Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೇಷ ರಾಶಿಯಲ್ಲಿ ಹಿಮ್ಮೆಟ್ಟಿದ ಬುಧ : ಈ ಐದು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ
ಮೇಷ ರಾಶಿಯಲ್ಲಿ ಬುಧನು ಹಿಮ್ಮೆಟ್ಟಲಿದ್ದಾನೆ. ಬುಧನ ಹಿಮ್ಮೆಟ್ಟುವಿಕೆಯಿಂದಾಗಿ ಶೇರು ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗುತ್ತದೆ. ಮೇಷರಾಶಿಯಲ್ಲಿ ಬುಧನ ಹಿಮ್ಮೆಟ್ಟುವಿಕೆಯಿಂದ ಕೆಲ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರಿದರೆ ಇನ್ನೂ ಕೆಲವು ರಾಶಿಗಳಿಗೆ ಶುಭ ಫಲವನ್ನು ನೀಡಲಿದೆ. ಹಾಗಾದ್ರೆ ಯಾವೆಲ್ಲಾ ರಾಶಿಯವರಿಗೆ ಉದ್ಯೋಗ ಹಾಗೂ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ ಎಂದು ತಿಳಿಯೋಣ.

ಮೇಷ ರಾಶಿ
ಬುಧದ ಹಿಮ್ಮೆಟ್ಟುವಿಕೆಯಿಂದಾಗಿ ಮೇಷ ರಾಶಿಯವರು ತಮ್ಮ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ನಿಮ್ಮ ಜೀವನಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಅತ್ಯುತ್ತಮ ವೃತ್ತಿ ಅವಕಾಶಗಳು ಒದಗಿ ಬರುವ ಸಾಧ್ಯತೆಗಳಿದೆ. ವ್ಯಾಪಾರದಲ್ಲಿ ಪ್ರಗತಿ ಕಾಣಲಿದ್ದೀರಿ. ಉಳಿತಾಯ ಹೆಚ್ಚಾಗುತ್ತದೆ. ನಿಮ್ಮ ಮೇಲಿನ ಕೌಟುಂಬಿಕ ಜವಾಬ್ದಾರಿಗಳನ್ನು ಉತ್ತಮವಾಗಿ ನಿಭಾಯಿಸುತ್ತೀರಿ. ಆದರೆ ಪ್ರೀತಿಯಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಮಿಥುನ ರಾಶಿ
ಮೇಷ ರಾಶಿಯಲ್ಲಿ ಬುಧನ ಹಿಮ್ಮೆಟ್ಟುವಿಕೆಯಿಂದ ಮೇಷ ರಾಶಿಯವರಿಗೆ ಪ್ರಯೋಜನವಾಗಲಿದೆ. ನಿಮ್ಮ ಪ್ರಗತಿಯ ಹಾದಿಯಲ್ಲಿದ್ದ ಅಡೆ-ತಡೆಗಳು ನಿವಾರಣೆಯಾಗುತ್ತದೆ. ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಮೊದಲಿಗಿಂತ ಉತ್ತಮವಾಗಿರುತ್ತದೆ. ವ್ಯಾಪಾರಸ್ಥರು ಲಾಭದಾಯಕ ವ್ಯವಹಾರವನ್ನು ಮಾಡಬಹುದು. ಆರ್ಥಿಕವಾಗಿ ಉತ್ತಮ ಲಾಭ ಪಡೆಯುತ್ತೀರಿ. ನೀವು ಪ್ರೀತಿಸಿದವರೊಂದಿಗೆ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಈ ಸಮಯದಲ್ಲಿ ಹೊಸ ಮನೆ ಅಥವಾ ಹೊಸ ಕಾರು ಖರೀದಿಸಬಹುದು. ಅನಾರೋಗ್ಯದಿಂದ ಬಳಲುತ್ತಿರುವವರ ಆರೋಗ್ಯ ಸ್ಥಿತಿಯೂ ಸುಧಾರಿಸುತ್ತದೆ.
ಸಿಂಹ ರಾಶಿ
ಮೇಷ ರಾಶಿಯಲ್ಲಿ ಬುಧನ ಹಿಮ್ಮೆಟ್ಟುವಿಕೆಯಿಂದ ಸಿಂಹ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ವೃತ್ತಿ ಜೀವನದಲ್ಲಿ ಅಪಾರ ಯಶಸ್ಸು ಸಾಧಿಸುವಿರಿ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವೃತ್ತಿಜೀವನದಲ್ಲಿ ನೀವು ಪ್ರತಿಯೊಂದು ವಿಷಯದಲ್ಲೂ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಬಹಳ ದಿನಗಳಿಂದ ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿರುವವರು ಯಶಸ್ವಿಯಾಗುತ್ತೀರಿ. ನಿಮ್ಮ ಹಣಕಾಸಿನ ಸ್ಥಿತಿಯೂ ಸುಧಾರಿಸುತ್ತದೆ. ಕೌಟುಂಬಿಕ ಜೀವನದಲ್ಲಿ ಮಾಧುರ್ಯವಿರುತ್ತದೆ. ಮತ್ತು ಸಂಗಾತಿಯೊಂದಿಗೆ ಸಂಬಂಧ ಉತ್ತಮಗೊಳ್ಳುತ್ತದೆ.
ಕುಂಭ ರಾಶಿ
ಮೇಷ ರಾಶಿಯಲ್ಲಿ ಬುಧನ ಹಿಮ್ಮೆಟ್ಟುವಿಕೆಯಿಂದ ಕುಂಭ ರಾಶಿಯವರಿಗೆ ಶುಭ ಫಲಗಳಿದೆ. ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುತ್ತೀರಿ. ಯಾವ ಕೆಲಸಕ್ಕಾಗಿ ನೀವು ದೀರ್ಘಕಾಲದಿಂದ ಓಡಾಡುತ್ತಿದ್ದೀರೋ ಆ ಕೆಲಸ ಪೂರ್ಣಗೊಳ್ಳುತ್ತದೆ. ಆತ್ಮವಿಶ್ವಾಸವು ತುಂಬಾ ಬಲವಾಗಿರುತ್ತದೆ. ನಿಮ್ಮ ದಕ್ಷತೆಯನ್ನು ಕಂಡು ನಿಮ್ಮ ಮೇಲಿನ ಅಧಿಕಾಗಳು ಹೊಗಳುತ್ತಾರೆ. ವೃತ್ತಿಯಲ್ಲಿ ಹೊಸ ಅವಕಾಶಗಳು ಸಿಗಬಹುದು ಮತ್ತು ವ್ಯವಹಾರದಲ್ಲಿ ದೊಡ್ಡ ಲಾಭ ಪಡೆಯುವ ನಿರೀಕ್ಷೆಯಿದೆ. ಸಂಗಾತಿಯೊಂದಿಗಿನ ನಿಮ್ಮ ಹೊಂದಾಣಿಕೆಯು ಉತ್ತಮವಾಗಿರುತ್ತದೆ ಮತ್ತು ಕುಟುಂಬದಲ್ಲಿಯೂ ಸಮೃದ್ಧಿ ಇರುತ್ತದೆ. ಆರೋಗ್ಯದ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ.
ಮೀನ ರಾಶಿ
ಮೇಷ ರಾಶಿಯಲ್ಲಿ ಬುಧನ ಹಿಮ್ಮೆಟ್ಟುವಿಕೆಯಿಂದ ಮೀನ ರಾಶಿಯವರು ಶುಭ ಫಲಗಳನ್ನು ನಿರೀಕ್ಷೆ ಮಾಡಬಹುದು. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಉದ್ಯೋಗದ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರೋ ಕಾರಣ ಲಾಭ ಪಡೆಯುತ್ತೀರಿ. ನಿಮ್ಮ ಹಣದ ಉಳಿತಾಯ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ವಿದೇಶಿ ಮೂಲಗಳಿಂದ ನೀವು ಲಾಭವನ್ನು ಪಡೆಯುವ ಸಾಧ್ಯಾತೆಗಳಿದೆ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ.



Click it and Unblock the Notifications


