Latest Updates
-
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು?
ಮಾಲಿನ್ಯ ತಡೆಯೋಕೆ ಏರ್‌ಪ್ಯೂರಿಫೈಯರ್ ಸಹಾಯವಾಗುತ್ತಾ? ದೆಹಲಿಯಲ್ಲಿ ನಾಯಿಗೂ ನೆಬ್ಯೂಲೈಸರ್!
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಎಷ್ಟು ಹದಗೆಟ್ಟಿದೆ ಎಂಬ ಕುರಿತು ನಿಮಗೂ ತಿಳಿದಿರಬಹುದು. ಅಲ್ಲಿನ ಗಾಳಿ ವಿಷಾನಿಲವಾಗಿ ಮಾರ್ಪಟ್ಟಿದೆ. ಅದ್ರಲ್ಲೂ ಚಳಿಗಾಲದಲ್ಲಿ ಅಲ್ಲಿನ ವಾಯುಮಾಲಿನ್ಯದ ಪ್ರಯಾಣ ಏರಿಕೆಯಾಗುವುದು ಪ್ರಾಣಕ್ಕೂ ಹಾನಿ ತರುವ ಸಂಭವ ಇರಲಿದೆ. ಅದ್ರಲ್ಲೂ ಶ್ವಾಸಕೋಶ ಸಮಸ್ಯೆ ಹೊಂದಿರುವ ಮಂದಿಗೆ ಇದು ಖಚಿತವಾಗಿ ಹಾನಿ ಮಾಡಲಿದೆ.
ಸದ್ಯ ದೆಹಲಿಯ ಹದಗೆಟ್ಟ ವಾಯುಮಾಲಿನ್ಯದ ಪರಿಣಾಮವಾಗಿ ಶಾಲೆಗಳಿಗೆ ಆನ್‌ಲೈನ್ ತರಗತಿ ನಡೆಸಲು ಸೂಚಿಸಲಾಗಿದೆ. ಹಾಗೆ ಬಹುತೇಕ ಕಡೆ ಮಾಲಿನ್ಯ ತಡೆಗಟ್ಟಲು ಕೃತಕ ಮಳೆ ಸೇರಿದಂತೆ ನಿರಂತರ ಪರಿಹಾರ ಕ್ರಮಕ್ಕೂ ಮುಂದಾಗಲಾಗಿದೆ. ಇದೆಲ್ಲದರ ನಡುವೆ ಮನೆ ಮನೆಯಲ್ಲೂ ಏರ್ ಪ್ಯೂರಿಫೈಯರ್‌ಗಳು ಲಗ್ಗೆ ಇಟ್ಟಿವೆ, ಗಾಳಿಯನ್ನು ಶುದ್ಧ ಮಾಡಲು ಈ ಯಂತ್ರಗಳನ್ನು ಜನರು ಮನೆಯೊಳಗೆ ಇಟ್ಟುಕೊಳ್ಳಬೇಕಾಗಿದೆ.

ಸಾಮಾನ್ಯವಾಗಿ ದೆಹಲಿ ಜನರು ಮಾಲಿನ್ಯದಿಂದ ಪಾರಾಗಲು ಮುಖಕ್ಕೆ ಮಾಸ್ಕ್ ಧರಿಸಿ ಓಡಾಡುತ್ತಿದ್ದರು. ಹಾಗೆ ಈಗ ವೈಯಕ್ತಿಕವಾಗಿ ಶುದ್ಧ ಗಾಳಿ ಪಡೆಯುವ ಉದ್ದೇಶದಿಂದ ಕುತ್ತಿಗೆಗೆ ಹಾಕಿಕೊಳ್ಳಬಹುದಾದ ಸಣ್ಣ ಏರ್ ಪ್ಯೂರಿಫೈಯರ್‌ಗಳು ಸಹ ಬಂದಿವೆ. ಈ ಗ್ಯಾಜೆಟ್ ಅನ್ನು ಜನರು ಧರಿಸಿ ಮನೆಯಿಂದ ಹೊರಬರುತ್ತಿದ್ದಾರೆ, ಇದು ಗಾಳಿಯನ್ನು ಶುದ್ಧಗೊಳಿಸಿ ಉಸಿರಾಡಲು ಉತ್ತಮ ಗಾಳಿ ನೀಡಲಿದೆ ಎಂಬುದು ಅವರ ಅಭಿಪ್ರಾಯವಾಗಿದೆ.
ಹಾಗಾದ್ರೆ ಗಾಳಿ ಶುದ್ಧಗೊಳಿಸುವ ಈ ಚಿಕ್ಕ ಗ್ಯಾಜೆಟ್‌ನಿಂದ ನಿಮಗೆ ಶುದ್ಧ ಗಾಳಿ ಸಿಗಲಿದ್ಯಾ? ಇದರ ಹಿಂದಿರುವ ಸತ್ಯವಾದರು ಏನು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಈ ಗಾಳಿಯನ್ನು ಶುದ್ದಿಗೊಳಿಸುವಂತಹ ಸಾಧನಗಳು ದೊಡ್ಡ ಮಟ್ಟದ ಬದಲಾವಣೆ ತರುವುದಿಲ್ಲ. ಬದಲಾಗಿ ಇವು ಸಣ್ಣ ಮಟ್ಟದಲ್ಲಿ ಕೆಲಸ ಮಾಡುವುದಿಲ್ಲ ಅಂದರೆ ಇದರಿಂದ ಗಾಳಿ ಶುದ್ಧಿಯಾಗುವುದು ಕೇವಲ ದೊಡ್ಡ ಯಂತ್ರಗಳಿಂದ ಮಾತ್ರ ಅದು ಕೂಡ ಮನೆಯ ಕೋಣೆಯ ಒಳಗೆ ಮಾತ್ರವೇ ಇದು ಕೆಲಸ ಮಾಡುತ್ತದೆ. ಇನ್ನು ಹೊರಗೆ ಅದರಲ್ಲೂ ವೈಯಕ್ತಿಕವಾಗಿ ನಿಮಗೆ ಮಾತ್ರವೇ ಶುದ್ಧ ಗಾಳಿ ನೀಡಲು ಸಾಧ್ಯವಿಲ್ಲ.
ಆದ್ರೆ ಮಾಲಿನ್ಯದಿಂದ ಸ್ವಲ್ಪ ಮಟ್ಟಿನ ರಕ್ಷಣೆ ಪಡೆಯಬೇಕಾದರೆ ಎನ್ 95 ಮಾಸ್ಕ್ ಧರಿಸಬಹುದು. ಇದು ಗಾಳಿಯಲ್ಲಿನ ಸಣ್ಣ ಕಣಗಳನ್ನು ಫಿಲ್ಟರ್ ಮಾಡುವ ಗುಣವನ್ನು ಹಿಂದಿದೆ. ಇದರಿಂದ ನಿಮ್ಮ ಉಸಿರಾಡುವಿಕೆಯಲ್ಲಿನ ಮಾಲಿನ್ಯ ಪ್ರಮಾಣ ಕಡಿಮೆ ಮಾಡಬಹುದು. ಆದರೆ ಈ ಮಾಸ್ಕ್‌ಗಳು ಮಾಲಿನ್ಯದ ಗಾಳಿಯು ನಮ್ಮ ದೇಹ ಸೇರುವಿಕೆಯನ್ನು ತಡೆಯೋದಿಲ್ಲ, ಬದಲಿಗೆ ಫಿಲ್ಟರ್ ಮಾಡುತ್ತದೆ.
ನಾಯಿಗೆ ನೆಬ್ಯೂಲೈಸರ್
ದೆಹಲಿಯ ಮಾಲೀನ್ಯ ಎಷ್ಟು ಹದಗೆಟ್ಟಿದೆ ಎಂಬುದನ್ನು ವಿವರಿಸುವ ಒಂದು ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲ್ಲಿ ನಾಯಿಗೆ ಉಸಿರಾಟದ ಸಮಸ್ಯೆಯ ಕಾರಣ ಮಾಲೀಕರು ನೆಬ್ಯೂಲೈಸರ್ ಹಾಕಿರುವುದು ನೋಡಬಹುದು. ಗೋಲ್ಡರ್ ರಿಟ್ರೈವರ್ ನಾಯಿಗೆ ಅವರು ಉಸಿರಾಟದ ಸಮಸ್ಯೆ ಬಾರದೆ ಇರಲಿ ಎಂಬ ಕಾರಣಕ್ಕೆ ನೆಬ್ಯೂಲೈಸರ್ ಬಳಸಿದ್ದಾರೆ.
ಪೋಸ್ಟ್‌ನಲ್ಲಿ ಹೇಳಿರುವಂತೆ ದೆಹಲಿಯ ವಿಷಕಾರಿ ಗಾಳಿಯಿಂದಾಗಿ ತಮ್ಮ ನಾಯಿಗೆ ಬ್ರಾಂಕೈಟಿಸ್ ಬಂದಿದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ. ಗಾಳಿ ನನ್ನ ನಾಯಿಗೆ ಸಹ ಅನಾರೋಗ್ಯವಿಲ್ಲ ಎಂದು ಉಲ್ಲೇಖಿಸಲಾಗಿದೆ. ಅದರೊಂದಿಗೆ ನೆಬ್ಯುಲೈಸರ್‌ನೊಂದಿಗೆ ಗೋಲ್ಡನ್ ರಿಟ್ರೈವರ್‌ನ ಚಿತ್ರ ಮತ್ತು ನಾಯಿಯ ಎದೆಯ ಎಕ್ಸ್-ರೇ ಅನ್ನು ತೋರಿಸುವ ಎರಡನೇ ಚಿತ್ರವಿದೆ.
ಪ್ರಸ್ತುತ ಮತ್ತು ಹಿಂದಿನ ರಾಜಕಾರಣಿಗಳು ಜನರ ಆರೋಗ್ಯಕ್ಕೆ ಆದ್ಯತೆ ನೀಡಲು ಸಾಧ್ಯವಾಗದ ಕಾರಣ ಬಳಲುತ್ತಿರುವ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ನಾಯಿಗಳಿಗೆ ಈ ಪರಿಸ್ಥಿತಿ ಆಗಿದ್ದರೆ ಇನ್ನು ಹಿರಿಯರು ಹಾಗೆ ಮಕ್ಕಳ ಪರಿಸ್ಥಿತಿ ಇನ್ನೆಷ್ಟು ಹದಗೆಡಬಹುದು ಎಂಬುದು ಆಲೋಚಿಸುವುದು ಕೂಡ ಕಷ್ಟವಾಗಿದೆ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.



Click it and Unblock the Notifications