Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಈ ಚಿತ್ರದಲ್ಲಿರುವ ತಪ್ಪೇನು ಗುರುತಿಸಬಲ್ಲಿರಾ..? 5 ಸೆಕೆಂಡ್‌ನಲ್ಲಿ ಉತ್ತರ ಕಂಡುಹಿಡಿಯಿರಿ
ಬ್ರೈನ್ ಟೀಸರ್ ಹಾಗೂ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಇದು ನಮ್ಮ ಮೆದುಳಿಗೆ ಕೆಲಹೊತ್ತು ಕೆಲಸ ಕೊಡುತ್ತವೆ. ಇಂಟರ್‌ನೆಟ್‌ನಲ್ಲಿ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ನಮ್ಮ ಮೆದುಳಿಗೆ ಕೆಲಸ ಕೊಡುತ್ತವೆ.
ದೈಹಿಕವಾಗಿ ನಾವು ಹೇಗೆ ಸದೃಢರಾಗಿರುತ್ತೇವೋ ಅದೇ ರೀತಿ ಮೆದುಳಿಗೂ ಕೆಲಸ ಕೊಟ್ಟು ಆರೋಗ್ಯವಾಗಿಡಲು ಮುಂದಾಗಬೇಕು. ಕೆಲವೊಂದು ವೇಳೆ ನಮಗೆ ಇಂತಹ ಕೆಲಸ ಕೊಡುವ ಪೋಟೋಗಳು ಎದುರಾಗಿಬಿಡುತ್ತವೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಿಮ್ಮ ಗಮನ ಮತ್ತು ವೀಕ್ಷಣಾ ಕೌಶಲ್ಯಗಳನ್ನು ಸುಧಾರಿಸುತ್ತದೆ. ಹೀಗಾಗಿ ಇಂತಹ ಚಿತ್ರಗಳಲ್ಲಿ ಕೆಲವು ವಸ್ತುಗಳ ಹುಡುಕಾಟ ನಡೆಸುತ್ತಿದ್ದರೆ ನಿಮ್ಮ ಮೆದುಳಿನ ಕಾರ್ಯ ಚಟುವಟಿಕೆ ವೇಗ ಪಡೆದುಕೊಳ್ಳುತ್ತದೆ.

ಇದೇ ರೀತಿ ಇಲ್ಲೊಂದು ಚಿತ್ರ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಒಂದೇ ಚಿತ್ರವನ್ನು ಹಲವು ಆಯಾಮದಲ್ಲಿ ಆಲೋಚಿಸಲು ಮೆದುಳು ಆರಂಭಿಸುತ್ತದೆ. ಒಂದು ಕ್ಷಣ ನಮ್ಮ ಮುಂದಿದ್ದ ಚಿತ್ರಣವೇ ಬದಲಾಗಿ ಮತ್ತೊಂದು ಉತ್ತರ ಆ ಚಿತ್ರದಿಂದ ನಮ್ಮ ಮುಂದೆ ಬರುತ್ತದೆ. ಇಂತಹ ಒಂದು ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಚಿತ್ರದಲ್ಲಿ ಒಂದು ತಪ್ಪಿದೆ ಅದನ್ನು ಕಂಡು ಹಿಡಿಯಿರಿ ಎಂದು ಬ್ರೈಸ್ ಟೀಸರ್ ಒಳಗೊಂಡಿರುವ ಫೋಟೋವನ್ನ ಹರಿಬಿಡಲಾಗಿದೆ. ಇದನ್ನು ನೋಡಿದ ಮಂದಿ ತಲೆ ಕೆಡಿಸಿಕೊಂಡು, ಫೋಟೋದಲ್ಲಿರುವ ತಪ್ಪನ್ನು ಹುಡುಕಲು ಮುಂದಾಗಿದ್ದಾರೆ. ಈ ಬ್ರೈನ್ ಟೀಸರ್‌ಗಳೇ ಅಷ್ಟು ಅದರಲ್ಲಿ ಎಷ್ಟು ಹುಡುಕಾಡಿದರು ತಪ್ಪೇನು ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗುವುದೇ ಇಲ್ಲ.
ಚಿತ್ರದಲ್ಲಿರುವ ತಪ್ಪನ್ನು ನಾವು ಗಮನಿಸಿದರೂ ಅದರು ತಪ್ಪು ಎಂಬುದನ್ನು ಕೆಲವೊಮ್ಮೆ ಒಪ್ಪಿಕೊಳ್ಳಲು ಆಗುವುದಿಲ್ಲ. ಹಾಗೆಯೇ ಈ ಚಿತ್ರವೂ ಕೂಡ ನೋಡುಗರನ್ನು ಪ್ರಶ್ನೆಯ ದೊಡ್ಡ ಬಲೆಯಲ್ಲಿ ಸಿಲುಕಿಸಿದೆ. ಚಿತ್ರದಲ್ಲಿ ಒಬ್ಬ ಯುವಕ ಯುವತಿಯೊಂದಿಗೆ ಮಾತನಾಡುತ್ತಿರುವುದು ಹಾಗೂ ಹಿಂಬದಿಯಲ್ಲಿ ಮರಗಳು, ಸೇತುವೆ, ನೀರು ಇರುವುದನ್ನು ನಾವು ನೋಡಬಹುದು.
ಜೊತೆಗೆ ಗಾಳಿಗೆ ಎಲೆಗಳು ಉದುರುತ್ತಿರುವುದು ನೀರಿನಲ್ಲಿ ಬಾತು ಕೋಳಿಗಳನ್ನು ಸಹ ನೋಡುತ್ತಿದ್ದೇವೆ. ಆದ್ರೆ ಈ ಫೋಟೋದಲ್ಲಿರುವ ತಪ್ಪೇನು ಎಂಬುದನ್ನು ನೀವು ಪತ್ತೆ ಮಾಡಲು ಹೆಚ್ಚು ಸಯ ತೆಗೆದುಕೊಳ್ಳುತ್ತಿರಬಹುದು. ಆದ್ರೆ ನಾವೀಗ ಈ ಚಿತ್ರದಲ್ಲಿರುವ ತಪ್ಪೇನು ಎಂಬುದನ್ನು ವಿವರಿಸುತ್ತೇವೆ ನೋಡಿ.
ಈ ಚಿತ್ರವನ್ನು ಸರಿಯಾಗಿ ಗಮನವಿಟ್ಟು ನೋಡಿ. ಚಿತ್ರದಲ್ಲಿ ನಮಗೆ ಗಾಳಿ ಯಾವ ದಿಕ್ಕಿನತ್ತ ಬೀಸುತ್ತಿದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಏಕೆಂದರೆ ಮರದಿಂದ ಉದುರುತ್ತಿರುವ ಎಲೆಗಳು ಯಾವ ಕಡೆಗೆ ಬೀಳುತ್ತಿವೆ ಎಂಬುದು ತಿಳಿಯುತ್ತೆ. ಆದ್ರೆ ಫೋಟೋದಲ್ಲಿರುವ ಯುವತಿಯ ಕೂದಲು ಮಾತ್ರ ಗಾಳಿ ಬೀಸುತ್ತಿರುವ ವಿರುದ್ಧ ದಿಕ್ಕಿನತ್ತ ಹಾರಾಡುತ್ತಿದೆ. ಈ ಚಿತ್ರದಲ್ಲಿ ಯುವತಿಯ ತಲೆ ಕೂದಲು ಹಾರಾಡುತ್ತಿರುವ ದಿಕ್ಕು ತಪ್ಪಾಗಿದೆ. ಅದು ಗಾಳಿ ಬೀಸುತ್ತಿರುವ ವಿರುದ್ಧ ದಿಕ್ಕಿಗೆ ಹಾರಾಡುತ್ತಿದೆ.
ಹೌದು ಈ ಚಿತ್ರದಲ್ಲಿರುವುದು ಇದೊಂದೇ ತಪ್ಪು ಆದ್ರೆ ಇದನ್ನು ನೀವು ಈ ಮೊದಲೇ ಹುಡುಕಿದ್ದರೆ ನಿಮ್ಮ ಬುದ್ಧಿಶಕ್ತಿಯ ಮಟ್ಟ ಉತ್ತಮವಾಗಿದೆ, ನಿಮ್ಮ ಆಲೋಚನಾ ಶಕ್ತಿ ಸಹ ಸರಿಯಾಗಿದೆ. ಆದರೆ ಈ ತಪ್ಪು ಹುಡುಕಲು ವಿಫಲರಾದವರು ಬೇಸರ ಪಡುವ ಅಗತ್ಯವೇನಿಲ್ಲ, ಇದು ಬ್ರೈನ್ ಟೀಸರ್ ಅಷ್ಟೇ, ಇಲ್ಲಿ ನಿಮ್ಮ ಬುದ್ಧಿಮಟ್ಟ ಅಳತೆ ಮಾಡುವ ಮಾಪನವಂತು ಅಲ್ಲವೇ ಅಲ್ಲ. ಆದ್ರೆ ಈ ಚಿತ್ರದಲ್ಲಿರುವ ತಪ್ಪನ್ನು ಹಲವರು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.



Click it and Unblock the Notifications

