Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
4 ವರ್ಷದ ವರ್ಕ್ ಎಕ್ಸ್‌ಪೀರಿಯನ್ಸ್: 45 ಲಕ್ಷ ಡಿಮ್ಯಾಂಡ್ ಮಾಡಿದ ಕ್ಯಾಂಡಿಡೇಟ್, ನಾವು ಸಾಲ ಮಾಡಬೇಕಾಗುತ್ತೆ ಎಂದ HR
ಕಂಪನಿಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವಾಗ ಉದ್ಯೋಗಿಯ ಕೌಶಲ್ಯ ಜೊತೆಗೆ ಉದ್ಯೋಗಿಗೆ ನೀಡುವ ಸಂಬಂಳದ ಬಗ್ಗೆ ಕಂಪನಿ ತುಂಬಾ ಗಮನಹರಿಸುತ್ತೆ, ಒಂದು ವೇಳೆ ಕಂಪನಿಯ ಬಜೆಟ್‌ಗಿಂತ ಉದ್ಯೋಗಿ ಹೆಚ್ಚು ನಿರೀಕ್ಷೆ ಮಾಡುತ್ತಿದ್ದರೆ ನೋ ಎಂದು ಬಿಡುತ್ತದೆ, ಆದರೆ ಕಂಪನೊಯೊಂದು ಹೆಚ್ಚಿನ ಸಂಬಳ ನಿರೀಕ್ಷೆ ಮಾಡುತ್ತಿದ್ದ ಉದ್ಯೋಗಿಗೆ ನೇರವಾಗಿ ನೋ ಎನ್ನದೆ ತಮಾಷೆಯಾಗಿ ಹೇಳಿದೆ, ಆ ಚಾಟ್‌ನ ವೀಡಿಯೋ ವೈರಲ್ ಆಗುತ್ತಿದೆ.

ವೈಷ್ಣವ್ ಟೆಕ್ನಲಾಜಿಯ ಸಿಇಒ ಈ ಚಾಟ್‌ನ ವೀಡಿಯೋ 'X' ತಾಣದಲ್ಲಿ ಶೇರ್ ಮಾಡಿದ್ದು ಇದೀಗ ಈ ಸ್ಕ್ರೀನ್ ಶಾಟ್ ಸಾಮಾಜಿಕ ತಾಣದಲ್ಲಿ ತುಂಬಾನೇ ಗಮನ ಸೆಳೆದಿದೆ. ಆ ಕ್ಯಾಂಡಿಡೇಟ್ ಪ್ರೊಫೈಲ್ ನೋಡಿದಾಗ ಹೆಚ್‌ಆರ್ ಡಿಪಾರ್ಟ್‌ಮೆಂಟ್ ಹಾಗೂ ಮ್ಯಾನೇಜ್‌ಮೆಂಟ್ ಅವರಿಗೆ ಖುಷಿಯಾಗುತ್ತದೆ, ತುಂಬಾ ಒಳ್ಳೆಯ ಕ್ಯಾಂಡಿಡೇಟ್, ಆದರೆ ಆ ಉದ್ಯೋಗಿ ಡಿಮ್ಯಾಂಡ್ ಮಾಡಿದ ಸಂಬಳ ಮಾತ್ರ ಅವರ ಕೆಲಸದ ಅನುಭವಕ್ಕೆ ಹೋಲಿಸಿದರೆ ತುಂಬಾನೇ ಹೆಚ್ಚಿತ್ತು.
4 ವರ್ಷದ ಕೆಲಸದ ಅನುಭವಕ್ಕೆ 45 ಲಕ್ಷ ಸಂಬಳ
ಆ ಉದ್ಯೋಗಿಗೆ 4 ವರ್ಷದ ಕೆಲಸದ ಅನುಭವ, ವರ್ಷಕ್ಕೆ 28 ಲಕ್ಷ ಸಂಬಳ ತಗೋತ್ತಿದ್ದಾರೆ, ಅವರು ಈ ಕಂಪನಿಗೆ ಕೆಲಸಕ್ಕೆ ಅಪ್ಲಿಕೇಷನ್ ಹಾಕಿ ಆಯ್ಕೆ ಕೂಡ ಆಗುತ್ತಾರೆ, ಆದರೆ ಅವರು ಬರೋಬರಿ 17 ಲಕ್ಷ ಅಧಿಕ ಸಂಬಳ ಹೆಚ್ಚು ಬೇಕೆಂದು ಕೇಳುತ್ತಾರೆ. ಕಂಪನಿಯವರಿಗೆ 4 ವರ್ಷದ ಕೆಲಸದ ಅನುಭವಕ್ಕೆ ಅವರು ಕೇಳುತ್ತಿರುವ ಸಂಬಳ ಸ್ವಲ್ಪ ಜಾಸ್ತಿಯಾಯ್ತು ಅನಿಸಿದೆ, ಅದಕ್ಕೆ ಆಕೆಯನ್ನು ಕೆಲಸಕ್ಕೆ ತೆಗೆದುಕೊಳ್ಳಲು ನಾವು ಲೋನ್ ಮಾಡಬೇಕಾಗುತ್ತೆ, ಲೆಟ್ಸ್ ಸ್ಕಿಪ್ ಎಂದು ಹೇಳಿರುವ ಸ್ಕ್ರೀನ್ ಚಾಟ್ ವೈರಲ್ ಆಗಿದೆ.
ಮುಂದಿನ ಬಾರಿ ಕೆಲಸಕ್ಕೆ ಅರ್ಜಿ ಹಾಕುವಾಗ ಸಂಬಳ ಎಷ್ಟು ಬೇಕೆಂದು ಮೊದಲೇ ಹೇಳಿದರೆ ಸಂದರ್ಶನ ಮಾಡುವ ಸಮಯ ಉಳಿತಾಯವಾಗುತ್ತೆ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಆ ಉದ್ಯೋಗಿಗೆ ತನ್ನ ಮೇಲೆ ಅಷ್ಟು ಭರವಸೆ ಇರಬಹುದು ಹಾಗಾಗಿ ಕೇಳಿದ್ದಾರೆ ಎಂದಿದ್ದಾರೆ.
ನಮ್ಮಲ್ಲಿ ಕೌಶಲ್ಯವಿದ್ದಾಗ ಡಿಮ್ಯಾಂಡ್ ಮಾಡಿದರೆ ತಪ್ಪೇನೂ ಇಲ್ಲ
ಅವರು 4 ವರ್ಷ ಲಕ್ಷ ಪಡೆಯುತ್ತಿದ್ದಾರೆ ಎಂದ ಮೇಲೆ ಮತ್ತೊಂದು ಕಂಪನಿಯಿಂದ ಇನ್ನೂ ಜಾಸ್ತಿ ನಿರೀಕ್ಷೆ ಮಾಡುವುದು ತಪ್ಪೇನು ಇಲ್ಲ, ನಮ್ಮ ಮೇಲೆ ನಮಗೆ ನಂಬಿಕೆಯಿದ್ದರೆ ಎಷ್ಟು ವರ್ಷದ ಕೆಲಸದ ಅನುಭವ ಎಂಬುವುದು ಮುಖ್ಯವಾಗಲ್ಲ.
ಕೆಲವರು ಕ್ಯಾಂಪಸ್ ಸೆಲೆಕ್ಷನ್‌ನಲ್ಲಿಯೇ ತಿಂಗಳಿಗೆ 10-12 ಲಕ್ಷ ಪಡೆದಿರುವವರೂ ಇದ್ದಾರೆ, ಹಾಗಾಗಿ ಸಂಬಳಕ್ಕಿಂತ ಕಂಪನಿಗೆ ಆ ಉದ್ಯೋಗಿ ಎಷ್ಟು ಅವಶ್ಯಕ ಎಂಬುವುದು ಮುಖ್ಯವಾಗಿರುತ್ತದೆ. ಡಿಮ್ಯಾಂಡ್ ಮಾಡುವುದು ಉದ್ಯೋಗಿಗೆ ಸಂಬಂಧಿಸಿದ್ದು ಎಷ್ಟು ಬಜೆಟ್ ಒಳಗೆ ಉದ್ಯೋಗಿಯನ್ನು ತೆಗೆದುಕೊಳ್ಳಬೇಕು ಎಂಬುವುದನ್ನು ಕಂಪನಿ ನಿರ್ಧರಿಸುತ್ತೆ, ಹೀಗಾಗಿ ಕೇಳುವುದು ಉದ್ಯೋಗಿಯ ಆತ್ಮವಿಶ್ವಾಸ, ಉದ್ಯೋಗಿ ಬೇಕೋ , ಬೇಡ್ವೋ ಎಂಬುವುದು ಕಂಪನಿ ತೀರ್ಮಾನ ಅಲ್ವಾ?
ಸಂಬಳ ಎಷ್ಟು ಸಿಗಬಹುದು ಎಂದು ವಿಚಾರಿಸಿ ಕೇಳಿ
ಇನ್ನು ಕೆಲವೊಂದು ಕಂಪನಿಗೆ ಸಂದರ್ಶನಕ್ಕೆ ಹೋಗುವಾಗ ಎಷ್ಟು ಸಿಗಬಹುದು, ಈಗೀನ ಮಾರ್ಕೆಟ್‌ನಲ್ಲಿ ನನ್ನ ರೀತಿಯ ಕೌಶಲ್ಯ ಹಾಗೂ ಕೆಲಸದ ಅನುಭವದ ವ್ಯಕ್ತಿಗೆ ಎಷ್ಟು ಸಂಬಳ ಕೊಡುತ್ತಾರೆ ಎಂದು ವಿಚಾರಿಸಿ ನಂತರ ನಾವು ನಮ್ಮ ಸಂಬಳಕ್ಕೆ ಡಿಮ್ಯಾಂಡ್ ಮಾಡಿದರೆ ತುಂಬಾ ಒಳ್ಳೆಯದು, ಆವಾಗ ಕಂಪನಿಯವರಿಗೂ ಹೆಚ್ಚು ಕೇಳುತ್ತಿದ್ದಾರೆ ಎಂದು ಅನಿಸಲ್ಲ, ಈ ಕಂಪನಿ ಇಲ್ಲದಿದ್ದರೆ ಬೇರೆ ಕಂಪನಿಯಲ್ಲಿ ನಾವು ನಿರೀಕ್ಷೆ ಮಾಡಿದ ಸಂಬಳವಿದೆ ಎಂದಾದರೆ ಧೈರ್ಯವಾಗಿ ಡಿಮ್ಯಾಂಡ್ ಮಾಡಿ.



Click it and Unblock the Notifications
