Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮಾರುಕಟ್ಟೆಗೆ ಬಂತ ನಕಲಿ ಎಲೆಕೋಸು..? ಈ ವಿಡಿಯೋ ನೋಡಿ ನೀವೇ ನಿರ್ಧರಿಸಿ!
ಮಾರುಕಟ್ಟೆಯಲ್ಲಿ ಸಿಗುವಂತಹ ಎಲ್ಲಾ ವಸ್ತುಗಳು ಕೂಡ ಈಗ ಕಳಪೆ ಹಾಗೂ ನಕಲಿಯಾಗಿದ್ಯಾ ಎಂಬ ಅನುಮಾನದಲ್ಲೇ ನಾವು ಖರೀದಿಸಲು ಮುಂದಾಗುತ್ತೇವೆ. ಅದರಲ್ಲೂ ತರಕಾರಿ, ದಿನಸಿ ವಸ್ತುಗಳಂತೂ ಕಲಬೆರಕೆಯಾಗ್ತಿದ್ಯಾ ಎಂಬ ಅನುಮಾನ ಯಾವಾಗಲು ಮೂಡುತ್ತದೆ. ಇತ್ತಿಚಿಗೆ ಪ್ರತಿಯೊಂದು ವಸ್ತುಗಳು ಕಲಬೆರಕೆ, ನಕಲಿಯಾಗಿ ಗ್ರಾಹಕರ ಕೈಸೇರುತ್ತಿರುವುದು ಕೂಡ ನಾವು ನೋಡುತ್ತಿದ್ದೇವೆ.
ಕೃತಕ ಬಣ್ಣ ಹಾಕಿ ಮಾರುವುದು, ಕಲ್ಲು, ಮಣ್ಣು ಮಿಶ್ರಣ, ಪ್ಲಾಸ್ಟಿಕ್ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಕಳಪೆ ಉತ್ಪನ್ನ ಕೈ ಸೇರುತ್ತದೆ. ಈ ಹಿಂದೆ ಅಕ್ಕಿ, ಮೊಟ್ಟೆ, ಬೆಳ್ಳುಳ್ಳಿ, ಟೀ ಪುಡಿ, ಜೇನು ತುಪ್ಪ, ಎಣ್ಣೆ, ತುಪ್ಪ, ಬೆಣ್ಣೆ ಹೀಗೆ ಹತ್ತಾರು ವಸ್ತುಗಳು ಕಲಬೆರಕೆಯಾಗಿ, ನಕಲಿಯಾಗಿ ಜನರ ಕೈಸೇರುತ್ತಿದ್ದ ಕುರಿತು ದೂರುಗಳು, ವಿಡಿಯೋಗಳು ಹರಿದಾಡುತ್ತಿದ್ದರು.

ಆದರೆ ಈ ಸಾಲಿಗೆ ಈಗ ಹೊಸದಾಗಿ ತರಕಾರಿ ಉತ್ಪನ್ನಗಳು ಕೂಡ ಸೇರಿಕೊಳ್ಳುತ್ತಿವೆ. ನಮ್ಮ ದೈನಂದಿನ ಜೀವನದಲ್ಲಿ ತರಕಾರಿ ಅಗತ್ಯ ವಸ್ತುಗಳಾಗಿವೆ. ಪ್ರತಿಯೊಬ್ಬರು ಇದನ್ನು ಖರೀದಿಸಿಯೇ ಖರೀದಿಸುತ್ತಾರೆ. ಹೀಗಾಗಿ ತರಕಾರಿಗಳಲ್ಲೂ ಈಗ ನಕಲಿ ತರಕಾರಿ ಕೈಸೇರುವುದು ಅಚ್ಚರಿಗಳಿಗೆ ಕಾರಣವಾಗುತ್ತಿದೆ. ಈಗ ಈ ಸಾಲಿಗೆ ಹೊಸದಾಗಿ ಎಲೆಕೋಸು ಸೇರಿಕೊಂಡಿದೆ.
ಹೌದು ಇಲ್ಲೊಂದು ವಿಡಿಯೋದಲ್ಲಿ ಮಹಿಳೆಯೊಬ್ಬರು ನಕಲಿ ಎಲೆಕೋಸು ಪಡೆದಿರುವುದಾಗಿ ಅವರು ಹೇಳಿದ್ದಾರೆ. ಆನ್‌ಲೈನ್ ಮಾರ್ಟ್‌ನಲ್ಲಿ ಆರ್ಡರ್ ಮಾಡಿ ಖರೀದಿಸಿದ್ದ ಈ ಎಲೆಕೋಸು ಅಸಲಿಯೋ ಅಥವಾ ನಕಲಿಯೋ ಎಂಬ ಪ್ರಶ್ನೆ ಮಾಡಿದ್ದಾರೆ. ಆಕೆ ಆ ಎಲೆಕೋಸನ್ನು ಬಿಡಿಸಿ ಕತ್ತರಿಸಿದ ಬಳಿಕ ಆಕೆಗೆ ಈ ಅನುಮಾನ ಬಂದಿದೆ. ಏಕೆಂದರೆ ಸಾಮಾನ್ಯ ಎಲೆಕೋಸಿನಂತೆ ಅದು ಮೃದುವಾಗಿಲ್ಲ ಬದಲಿಗೆ ಸ್ವಲ್ಪ ವಿಚಿತ್ರ ಅನುಭವ ನೀಡುವಂತಿದೆ.
ಆಕೆ ಈ ಹೂಕೋಸನ್ನು ಬಿಡಿಸಿ ಬಳಿಕ ಒಂದು ದಳವನ್ನು ಗ್ಯಾಸ್ ಮೇಲೆ ನೇರವಾಗಿ ಕಾಯಿಸುವುದು ನೋಡಬಹುದು, ಆದ್ರೆ ಈ ಎಲೆಕೋಸು ಸುಡದೆ ಮತ್ತಷ್ಟು ಗಟ್ಟಿಯಾಗಿದೆ. ಈ ಎಲೆಯನ್ನು ಆಕೆ ಹರಿಯಲು ಯತ್ನಿಸಿದಾಗಲೂ ಅದು ಗಟ್ಟಿಯಾಗಿದೆ ಹರಿದು ಹೋಗದೆ ಗಟ್ಟಿಯಾಗಿದೆ. ಇದು ಅನುಮಾನ ಮತ್ತಷ್ಟು ಗಟ್ಟಿಯಾಗುವಂತೆ ಮಾಡಿದೆ.
ಇದು ನಿಜವಾದ ಎಲೆಕೋಸು ಆಗಿದ್ದರೆ ಬಿಡಿಸಿದಾಗ ಹರಿದು ಹೋಗಬೇಕು. ಮೆತ್ತಗೆ ಇರಬೇಕಾಗಿತ್ತು, ಆದ್ರೆ ಈ ವಿಡಿಯೋದಲ್ಲಿ ಎಲೆಕೋಸು ಸ್ವಲ್ಪ ವಿಚಿತ್ರವಾಗಿರುವಂತೆ ಕಾಣಿಸುತ್ತಿದೆ. ಹೀಗಾಗಿ ಇದು ನಕಲಿಯಾಗಿರಬಹುದು ಎಂಬ ಅನುಮಾನ ಮೂಡುತ್ತಿದೆ. ಈ ಎಲೆಕೋಸು ಮೈದಾ ಹಿಟ್ಟಿನಂತೆ ಗಟ್ಟಿಯಾಗಿ ಹಿಗ್ಗುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರು ಅಚ್ಚರಿಗೆ ಒಳಗಾಗಿದ್ದಾರೆ. ಇದು ಖಂಡಿತ ನಕಲಿ ಎಂದು ಕೆಲವರು ವಾದಿಸಿದರೆ ಮತ್ತೆ ಕೆಲವರು ಇದು ನೈಜ ಎಲೆಕೋಸು ಎಂದಿದ್ದಾರೆ. ಈ ಎಲೆಕೋಸು ನಕಲಿಯೇ, ನೀವು ಪರಿಶೀಲಿಸಿ ಖರೀದಿಸಬೇಕಿತ್ತು, ಆದ್ರೆ ಇದನ್ನು ನಂಬುವುದು ಕಷ್ಟವಾಗುತ್ತಿದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಇದು ನಕಲಿ ಅಲ್ಲ ಬದಲಿಗೆ ಹಲವು ದಿನ ಫ್ರೀಜರ್‌ನಲ್ಲಿ ಇಟ್ಟಿರುವ ಪರಿಣಾಮ ಅದು ಈ ರೀತಿ ಗಟ್ಟಿಯಾಗಿದೆ. ತಮ್ಮ ಸಾರಾಂಶ ಕಳೆದುಕೊಂಡು ಅದು ಹಿಗ್ಗುತ್ತಿದೆ ಎಂದು ಮತ್ತೊಬ್ಬರು ವಿವರಿಸಿದ್ದಾರೆ. ಎಲೆಕೋಸು ನಕಲಿಯಾದರೆ ಅದನ್ನು ಗುರುತಿಸುವುದು ಹೇಗೆ? ಇದು ಖಂಡಿತ ಮುಂದೆ ಸಮಸ್ಯೆಗಳ ದೊಡ್ಡ ರಾಶಿಯನ್ನೇ ಸೃಷ್ಟಿಸಲಿದೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು ಎಲ್ಲರಲ್ಲೂ ಇದು ಅಸಲಿಯೀ ನಕಲಿಯೋ ಎಂಬ ಪ್ರಶ್ನೆಯಂತು ಮೂಡಿಸಿದೆ.



Click it and Unblock the Notifications
