Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ದೀಪಾವಳಿಗೆ ಅಧಿಕೃತ ರಜೆ ಘೋಷಿಸಿದ ಕ್ಯಾಲಿಫೋರ್ನಿಯಾ: ಯಾವ ದೇಶ ದೀಪಾವಳಿ ಆಚರಿಸುತ್ತೆ ಗೊತ್ತಾ?
ಹಿಂದೂಗಳ ಪಾಲಿನ ದೊಡ್ಡ ಹಬ್ಬ ಹಾಗೆ ಅತ್ಯಂತ ಸಂಭ್ರಮದಿಂದ ಆಚರಿಸಲ್ಪಡುವ ಹಬ್ಬ ಅಂದರೆ ಅದು ದೀಪಾವಳಿ, ದೀಪಗಳ ಹಚ್ಚಿ ಅಜ್ಞಾನದಿಂದ ಹೊರಬರುವ ಹಬ್ಬದ ಸಂಕೇತವಾಗಿದೆ. ಹಾಗೆ ಪಟಾಕಿ ಸಿಡಿಸಿ ಸಂಭ್ರಮಿಸುವುದು ನೋಡಬಹುದು. ಈಗ ವಿಶ್ವದ ಹಲವು ಭಾಗದಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಅದ್ರಲ್ಲೂ ಈಗ ಅಮೆರಿಕದಲ್ಲಿ ದೀಪಾವಳಿಯ ಸಡಗರ ದುಪ್ಪಟ್ಟಾಗುವ ಲಕ್ಷಣಗಳಿವೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ದೀಪಾವಳಿಯನ್ನು ರಾಜ್ಯದಲ್ಲಿ ಅಧಿಕೃತ ರಜಾದಿನವನ್ನಾಗಿ ಘೋಷಿಸಲಾಗಿದೆ. ಇದು ಈ ರಾಜ್ಯದಲ್ಲಿ ಭಾರತೀಯರ ಸಂಖ್ಯೆ ಹೆಚ್ಚಾಗಿದ್ದು ಈ ಕಾರಣದಿಂದಾಗಿ ದೀಪಾವಳಿಯಂದು ರಜೆ ನೀಡಲು ಅಲ್ಲಿನ ಸ್ಥಳಿಯಾಡಳಿತ ನಿರ್ಧರಿಸಿದೆ. ಈ ಮೂಲಕ ದೀಪಾವಳಿಗೆ ಸಾರ್ವಜನಿಕ ರಜೆ ಘೋಷಿಸಿದ ಮೂರನೇ ರಾಜ್ಯ ಇದಾಗಿದೆ.

ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್ ಮಂಗಳವಾರ ದೀಪಾವಳಿಯನ್ನು ರಾಜ್ಯ ರಜಾದಿನವೆಂದು ಘೋಷಿಸುವ ಮಸೂದೆಗೆ ಸಹಿ ಹಾಕಿದ್ದಾರೆ. ದೀಪಾವಳಿಯನ್ನು ಅಧಿಕೃತ ರಜಾದಿನವೆಂದು ಗೊತ್ತುಪಡಿಸುವ 'AB 268' ಎಂಬ ಮಸೂದೆಯು ಕ್ಯಾಲಿಫೋರ್ನಿಯಾದ ಶಾಸಕಾಂಗದ ಎರಡೂ ಸದನಗಳಲ್ಲಿ ಯಶಸ್ವಿಯಾಗಿ ಅಂಗೀಕರಿಸಲಾಗಿದೆ.
ಕ್ಯಾಲಿಫೋರ್ನಿಯಾ ಭಾರತೀಯ ಅಮೆರಿಕನ್ನರು ಅತೀ ಹೆಚ್ಚು ಸಂಖ್ಯೆಯಲ್ಲಿ ನೆಲೆಸಿರುವ ಸ್ಥಳವಾಗಿದೆ. ದೀಪಾವಳಿಯನ್ನು ಅಧಿಕೃತ ರಜಾದಿನವೆಂದು ಘೋಷಿಸುವ ಮೂಲಕ ನಮ್ಮದು ವೈವಿಧ್ಯಮಯ ರಾಜ್ಯ ಎಂಬುದನ್ನು ಹಾಗೆ ಅನೇಕರಿಗೆ ದೀಪಾವಳಿಯ ಕುರಿತಾಗಿ ಪರಿಚಯಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಅಕ್ಟೋಬರ್ 2024 ರಲ್ಲಿ ಪೆನ್ಸಿಲ್ವೇನಿಯಾ ದೀಪಾವಳಿಯನ್ನು ಅಧಿಕೃತವಾಗಿ ರಾಜ್ಯ ರಜಾದಿನವೆಂದು ಮೊದಲ ಬಾರಿಗೆ ಘೋಷಿಸಲಾಗಿತ್ತು, ಇದಾದ ಬಳಿಕ ನ್ಯೂಯಾರ್ಕ್ ನಗರ ಕೂಡ ದೀಪಾವಳಿಯನ್ನು ಅಧಕೃತ ರಾಜ್ಯ ರಜಾದಿನ ಎಂಬುದಾಗಿ ಘೋಷಿಸಿತ್ತು. ಈಗ ದೀಪಾವಳಿಯನ್ನು ರಜಾ ದಿನವಾಗಿ ಘೋಷಿಸಿದ ಕ್ಯಾಲಿಫೋರ್ನಿಯಾ ನಿರ್ಧಾರವನ್ನು ಹಲವರು ಸ್ವಾಗತಿಸಿದ್ದಾರೆ.
ವಿಶ್ವದ ಯಾವೆಲ್ಲಾ ದೇಶದಲ್ಲಿ ದೀಪಾವಳಿ ಆಚರಿಸುತ್ತಾರೆ?
ಭಾರತ ಮಾತ್ರವಲ್ಲದೆ ದೀಪಾವಳಿಯನ್ನು ವಿಶ್ವದ ಹಲವು ದೇಶಗಳಲ್ಲಿ ಆಚರಿಸಲಾಗುತ್ತಿದೆ.
ನೇಪಾಳ
ನೇಪಾಳದಲ್ಲಿ ದೀಪಾವಳಿಯನ್ನು ತಿಹಾರ್ ಎಂದು ಕರೆಯಲಾಗುತ್ತದೆ ಮತ್ತು ಐದು ದಿನಗಳ ಕಾಲ ನಡೆಯುವ ಹಬ್ಬ ಎಂದು ಪರಿಗಣಿಸಲಾಗಿದೆ. ಭಾರತದಂತೆಯೇ ನೇಪಾಳದ ಜನರು ಲಕ್ಷ್ಮಿ ದೇವತೆ ಮತ್ತು ಗಣೇಶನನ್ನು ಪೂಜಿಸುತ್ತಾರೆ.
ಶ್ರೀಲಂಕಾ
ಶ್ರೀಲಂಕಾದಲ್ಲಿ ತಮಿಳು ಸಮುದಾಯ ದೊಡ್ಡ ಸಂಖ್ಯೆಯಲ್ಲಿದ್ದು ಅವರು ಕೂಡ ಸಂಭ್ರಮದಿಂದ ದೀಪಾವಳಿ ಆಚರಿಸುತ್ತಾರೆ. ವಾಸ್ತವವಾಗಿ ಇದು ದೇಶದ ಕೆಲವು ಭಾಗಗಳಲ್ಲಿ ಸಾರ್ವಜನಿಕ ರಜಾದಿನವಾಗಿದೆ. ಭಾರತದಂತೆಯೇ ಅವರು ಎಣ್ಣೆ ದೀಪಗಳನ್ನು ಬೆಳಗಿಸುತ್ತಾರೆ.
ಸಿಂಗಾಪುರ
ಪ್ರವಾಸಿಗರ ಅಚ್ಚು ಮೆಚ್ಚಿನ ತಾಣವಾಗಿರುವ ಸೀಂಗಾಪುರದಲ್ಲಿಯೂ ಪ್ರತಿ ವರ್ಷ ದೀಪಾವಳಿ ಆಚರಿಸುತ್ತಾರೆ. ಲಿಟಲ್ ಇಂಡಿಯಾದಂತಹ ಸ್ಥಳದಲ್ಲಿ ಅದ್ದೂರಿ ಆಚರಣೆ ಹಾಗೆ ಹಲವು ಭಾಗದಲ್ಲಿ ದೀಪ ಹಚ್ಚಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಅಲ್ಲಿಯೂ ತಮಿಳು ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ.
ಮಾರಿಷಸ್
ಮಾರಿಷಸ್ ಸುಮಾರು 50% ಹಿಂದೂ ಜನಸಂಖ್ಯೆಯನ್ನು ಹೊಂದಿದೆ ಮತ್ತು ದೇಶದಲ್ಲಿ ಬೆಳಕಿನ ಹಬ್ಬವನ್ನು ಪೂರ್ಣ ಉತ್ಸಾಹದಿಂದ ಆಚರಿಸುತ್ತಾರೆ. ದೀಪಾವಳಿಗೆ ಅಲ್ಲಿ ಸಾರ್ವಜನಿಕ ರಜಾದಿನವಾಗಿದೆ
ಮಲೇಷ್ಯಾ
ಹರಿ ದೀಪಾವಳಿ ಎಂದೂ ಕರೆಯಲ್ಪಡುವ ಮಲೇಷಿಯನ್ನರು ಐದು ದಿನಗಳ ಕಾಲ ದೀಪಾವಳಿಯನ್ನು ಆಚರಿಸುತ್ತಾರೆ. ಅವರು ಕೂಡ ದೀಪ ಬೆಳಗಿಸಿ ಪಟಾಕಿ ಸಿಡಿಸುವ ಸಂಪ್ರದಾಯ ಆಚರಿಸುತ್ತಾರೆ.
ಫಿಜಿ
ದೀಪಾವಳಿ ಫಿಜಿಯ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದು ಸಾರ್ವಜನಿಕ ರಜಾದಿನವಾಗಿದೆ. 1879 ರಿಂದ ಈ ಹಬ್ಬವನ್ನು ಆಚರಿಸುತ್ತಿದೆ. ಇಂಡೋ-ಫಿಜಿಯನ್ ಮಾತ್ರವಲ್ಲ, ಈ ಹಬ್ಬವನ್ನು ದೇಶದ ಎಲ್ಲಾ ಸಮುದಾಯಗಳು ಆಚರಿಸುತ್ತಾರೆ.
ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯರು ದೀಪಾವಳಿ ಆಚರಿಸುತ್ತಾರೆ. ಹೀಗಾಗಿ ಇದು ಕೂಡ ಸಂಭ್ರಮದ ಹಬ್ಬವಾಗಿ ಆಚರಿಸಲಾಗುತ್ತದೆ. ಅಲ್ಲಿಯೂ ದೀಪಗಳ ಹಚ್ಚಿ ಸಿಹಿ ಹಚ್ಚಿ ಮನೆಯಲ್ಲಿ ಸಂಭ್ರಮದಿಂದ ದೀಪಾವಳಿ ಆಚರಿಸುತ್ತಾರೆ.



Click it and Unblock the Notifications