Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುಂಗುರು, ನೇರ ಕೂದಲು ಹೀಗೆ ನಿಮ್ಮ ಕೂದಲು ನೋಡಿ ವ್ಯಕ್ತಿತ್ವ ತಿಳಿಯಬಹುದು ಗೊತ್ತಾ? ಇಲ್ಲಿದೆ ಆಸಕ್ತಿಕರ ಸಂಗತಿಗಳು
ನಮ್ಮ ಕೂದಲು ನೋಡಿ ನಮ್ಮ ಗುಣಗಳ ಬಗ್ಗೆ ಹೇಳಬಹುದಾ? ಹೌದಂತೆ, ಹಾಗಂತ ಇದು ಊಹೆಯಲ್ಲ, ಇದು ಪರೀಕ್ಷೆಯಲ್ಲಿ ಕಂಡುಕೊಂಡ ಸತ್ಯಾಂಶ, ನಿಮ್ಮ ಕೂದಲು ನೇರ ಕೂದಲೇ ಅಥವಾ ಗುಂಗುರು ಕೂದಲೇ ಅಥವಾ ಸ್ವಲ್ಪ ಗುಂಗುರು ರೀತಿಯ ಕೂದಲೇ ಎಂಬುವುದರ ಮೇಲೆ ನಿಮ್ಮ ವ್ಯಕ್ತಿತ್ವ ತಿಳಿಯಬಹುದಂತೆ, ಹಾಗಾದರೆ ಇದು ನಿಜವೇ ಎಂದು ನೋಡಲು ನಿಮಗೂ ಆಸಕ್ತಿ ಬಂದಿರಬಹುದಲ್ವಾ? ಬನ್ನಿ ನೋಡೋಣ:

ವೇವಿ ಕೂದಲು ಅಥವಾ ಸ್ವಲ್ಪ ಸುರುಳಿಯಾಗಿರುವ ಕೂದಲು
ಈ ರೀತಿಯ ಕೂದಲಿನವರು ಜೀವನದಲ್ಲಿ ಏನು ಬರುತ್ತೋ ಅದನ್ನು ಸ್ವೀಕರಿಸಿಕಂಡು ಹೋಗುವವರು. ನೀವು ನಿಮ್ಮ ಗುರಿಯಾಗಿರಲಿ, ಸಂಬಂಧದಲ್ಲಿ ಆಗಿರಲಿ ಸ್ವಷ್ಟವಾಗಿರುತ್ತೀರಿ. ಸ್ವಾತಂತ್ರ್ಯ ಇಷ್ಟಪಡುತ್ತೀರ. ಕೆಲವೊಂದು ವಿಷಯಗಳು ನಿಮ್ಮನ್ನು ಕುಗ್ಗಿಸಿದರೂ ಬೇಗನೆ ಅದರಿಂದ ಹೊರಬನ್ನಿ, ನೀವು ಸವಾಲುಗಳನ್ನು ತುಂಬಾನೇ ಚೆನ್ನಾಗಿ ನಿಭಾಯಿಸುತ್ತೀರಿ.
ನೀವು ನಿಮ್ಮ ಗುರಿ ತಲುಪಲು ತುಂಬಾನೇ ಶ್ರಮ ಪಡುತ್ತೀರಿ. ನಿಮ್ಮ ಪ್ರಗತಿಯನ್ನು ಯಾರಾದರೂ ನಿಧಾನ ಮಾಡುತ್ತಿದ್ದಾರೆ ಎಂದಾದರೆ ಅವರನ್ನು ಬಿಟ್ಟು ದೂರ ನಡೆಯುತ್ತಾರೆ. ಹಾಗಂತ ನೀವು ಕೆಟ್ಟವರಲ್ಲ, ಆದರೆ ನಿಮಗೆ ಬೇಕಾದವರಿಗೆ ನೀವು ಏನು ಬೇಕಾದರೂ ಮಾಡಲು ಸಿದ್ಧ. ಹಾಗಂತ ಕೆಲವೊಂದು ಸಂಬಂಧ ವರ್ಕ್ ಆಗುತ್ತಿಲ್ಲ ಎಂದಾದರೆ ಅದನ್ನು ಅಲ್ಲಿಯೇ ಬಿಟ್ಟು ದೂರ ನಡೆಯುತ್ತಾರೆ. ಹೊಸತನನ್ನು ಕಲಿಯಲು ತ ತುಂಬಾನೇ ಇಷ್ಟಪಡುತ್ತೀರ. ನಿಮಗೆ ಬೇಕಾದಂತೆ ವಿಷಯಗಳನ್ನು ಬದಲಾಯಿಸುವ ಚಾಕಚಕ್ಯತೆ ನಿಮ್ಮಲ್ಲಿ ಇರಲಿದೆ. ನೀವು ಸಂಪ್ರದಾಯ ಇಷ್ಟಪಡುತ್ತೀರಿ, ಅದರಲ್ಲೂ ಆಧುನಿಕತೆ ಕೂಡ ಇಷ್ಟಪಡುತ್ತೀರಿ.
ಪ್ರಮುಖ ಗುಣಗಳು: ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳಲ್ಲ, ಗುರಿ ಸಾಧಿಸುವವರು, ಸ್ವಾತಂತ್ರ್ಯ ಇಷ್ಟಪಡುತ್ತೀರಿ.
ಗುಂಗುರು ಕೂದಲು
ಗುಂಗುರು ಕೂದಲಿನವರು ಸಾಹಸಪ್ರಿಯರು, ತುಂಬಾ ಕ್ರಿಯೇಟಿವ್ ವ್ಯಕ್ತಿಗಳು, ರಿಸ್ಕ್ ತೆಗೆದುಕೊಳ್ಳಲು ಭಯಪಡುವುದಿಲ್ಲ. ಇವರು ಮೆದುಳು ತುಂಬಾ ಚುರುಕಾಗಿ ಕೆಲಸ ಮಾಡುತ್ತೆ, ಯಾವುದೇ ಕೆಲಸವಾಗಿರಲಿ ಚೆನ್ನಾಗಿ ನಿಭಾಯಿಸಿಕೊಂಡು ಹೀಗುವ ಕೌಶಲ್ಯ ನಿಮ್ಮಲ್ಲಿ ಇರುತ್ತದೆ.
ನೀವು ತುಂಬಾ ಚುರುಕು ಸ್ವಭಾವದವರು, ನಿಮ್ಮ ಕೆಲಸಗಳನ್ನು ಬೇಗನೆ ಮುಗಿಸುತ್ತೀರಿ, ನಿಮ್ಮನ್ನು ಜನ ಬೇಗನೆ ಇಷ್ಟಪಡುತ್ತಾರೆ, ನಿಮ್ಮನ್ನು ಯಾರೂ ಸುಕಭವಾಗಿ ಮೋಸ ಮಾಡಲು
ಸಾಧ್ಯವಾಗುವುದಿಲ್ಲ. ನಿಮ್ಮ ಸ್ವಭಾವ ನೀರಿನಂತೆ, ಎಂಥದ್ದೇ ಪರಿಸ್ಥಿತಿಯಾದರೂ ಹೊಂದಿಕೊಳ್ಳುತ್ತೀರಿ. ಬೇಗನೆ ಸ್ನೇಹಿತರಾಗುತ್ತಾರೆ, ವ್ಯಕ್ತಿಯ ಮಾತಿನಿಂದಲೇ ಅವರು ನಿಮಗೆ ಒಳ್ಳೆಯ ಸ್ನೇಹಿತರೇ ಅಲ್ಲವೇ ಎಂದು ತಿಳಿದು ಬಿಡುತ್ತೀರಿ. ಎರಡು ಮುಖದ ಜನರನ್ನು ಹೆಚ್ಚು ಇಷ್ಟಪಡುವುದೇ ಇಲ್ಲ. ಅದರಲ್ಲೂ ಒಮ್ಮೆ ಇವರ ನಂಬಿಕೆ ಕಳೆದುಕೊಂಡರೆ ಮತ್ತೆ ಗಳಸಲು ಸಾಧ್ಯವೇ ಇಲ್ಲ.
ಎಲ್ಲರಿಗಿಂತ ಪ್ರತ್ಯೇಕವಾಗಿ ನಿಲ್ಲಲು ನೀವು ಅಂಜಿಕೊಳ್ಳುವುದಿಲ್ಲ, ನೀವು ನಿಮ್ಮ ತ್ವಚೆಯಲ್ಲಿ ತುಂಬಾನೇ ಕಂಫರ್ಟ್ ಆಗಿರುತ್ತೀರಿ.
ಪ್ರಮುಖ ವಿಶೇಷ ಗುಣಗಳು: ನಾಯಕತ್ವದ ಗುಣ, ಬೇಗನೆ ಯಾರಿಗೂ ಇಷ್ಟವಾಗಲ್ಲ, ತುಂಬಾ ಹೆಮ್ಮೆ ಪಡುವ ವ್ಯಕ್ತಿ.
ನಿಮ್ಮದು ನೇರ ಕೂದಲು ಆಗಿದ್ದರೆ
ಇವರು ಎಲ್ಲವೂ ಸರಿಯಾಗಿರಬೇಕು, ಕ್ರಮಬದ್ಧವಾಗಿರಬೇಕು ಎಂದು ಬಯಸುವವರು. ಇವರು ಯಾವುದಾದರೂ ವಸ್ತುಗಳನ್ನು ಜೋಡಿಸಿದರೆ ಅದು ಚೆಲ್ಲಾಪಿಲ್ಲಿಯಾಗಬಾರದು, ಇವರು ಬದುಕಿನಲ್ಲಿ ತುಂಬಾ ಪ್ಲ್ಯಾನ್ ಮಾಡುತ್ತಾರೆ, ಇದರಿಂದಲೇ ಕೆಲಸವನ್ನು ತುಂಬಾ ಸುಲಭವಾಗಿ ಮಾಡಿ ಮುಗಿಸುತ್ತೀರಿ.
ಇವರು ಸ್ವಲ್ಪ ಕಾಲ್ಪನಿಕ ಜಗತ್ತಿನಲ್ಲಿ ಇರುವವರು. ನೀವು ನಿಮ್ಮಿಂದ ತಪ್ಪಾಗದಂತೆ ನೋಡಿಕೊಳ್ಳುತ್ತೀರಿ. ಅಲ್ಲದೆ ನೀವು ಚೆನ್ನಾಗಿ ಜನರ ಜೊತೆಗೆ ಬೆರೆಯುತ್ತೀರಿ, ಅಹಂಕಾರ ಇರಲ್ಲ, ತುಂಬಾ ಶಾಂತ ಸ್ವಭಾವದವರು, ಯಾವುದೇ ಪರಿಸ್ಥಿತಿಯಾಗಲಿ ಚೆನ್ನಾಗಿ ನಿಭಾಯಿಸುವ ಗುಣ ಇವರಲ್ಲಿ ಇದೆ.
ಪ್ರಮುಖ ಗುಣ: ತುಂಬಾ ಕನಸುಗಳನ್ನು ಹೊಂದಿರುವವರು, ನೇರ ನುಡಿ, ಎಲ್ಲವೂ ಶಿಸ್ತುಬದ್ಧವಾಗಿ ಇರಬೇಕೆಂದು ಬಯಸುವವರು, ಶಾಂತ ಸ್ವಭಾವದವರು.



Click it and Unblock the Notifications