Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೇಷದಲ್ಲಿ ಬುಧನ ವಕ್ರೀಯ ಚಲನೆ: ಪ್ರತಿಯೊಬ್ಬರ ಮೇಲೆ ಬೀರಲಿದೆ ಈ ಪ್ರಭಾವ, ಪರಿಹಾರವೇನು?
ವೈದಿಕ ಜ್ಯೋತಿಷ್ಯದ ಪ್ರಕಾರ ಬುಧ ಗ್ರಹವನ್ನು ಬುದ್ಧಿವಂತಿಕೆ, ತಾರ್ಕಿಕ ಸಾಮರ್ಥ್ಯ ಮತ್ತು ಉತ್ತಮ ಸಂವಹನ ಕೌಶಲ್ಯಗಳ ಗ್ರಹವೆಂದು ಪರಿಗಣಿಸಲಾಗಿದೆ. ಬುಧ ಗ್ರಹವು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗಿದೆ. ಈ ಬುಧ ಗ್ರಹವು ಈ ಇದೀಗ ಮೇಷ ರಾಶಿಯಲ್ಲಿದ್ದು ಏಪ್ರಿಲ್ 21ಕ್ಕೆ ವಕ್ರೀಯವಾಗಿ ಚಲಿಸಲಿದೆ. ಮಾರ್ಚ್ 31ಕ್ಕೆ ಮೇಷ ರಾಶಿಯನ್ನು ಪ್ರವೇಶಿಸಿರುವ ಬುಧ ಏಪ್ರಿಲ್ 21ಕ್ಕೆ ಹಿಮ್ಮುಖ ಚಲನೆ ಮಾಡಿ, ನಂತರ ಮತ್ತೆ ನೇರ ಸಂಚಾರ ಮಾಡಿ ಜೂನ್ 7ಕ್ಕೆ ವೃಷಭ ರಾಶಿಯನ್ನು ಸಂಚರಿಸುವುದು.

ಏಪ್ರಿಲ್ 21ಕ್ಕೆ ಹಿಮ್ಮುಖ ಚಲನೆ ಮಾಡುವ ಬುಧ ಮೇ 15ರವರೆಗೆ ಹಿಮ್ಮುಖ ಚಲನೆಯಲ್ಲಿ ಇರಲಿದೆ. ಈ ಬುಧನ ಹಿಮ್ಮುಖ ಚಲನೆ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಬುಧ ಹಿಮ್ಮುಖ ಚಲನೆ ಮಾಡುವಾಗ ಬಲಶಾಲಿಯಾಗುತ್ತಾನೆ.
ಹಿಮ್ಮುಖದಲ್ಲಿ ಬುಧ ಬಲಶಾಲಿಯಾಗುತ್ತಾನೆ
ಬುಧ ನಿಮ್ಮ ರಾಶಿಯಲ್ಲಿ ಅದೃಷ್ಟದ ಸ್ತಾನದಲ್ಲಿದ್ದರೆ ಶುಭ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಅದು ಪೀಡಿತ ಸ್ಥಾನದಲ್ಲಿದ್ದರೆ ನಿಮಗೆ ಕೆಟ್ಟ ಪರಿಣಾಮಗಳನ್ನು ನೀಡುತ್ತದೆ ಬುಧ ಹಿಮ್ಮುಖ ಸ್ಥಿತಿಯಲ್ಲಿದ್ದಾಗ ಅದರ ಪರಿಣಾಮವು ಹಲವು ಬಾರಿ ಹೆಚ್ಚಾಗುತ್ತದೆ. ಅದು ಒಳ್ಳೆಯದಾಗಿರಲಿ ಕೆಡಕಾಗಿರಲಿ ಇದರ ಪ್ರಭಾವ ಅಧಿಕವಿರಲಿದೆ.
ಬುಧ ಯಾವ ಮನೆಯಲ್ಲಿದ್ದರೆ ಯಾವ ಫಲ?
ಮೊದಲ ಮನೆ: ಬುಧ ಮೇಷದಲ್ಲಿ ವಕ್ರೀಯ ಚಲನೆ ಮಾಡಿದಾಗ ಮೊದಲ ಮನೆಯಲ್ಲಿ ಇರಲಿದೆ. ಇದರಿಂದ ಈ ಅವಧಿಯಲ್ಲಿ ನಿಮಗೆ ಮತ್ತಷ್ಟು ಬಲ ನೀಡಲಿದೆ. ನಿಮ್ಮ ಪ್ರಯತ್ನಗಳಿಗೆ ಶೀಘ್ರ ಫಲ ದೊರೆಯಲಿದೆ.
2ನೇ ಮನೆ: ಸಂಚಾರದಲ್ಲಿ ಬುಧ ಮೀನ ರಾಶಿಯಲ್ಲಿ 2ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ಮೀನ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ, ಈ ಅವಧಿ ನಿಮಗೆ ಅನುಕೂಲಕರವಾಗಿದೆ.
3ನೇ ಮನೆ: ಬುಧ ಮೇಷದಲ್ಲಿ ವಕ್ರೀಯವಾದಾಗ ಕುಂಭ ರಾಶಿಯಲ್ಲಿ 3ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ನಿಮ್ಮ ಗುರಿ ಮುಟ್ಟಲು ತುಂಬಾ ದೃಢವಾಗಿ ಪ್ರಯತ್ನಿಸುತ್ತೀರಿ.
4ನೇ ಮನೆ: ಮಕರ ರಾಶಿಯಲ್ಲಿ 4 ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನಿಮ್ಮ ಸೌಕರ್ಯ ಹೆಚ್ಚಾಗಲಿದೆ.
5ನೇ ಮನೆ: ಬುಧ ಮೇಷ ರಾಶಿಯಲ್ಲಿ ವಕ್ರೀಯ ಚಲನೆಯಲ್ಲಿದ್ದಾಗ ಧನು ರಾಶಿಯಲ್ಲಿ 5ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ.
6ನೇ ಮನೆ: ಈ ಅವಧಿಯಲ್ಲಿ ಬುಧವು ವೃಶ್ಚಿಕ ರಾಶಿಯವರಲ್ಲಿ 6ನೇ ಮನೆಯಲ್ಲಿ ಇರಲಿದೆ. ಬುಧನ ಈ ಸ್ಥಾನ ವೃಶ್ಚಿಕ ರಾಶಿಯವರಿಗೆ ಅನುಕೂಲಕರವಲ್ಲ.
7ನೇ ಮನೆ: ಈ ಅವಧಿಯಲ್ಲಿ ತುಲಾ ರಾಶಿಯವರಲ್ಲಿ 7ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ.
8ನೇ ಮನೆ: ಬುಧ ಕನ್ಯಾ ರಾಶಿಯವರಲ್ಲಿ 8ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಕೆಲ ಸಮಸ್ಯೆ ಎದುರಾಗಬಹುದು.
9ನೇ ಮನೆ: ಈ ಸಂಚಾರದ ಅವಧಿಯಲ್ಲಿ ಬುಧ ಸಿಂಹ ರಾಶಿಯವರಲ್ಲಿ 9ನೇ ಮನೆಯಲ್ಲಿರಲಿದೆ. ಈ ಅವಧಿ ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ.
10ನೇ ಮನೆ: ಈ ಅವಧಿಯಲ್ಲಿ ಬುಧ ಕರ್ಕ ರಾಶಿಯಲ್ಲಿ 10ನೇ ಮನೆಯಲ್ಲಿ ವಕ್ರೀಯವಾಗಿ ಚಲಿಸುತ್ತದೆ. ಈ ಅವಧಿಯಲ್ಲಿ ಪೂರ್ವಜರ ಆಸ್ತಿಯಿಂದ ಲಾಭ ಗಳಿಸುವಿರಿ.
11ನೇ ಮನೆ:ಈ ಅವಧಿಯಲ್ಲಿ ಬುಧ ಮಿಥುನ ರಾಶಿಯಲ್ಲಿ 11ನೇ ಮನೆಯಲ್ಲಿ ವಕ್ರೀಯವಾಗಿ ಚಲಿಸಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿ ಸಂಪತ್ತು, ಸೌಕರ್ಯ ಹೆಚ್ಚಾಗಲಿದೆ.
12ನೇ ಮನೆ: ಬುಧ ಮೇಷ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿರುವಾಗ ವೃಷಭದಲ್ಲಿ 12ನೇ ಮನೆಯಲ್ಲಿ ಇರಲಿದೆ.
ಈ ಸಮಯದಲ್ಲಿ ಬುಧ ವಕ್ರೀಯ ಚಲನೆಯಲ್ಲಿರುವಾಗ ಈ ಪರಿಹಾರ ಮಾಡಿದರೆ ನಿಮಗೆ ಒಳ್ಳೆಯ ಫಲ ಸಿಗಲಿದೆ:
* ಕುಲ ದೇವರನ್ನು ಆರಧಿಸಿ. ಅಲ್ಲದೆ ಪ್ರತಿ ದಿನ ಓಂ ಬಯಧಾಯ ನಮಃ ಅಮತ 108 ಬಾರಿ ಪಠಿಸಿ.
* ವಿಷ್ಣುವಿನ ಆಶೀರ್ವಾದಿಂದಾಗಿ ಬುಧ ಗ್ರಹವು ಫಲಪ್ರದವಾಗುತ್ತದೆ. ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ, ನಿಮಗೆ ಲಾಭವಾಗುತ್ತದೆ.
* ಬುಧವಾರದಂದು ಗಣಪತಿಯನ್ನು ಪೂಜಿಸಿ ಮತ್ತು ಬೂಂದಿ ಲಡ್ಡುಗಳನ್ನು ಅರ್ಪಿಸಿ.
* ನಕಾರಾತ್ಮಕ ಮತ್ತು ಅನಗತ್ಯ ಆಲೋಚನೆಗಳು ಮತ್ತು ಒತ್ತಡದ ಒತ್ತಡದಿಂದ ದೂರವಿರಲು ಪ್ರತಿದಿನ ಬೆಳಿಗ್ಗೆ, ರಾತ್ರಿ ಧ್ಯಾನ ಮಾಡಿ.
* ಬುಧ ಹಿಮ್ಮೆಟ್ಟುವ ಈ ಸಮಯದಲ್ಲಿಹಸಿರು ಕರವಸ್ತ್ರ ನಿಮ್ಮ ಬಳಿಯೇ ಇಟ್ಟುಕೊಳ್ಳಿ.
* ದಾನ ಮಾಡುವುದರಿಂದ ಯಾವುದೇ ರೀತಿಯ ಋಣಾತ್ಮಕ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು.



Click it and Unblock the Notifications

