಲಾಗಿದೆ. ಜೊತೆಗೆ ಆತ ಅಕ್ಕಪಕ್ಕದ ಮನೆಯವರಿಗೆ ಕ್ಷಮೆಯಾಚಿಸಿದ್ದಾನೆ. ಜೊತೆಗೆ ಇನ್ನು ಮುಂದೆ ಹೀಗಾಗುವುದಿಲ್ಲ ಎಂದಿದ್ದಾನೆ. ಆದರೆ ಒಂದು ಬೆಕ್ಕು ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗುತ್ತೆ ಅಂತ ಯಾರು ಸಹ ಊಹಿಸಿರಲಿಲ್ಲ. ಸದ್ಯ ನಿಮ್ಮ ಮನೆಯಲ್ಲೂ ಬೆಕ್ಕು ಇದ್ದರೆ ನೀವು ಸಹ ಎಚ್ಚರಿಕೆ ವಹಿಸಿ.



Click it and Unblock the Notifications
