Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ನಿದ್ದೆಗೆ ಜಾರಿ ಕ್ಯಾಬ್ ಡ್ರೈವರ್, ತಾನೆ ಕಾರು ಡ್ರೈವ್ ಮಾಡಿ ಬಂದ ಪ್ರಯಾಣಿಕ: ಈತನ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ
ಏರ್‌ಪೋರ್ಟ್‌ಗೆ ಬಂದಿಳಿದು ಮನೆಗೆ ಟ್ಯಾಕ್ಸಿ ಬುಕ್ ಮಾಡಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತಾನೇ ಕ್ಯಾಬ್ ಡ್ರೈವ್ ಮಾಡಿ ಮನೆ ತಲುಪಬೇಕಾಗಿ ಬಂದ ಸ್ವಾರಸ್ಯಕರ ಕತೆಯನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಸಾಕಷ್ಟು ಬಾರಿ ಎಲ್ಲರ ಬದುಕಿನಲ್ಲಿ ಇಂಥ ಕೆಲ ಘಟನೆಗಳು ನಡೆಯುತ್ತದೆ, ನಮ್ಮದ್ದಲ್ಲದ ರೋಲ್ ನಿಭಾಯಿಸಬೇಕಾಗುತ್ತದೆ.

ಅವರು ತಮ್ಮ ಕತೆಯನ್ನು ಹೀಗೆ ಹೇಳಿದ್ದಾರೆ ' ಕಳೆದ ರಾತ್ರಿ ಮುಂಜಾನೆ 3 ಗಂಟೆಗೆ ಬೆಂಗಳೂರು ಏರ್‌ಪೋರ್ಟ್‌ಗೆ ಬಂದಿಳಿದೆ, ಅಲ್ಲಿಂದ ಕ್ಯಾಬ್‌ನಲ್ಲಿ ಹೋಗುತ್ತಿದ್ದಾಗ ಕ್ಯಾಬ್ ಡ್ರೈವರ್‌ಗೆ ತುಂಬಾ ನಿದ್ದೆ ಬಂದು ತೂಕಡಿಸುವುದನ್ನು ಗಮನಿಸಿದೆ. ಅವರು ಒಂದು ಕಡೆ ನಿಲ್ಲಿಸಿ ಟೀಕುಡಿದು ಸಿಗರೇಟ್ ಎಳೆದರೂ ಅವರಿಗೆ ಕಣ್ಣುಗಳನ್ನು ಬಿಡುವುದು ಕಷ್ಟವಾಗುತ್ತಿತ್ತು, ಅಷ್ಟರಮಟ್ಟಿಗೆ ನಿದ್ದೆ ತೂಕಡಿಸುತ್ತಿದ್ದರು. ಅದನ್ನು ನೋಡಿ ನಾನು ಓಡಿಸುತ್ತೇನೆ ಎಂದೆ, ಅಚ್ಚರಿಯೆಂದರೆ ಅವರು ಏನೂ ಹೇಳದೆ ಕೀ ಕೊಟ್ಟರು. ನಂತರ ಪ್ರಯಾಣಿಕರ ಸೀಟ್‌ನಲ್ಲಿ ಕುಳಿತರು.ಗೂಗಲ್ ಮ್ಯಾಪ್ ನೋಡಿ ಗಾಡಿ ಚಲಾಯಿಸಲಾರಂಭಿಸಿದೆ, ನಾವು ತಲುಪುವ ಸ್ವಲ್ಪ ಮುಂದೆ ಅವರ ಬಾಸ್ ಕರೆ ಮಾಡಿದ್ದರು, ಆವಾಗ ಇವರು ನನಗೆ ನೈಟ್ ಶಿಫ್ಟ್ ಕಷ್ಟ, ಡೇ ಶಿಫ್ಟ್ ಹಾಕಿ ಎಂದು ಹೇಳುತ್ತಿರುವುದನ್ನು ಕೇಳಿ ನನಗೆ ಅವರ ಬಗ್ಗೆ ಪಾಪ ಅನಿಸಿತು.
ನಾನು ನನ್ನ ಸ್ಥಳ ತಲುಪಿದ ಮೇಲೆ ಅವರಿಗೆ 100 ರುಪಾಯಿ ಟಿಪ್ಸ್ ನೀಡಿ, ನನಗೆ ನೀವು 5 ಸ್ಟಾರ್ ರೇಟಿಂಗ್ ನೀಡಿ ಎಂದು ತಮಾಷೆ ಮಾಡಿದೆ. ನೀತಿಕತೆಯೆಂದರೆ ಯಾವಾಗ ಏನು ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ, ನಾವು ಅದನ್ನು ಸ್ವೀಕರಿಸಲು ರೆಡಿಯಾಗಿರಬೇಕು ಎಂದು ಹೇಳಿದ್ದಾರೆ. ನಾನಿಲ್ಲಿ ಡ್ರೈವರ್‌ಗೆ ತೊಂದರೆಯಾಗಬಾರದೆಂದು ಅವರ ಹೆಸರು, ಕಂಪನಿ ಹೇಳಿಲ್ಲ ಎಂದು ಬರೆದಿದ್ದಾರೆ.
ಈತನ ವರ್ತನೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ನೆಟ್ಟಿಗರು
ಈ ವ್ಯಕ್ತಿ ಇಲ್ಲಿ ಮನುಷ್ಯತ್ವದಿಂದ ನಡೆದುಕೊಂಡಿದ್ದಾರೆ. ಕ್ಯಾಬ್ ಬುಕ್ ಮಾಡಿ ಹೋಗುವಾಗ ಡ್ರೈವರ್ ನಿದ್ದೆ ತೂಕಡಿಸುತ್ತಿದ್ದಾನೆ ಎಂದು ಗಮನಿಸಿದರೆ ಬೇರೆಯವರು ಗಲಾಟೆ ಮಾಡುತ್ತಿದ್ದರು, ಆ ಕಂಪನಿಗೆ ದೂರು ನೀಡುತ್ತಿದ್ದರು, ಆದರೆ ಈ ವ್ಯಕ್ತಿಗೆ ಆ ಡ್ರೈವರ್ ಕಷ್ಟ ಗೊತ್ತಾಗಿದೆ, ಹೋಗಾಗಿ ತಾನು ಡ್ರೈವ್ ಮಾಡ್ತೀನಿ ಎಂದು ಹೇಳಿದ್ದಾರೆ, ಅವರು ಕೂಡ ತಕ್ಷಣ ಕೀ ಕೊಟ್ಟಿದ್ದಾರೆ ಎಂದಾಗ ಡ್ರೈವರ್‌ಗೆ ಗಾಡಿ ಚಲಾಯಿಸಲು ಎಷ್ಟು ಕಷ್ಟವಾಗಿರಬೇಡ?
ಕಂಪನಿಗಳು ನೈಟ್ ಶಿಫ್ಟ್ ಕಂಫರ್ಟ್ ಇರುವವರೆಗೆ ಮಾತ್ರ ನೀಡಬೇಕು
ಕೆಲವರಿಗೆ ನೈಟ್‌ಶಿಫ್ಟ್ ಮಾಡುವುದು ಕಷ್ಟವಾಗಿರುತ್ತೆ ಅಂಥವರು ನೈಟ್ ಶಿಫ್ಟ್‌ಗೆ ಹೋಗಬಾರದು, ಕಂಪನಿ ಅವರನ್ನು ನೈಟ್ ಶಿಫ್ಟ್‌ಗೆ ಹಾಕಲೂ ಬಾರದು. ಒಂದು ಕ್ಷಣ ಕಣ್ಮುಚ್ಚಿದರೆ ಸಾಕು ಅಪಘಾತವಾಗಲು ಹಾಗಾಗಿ ನಿದ್ದೆ ಬಂದಾಗ ಯಾವುದೇ ಕಾರಣಕ್ಕೆ ಗಾಡಿ ಚಲಾಯಿಸಬೇಡಿ, ಗಾಡಿಯನ್ನು ಸೈಡ್‌ಗೆ ಹಾಕಿ ಸ್ವಲ್ಪ ರಿಲ್ಯಾಕ್ಸ್ ಮಾಡಿ.
ಪ್ರಯಾಣಿಕರೂ ಅಷ್ಟೇ ರಾತ್ರಿ ಪ್ರಯಾಣ ಮಾಡುವಾಗ ಕ್ಯಾಬ್ ಡ್ರೈವರ್ ಅನ್ನು ಗಮನಿಸಬೇಕು
ಹೌದು ಅವರು ನಿದ್ದೆ ತೂಕಡಿಸುತ್ತಿದ್ದರೆ ಸ್ವಲ್ಪ ತಡವಾದರ ಪರ್ವಾಗಿಲ್ಲ ರೆಸ್ಟ್ ಮಾಡು ಅಂತ ಹೇಳಿ. ದುಡಿಯಲೇಬೇಕಾದ ಅನಿವಾರ್ಯತೆ ಅವರಲ್ಲಿರುವ ಕಾರಣ ನೈಟ್‌ಶಿಫ್ಟ್ ಒಪ್ಪಿರುತ್ತಾರೆ. ನಾವು ನಮ್ಮ ನಮ್ಮ ಎಚ್ಚರಿಕೆಯಲ್ಲಿಯೂ ಇರಬೇಕಾಗುತ್ತದೆ. ಅದರಲ್ಲಿ ಮುಂಜಾನೆ ಸಮಯದಲ್ಲಿ ಡ್ರೈವ್ ಮಾಡುವಾಗ ಹೆಚ್ಚಿನವರು ತೂಕಡಿಸುತ್ತಾರೆ. ಅವರ ಜೊತೆ ಮಾತನಾಡುತ್ತಾ ಬಂದರೆ ಅವರ ನಿದ್ದೆಯೂ ದೂರಾಗುತ್ತೆ.



Click it and Unblock the Notifications
