Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಟ್ರಂಪ್ ಕಿವಿಗೆ ಗುಂಡು ಬಡಿಯಲಿದೆ: 4 ತಿಂಗಳ ಹಿಂದೆ ಭವಿಷ್ಯ ನುಡಿದಿದ್ದ ವ್ಯಕ್ತಿಯ ವಿಡಿಯೋ ವೈರಲ್
ಪ್ರಪಂಚದಲ್ಲಿ ಭೂಮಿ ಮೇಲೆ ನಡೆಯುವ ಹಲವು ವಿದ್ಯಮಾನಗಳ ಕುರಿತು ಭವಿಷ್ಯ ನುಡಿಯುವ ನೂರಾರು ಮಂದಿಯನ್ನು ನಾವು ನೋಡಿದ್ದೇವೆ. ಅದ್ರಲ್ಲೂ ಕೆಲವು ಬಾರಿ ಅವು ಸತ್ಯವಾದರೆ ಮತ್ತೆ ಕೆಲವು ಬಾರಿ ಅವು ಘಟಿಸುವುದೇ ಇಲ್ಲ. ಆದ್ರೆ ಮತ್ತೊಂದಿಷ್ಟು ಬಾರಿ ಅವು ನಿಗೂಢವಾಗಿದ್ದು, ಘಟನೆ ನಡೆದ ಬಳಿಕ ಅದರ ಒಳಾರ್ಥಗಳು ತಿಳಿಯುವುದು ಉಂಟು.
ಹಾಗೆ ಎರಡು ದಿನದ ಹಿಂದಷ್ಟೇ ನಡೆದ ಡೊನಾಲ್ಡ್ ಟ್ರಂಪ್ ಮೇಲಿನ ದಾಳಿ ಕುರಿತು ನಿಮಗೆ ತಿಳಿದಿರಬಹುದು. ಸಾರ್ವಜನಿಕವಾಗಿ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು ಆದ್ರೆ ಅದೃಷ್ಟವಶಾತ್ ಅವರ ಪ್ರಾಣಕ್ಕೆ ಯಾವ ಹಾನಿಯೂ ಆಗಿರಲಿಲ್ಲ. ಆದರೆ ಈ ಘಟನೆ ಕುರಿತು 4 ತಿಂಗಳ ಹಿಂದೆಯೇ ವ್ಯಕ್ತಿಯೊಬ್ಬ ಭವಿಷ್ಯ ನುಡಿದಿದ್ದ.

ಪ್ರೊಪೆಟ್ ಒಬ್ಬರು ಈ ಘಟನೆ ನಡೆಯುವುದಾಗಿ ಖಚಿತವಾಗಿ ಹೇಳಿದ್ದರು, ಆದರೆ ಅಂದು ಯಾರು ಸಹ ಆತನ ಮಾತಿಗೆ ತಿರುಗಿಯೂ ನೋಡಿರಲಿಲ್ಲ. ಆದರೆ ಈಗ ಆತ ಹೇಳಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆತ ನಿಖರವಾಗಿ ಬಲ ಕಿವಿಗೆ ಗಾಯವಾಗಲಿದೆ ಎಂದಿದ್ದ, ಮೊನ್ನೆಯ ಘಟನೆಯಲ್ಲೂ ಟ್ರಂಪ್ ಬಲ ಕಿವಿಗೆ ಗುಂಡು ತಾಕಿ ಗಾಯವಾಗಿದೆ.
ನಾಲ್ಕು ತಿಂಗಳ ಹಳೆಯ YouTube ವಿಡಿಯೋವು ಈಗ ವೈರಲ್ ಆಗಿದೆ. ಮಾರ್ಚ್ 14ರಂದು ಪಬ್ಲಿಷ್ ಆಗಿರುವ ವಿಡಿಯೋದಲ್ಲಿ ಬ್ರಾಡಾನ್ ಬಿಗ್ಸ್ ಎಂಬ ವ್ಯಕ್ತಿ ಸೂರ್ಯ ಗ್ರಹಣ ಕುರಿತು ವಿವರಿಸುವುದು ನೋಡಬಹುದು. ಹೀಗೆ ಮಾತನಾಡುತ್ತಾ ಆತ ಒಂದಿಷ್ಟು ಅಹಿತಕರ ಘಟನೆಗಳು ನಡೆಯಲಿವೆ ಎಂಬ ಎಚ್ಚರಿಕೆ ನೀಡಲು ಮುಂದಾಗಿದ್ದ.
ಮಾತು ಮುಂದುವರೆಸಿದ ಆತ 'ನಾನು ಡೊನಾಲ್ಡ್ ಟ್ರಂಪ್ ಜೀವನದ ಮೇಲೆ ದಾಳಿಯ ಪ್ರಯತ್ನವನ್ನು ನೋಡಿದೆ. ಈ ಗುಂಡು ಅವನ ಕಿವಿಯ ಮೇಲೆ ಹಾರಿತು ಮತ್ತು ಅದು ಅವರ ತಲೆಯ ಹತ್ತಿರ ಬಂದಿತು ಮತ್ತು ಅದು ಅವರ ಕಿವಿ ತಮಟೆ ಒಡೆಯಿತು. ಈ ಸಮಯದಲ್ಲಿ ಮಂಡಿಯೂರುತ್ತಾರೆ. ಆದರೆ ಅವರು ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಅವರಿಗರ ಮರುಹುಟ್ಟು, ನಿಜವಾಗಿ ಅವರಿಗೆ ಮತ್ತೊಂದು ಜನ್ಮ' ಎಂದಿದ್ದಾನೆ.
ದೇಶ ಭಕ್ತಿಯ ಹೊಸ ಅಲೆ ಬರಲಿದೆ. ಒಂದು ಸುನಾಮಿಯ ಗೆಲುವು ರಾಷ್ಟ್ರದಾದ್ಯಂತ ಹೊಸದಾದ ದೇಶ ಭಕ್ತಿ ಜನ್ಮ ತಾಳುತ್ತದೆ. ಮಿಚಿಗನ್‌ನಿಂದ ಹೊಸ ಕೆಂಪು ಅಲೆ ಹುಟ್ಟುವುದು ನಾನು ನೋಡಿದೆ ಎಂದು ಆತ 4 ತಿಂಗಳ ಹಿಂದೆ ಸಂದರ್ಶನದಲ್ಲಿ ಹೇಳಿರುತ್ತಾನೆ.
ಈ ವಿಡಿಯೋಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆತ ಇಷ್ಟೊಂದು ನಿಖರವಾಗಿ ಹೇಳಲು ಹೇಗೆ ಸಾಧ್ಯಗಾಗಿದೆ ಎಂದು ಅಚ್ಚರಿ ಹೊರಹಾಕಲಾಗುತ್ತಿದೆ. ಜೊತೆಗೆ ನವೆಂಬರ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡನ್ ಸೋಲುತ್ತಾರೆ. ಟ್ರಂಪ್ ಸಮುದ್ರದ ಅಲೆಯ ಸೃಷ್ಟಿಸಿ ಅಮೆರಿಕದಲ್ಲಿ ಹೊಸ ದಾಖಲೆಯೊಂದಿಗೆ ಗೆಲುವು ಪಡೆಯುತ್ತಾರೆ ಎಂದು ಆತ ಹೇಳಿರುವುದು ಈಗ ವೈರಲ್ ಆಗಿದೆ.
ಎರಡು ದಿನದ ಹಿಂದೆ ಡೊನಾಲ್ಡ್ ಟ್ರಂಪ್ ಭಾಷಣ ಮಾಡುವಾಗ ಗುಂಡಿನಿಂದ ದಾಳಿ ಮಾಡಲಾಗಿದೆ. ಆದರೆ ಅದೃಷ್ಟವಶಾತ್ ಗುಂಡು ಬಲ ಕಿವಿಗೆ ತಾಕಿ ಸಣ್ಣ ಗಾಯವಾಗಿದೆ. ಗುಂಡಿಕ್ಕಿದವನನ್ನು 20 ವರ್ಷದ ಯುವಕ ಎಂದು ಗುರುತಿಸಲಾಗಿದೆ. ಅಲ್ಲದೆ ಭದ್ರತಾ ಸಿಬ್ಬಂದಿ ಆತನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಸುಮಾರು 130 ಮೀಟರ್ ದೂರದಿಂದ ಆತ AR ರೈಫಲ್‌ನಿಂದ ಗುಂಡು ಹಾರಿಸಿದ್ದ. ಟ್ರಂಪ್ ಹತ್ಯೆಯ ಸಲುವಾಗಿಯೇ ಆತ ಗುಂಡು ಹಾರಿಸಿದ್ದ ಎಂದು ತಿಳಿದುಬಂದಿದೆ.



Click it and Unblock the Notifications

