ಜುಲೈ: ಈ ತಿಂಗಳು ದ್ವಾದಶ ರಾಶಿಗಳ ವೃತ್ತಿ ಭವಿಷ್ಯ ಹೇಗಿದೆ?

ಜುಲೈ ತಿಂಗಳಲ್ಲಿ ನಾಲ್ಕು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿದೆ. ಹೀಗಾಗಿ ದ್ವಾದಶ ರಾಶಿಗಳ ಮೇಲೆ ಮಹತ್ತರ ಪರಿಣಾಮವನ್ನು ಬೀರಲಿದೆ. ಮುಖ್ಯವಾಗಿ ಹನ್ನೆರಡು ರಾಶಿಯವರ ವೃತ್ತಿ ಜೀವನದ ಮೇಲೆ ನಾನಾ ರೀತಿ ಬದಲಾವಣೆಗಳು ಆಗಲಿದೆ. ಕೆಲವು ರಾಶಿಯವರಿಗೆ ಶುಭ ಫಲಗಳಿದ್ರೆ ಇನ್ನೂ ಕೆಲವು ರಾಶಿಯವರಿಗೆ ಅಶುಭ ಫಲಗಳಿದೆ. ಅಷ್ಟಕ್ಕು ನಾಲ್ಕು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಿರೋದ್ರಿಂದ ದ್ವಾದಶ ರಾಶಿಯವರ ವೃತ್ತಿ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನು ತಿಳಿಯೋಣ.

Career Horoscope for July 2023: These Zodiac Signs Will Get Immense Success in Career in Kannada.

ಮೇಷ ರಾಶಿ
ಮೇಷ ರಾಶಿಯವರು ಜುಲೈ ತಿಂಗಳಲ್ಲಿ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಕೆಲಸ ಮಾಡುವ ಜಾಗದಲ್ಲಿ ಭಾವನಾತ್ಮಕ ಕಾರಣಗಳಿಂದಾಗಿ ನಿಮಗೆ ಸಂಕಟ ಹೆಚ್ಚಾಗಬಹುದು. ಈ ತಿಂಗಳಲ್ಲಿ ಪ್ರೀತಿಸಿದವರ ಜೊತೆಗೆ ಉತ್ತಮ ಬಾಂಧವ್ಯವನ್ನು ಕಾಯ್ದುಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ಆದಷ್ಟು ಕಾಳಜಿ ವಹಿಸಲೇಬೇಕು. ನಿಮ್ಮೆಲ್ಲಾ ಕಷ್ಟಗಳು ಜುಲೈ ಅಂತ್ಯದ ವೇಳೆಗೆ ಸುಧಾರಿಸುವ ಸಾಧ್ಯತೆಗಳಿದೆ.

ವೃಷಭ ರಾಶಿ
ಜುಲೈ ತಿಂಗಳ ಆರಂಭದಲ್ಲಿಯೇ ವೃಷಭ ರಾಶಿಯವರಿಗೆ ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳು ಸಿಗಬಹುದು. ಈ ತಿಂಗಳು ನಿಮಗೆ ಹಣಕಾಸಿನ ವಿಷಯಗಳಲ್ಲಿ ತುಂಬಾ ಅನುಕೂಲಕರವಾಗಿರುತ್ತದೆ. ನಿಮ್ಮ ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿವೆ. ಈ ವಾರ ನಿಮ್ಮ ಪ್ರಯಾಣವು ತುಂಬಾ ಆಹ್ಲಾದಕರವಾಗಿರುತ್ತದೆ. ಈ ಇಡೀ ತಿಂಗಳು ನೀವು ಪ್ರಯಾಣದಲ್ಲಿ ನಿರತರಾಗಿರುತ್ತೀರಿ. ಜುಲೈ ಅಂತ್ಯದ ವೇಳೆಗ ಸಮಯವು ನಿಮಗೆ ತುಂಬಾ ಅನುಕೂಲಕರವಾಗಿರುತ್ತದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ತಿಂಗಳು ತುಂಬಾನೇ ಒಳ್ಳೆಯದಾಗಲಿದೆ. ನೀವು ನಿಮ್ಮ ಯೋಜನೆಯ ಮೂಲಕ ಯಶಸ್ಸನ್ನು ಪಡೆಯಬಹುದು. ಸ್ವಲ್ಪ ಕಷ್ಟಪಟ್ಟರೆ ಆರ್ಥಿಕ ಲಾಭವಾಗುವ ಸಾಧ್ಯತೆಯಿದೆ. ಈ ತಿಂಗಳು ಪಾಲುದಾರಿಕೆಯಲ್ಲಿ ಮಾಡಿದ ಹೂಡಿಕೆಗಳಿಂದ ನಿಮಗೆ ಲಾಭ ತಂದುಕೊಡುತ್ತದೆ. ಈ ತಿಂಗಳು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನೆರವೇರುತ್ತದೆ. ಈ ತಿಂಗಳು ಪ್ರವಾಸಕ್ಕೆ ಹೋಗುವ ಯೋಜನೆ ಇದ್ದರೆ ಮುಂದೂಡುವುದು ಉತ್ತಮ. ಜುಲೈ ಅಂತ್ಯದಲ್ಲಿ ಯಾವುದೋ ವಿಚಾರಕ್ಕೆ ಕೊಂಚ ನಿರಾಶೆಗೊಳ್ಳುವ ಸಾಧ್ಯತೆಯಿದೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಜುಲೈ ತಿಂಗಳು ಕಾರ್ಯ ಕ್ಷೇತ್ರದಲ್ಲಿ ಪ್ರಗತಿಯನ್ನು ತರಲಿದೆ. ಈ ತಿಂಗಳಲ್ಲಿ ನೀವು ನಿಮ್ಮ ಮಗುವಿಗೆ ಸಂಬಂಧಿಸಿದಂತೆ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ಈ ತಿಂಗಳು ನೀವು ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತೀರಿ. ಈ ತಿಂಗಳು ನೀವು ಪ್ರವಾಸಕ್ಕೆ ಹೋಗಲು ಯೋಜನೆ ಹಾಕಿದ್ದರೆ ಅದನ್ನು ಸ್ವಲ್ಪ ಸಮಯದವರೆಗೆ ಮುಂದೂಡುವುದು ಉತ್ತಮ. ಜುಲೈ ಅಂತ್ಯದಲ್ಲಿ ನೀವು ನಿಮ್ಮ ತಾಯಿ ಬಗ್ಗೆ ಚಿಂತಿತರಾಗುತ್ತೀರಿ.

ಸಿಂಹ ರಾಶಿ
ಜುಲೈ ತಿಂಗಳಲ್ಲಿ ಕೆಲಸದ ಸ್ಥಳದಲ್ಲಿ ಯಾವುದಾದರೂ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಸಿಂಹ ರಾಶಿಯವರಿಗೆ ಸ್ತ್ರೀಯರ ಹೆಚ್ಚಿನ ಬೆಂಬಲ ಸಿಗುತ್ತದೆ. ಇನ್ನೂ ನೀವು ಸಾಕಷ್ಟು ಆರ್ಥಿಕ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ. ನೀವು ಈ ತಿಂಗಳು ಪ್ರಯಾಣ ಮಾಡುತ್ತಿದ್ದರೆ ನೀವು ತುಂಬಾ ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇಂದು ನಿಮ್ಮ ಪರವಾಗಿ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಜುಲೈ ಅಂತ್ಯದಲ್ಲಿ ಜೀವನದಲ್ಲಿ ಸಂತೋಷ ಕಾಣುತ್ತೀರಿ, ಮತ್ತು ಸುಖವಾಗಿ ಇರಬಹುದು.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಆರ್ಥಿಕ ವಿಷಯಗಳಲ್ಲಿ ಇಂದು ಅತ್ಯಂತ ಮಂಗಳಕರವಾಗಿರಲಿದೆ. ಈ ತಿಂಗಳ ಮೊದಲ ಎರಡು ವಾರದಲ್ಲಿ ಯಾವುದೇ ರೀತಿ ಹೂಡಿಕೆ ಮಾಡೋದಕ್ಕೆ ಹೋಗಬೇಡಿ. ನೀವು ಯಾವುದಾದರೂ ಕೆಲಸದಲ್ಲಿ ಪ್ರಗತಿ ಕಾಣಬೇಕಾದರೆ ಕೊಂಚ ಕಷ್ಟ ಪಡಬೇಕಾಗುತ್ತದೆ. ಈ ತಿಂಗಳು ನಿಮ್ಮ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಾಣುತ್ತೀರಿ. ಕೆಲಸದ ಸ್ಥಳದಲ್ಲಿ ಸಂಭವಿಸೋ ಕೆಲವೊಂದು ಘಟನೆಗಳು ನಿಮ್ಮ ಮನಸ್ಸಿಗೆ ನೋವು ತರುತ್ತದೆ. ಜುಲೈ ಅಂತ್ಯದೊಳಗೆ ಯಾವುದೇ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಂಡರೆ ಉತ್ತಮ.

ತುಲಾ ರಾಶಿ
ತುಲಾ ರಾಶಿಯವರಿಗೆ ಜುಲೈ ತಿಂಗಳು ಆರ್ಥಿಕ ವಿಷಯಗಳಲ್ಲಿ ಸುಧಾರಣೆ ತರಲಿದೆ. ಅಲ್ಲದೆ ನೀವು ಹೂಡಿಕೆ ಮಾಡೋದ್ರ ಮೂಲಕ ಮಂಗಳಕರ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಕಷ್ಟಪಟ್ಟು ಕೆಲಸ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ. ಆಪ್ತರನ್ನು ಭೇಟಿ ಮಾಡೋದ್ರ ಮುಖಾಂತರ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಮನಸ್ಸಿನಲ್ಲಿ ನಿಮಗೆ ದುಃಖ ಕಾಡುತ್ತಿರುತ್ತದೆ. ಕೆಲಸದ ಸ್ಥಳದಲ್ಲಿ ನಿಮಗೆ ಕೆಲವು ಸಮಸ್ಯೆಗಳು ಹೆಚ್ಚಾಗಬಹುದು. ಈ ತಿಂಗಳ ಕೊನೆಯಲ್ಲಿ ಎಲ್ಲವೂ ಮೊದಲಿನಂತಾಗುತ್ತದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಹಣಕಾಸಿನ ವಿಷಯಗಳಲ್ಲಿ ಈ ಸಮಯವು ತುಂಬಾ ಅನುಕೂಲಕರವಾಗಿರುತ್ತದೆ. ನೀವು ಹಣವನ್ನು ಗಳಿಸಲು ಬಲವಾದ ಪರಿಸ್ಥಿತಿಗಳನ್ನು ರಚಿಸಲಾಗುತ್ತಿದೆ. ಪಾಲುಗಾರಿಕೆಯಲ್ಲಿ ವ್ಯಾಪಾರ ಮಾಡುವಾಗ ಹುಷಾರಾಗಿರಿ ಏಕೆಂದರೆ ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಪ್ರೇಮ ಸಂಬಂಧದಲ್ಲಿ ಮಹಿಳೆಯಿಂದಾಗಿ ಪರಸ್ಪರ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಈ ತಿಂಗಳು ಆರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಂಡುಬರಲಿದೆ. ಈ ತಿಂಗಳ ಅಂತ್ಯದಲ್ಲಿ ತಂದೆ ಸಮಾನರಿಂದ ವ್ಯಕ್ತಿಯ ಸಹಾಯದಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಿರುತ್ತದೆ.

ಧನು ರಾಶಿ
ಧನು ರಾಶಿಯ ಜನರು ಜುಲೈ ತಿಂಗಳಲ್ಲಿ ತಮ್ಮ ಕೆಲಸದ ಬಗ್ಗೆ ತುಂಬಾ ಜವಾಬ್ದಾರರಾಗಿರುತ್ತಾರೆ. ಆರ್ಥಿಕ ವಿಷಯಗಳಲ್ಲಿ ಈ ಸಮಯವು ಉತ್ತಮವಾಗಿರುತ್ತದೆ. ಹಣದ ವಿಚಾರದಲ್ಲಿ ತೊಂದರೆ ಅನುಭವಿಸುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯವನ್ನು ಸುಧಾರಿಸಲು ನೀವು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಈ ತಿಂಗಳು ಮಾಡುವ ಪ್ರಯಾಣವು ತುಂಬಾ ಮಂಗಳಕರವಾಗಿರುತ್ತದೆ. ಕೌಟುಂಬಿಕ ವಿಷಯಗಳಲ್ಲಿ ಬಂಧನದ ಭಾವನೆ ಇರಬಹುದು. ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳೋದಕ್ಕೆ ಪ್ರಯತ್ನಿಸಿ. ಆಗ ಮಾತ್ರ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ.

ಮಕರ ರಾಶಿ
ಮಕರ ರಾಶಿಯವರಿಗೆ ಈ ತಿಂಗಳು ತುಂಬಾ ಶುಭಕರವಾಗಿರುತ್ತದೆ. ಈ ತಿಂಗಳು ನೀವು ಹಣಕಾಸಿನ ಲಾಭವನ್ನು ಸಹ ಪಡೆಯುತ್ತೀರಿ. ಪ್ರೇಮ ಸಂಬಂಧದಲ್ಲಿ ಸಮಯವು ಅನುಕೂಲಕರವಾಗಿರುತ್ತದೆ. ನೀವು ಜುಲೈನಲ್ಲಿ ಪ್ರವಾಸವನ್ನು ಮುಂದೂಡಿದರೆ ಉತ್ತಮ. ಪ್ರಯಾಣದ ಸಮಯದಲ್ಲಿ ಒಂಟಿತನವನ್ನು ಅನುಭವಿಸಬಹುದು ಅಥವಾ ನೀವು ಕೆಲವು ಸಮಸ್ಯೆಗಳಿಗೆ ಸಿಲುಕಿಕೊಳ್ಳಬಹುದು. ನಿಮ್ಮ ಕೆಲಸದ ಸ್ಥಳದಲ್ಲಿ ಸಂಘರ್ಷದ ಸಂದರ್ಭಗಳು ಹೆಚ್ಚಾಗಬಹುದು. ಮತ್ತು ನೀವು ಹೆಚ್ಚು ಕಠಿಣ ಕೆಲಸವನ್ನು ಮಾಡಬೇಕಾಗುತ್ತದೆ.

ಕುಂಭ ರಾಶಿ
ಕುಂಭ ರಾಶಿಯವರಿಗೆ ಜುಲೈ ತಿಂಗಳು ಮಿಶ್ರವಾಗಿರಲಿದೆ. ಈ ತಿಂಗಳು ನೀವು ಸಮತೋಲನವನ್ನು ಕಾಯ್ದುಕೊಂಡು ಮುನ್ನಡೆದರೆ ನೀವು ತುಂಬಾ ಆರಾಮವಾಗಿರುತ್ತೀರಿ. ಪ್ರೇಮಿಗಳು ಕೆಲವೊಂದು ವಿಚಾರಕ್ಕೆ ಸ್ವಲ್ಪ ಅಸಮಾಧಾನಗೊಳ್ಳಬಹುದು. ಈ ಸಮಯದಲ್ಲಿ ನಿಮ್ಮ ಹಣಕಾಸಿನ ವೆಚ್ಚವನ್ನು ನಿಭಾಯಿಸಲು ಯೋಜನೆ ರೂಪಿಸಿ. ನೀವು ಈ ತಿಂಗಳು ಪ್ರಯಾಣವನ್ನು ಮಾಡೋದು ಬೇಡ. ಜುಲೈ ಅಂತ್ಯದಲ್ಲಿ ಹೊಸ ಆರಂಭವು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಾಮರಸ್ಯವನ್ನು ತರುತ್ತದೆ.

ಮೀನ ರಾಶಿ
ಮೀನ ರಾಶಿಯ ಜನರು ಈ ತಿಂಗಳು ಹಣಕಾಸಿನ ವಿಷಯಗಳಲ್ಲಿ ಕೊಂಚ ಜಾಗೃತೆ ವಹಿಸಿ. ಈ ತಿಂಗಳು ನೀವು ಮಹಿಳೆಯ ಸಹಾಯದಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಅನುಭವಿಸುತ್ತೀರಿ. ಈ ತಿಂಗಳಲ್ಲಿ ನೀವು ಪ್ರಯಾಣ ಮಾಡೋದಕ್ಕೆ ಹೋಗಲು ಮನಸ್ಸು ಮಾಡಬಹುದು. ಇದಕ್ಕಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಈ ತಿಂಗಳು ನಿಮ್ಮ ಮನಸ್ಸು ತುಂಬಾ ಸಂತೋಷ ಮತ್ತು ವಿಶ್ರಾಂತಿ ಪಡೆಯುತ್ತದೆ. ಜುಲೈ ತಿಂಗಳ ಅಂತ್ಯದಲ್ಲಿ ನೀವು ಮನೆಯ ಅಲಂಕಾರಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು.

English summary

Career Horoscope for July 2023: These Zodiac Signs Will Get Immense Success in Career in Kannada.

Career Horoscope for July 2023: These Zodiac Signs Will Get Immense Success in Career. Read More.
Story first published: Friday, June 30, 2023, 14:48 [IST]
X
Desktop Bottom Promotion