Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ನೀವೆಲ್ಲೂ ನೋಡಿಲ್ಲ..ಎಲ್ಲೂ ಕೇಳಿಲ್ಲ... ಇಲ್ಲಿದೆ ನೋಡಿ ಬುಲೆಟ್ ಬಾಬಾ ಗುಡಿ'..!!
ಜನ ಸಿನಿಮಾ ನಟರಿಗೆ ಗುಡಿ ಕಟ್ಟುವುದನ್ನು ನೋಡಿದ್ದೇವೆ. ಪ್ರಾಣಿಗಳಿಗೂ ಗುಡಿ ಕಟ್ಟಿರುವ ಉದಾಹರಣೆ ಇದೆ. ಆದ್ರೆ ಎಲ್ಲಾದರೂ ಬುಲೆಟ್ ಬೈಕ್‌ಗೆ ಪೂಜೆ ಮಾಡುವ ದೇವಾಲಯ ನೋಡಿದ್ದೀರಾ? ಈ ರೀತಿಯ ಗುಡಿ ಸಹ ಭಾರತದಲ್ಲಿದೆ. ಇಲ್ಲಿ ಬುಲೆಟ್ ಬೈಕ್‌ಗೆ ಹೂವಿನ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಹಾಗಾದ್ರೆ ಈ ಬುಲೆಟ್ ಬಾಬಾ ಗುಡಿ ಎಲ್ಲಿದೆ.? ಏನಿದರ ವಿಶೇಷ ನೋಡಿ.
ಈ ವಿಚಿತ್ರ ದೇವಾಲಯವು ರಾಜಸ್ಥಾನದಿಂದ ಜೋಧಪುರಕ್ಕೆ ತೆರಳುವ 53 ಕಿ.ಮೀ ಮೊದಲು ಸಿಗುವ ಚೋಟಿಲಾ ಎಂಬ ಗ್ರಾಮದಲ್ಲಿದೆ. ಟ್ವಿಟರ್ (ಎಕ್ಸ್) ಬಳಕೆದಾರ ಆದಿತ್ಯ ಕುಂಡವಾರ್ ಎಂಬುವರು ಬುಲೆಟ್ ಬೈಕ್ ಗುಡಿಯ ಫೋಟೋವನ್ನು ಹಂಚಿಕೊಂಡಿದ್ದು, ಭಾರೀ ವೈರಲ್ ಆಗುತ್ತಿದೆ.

ಎನ್‌ಫಿಲ್ಡ್ ಬೈಕ್ ಇಲ್ಲಿ ದೇವರು
ರಾಜಸ್ಥಾನದಲ್ಲಿರುವ ರಾಯಲ್ ಎನ್‌ಫೀಲ್ಡ್ ಬುಲೆಟ್‌ಗೆ ಸಮರ್ಪಿತವಾದ ದೇವಾಲಯದ ಆಕರ್ಷಕ ಕಥೆಯನ್ನು ಹಂಚಿಕೊಂಡಿದ್ದಾರೆ. ರಾಜಸ್ಥಾನದಲ್ಲಿರುವ ಈ ಪ್ರಸಿದ್ಧ ದೇವಾಲಯವನ್ನು 'ಬುಲೆಟ್ ಬಾಬಾ ದೇವಸ್ಥಾನ' ಎಂದು ಕರೆಯುತ್ತಾರೆ, ದೇಶದಾದ್ಯಂತ ಸವಾರರು ಮತ್ತು ಜನರು ತಮ್ಮ ಸಂತೋಷ ಮತ್ತು ಸುರಕ್ಷತೆಗಾಗಿ ಪ್ರಾರ್ಥಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ. ಗುಡಿಯಲ್ಲಿರುವ 'ದೇವತೆ' RNJ 7773 ನೋಂದಣಿ ಸಂಖ್ಯೆಯನ್ನು ಹೊಂದಿರುವ 350 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ಡ ಆಗಿದೆ.
ಜೋಧ್‌ಪುರ ಮತ್ತು ಅಹಮದಾಬಾದ್‌ಗೆ ಸಂಪರ್ಕ ಕಲ್ಪಿಸುವ ಎನ್‌ಎಚ್ 62ರಲ್ಲಿ ಪಾಲಿ ಪಟ್ಟಣ ತೆರಳುವ ಮಾರ್ಗದಲ್ಲಿ ವಿ ವಿಚಿತ್ರ ದೇವಾಲಯವಿದೆ. ಇನ್ನೂ, ಪ್ರತಿ ವರ್ಷ ನೂರಾರು ಮಂದಿ 350 cc ರಾಯಲ್ ಎನ್‌ಫೀಲ್ಡ್ ಬುಲೆಟ್ (RNJ 7773) ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.' ಎಂದು ಆದಿತ್ಯ ಕೊಂಡವಾರ್ ಬರೆದುಕೊಂಡಿದ್ದಾರೆ.
ಈ ದೇವಾಲಯ ಏಕೆ ಫೇಮಸ್?
ಬುಲೆಟ್ ಬಾಬಾ ಮಂದಿರ ಎಂದು ಕರೆಯಲ್ಪಡುವ ಈ ದೇಗುಲಕ್ಕೆ ಯುವಕರು ಹೊಸ ಬೈಕ್ ಖರೀದಿಸಿದ ನಂತರ ಪೂಜೆ ಮಾಡಿಸಲು ಬರುತ್ತಾರೆ. ಅಲ್ಲದೆ ದೂರದ ಊರುಗಳಿಗೆ ಬೈಕ್ ನಲ್ಲಿ ಪ್ರವಾಸ ತೆರಳುವ ಮೊದಲು ಇಲ್ಲಿಗೆ ಬಂದು ಪ್ರವಾಸಿಗರು ಪೂಜೆ ಸಲ್ಲಿಸುತ್ತಾರೆ. ಹೀಗೆ ಪೂಜೆ ಸಲ್ಲಿಸುವುದರಿಂದ ಅವರಿಗೆ ಅನಾಹುತ ಸಂಭವಿಸುವುದಿಲ್ಲ ಎಂದು ನಂಬಲಾಗಿದೆ.
ಗಂಡನ ಸುರಕ್ಷತೆಗಾಗಿ ಪತ್ನಿಯ ಪೂಜೆ
ಇನ್ನು ಮಹಿಳೆಯವರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಪತಿ ಬೈಕ್‌ನಲ್ಲಿ ತೆರಳುವಾಗ ಯಾವ ಅಪಾಯವೂ ಸಂಭವಿಸದೇ ಇರಲಿ ಎಂದು ಪೂಜೆ ಸಲ್ಲಿಸುತ್ತಾರೆ. ದೇವಾಲಯದಲ್ಲಿರುವ ಮರಕ್ಕೆ ಕೆಂಪು ದಾರಗಳನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದರಿಂದ ಬೈಕ್‌ನಲ್ಲಿ ಉದ್ಯೋಗಕ್ಕೋ, ಪಟ್ಟಣಕ್ಕೋ ತೆರಳುವ ಪತಿ ಸುರಕ್ಷಿತವಾಗಿರುತ್ತಾರೆ ಎನ್ನುವುದು ಅವರ ನಂಬಿಕೆಯಾಗಿದೆ.
ಗುಡಿ ಹಿಂದಿದೆ ಅಪಘಾತದ ಕಥೆ
ಸ್ಥಳೀಯರ ಪ್ರಕಾರ 1988 ರಲ್ಲಿ ಅಪಘಾತದಲ್ಲಿ ಓಂ ಸಿಂಗ್ ರಾಥೋಡ್ ಎಂಬಾತ ಸಾವನ್ನಪ್ಪಿದ್ದ. ಅಪಘಾತವಾದ ಸ್ಥಳದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಸ್ಥಳೀಯ ಪೊಲೀಸರು ಆತನ ಬುಲೆಟ್ ಬೈಕ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡರು ಆದರೆ ಮರುದಿನವೇ, ಬೈಕ್ ನಿಗೂಢವಾಗಿ ಪೊಲೀಸ್ ಠಾಣೆಯಿಂದ ಕಣ್ಮರೆಯಾಗಿತ್ತು ಮತ್ತು ಅಪಘಾತ ಸಂಭವಿಸಿದ ಸ್ಥಳದಲ್ಲಿಯೇ ಪ್ರತ್ಯಕ್ಷವಾಗಿತ್ತು. ಹೀಗೆ ಹತ್ತಾರು ಬಾರಿ ಅವರು ಬೈಕ್ ಅನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದಾಗಲೂ ಬೈಕ್ ಮತ್ತೆ ಅಪಘಾತವಾದ ಸ್ಥಳದಲ್ಲೇ ಬಂದು ಬಿದ್ದಿರುತ್ತಿತ್ತು.
ಈ ಘಟನೆ ನಡೆದ ಬಳಿಕ ಪೊಲೀಸರ ಸಮ್ಮುಖದಲ್ಲೇ ಇಲ್ಲೊಂದು ಬೈಕ್ ದೇವಾಲಯ ನಿರ್ಮಿಸಲು ಅವರು ನಿರ್ಧರಿಸಿದರು. ಹೀಗೆ ನಿರ್ಮಾಣಗೊಂಡ ಈ ದೇವಾಲಯವೇ ಇಂದು ಬುಲೆಟ್ ಬೈಕ್ ಗುಡಿಯಾಗಿದೆ.



Click it and Unblock the Notifications
