Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಎರಡು ತಲೆ ಅಂಟಿಕೊಂಡಿರುವ ಕರುವಿಗೆ ಜನ್ಮ ನೀಡಿದ ಹಸು..!
ಕೆಲವೊಮ್ಮೆ ವಿಜ್ಞಾನಕ್ಕೆ ಸವಾಲು ಒಡ್ಡುವಂತಹ ಘಟನೆಗಳು ನಡೆಯುತ್ತವೆ. ಅದರಲ್ಲೂ ನಿಸರ್ಗದಲ್ಲಿ ಎಷ್ಟೊಂದು ವಿಚಿತ್ರ, ವಿಭಿನ್ನ ಘಟನೆಗಳು ನಡೆಯುತ್ತವೆ ಅನ್ನೋದನ್ನ ನಾವು ನೋಡಿದ್ದೇವೆ. ಆದ್ರೆ ಕೆಲವೊಂದನ್ನು ನಾವು ಊಹಿಸಲು ಸಹ ಸಾಧ್ಯವಿಲ್ಲ. ಹಾಗೆ ಪ್ರಾಣಿಗಳ ಜಗತ್ತಿನಲ್ಲಿಯೂ ಸಂಭವಿಸುವ ಕೆಲವು ಘಟನೆಗಳು ಎಲ್ಲರನ್ನು ಮೂಖರನ್ನಾಗಿಸುತ್ತವೆ.
ಇಲ್ಲೊಂದು ಘಟನೆ ಸಹ ಎಲ್ಲರಲ್ಲೂ ಅಚ್ಚರಿ ಮೂಡಿಸಿವೆ. ಮಂಗಳೂರಿನ ಕಿನ್ನಿಗೋಳಿ ಪ್ರದೇಶದಲ್ಲಿ ಹಸುವೊಂದು ವಿಶಿಷ್ಟ ಕರುವಿಗೆ ಜನ್ಮ ನೀಡಿದೆ. ಒಂದೆ ಕರುವಿಗೆ ಎರಡು ತಲೆಗಳಿರುವುದನ್ನು ನೋಡಬಹುದು. ಒಂದು ಕರುವಿಗೆ ಎರಡು ತಲೆ ಹೊಂದಿರುವ ವಿಚಿತ್ರ ಘಟನೆ ಇದಾಗಿದೆ.
ದಾಮಸ್ ಕಟ್ಟೆ ದುಜಲಗುರಿ ನಿವಾಸಿ ಜಯರಾಮ ಜೋಗಿ ಎಂಬುವವರಿಗೆ ಸೇರಿದ ಹಸು ಇದಾಗಿದೆ. ಕರು ಒಂದು ದೇಹ ಮತ್ತು ಎರಡು ತಲೆಗಳನ್ನು ಹೊಂದಿದೆ. ತಲೆಗಳನ್ನು ಬದಿಯಿಂದ ಅಂಟಿಕೊಂಡಿದೆ. ಈ ಹಸು ಒಟ್ಟು ನಾಲ್ಕು ಕಣ್ಣಗಳನ್ನು ಹೊಂದಿರುವ ಈ ಕರು ಎದ್ದು ಓಡಾಡಲು ಆಗುತ್ತಿಲ್ಲ. ಏಕೆಂದರೆ ಎರಡು ತಲೆಗಳು ಅಂಟಿಕೊಂಡಿರುವ ಕಾರಣ ಎದ್ದು ನಿಲ್ಲಲು ಹಾಗೂ ಸಮತೋಲನಗೊಳಿಸಲು ಪರದಾಡುತ್ತಿದೆ.

ಹೀಗಾಗಿ ಕರುವಿಗೆ ಮಲಗಿದ್ದಲ್ಲಿಯೇ ಹಾಲು ಕುಡಿಸಬೇಕಾಗಿದೆ. ಪಶುವೈದ್ಯರು ಅದನ್ನು ಪರೀಕ್ಷಿಸಿದ್ದಾರೆ ಮತ್ತು ಸದ್ಯಕ್ಕೆ ಆರೋಗ್ಯವಾಗಿದೆ ಎಂದು ಹೇಳಿದ್ದಾರೆ. ಆದರೆ ನಂತರ ಪರಿಸ್ಥಿತಿ ಬದಲಾಗಬಹುದು. ಈ ಕರು ಕೆಲ ದಿನಗಳಲ್ಲಿ ಮೃತಪಡಬಹುದು ಎಂದಿದ್ದಾರೆ. ಇಡೀ ದೇಹ ಅಂಟಿಕೊಂಡಿರುವುದರಿಂದ ಆಹಾರ ಸೇವೆಯಿಂದ ಹಿಡಿದು ಎಲ್ಲಾ ಕಾರ್ಯಗಳಲ್ಲೂ ಅಡ್ಡಿಯಾಗಲಿದೆ. ಹೀಗಾಗಿ ಈ ಕರು ಮೃತಪಡುವ ಸಾಧ್ಯತೆ ಹೆಚ್ಚು.
2016ರಲ್ಲಿ ರಾಜಸ್ಥಾನದ ಉದಯಪುರದಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿತ್ತು. ಕರುವು ತಲೆಯಲ್ಲಿ ಸೇರಿಕೊಂಡು ಒಂದು ದೇಹವನ್ನು ಹಂಚಿಕೊಂಡು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿತ್ತು. ಇದು ಮಿಲಿಯನ್‌ಗೆ ಒಂದು ಪ್ರಕರಣ ಎಂದು ಪಶುವೈದ್ಯರು ತಿಳಿಸಿದ್ದಾರೆ.
ನಾಲ್ಕು ಕೈ ನಾಲ್ಕು ಕಾಲಿನ ಮಗು..!
ಇನ್ನು ಮನುಷ್ಯರಲ್ಲೂ ಈ ರೀತಿಯ ವಿಚಿತ್ರ ಘಟನೆಗಳು ನಡೆಯುವುದನ್ನು ನಾವು ನೋಡಬಹುದು. ಪಂಜಾಬ್‌ನ ಕ್ರಾನ್ ಪೊಲೀಸ್ ಠಾಣೆಯ ವ್ಯಾಪ್ತಿಯ ಕಿರಾತಾಪುರ ಗ್ರಾಮದ ಕೊರಿಯನ್ ಪೂರ್ವಾ ಪ್ರದೇಶದಲ್ಲಿ ಮಗು ನಾಲ್ಕು ಕೈ, ನಾಲ್ಕು ಕಾಲು ಹಾಗೂ ಎರಡು ತಲೆಯೊಂದಿಗೆ ಜನಿಸಿತ್ತು. ಇದೇ ವರ್ಷ ಜುಲೈನಲ್ಲಿ ಈ ಘಟನೆ ವರದಿಯಾಗಿತ್ತು.
ಆದರೆ ಈ ಮಗು ಜನಿಸಿದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿತ್ತು. ತಾಯಿ ರಮಾದೇವಿಗೆ ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಅಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಸೇರಿದ ಕೆಲವೇ ಹೊತ್ತಿನಲ್ಲಿ ಹೆರಿಗೆ ಆಗಿದೆ. ಆಸ್ಪತ್ರೆ ಸಿಬ್ಬಂದಿ ಭಯದಿಂದ ವಾರ್ಡ್‌ನಿಂದ ಹೊರಗೆ ಬಂದಿದ್ದರು. ಆದರೆ ಮಗುವ ಹಾಲು ಕುಡಿಯುವುದು ಕಷ್ಟವಾಗಿದ್ದ ಕಾರಣ ಕಲವೇ ಗಂಟೆಯಲ್ಲಿ ಮೃತಪಟ್ಟಿತ್ತು.
ಆಗತಾನೆ ಜನಿಸಿದ ಶಿಶುವಿಗೆ ನಾಲ್ಕು ಕೈ, ನಾಲ್ಕು ಕಾಲು, ಎರಡು ತಲೆ ಇರುವುದು ಕಂಡುಬಂದಿದೆ. ಆದರೆ ಎರಡು ಕಾಲು ಅಭಿವೃದ್ಧಿ ಆಗದೆ ಸಣ್ಣದಾಗಿತ್ತು. ಆದರೆ ಹುಟ್ಟಿದ 5 ಗಂಟೆಯ ಬಳಿಕ ಮಗು ಮೃತಪಟ್ಟಿದೆ. ಈ ವಿಚಿತ್ರ ಮಗುವನ್ನು ನೋಡಿ ಎಲ್ಲರು ಭಯಪಟ್ಟಿದ್ದರು. ಆಸ್ಪತ್ರೆಯಲ್ಲಿ ಗೊಂದಲವೇ ಏರ್ಪಟ್ಟಿತ್ತು. ಇಚಿತ್ರ ಮಗು ಜನಿಸಿರುವುದನ್ನು ಕೇಳಿ ಮಗು ನೋಡಲು ಅಲ್ಲಿನ ಜನರು ಮುಗಿಬಿದ್ದಿದ್ದರು.
32 ಹಲ್ಲಿನೊಂದಿಗೆ ಹುಟ್ಟಿತ್ತು ಮಗು
ಮಗು ಜನಿಸಿದ ಮಗುವಿಗೆ 9 ತಿಂಗಳು ಅಥವಾ ಕೆಲವರಿಗೆ ಬೆಳವಣಿಗೆ ಮೇಲೆ 10, 11 ಅಥವಾ ಒಂದು ವರ್ಷಗಳ ಬಳಿಕ ಒಂದರಿಂದ ಮೂರು ಹಲ್ಲುಗಳನ್ನು ಬರುತ್ತದೆ. ಆದರೆ ವಿಚಿತ್ರ ಎಂಬಂತೆ ಇಲ್ಲೊಬ್ಬ ಮಗು 32 ಹಲ್ಲುಗಳೊಂದಿಗೆ ಹೊಟ್ಟಿ ಎಲ್ಲರಲ್ಲು ಅಚ್ಚರಿ ಮೂಡಿಸಿತ್ತು. ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ವಾಸಿಸುತ್ತಿರುವ ನಿಕಾ ದಿವಾ ಎಂಬ ಮಹಿಳೆ ತನ್ನ ನವಜಾತ ಶಿಶುವಿನ ಅಪರೂಪದ ಸ್ಥಿತಿಯ ಮಗುವಿಗೆ ಜನ್ಮ ನೀಡಿದ್ದರು. ಹುಟ್ಟುವಾಗಲೇ ಮಗುವಿನ ಬಾಯಿಯ ತುಂಬೆಲ್ಲಾ ಹಲ್ಲುಗಳಿದ್ದವು. ಆದರೆ ಇದೊಂದು ವೈದ್ಯಕೀಯ ಸಮಸ್ಯೆಯಿಂದಾಗು ಜನಿಸುವ ಮಕ್ಕಳು ಎಂದು ತಿಳಿದುಬಂದಿತ್ತು.



Click it and Unblock the Notifications











