Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಈ ಚಿತ್ರದಲ್ಲಿ ಅಡಗಿರುವ ಟೂತ್ ಬ್ರಷ್ ಹುಡುಕಲು ಸಾಧ್ಯವೇ.? ಟ್ರೈ ಮಾಡಿ
ಇಂಟರ್‌ನೆಟ್‌ನಲ್ಲಿ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ನಮ್ಮ ಮೆದುಳಿಗೆ ಕೆಲಸ ಕೊಡುತ್ತವೆ. ಮತ್ತೆ ಕೆಲವು ಚಿತ್ರದಲ್ಲಿ ಇರುವ ವಸ್ತುಗಳ ಪತ್ತೆ ಮಾಡುವಂತೆ ಸವಾಲು ಹಾಕುತ್ತವೆ. ಆದರೆ ಅದಷ್ಟು ಸುಲಭವಲ್ಲ. ಏಕೆಂದರೆ ಈ ಚಿತ್ರಗಳಲ್ಲಿ ಅಡಗಿರುವ ವಸ್ತುಗಳು ನಮ್ಮ ಮೆದುಳಿಗೆ ಕೆಲಸ ಕೊಡುತ್ತವೆ.
ಆಪ್ಟಿಕಲ್ ಇಲ್ಯೂಷನ್ ಒಂದು ಉತ್ತಮ ಮಿದುಳಿನ ವ್ಯಾಯಾಮವಾಗಿದ್ದು ಅದು ನಿಮ್ಮ ಮೆದುಳನ್ನು ಆರೋಗ್ಯಕರವಾಗಿಡಲು ಬಹಳ ಸಹಾಯಕವಾಗಿದೆ. ಇದು ನಿಮ್ಮ ಗಮನ ಮತ್ತು ವೀಕ್ಷಣಾ ಕೌಶಲ್ಯಗಳನ್ನು ಸುಧಾರಿಸುತ್ತದೆ. ಹೀಗಾಗಿ ಇಂತಹ ಚಿತ್ರಗಳಲ್ಲಿ ಕೆಲವು ವಸ್ತುಗಳ ಹುಡುಕಾಟ ನಡೆಸುತ್ತಿದ್ದರೆ ನಿಮ್ಮ ಮೆದುಳಿನ ಕಾರ್ಯ ಚಟುವಟಿಕೆ ವೇಗ ಪಡೆದುಕೊಳ್ಳುತ್ತದೆ.

(ಫೋಟೋ: Freepik)
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳ ಸವಾಲು ಬಿಡಿಸುವುದು ಸವಾಲಿನ ಕೆಲಸ, ಇದನ್ನು ಪರಿಹರಿಸುವ ಮೂಲಕ ನೀವು ಬಹಳಷ್ಟು ವಿನೋದವನ್ನು ಪಡೆಯುತ್ತೀರಿ. ಇದರಿಂದ ನಿಮ್ಮ ಮೆದುಳಿಗೆ ವ್ಯಾಯಾಮವೂ ಆಗುತ್ತದೆ. ಮತ್ತೆ ಕೆಲವು ಚಿತ್ರಗಳು ಎಷ್ಟು ಹುಡುಕಿದರು ಅದರಲ್ಲಿ ಅಡಗಿರುವ ವಸ್ತುವನ್ನು ಹುಡುಕಲು ಸಾಧ್ಯವಾಗುವುದೇ ಇಲ್ಲ.
ಸದ್ಯ ಈಗೊಂದು ಇಂತಹದ್ದೇ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಚಿಕ್ಕ ಹುಡುಗನೊಬ್ಬ ಮಲಗಿರುವುದನ್ನು ನಾವು ನೋಡಬಹುದು, ಜೊತೆಗೆ ಒಂದು ಬೆಕ್ಕು ಸಹ ಅಲ್ಲಿದೆ. ಇದೆಲ್ಲದೆ ನಡುವೆಯೂ ಆ ಕೊಠಡಿಯಲ್ಲಿ ಹತ್ತಾರು ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಆದ್ರೆ ಈ ಫೋಟೋದಲ್ಲಿ ಅಡಗಿರುವ ಟೂತ್ ಬ್ರಷ್ ಅನ್ನು ಹುಡುಕುವುದೇ ಇಂದಿನ ಸವಾಲಾಗಿದೆ. ಹೌದು ಈ ಚಿತ್ರದಲ್ಲಿ ಒಂದು ಟೂತ್ ಬ್ರಷ್ ಅಡಗಿದೆ ಅದನ್ನು ಪತ್ತೆ ಮಾಡುವಂತೆ ಸವಾಲು ಹಾಕಿ ಈ ಫೋಟೋವನ್ನು ಹರಿಬಿಡಲಾಗಿದೆ. ಜನರು ಸಹ ಈ ಚಿತ್ರದಲ್ಲಿರುವ ಟೂತ್ ಬ್ರಷ್ ಹುಡುಕಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ.
ನೀವು ಸಹ ಈ ಚಿತ್ರದಲ್ಲಿ ಅಡಗಿರುವ ಟೂತ್ ಬ್ರಷ್ ಅನ್ನು ಪತ್ತೆ ಮಾಡಲು ಮುಂದಾಗಿ. ಏಕೆಂದರೆ ಎಲ್ಲಿ ಆ ಟೂತ್ ಬ್ರಷ್ ಅಡಗಿದೆ ಎಂಬುದನ್ನು ಹುಡುಕಲು ಜನರು ಹರಸಾಹಸ ಪಟ್ಟಿದ್ದಾರೆ. ಏಕೆಂದರೆ ಅಷ್ಟು ಸುಲಭವಾಗಿ ಈ ಚಿತ್ರದಲ್ಲಿರುವ ಟೂತ್ ಬ್ರಷ್ ಹುಡುಕಲು ಸಾಧ್ಯವಿಲ್ಲ. ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ. ನಿಮಗೆ ಟೂತ್ ಬ್ರಷ್ ಹುಡುಕಲು ಸಾಧ್ಯವೇ?
ಎಲ್ಲಿದೆ ಗೊತ್ತಾ ಟೂತ್ ಬ್ರಷ್
ನಿಮಗೆ ಈ ಚಿತ್ರದಲ್ಲಿ ಟೂತ್ ಬ್ರಷ್ ಹುಡುಕಲು ಸಾಧ್ಯವಾಗದಿದ್ದರೆ ನಾವು ತೋರಿಸುತ್ತೇವೆ ನೋಡಿ. ಈ ಚಿತ್ರದಲ್ಲಿ ಬೆಡ್ ಮೇಲೆ ಆ ಟೂತ್ ಬ್ರಷ್ ಇದೆ. ಹೌದು ಚಿತ್ರದಲ್ಲಿರುವ ಪ್ಯಾಂಟ್‌ನಲ್ಲಿ ಈ ಟೂತ್ ಬ್ರಷ್ ಅಡಗಿದೆ, ಸುಲಭವಾಗಿ ಇದನ್ನು ಗುರುತಿಸಲು ಸಾಧ್ಯವಿಲ್ಲ. ಏಕೆಂದರೆ ಆ ಪ್ಯಾಂಟ್ ಬಣ್ಣದಂತೆಯೇ ಆ ಟೂತ್ ಬ್ರಷ್‌ನ ಬಣ್ಣವೂ ಇದ್ದು, ಅದು ಇರುವುದು ಕಾಣಿಸುವುದಿಲ್ಲ.
(ಫೋಟೋ: Freepik)
ಹೀಗಾಗಿ ಈ ಚಿತ್ರದಲ್ಲಿ ಟೂತ್ ಬ್ರಷ್ ಹುಡುಕಲು ಜನರು ತಡಕಾಡಿದ್ದಾರೆ. ಎಲ್ಲಿ ಅಡಗಿದೆ ಆ ಟೂತ್ ಬ್ರಷ್ ಎಂಬುದು ತಿಳಿಯದೇ ತಲೆ ಕೆಡಿಸಿಕೊಂಡಿದ್ದಾರೆ. ಇಂತಹ ಫೋಟೋಗಳು ಮೆದುಳಿಗೆ ಕೆಲಸ ಕೊಡುತ್ತವೆ, ನಮ್ಮ ಬುದ್ಧಿಶಕ್ತಿಯ ಪರೀಕ್ಷೆ ಮಾಡುತ್ತವೆ. ಇಲ್ಲಿಯೂ ಅದೇ ಆಗಿದೆ. ಜನ ಎಷ್ಟೇ ಹುಡುಕಾಡಿದರು ಕೊನೆಗೂ ಅದನ್ನು ಗುರಿತು ಮಾಡಿ ತೋರಿಸಬೇಕಾಗುತ್ತದೆ. ಒಮ್ಮೆ ಟೂತ್ ಬ್ರಷ್ ಎಲ್ಲಿದೆ ಎಂದು ತಿಳಿದರೆ ನಿಮಗೆ ಅಚ್ಚರಿಯಾಗುತ್ತದೆ. ಇಷ್ಟು ಸುಲಭವಾಗಿದ್ದರು ಮೊದಲೇ ಏಕೆ ನಮಗೆ ಗುರುತಿಸಲು ಸಾಧ್ಯವಾಗಿಲ್ಲ ಎಂಬುದು ಅಚ್ಚರಿ ಮೂಡಿಸುತ್ತದೆ.



Click it and Unblock the Notifications

