Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮೋರಿಯಲ್ಲಿ ತೇಲಿ ಬಂತು ಬಂಡಲ್ ಬಂಡಲ್ ನೋಟು: ಸಿಕ್ಕವರಿಗೆ ಹಬ್ಬವೋ ಹಬ್ಬ..!!
ನೀವು ಗಾಳಿಯಲ್ಲಿ ಹಣ ಎಸೆದು ವಿಡಿಯೋ ಮಾಡಿದ್ದ ಘಟನೆಗಳ ನೋಡಿರುತ್ತೀರಿ, ಹೈದರಾಬಾದ್‌ನಲ್ಲಿ ಇಂತಹದೊಂದು ಘಟನೆ ಇತ್ತಿಚಿಗೆ ನಡೆದಿತ್ತು. ಅಲ್ಲಿ ಬಿದ್ದ ನೋಟು ಎತ್ತಿಕೊಳ್ಳಲು ಜನ ಮುಗಿಬಿದ್ದಿದ್ದರು, ಆದ್ರೆ ಇಲ್ಲೊಂದು ಕಡೆ ಜನರು ಮೋರಿಯ ಅಡಿಯಲ್ಲಿ ನೋಟುಗಳಿಗಾಗಿ ಹುಡುಕಾಡುತ್ತಿದ್ದಾರೆ. ಅಲ್ಲಿ ಕೈ ಹಾಕಿದಷ್ಟು ನೋಟುಗಳು ಸಿಗುತ್ತಿತ್ತು, ಸಿಕ್ಕಿದವರಿಗೆ ಸೀರುಂಡೆ ಎಂದು ಕೈ ಸಿಕ್ಕಷ್ಟು ನೋಟುಗಳ ಎತ್ತಿಕೊಂಡು ಓಡುತ್ತಿರುವುದು ವರದಿಯಾಗಿದೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಈ ರೀತಿಯ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಅಲ್ಲಿ ಮೋರಿಯಲ್ಲಿ ಜನರು ಮುಗಿಬಿದ್ದು ನೋಟನ್ನು ಎತ್ತಿಕೊಂಡು ಎಣಿಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಸಾಂಗ್ಲಿಯ ಅಟ್ಟಾಡಿ ಎಂಬಲ್ಲಿ ಈ ರೀತಿಯ ವಿಚಿತ್ರ ಘಟನೆ ನಡೆದಿದೆ. ಅಲ್ಲಿ 500 ರೂಪಾಯಿ ನೋಟುಗಳು ಹಾಗು 200 ಸೇರಿ ಎಲ್ಲಾ ಮೌಲ್ಯದ ನೋಟುಗಳು ಪತ್ತೆಯಾಗಿವೆ.

ಈ ಚರಂಡಿ ನೀರಿನಲ್ಲಿ ಇಳಿದು ಜನರು ಕೈಗೆ ಸಿಕ್ಕ ನೋಟುಗಳನ್ನು ಎತ್ತಿಕೊಳ್ಳುತ್ತಿದ್ದಾರೆ. ಆದ್ರೆ ಈ ನೋಟುಗಳು ಸಿಗುತ್ತಿರುವ ವಿಷಯ ತಿಳಿದ ಮಂದಿ ಓಡೋಡಿ ಬಂದಿದ್ದಾರೆ. ಹಾಗೆ ಹಿಂದು ಮುಂದು ನೋಡದೆ ಮೋರಿಗೆ ಧುಮುಕಿದ್ದಾರೆ. ಹಾಗೆ ಅಲ್ಲಿಂದ ಹೊರಬಂದವರ ಕೈಲಿ ನೋಟುಗಳ ಕಂಡು ಮತ್ತಷ್ಟು ಮಂದಿ ಚರಂಡಿ ಇಳಿದು ನೋಟು ಹುಡುಕಾಡಿದ್ದಾರೆ.
ಹೊಳೆ ಬಳಿ ನೋಡುಗರ ದಂಡೇ ನೆರೆದಿತ್ತು. ಕಸದ ರಾಶಿಯೇ ತುಂಬಿದ್ದ ಈ ಮೋರಿಯಲ್ಲಿ ನೋಟುಗಳ ಆಯ್ದುಕೊಳ್ಳಲು ದೊಡ್ಡ ಸಂಖ್ಯೆಯ ಜನ ಸೇರಿದ್ದರು. ಹೆಚ್ಚಿನದಾಗಿ 500 ರೂಪಾಯಿಯ ನೋಟುಗಳು ಸಿಕ್ಕಿವೆ ಎಂದು ವರದಿಯಾಗಿದೆ.
ಸ್ಥಳಕ್ಕಾಗಮಿಸಿದ ಪೊಲೀಸರು ಹೇಳೋದೇನು?
ಈ ವಿಚಾರ ಪೊಲೀಸ್ ಠಾಣೆಗೂ ತಲುಪಿದ್ದು ಸ್ಥಳಕ್ಕೆ ಪೊಲೀಸರು ದೌಡಾಯಿಸಿದರು. ಹಾಗೆ ಅಲ್ಲಿದ್ದ ಜನರನ್ನು ಮೋರಿಯಿಂದ ಆಚೆ ಬರುವಂತೆ ಮಾಡಿದ್ದಾರೆ. ಪೊಲೀರಿಗೆ ಸ್ಥಳದಲ್ಲಿ ಐನೂರು ರೂಪಾಯಿಯ 14 ಹಳೆ ನೋಟುಗಳು, ಸಾವಿರ ರೂಪಾಯಿಯ ಒಂದು ಹಳೆಯ ನೋಟು, ಒಟ್ಟು 8 ಸಾವಿರ ರೂಪಾಯಿಯ ಹಳೆಯ ನೋಟುಗಳು ಪತ್ತೆಯಾಗಿವೆ. 500 ರೂಪಾಯಿಯ 4 ಹೊಸ ನೋಟುಗಳು, 50 ರೂಪಾಯಿಯ 3 ನೋಟುಗಳು, 10 ರೂಪಾಯಿಯ 11 ನೋಟುಗಳು, 5 ರೂಪಾಯಿಯ 2 ನೋಟುಗಳು ಮತ್ತು 20 ರೂಪಾಯಿಯ 1 ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
ಅಪರಿಚಿತರ ವಿರುದ್ಧ ಪ್ರಕರಣ ಕೂಡ ದಾಖಲಾಗಿ ತನಿಖೆ ಆರಂಭಿಸಿದ್ದಾರೆ. ಅಲ್ಲದೆ ಬೇರೆ ಎಲ್ಲಾದರು ನೋಟುಗಳು ಪತ್ತೆಯಾದರೆ ಪೊಲೀಸ್ ಠಾಣೆಗೆ ತಂದು ಒಪ್ಪಿಸುವಂತೆಯೂ ಮನವಿ ಮಾಡಿದ್ದಾರೆ. ಆದ್ರೆ ಈ ನೋಟುಗಳು ಹರಿದುಬಂದಿದ್ದು ಹೇಗೆ? ಚರಂಡಿಯಲ್ಲಿ ಸಿಗಲು ಕಾರಣವೇನು ಎಂಬುದು ಮಾತ್ರ ಪತ್ತೆಯಾಗಿಲ್ಲ. ಪೊಲೀಸರು ಆಗಮಿಸುವ ಹೊತ್ತಿಗಾಗಲೇ ಸಾವಿರಾರು ರೂಪಾಯಿ ಜನರ ಕೈ ಸೇರಿತ್ತು ಎಂದು ನಂಬಲಾಗಿದೆ.
ವರದಿಗಳ ಪ್ರಕಾರ ಅಲ್ಲಿ 1 ಲಕ್ಷ ರೂಪಾಯಿಗೂ ಅಧಿಕ ಹಣ ಪತ್ತೆಯಾಗಿರಬಹುದು ಎನ್ನಲಾಗಿದೆ. ಅಷ್ಟೊಂದು ಪ್ರಮಾಣದ ಹಣ ಮೋರಿಯಲ್ಲಿ ಹರಿದು ಬರಲು ಕಾರಣವೇನು ಎಂಬುದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ. ಹಾಗೆ ನೋಟು ಸಿಕ್ಕವರು ಅದನ್ನು ಪರೀಕ್ಷಿಸಿದಾಗಲು ಅಸಲಿ ನೋಟುಗಳು ಎಂಬುದು ದೃಢವಾಗಿದೆ. ಆದ್ರೆ ಅದರ ಮಾಲಿಕರು ಯಾರು ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ.
ಈ ನೋಟುಗಳು ಚರಂಡಿಯಲ್ಲಿ ಹರಿದು ಬರಲು ಕಾರಣವೇನು? ಯಾರಿಗೆ ಸೇರಿರುವ ಹಣ, ಯಾರಾದರು ದರೋಡೆ ಮಾಡಿ ಎಸೆದಿದ್ದಾರೆಯೇ? ಪ್ರವಾಹದ ನೀರಿನಲ್ಲಿ ಕೊಚ್ಚಿ ಬಂದಿದ್ದ ಹಣವೇ? ಎಂಬುದನು ಪೊಲೀಸರ ತನಿಖೆ ಮೂಲಕವೇ ತಿಳಿದುಬರಬೇಕಿದೆ. ಇನ್ನು ಜನರು ನೋಟು ಆಯ್ದುಕೊಳ್ಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.



Click it and Unblock the Notifications
