Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
5 ಸೆಕೆಂಡ್‌ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
ಇಂಟರ್‌ನೆಟ್‌ನಲ್ಲಿ ಕಾಣಸಿಗುವ ಒಂದಿಷ್ಟು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಕಣ್ಣು ಹಾಗೂ ಮೆದುಳಿಗೆ ಯಾವಾಗಲು ಕೆಲಸ ಕೊಡುತ್ತವೆ. ಜಡವಾಗಿದ್ದ ನರಕೋಶಗಳು ಎಚ್ಚರಗೊಳ್ಳುವಂತೆ ಮಾಡುತ್ತವೆ. ಜೊತೆಗೆ ಒಂದಿಷ್ಟು ಪ್ರಶ್ನೆಯ ಜೊತೆಗೆ ನಾವು ಚಿತ್ರವನ್ನು ನೀಡುವ ದೃಷ್ಟಿಕೋನಕ್ಕೆ ಮತ್ತಷ್ಟು ದಿಕ್ಕು ತೋರಿಸುತ್ತವೆ.
ಇನ್ನು ಥಟ್ ಅಂತ ನಮ್ಮ ಮುಂದೆ ಒಂದು ಚಿತ್ರವಿಟ್ಟು ಅದರಲ್ಲಿ ಏನಿದೆ ಎಂದು ಗುರುತಿಸಲು ಹೇಳಿದಾಗ ಅಲ್ಲಿರುವ ವಸ್ತುಗಳು ಒಬ್ಬೊಬ್ಬರಿಗೆ ಒಂದೊಂದರಂತೆ ಕಾಣಬಹುದು. ಇದಕ್ಕೆ ಆಪ್ಟಿಕಲ್ ಇಲ್ಯೂಷನ್ ಎಂದು ಕರೆಯಲಾಗಿದೆ. ಇನ್ನು ಕೆಲವು ಚಿತ್ರಗಳ ನೋಡಿದಾಗ ನಮ್ಮ ಮೆದುಳು ಗೊಂದಲಕ್ಕೆ ಒಳಗಾಗುತ್ತದೆ.
ಒಂದೇ ಚಿತ್ರವನ್ನು ಹಲವು ಆಯಾಮದಲ್ಲಿ ಆಲೋಚಿಸಲು ಮೆದುಳು ಆರಂಭಿಸುತ್ತದೆ. ಒಂದು ಕ್ಷಣ ನಮ್ಮ ಮುಂದಿದ್ದ ಚಿತ್ರಣವೇ ಬದಲಾಗಿ ಮತ್ತೊಂದು ಉತ್ತರ ಆ ಚಿತ್ರದಿಂದ ನಮ್ಮ ಮುಂದೆ ಬರುತ್ತದೆ. ಅಂತಿಮವಾಗಿ ನಮ್ಮ ಮೆದುಳು ಒಂದು ಖಚಿತ ಉತ್ತರ ಹುಡುಕಿ ಕೊಡುತ್ತದೆ ಕೆಲವೊಮ್ಮೆ ಈ ಉತ್ತರ ಸಹ ತಪ್ಪಾಗಿರಬಹುದು.

ಇದೇ ರೀತಿ ಇಲ್ಲೊಂದು ಚಿತ್ರ ಸಹ ಈಗ ನೋಡುಗರಿಗೆ ಪ್ರಶ್ನೆ ಹುಟ್ಟುಹಾಕುವಂತೆ ಮಾಡಿದೆ. ಒಂದು ಚಿತ್ರದಲ್ಲಿರುವ ಮೇಕೆಯ ಮಾಲೀಕನನ್ನು 5 ಸೆಕೆಂಡ್‌ಗಳಲ್ಲಿ ಪತ್ತೆ ಮಾಡುವಂತೆ ಸವಾಲು ಹಾಕಲಾಗಿದೆ. ಈ ಚಿತ್ರದಲ್ಲಿ ಮೇಕೆಯ ಜೊತೆ ಅದರ ಮಾಲೀಕನ ಚಿತ್ರವೂ ಇದೆ. ಈ ಚಿತ್ರ ನೋಡಿರುವ ನೆಟ್ಟಿಗರು ತಲೆ ಕೆಡಿಸಿಕೊಂಡು ಮೇಕೆ ಮಾಲೀಕನ ಹುಡುಕಾಟ ನಡೆಸಿದ್ದಾರೆ.
ಅದರಲ್ಲೂ ಕೇವಲ 5 ಸೆಕೆಂಡ್‌ನಲ್ಲಿ ಉತ್ತರ ಹುಡುಕುವ ಪ್ರಶ್ನೆಗೆ ಉತ್ತರ ಹುಡುಕಲು ಮೆದುಳಿಗೆ ಕೆಲಸ ಕೊಟ್ಟಿದ್ದಾರೆ. ನಾವು ಮೇಲ್ನೋಟಕ್ಕೆ ಈ ಚಿತ್ರವನ್ನು ನೋಡಿದಾಗ ಅಲ್ಲಿ ಮೇಕೆ ಹಾಗೂ ಒಂದು ಮರವನ್ನು ಬಿಟ್ಟರೆ ಬೇರೆ ಯಾವ ವಸ್ತು, ಮಾಲೀಕ ಅಲ್ಲಿ ಕಾಣುವುದಿಲ್ಲ. ನೀವು ಎಷ್ಟೇ ಪ್ರಯತ್ನಪಟ್ಟರು ಅಲ್ಲಿ ಮಾಲೀಕನ ಹುಡುಕುವುದು ಸಾಧ್ಯವಾಗುವುದಿಲ್ಲ.
ಅಲ್ಲೇನಾದರು ನೀವು 5 ಸೆಕೆಂಡ್‌ನಲ್ಲಿ ಮೇಕೆ ಮಾಲೀಕನ ನೀವು ಹುಡುಕಿದರೆ ನೀವು ತುಂಬಾ ಲಕ್ಕಿ ಅಂತ ನೆಟ್ಟಿಗರು ಹೇಳಿಕೊಂಡಿದ್ದಾರೆ. ಅಲ್ಲಿ ಮಾಲೀಕ ಎಲ್ಲಿ ಅಡಗಿದ್ದಾನೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ನೀವೂ ಸಹ ಈ ಚಿತ್ರದಲ್ಲಿ ಮಾಲೀಕ ಎಲ್ಲಿದ್ದಾನೆ ಎಂದು ಹುಡುಕಿ ಬಳಿಕ ಈ ಚಿತ್ರದಲ್ಲಿ ಮಾಲೀಕನೇ ಇಲ್ಲ ಎಂಬ ನಿರ್ಧಾರವನ್ನೂ ಮಾಡಿರಬಹುದು.
ಆದರೆ ಈ ಚಿತ್ರದಲ್ಲಿ ಮೇಕೆಯ ಜೊತೆ ಒಬ್ಬ ಮನುಷ್ಯನ ಮುಖವೂ ಇದೆ. ಅದು ಎಲ್ಲಿದೆ ಎಂಬುದನ್ನು ನಾವು ಹೇಳುತ್ತೇವೆ ನೋಡಿ. ಈ ಚಿತ್ರವನ್ನು ಸರಿಯಾಗಿ ಗಮನಿಸಿ ನೋಡಿ. ಈ ಚಿತ್ರದಲ್ಲಿರುವ ಮರ ಹಾಗೂ ಮೇಕೆ ನಡುವೆ ನಿಮಗೆ ಒಬ್ಬ ಮನುಷ್ಯನ ಮುಖದ ಚಿತ್ರ ಕಾಣಬಹುದು. ಇದನ್ನು ಸರಿಯಾಗಿ ಗಮನವಿಟ್ಟು ನೋಡಿದಾಗ ಮಾತ್ರ ಕಂಡುಬರುತ್ತದೆ. ಇಲ್ಲದಿದ್ದರೆ ನಿಮಗೆ ಮೇಕೆ ಹಾಗೂ ಮರ ಮಾತ್ರ ಕಾಣಿಸುತ್ತದೆ.
ಕೆಲವರಿಗೆ ಈ ಚಿತ್ರ ನೋಡಿದ ತಕ್ಷಣವೇ ವ್ಯಕ್ತಿಯೊಬ್ಬನ ಮುಖ ಚಿತ್ರ ಇರುವುದು ತಿಳಿದುಬಂದಿದೆ. ಇನ್ನೂ ಕೆಲವರಿಗೆ ಎಷ್ಟು ಹುಡುಕಿದರು ಸಿಕ್ಕಿಲ್ಲ. ಇದು ಅಲ್ಲದೆ ವ್ಯಕ್ತಿ ಮುಖದ ಹತ್ತಿರ ಕೆಂಪು ಗುರುತು ಹಾಕಿದ ಮೇಲೆಯೂ ಹಲವರಿಗೆ ಅಲ್ಲಿ ವ್ಯಕ್ತಿಯ ಮುಖ ಮೂಡಿರುವುದು ಪತ್ತೆ ಮಾಡಲು ಕಷ್ಟವಾಗಿದೆ.
ಇಂತಹ ಹತ್ತು ಹಲವು ಆಪ್ಟಿಕಲ್ ಇಲ್ಯೂಷನ್ ಸಂಬಂಧಿತ ಚಿತ್ರಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತವೆ. ಜೊತೆಗೆ ಒಂದಿಷ್ಟು ಸಮಯ ಮೆದುಳಿಗೆ ಕೆಲಸ ಕೊಡುತ್ತವೆ. ನಾವು ಇದೊಂದೆ ಅಲ್ಲ ಇದರಂತೆ ಹಲವು ಚಿತ್ರಗಳನ್ನು ಆನ್‌ಲೈನ್‌ನಲ್ಲಿ ನೋಡಬಹುದು. ಇವು ಜನರಲ್ಲಿ ಗೊಂದಲದ ಜೊತೆ ಒಂದಿಷ್ಟು ಮನರಂಜನೆಗೂ ಕಾರಣವಾಗುತ್ತವೆ.



Click it and Unblock the Notifications
